Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ವಾರದಲ್ಲಿ ಗುರುವಾರವನ್ನು ಅತ್ಯಂತ ಅದೃಷ್ಟದ ದಿನವೆಂದು ಹೇಳುತ್ತಾರೆ, ಏಕೆ?
ವಾರದ ಏಳೂ ದಿನಗಳಲ್ಲಿ ಅತ್ಯಂತ ಶುಭ ದಿನ ಗುರುವಾರ ಎಂದು ಹೇಳಲಾಗುವುದು. ಈ ಗುರುವಾರ ಏಕೆ ಇತರ 6 ದಿನಕ್ಕಿಂತ ವಿಶೇಷವಾದ ದಿನ ವೈದಿಕ ಶಾಸ್ತ್ರದಲ್ಲಿ ಏನು ಹೇಳಲಾಗಿದ ಎಂದು ನೋಡೋಣ ಬನ್ನಿ:

ವಾರದ ದಿನಗಳಲ್ಲಿ ಗ್ರಹಗಳ ಪ್ರಭಾವ
ಪ್ರತಿಯೊಂದು ದಿನವನ್ನು ಒಂದೊಂದು ಗ್ರಹ ಆಳುತ್ತದೆ, ಭಾನುವಾರರ ಅಧಿಪತಿ ಸೂರ್ಯ ದೇವ. ಸೋಮವಾರದ ಅಧಿಪತಿ ಚಂದ್ರ, ಮಂಗಳವಾರದ ಅಧಿಪತಿ ಮಂಗಳ ಗ್ರಹ, ಬುಧವಾರದ ಗ್ರಹ ಬುಧ, ಗುರುವಾರದ ಗ್ರಹ ಗುರು, ಶುಕ್ರವಾರದ ಅಧಿಪತಿ ಶುಕ್ರ, ಶನಿವಾರದ ಅದಿಪತಿ ಶನಿಯಾಗಿದೆ. ಗುರು ಅದೃಷ್ಟವನ್ನು ಬೆಂಬಲಿಸುವ ಗ್ರಹವಾಗಿದೆ.
ಗುರುವಾರ ಶ್ರೀವಿಷ್ಣುವಿನ ಪೂಜೆಗೆ ವಿಶೇಷವಾದ ದಿನ
ಗುರುವಾರ ಶ್ರೀ ವಿಷ್ಣುವಿನ ಪೂಜೆಗೆ ತುಂಬಾನೇ ವಿಶೇಷವಾದ ದಿನ, ಈ ದಿನ ಶ್ರೀ ವಿಷ್ಣುವಿಗೆ ತುಪ್ಪದ ದೀಪ ಹಚ್ಚಿ ಪೂಜಿಸಬೇಕು, ವಿಷ್ಣು ಸಹಸ್ರನಾಮ ಪಠಿಸಬೇಕು ಎಂದು ಹೇಳಲಾಗುವುದು. ಶ್ರೀ ವಿಷ್ಣುವನ್ನು ಭಕ್ತಿಯಿಂದ ಪೂಜಿಸಿದರೆ ಎಲ್ಲಾ ಕಷ್ಟಗಳು ದೂರಾಗುವುದು ಎಂದು ಹೇಳಲಾಗುವುದು.
ಗುರು ರಾಯರ ಪೂಜೆಯನ್ನು ಮಾಡಲಾಗುವುದು
ಗುರುವಾರದಂದು ಗುರು ರಾಯರ ಪೂಜೆಯನ್ನು ಮಾಡಲಾಗುವುದು. ಗುರುವಾರದ ದಿನ ಶ್ರೀ ರಾಯರ ಪೂಜೆಗೆ ಒಳ್ಳೆಯದು ಎಂದು ಹೇಳಲಾಗುವುದು. ಈ ದಿನ ಉಪವಾಸವಿದ್ದು ಗುರು ರಾಯರ ಪೂಜೆ ಮಾಡಲಾಗುವುದು. ಮಣೆಯನ್ನು ಸ್ವಚ್ಛ ಮಾಡಿ, ಅದರ ಮೇಲೆ ಶ್ರೀ ರಾಘವೇಂದ್ರ ಸ್ವಾಮಿಯ ಫೋಟೋ ಇಟ್ಟು ತುಳಸಿ ಮಾಲೆ, ಹೂವುಗಳನ್ನು ಅರ್ಪಿಸಿ, ದೀಪ ಹಚ್ಚಿ ಶ್ರೀ ರಾಘವೇಂದ್ರ ಸ್ವಾಮಿಯನ್ನು ಆರಾಧಿಸಿ.
ಪೂಜ್ಯಾಯಾ ರಾಘವೇಂದ್ರಾಯ
ಸತ್ಯಧರ್ಮ ರಧಾಯಚ
ಭಜತಾಂ ಕಲ್ಪವೃಕ್ಷಯಾ ನಮತಾಂ
ಶ್ರೀ ಕಾಮಧೇನುವೇ
ಈ ಮಂತ್ರ ಪಠಣೆ ಮಾಡಿ.
ಗುರುವಾರದಂದು ಈ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುವುದು?
ಗುರುವಾರದಂದು ಕೂದಲು ಕತ್ತರಿಸಬಾರದು, ಗಡ್ಡ-ಮೀಸೆ ಕತ್ತರಿಸಬಾರದು ಅಥವಾ ಶೇವ್ ಮಾಡಬಾರದು, ಬಟ್ಟೆ ಒಗೆಯಬಾರದು, ಕೂದಲು ತೊಳೆಯಬಾರದು ಎಂದು ಹೇಳಲಾಗುವುದು, ಇದನ್ನು ತುಂಬಾ ಜನರು ಆಚರಿಸುತ್ತಾರೆ.
ಗುರುವಾರ ವ್ರತದ ಮಹತ್ವವೇನು?
- ಗುರುವಾರ ಉಪವಾಸ ಮಾಡುವುದರಿಂದ ಈ ಪ್ರಯೋಜನಗಳಿವೆ
- ಗುರುವಾರ ಉಪವಾಸ ಮಾಡುವುದರಿಂದ ನಿಮ್ಮ ಸಂತೋಷ, ಸಮೃದ್ಧಿ ಹೆಚ್ಚಾಗಲಿದೆ
- ಶ್ರೀವಿಷ್ಣುವಿನ, ರಾಯರ ಕೃಪೆಗೆ ಪಾತ್ರರಾಗಬಹುದು.
- ಈ ದಿನ ಉಪವಾಸ ಮಾಡುವಾಗ ಹಾಲು, ಹಣ್ಣುಗಳನ್ನು ಸೇವಿಸಬಹುದು.
- ಗುರುವಾರ ಉಪವಾಸ ಮಾಡುವಾಗ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ ಉಪವಾಸ ಸಂಕಲ್ಪ ತೆಗೆದುಕೊಳ್ಳಬೇಕು.



Click it and Unblock the Notifications
