Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಕರಿನಾಯಿ ಮೂಲಕ ರಾಹು ಕೇತು ದೋಷ ಹೋಗಲಾಡಿಸುವುದು ಹೇಗೆ?
ಹೆಚ್ಚಿನವರು ಮನೆಯಲ್ಲಿ ಕಪ್ಪು ಶ್ವಾನವನ್ನು ಸಾಕುತ್ತಾರೆ. ಕೆಲವರು ನಾಯಿಯನ್ನು ಹವ್ಯಾಸಕ್ಕೆ ಸಾಕಿದರೆ, ಇನ್ನೂ ಕೆಲವರು ಕಪ್ಪು ಶ್ವಾನವನ್ನು ಸಾಕುವುದರಿಂದ ಮನೆಗೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಿಂದ ಸಾಕುತ್ತಾರೆ. ಅಷ್ಟೇ ಅಲ್ಲ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯನ್ನು ಒಲಿಸಿಕೊಳ್ಳೋದಕ್ಕೆ ಮನೆಯಲ್ಲಿ ಕಪ್ಪು ಶ್ವಾನವಿದ್ದರೆ ಒಳ್ಳೆಯದಾಗುತ್ತಂತೆ.
ಮನೆಯಲ್ಲಿ ಕಪ್ಪು ನಾಯಿ ಇದ್ದರೆ ಕೇತುವಿನ ದೆಸೆಯಿಂದ ನಮಗೆ ಮಂಗಳವಾಗುತ್ತದೆ. ಜೊತೆಗೆ ಶನಿಯಿಂದ ದಸೆಯಿಂದ ಮನೆಗೆ ಒಳ್ಳೆಯದಾಗುತ್ತೆ ಎಂದು ನಂಬಲಾಗಿದೆ. ಅಷ್ಟಕ್ಕು ಕಪ್ಪು ಶ್ವಾನದಿಂದ ಯಾವ ರೀತಿ ಶುಭಕರ ಫಲಿತಾಂಶಗಳು ಸಿಗಲಿದೆ ಅನ್ನೋದನ್ನು ಒಂದೊಂದಾಗಿ ತಿಳಿಯೋಣ.

ಶ್ವಾನವು ಬೈರವನ ಸೇವಕ
ನಾಯಿಯನ್ನು ಭೈರವನ ಸೇವಕ ಎಂದು ಪರಿಗಣಿಸಲಾಗುತ್ತದೆ. ನಾಯಿಗೆ ಆಹಾರವನ್ನು ನೀಡುವುದರಿಂದ ಭೈರವ ಸಂತುಷ್ಠಿಗೊಳ್ಳುತ್ತಾನಂತೆ. ಮತ್ತು ನಾಯಿಯ ಪೋಷಣೆಯನ್ನು ಮಾಡಿದರೆ ಆಕಸ್ಮಿಕ ತೊಂದರೆಗಳಿಂದ ಅವನು ನಮ್ಮನ್ನು ರಕ್ಷಿಸುತ್ತಾನೆ ಎಂದು ಹೇಳಲಾಗುತ್ತದೆ.
ನಾಯಿ ದುಷ್ಟ ಶಕ್ತಿಗಳಿಂದ ನಮಗೆ ರಕ್ಷಣೆ ನೀಡುತ್ತದೆ
ನಾಯಿಗೆ ಭವಿಷ್ಯದಲ್ಲಿ ಏನಾಗುತ್ತೆ ಅನ್ನೋದು ಎಲ್ಲವೂ ಚೆನ್ನಾಗಿ ಗೊತ್ತಿರುತ್ತದೆ. ಉದಾಹರಣೆಗೆ ಮನೆಯಲ್ಲಿ ಏನಾದರೂ ಅವಘಢಗಳು ಸಂಭವಿಸುವ ಮೊದಲು ಆ ವಿಚಾರ ನಾಯಿಗಳಿಗೆ ಮೊದಲು ತಿಳಿಯುತ್ತಂತೆ. ಹೀಗಾಗಿ ಮನೆಯಲ್ಲಿ ಯಾರಿಗಾದರೂ ತೊಂದರೆ ಆಗುವ ಮೊದಲು ನಾಯಿಗಳು ಕೂಗೋದಕ್ಕೆ ಶುರು ಮಾಡುತ್ತದೆ. ಅದನ್ನು ನೀವು ಗಮನಿಸಿರಬಹುದು.
ನಾಯಿಗಳ ಕಣ್ಣಿಗೆ ಆತ್ಮಗಳು ಗೋಚರವಾಗುತ್ತದೆ. ನಾಯಿಯನ್ನು ನೋಡಿದ ತಕ್ಷಣ ಆತ್ಮಗಳು ದೂರ ಹೋಗುತ್ತಂತೆ. ಮಧ್ಯರಾತ್ರಿ ಸಂದರ್ಭದಲ್ಲಿ ನಾಯಿಗಳು ಕೂಗಾಡೋದನ್ನು ನೀವು ಗಮನಿಸಿರಬಹುದು. ಆತ್ಮಗಳ ಸಂಚಾರ ಇರುವ ಸಂದರ್ಭಗಳಲ್ಲಿ ನಾಯಿ ಈ ರೀತಿ ಕೂಗುತ್ತೆ ಅಂತ ಹೇಳಲಾಗುತ್ತದೆ.
ಸಾಮಾನ್ಯವಾಗಿ ಮನೆಯಲ್ಲಿ ಉಳಿದ ಊಟ, ತಿಂಡಿಗಳನ್ನು ನಾಯಿಗಳಿಗೆ ನೀಡಲಾಗುತ್ತದೆ. ಮನೆ ಕಾಯುವ ಉದ್ದೇಶದಿಂದ ನಾಯಿಯನ್ನು ಸಾಕೋದ್ರಿಂದ ಹೆಚ್ಚಿನವರು ಅದರ ಅತಿಯಾದ ಕಾಳಜಿ ಮಾಡೋದಕ್ಕೆ ಹೋಗೋದಿಲ್ಲ. ಇನ್ನೂ ಕೆಲವರು ಉತ್ತಮ ಬ್ರೀಡ್ ನಾಯಿಯನ್ನು ಮನೆಗೆ ತಂದು ಸಾಕುತ್ತಾರೆ. ಹಾಗೂ ಅದರ ಮೇಲೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಇನ್ನೂ ಕೆಲವರಂತೂ ನಾಯಿಯನ್ನು ನೋಡಿದ ತಕ್ಷಣ ಅದಕ್ಕೆ ಕಲ್ಲು ಎಸೆಯುವವರೂ ಇದ್ದಾರೆ.
ಶ್ರೀರಾಮನ ಬಳಿ ನ್ಯಾಯ ಕೇಳಲು ಬಂದಿದ್ದ ಶ್ವಾನ!
ವಿವಿಧ ಬಣ್ಣದ ನಾಯಿಗಳಿಗೆ ಹೋಲಿಕೆ ಮಾಡಿದ್ರೆ ಕಪ್ಪು ಬಣ್ಣದ ಶ್ವಾನಗಳು ತುಂಬಾನೇ ಉತ್ತಮ ಅಂತ ಹೇಳಲಾಗುತ್ತದೆ. ನಿಮಗೆಲ್ಲಾ ನಾಯಿಯೂ ತೇತ್ರಾಯುಗದಲ್ಲಿ ರಾಮನ ಬಳಿ ನ್ಯಾಯ ಕೇಳಿದರ ಕಥೆಯ ಬಗ್ಗೆ ಗೊತ್ತಿದ್ಯಾ? ಶ್ರೀರಾಮನು ಯಾಗ ಮಾಡುತ್ತಿರುವ ಸಂದರ್ಭದಲ್ಲಿ ನಾಯಿಯೂ ನ್ಯಾಯ ಕೇಳುವುದಕ್ಕಾಗಿ ಶ್ರೀರಾಮ ಯಾಗ ಮಾಡುತ್ತಿದ್ದ ಜಾಗಕ್ಕೆ ಬರುತ್ತಂತೆ.
ಶ್ರೀ ರಾಮನು ನಾಯಿಯ ದೂರನ್ನು ಆಲಿಸಲು ಸಿದ್ಧನಾಗುತ್ತಾನೆ. ನಾಯಿಯು ಶ್ರೀರಾಮನಲ್ಲಿ ಸಾಧುವೊಬ್ಬ ನನ್ನನ್ನು ಗಾಯಗೊಳಿಸಿದ್ದಾಗಿ ಹೇಳುತ್ತಾನೆ. ಜೊತೆಗೆ ನನಗೆ ನ್ಯಾಯ ಒದಗಿಸುವಂತೆ ಕೇಳಿಕೊಳ್ಳುತ್ತಾನೆ. ಆಗ ಶ್ರೀರಾಮನು ನಾಯಿಯ ಬಳಿ ಸಾಧುವಿಗೆ ಯಾವ ರೀತಿ ಶಿಕ್ಷೆ ಕೊಡಿಸಬೇಕೆಂದು ಕೇಳುತ್ತಾನೆ. ಅದಕ್ಕೆ ನಾಯಿಯೂ ಸಾಧುವನ್ನು ಮಠಾಧೀಶರನ್ನಾಗಿ ಮಾಡಬೇಕು ಎಂದು ಕೇಳಿಕೊಳ್ಳುತ್ತದೆ.
ಶನಿ ಮತ್ತು ಕೇತುವಿಗೆ ಪ್ರಭಾವ ಕಡಿಮೆಗೊಳಿಸುತ್ತದೆ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಕಪ್ಪು ಶ್ವಾನವಿದ್ದರೆ ತುಂಬಾನೇ ಒಳ್ಳೆಯದಂತೆ.
ಕಪ್ಪು ಬಣ್ಣದ ನಾಯಿಯಿಂದ ಶನಿ ಮತ್ತು ಕೇತು ಎರಡೂ ಪ್ರಭಾವಿತವಾಗಿವೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಶನಿಯನ್ನು ಮೆಚ್ಚಿಸಬೇಕಾದರೆ ಕಪ್ಪು ಬಣ್ಣದ ಶ್ವಾನವನ್ನು ಮನೆಯಲ್ಲಿ ಸಾಕಿದರೆ ಒಳ್ಳೆಯದಾಗುತ್ತಂತೆ. ನಾಯಿಗೆ ಆಹಾರ ನೀಡೋದ್ರಿಂದ ರಾಹು ಮತ್ತು ಕೇತುವಿನ ದೋಷ ಕಡಿಮೆಯಾಗುತ್ತಂತೆ.
ಮಕ್ಕಳು ಖುಷಿಯಾಗಿರುತ್ತಾರೆ
ಕಪ್ಪು ಬಣ್ಣ ಅಥವಾ ಬಿಳಿ ಬಣ್ಣದ ಶ್ವಾನವೊಂದು ಮನೆಯಲ್ಲಿದ್ದರೆ ಮಕ್ಕಳು ತುಂಬಾನೇ ಖುಷಿಯಾಗಿ ಇರುತ್ತಾರಂತೆ. ಇದರಿಂದ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತಂತೆ. ನಾಯಿ ಇದ್ದಾಗ ಮಕ್ಕಳು ಮನೆಯಲ್ಲಿ ಆಕ್ಟೀವ್ ಆಗಿ ಇರೋದು ಮಾತ್ರವಲ್ಲದೇ, ಇದರ ಜೊತೆಗೆ ಖುಷಿಯಾಗಿ ಕೂಡ ಇರುತ್ತಾರಂತೆ.
ಮನೆಯಲ್ಲಿ ನಾಯಿಯಿದ್ದರೆ ಈ ವಿಚಾರಗಳು ಗೊತ್ತಿರಲಿ!
ಮನೆಯಲ್ಲಿ ಕಪ್ಪು ಅಥವಾ ಬಿಳಿ ಬಣ್ಣದ ನಾಯಿಯಿದ್ದರೆ ಉತ್ತಮ. ಆದರೆ ಅದರ ಉಗುರುಗಳ ಸಂಖ್ಯೆ 22 ಅಥವಾ ಹೆಚ್ಚಿನದಾಗಿರಬೇಕು. ಏಕೆಂದರೆ ಇಷ್ಟೊಂದು ಉಗುರುಗಳನ್ನು ಹೊಂದಿರುವ ನಾಯಿಯನ್ನು ಮಾತ್ರ ಕೇತುವಿನ ರೂಪವೆಂದು ಪರಿಗಣಿಸಲಾಗುತ್ತದೆ. ಕಪ್ಪು ಶ್ವಾನವನ್ನು ಸಾಕೋದ್ರಿಂದ ನಿಮಗೆ ಇಷ್ಟು ದಿನ ಬಾರದೇ ಇದ್ದ ಹಣ ವಾಪಾಸ್ಸ್ ಬರುತ್ತೆ ಅನ್ನೋ ನಂಬಿಕೆ ಕೂಡ ಇದೆ. ಅಷ್ಟೇ ಅಲ್ಲ, ನಮ್ಮ ಹಣಕಾಸಿನ ತೊಂದರೆಗಳು ಕೂಡ ದೂರವಾಗುತ್ತಂತೆ.
ಮನೆಯಲ್ಲಿ ನಾಯಿಯಿದ್ದರೆ ತುಂಬಾನೇ ಒಳ್ಳೆಯದು. ಆದರೆ ಅದಕ್ಕೆ ತೊಂದರೆ ನೀಡದಿರಿ. ಅದನ್ನು ಕೂಡ ನಿಮ್ಮ ಮನೆಯ ಸದಸ್ಯನಂತೆ ಸಾಕೋದನ್ನು ಮರೀಬೇಡಿ.



Click it and Unblock the Notifications


