Zero Shadow Day: ಬೆಂಗಳೂರಿಗರೇ ನಾಳೆ ನಿಮ್ಮ ನೆರಳು ನಿಮಗೆ ಕಾಣಿಸಲ್ಲ!

ಏಪ್ರಿಲ್‌ 25ಕ್ಕೆ ಬೆಂಗಳೂರಿನಲ್ಲಿ ನೀವು ಬಿಸಿಲಿನಲ್ಲಿ ಹೋಗಿ ನಿಂತರೆ ನಿಮ್ಮ ನೆರಳು ಕಾಣಿಸುವುದಿಲ್ಲ. ಇಂಥದ್ದೊಂದು ಅಪರೂಪದ ಘಟನೆಗೆ ಉದ್ಯಾನನಗರಿ ಬೆಂಗಳೂರು ಸಾಕ್ಷಿಯಾಗಲಿದೆ. ಯಾರು ಬಿಟ್ಟರು ನಮ್ಮ ನೆರಳು ನಮ್ಮನ್ನು ಬಿಡುವುದಿಲ್ಲ ಎಂದು ಹೇಳುತ್ತೇವೆ, ಆದರೆ ನಮ್ಮ ನೆರಳು ಕೂಡ ಕೆಲವೊಮ್ಮೆ ನಮ್ಮನ್ನು ಹಿಂಬಾಲಿಸುವುದಿಲ್ಲ.

Zero Shadow Day

ನಿಮಗೆ ಅಚ್ಚರಿ ಅನಿಸಿದರೂ ಇದು ಸತ್ಯ, ಅಂಥದ್ದೊಂದು ವಿಶೇಷ ವಿದ್ಯಾಮಾನ ನಾಳೆ ಅಂದರೆ ಏಪ್ರಿಲ್‌ 25ಕ್ಕೆ ಸಂಭವಿಸಲಿದೆ. ಏಕೆಂದರೆ ಏಪ್ರಿಲ್ 25 ಬೆಂಗಳೂರಿನಲ್ಲಿ ಶೂನ್ಯ ನೆರಳಿನ ದಿನ. ಏಪ್ರಿಲ್ 24ಕ್ಕೆ ಮಂಗಳೂರಿನಲ್ಲಿ ಶೂನ್ಯ ನೆರಳಿನ ದಿನ ಸಂಭವಿಸಿತ್ತು.ಆದ್ದರಿಂದ ಬೆಂಗಳೂರಿಗರೇ ನಾಳೆ ಈ ದಿನವನ್ನು ಮಿಸ್‌ ಮಾಡದೆ ಈ ದಿನದ ವಿಶೇಷ ಅನುಭವ ಪಡೆದುಕೊಳ್ಳಿ. ಈ ಶೂನ್ಯ ನೆರಳಿನ ದಿನವು ವರ್ಷದಲ್ಲಿ ಎರಡು ಬಾರಿ ಸಂಭವಿಸುವುದು ಏಪ್ರಿಲ್‌ 25 ಮಂಗಳವಾರ ಮಧ್ಯಾಹ್ನ 12:17ಕ್ಕೆ ಬೆಂಗಳೂರಿನಲ್ಲಿ ಶೂನ್ಯ ನೆರಳು ಸಮಭವಿಸಲಿದೆ.

ಶೂನ್ಯ ನೆರಳಿನ ದಿನ ಸಂಭವಿಸಲು ಕಾರಣವೇನು?
ಸೂರ್ಯನು ನೇರವಾಗಿ ನಮ್ಮ ನೆತ್ತಿಯ ಮೇಲೆ ಇರುವುದರಿಂದ ಯಾವುದೇ ಲಳಭವಾದ ವಸ್ತುವಿನ ನೆರಳು ಬೀಳುವುದಿಲ್ಲ. ಈ ವಿಶೇಷ ಅನುಭವ ಪಡೆಯಲು ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ಬರೀ ನಿಮ್ಮ ನೆರಳು ಅಲ್ಲ, ಲಂಬವಾದ ಯಾವುದೇ ವಸ್ತುವಿನ ನೆರಳು ಬೀಳುವುದಿಲ್ಲ. ನಮ್ಮ ನೆರಳು ನಮ್ಮ ಹಿಂಬಾಲಿಸದಿದ್ದಾಗ ಆ ಅನುಭವವೇ ವಿಶೇಷವಾದದ್ದು ಅಲ್ವೇ?

ಈ ವರ್ಷ ಯಾವಗೆಲ್ಲಾ ಶೂನ್ಯ ನೆರಳಿನ ದಿನ ಸಂಭವಿಸಲಿದೆ?
ಬೆಂಗಳೂರಿನಲ್ಲಿ ಏಪ್ರಿಲ್ 25 ಮತ್ತು ಆಗಸ್ಟ್ 18ರಂದು ಸಂಭವಿಸುವುದು. ಈ ದಿನವನ್ನು ಆಚರಿಸಲು ನಾಳೆ ಕೆಲವು ಕಡೆ ಕ್ಯಾಂಪಸ್‌ನಲ್ಲಿ ಪ್ರಾಯೋಗಿಕ ಚಟುವಟಿಕೆಗಳನ್ನು ಕೂಡ ಮಾಡಲಾಗುವುದು.ಭಾರತೀಯ ಖಭೌತಶಾಸ್ತ್ರ ಸಂಸ್ಥೆಯ ಪ್ರಕಾರ ಶೂನ್ಯ ನೆರಳಿನ ದಿನ ಸೂಯ +23.5 ಮತ್ತು -23.5 ಡಿಗ್ರಿ ಕಕ್ಷೆಯಲ್ಲಿ ಸಾಗಿದಾಗ ಉಂಟಾಗುವುದು. ಇದು ಉತ್ತರಾಯಣ ಹಾಗೂ ದಕ್ಷಿಣಾಯನ ಕಾಲದಲ್ಲಿ ಸಂಭವಿಸುವುದು. ಇದೊಂದು ಅಪರೂಪದ ವಿದ್ಯಾಮಾನವಾಗಿದೆ.

ಇದನ್ನು ವೀಕ್ಷಿಸಲು ಯಾವುದೇ ವಿಶೇಷ ಉಪಕರಣಗಳು ಬೇಕಾಗಿಲ್ಲ
ನೀವು ಈ ವಿಶೇಷ ವಿದ್ಯಾಮಾನವನ್ನು ವೀಕ್ಷಿಸಲು ಯಾವುದೇ ವಿಶೇಷ ಉಪಕರಣಗಳು ಬೇಕಾಗಿಲ್ಲ. ನೀವು ಬರೀಗಣ್ಣಿನಲ್ಲಿ ವೀಕ್ಷಿಸಬಹುದು. ಅಲ್ಲದೆ ಇದರ ವೀಕ್ಷಣೆಯ ಹಿಂದೆ ಯಾವ ಮೂಢನಂಬಿಕೆ, ನಂಬಿಕೆಗಳಿಲ್ಲ, ಇದೊಂದು ಖಗೋಳದಲ್ಲಿ ನಡೆಯುವ ವಿದ್ಯಾಮಾನ. ಸೋ.. ಆದ್ದರಿಂದ ನಾಳೆ ಮಿಸ್‌ ಮಾಡದೆ ಈ ವಿಶೇಷ ದಿನವನ್ನು ಅನುಭವಿಸಿ.

English summary

April 25 Zero Shadow Day In Bengaluru

April 25th zero shadow day in Bengaluru, You can't see you shadow in this special day read on.
Story first published: Monday, April 24, 2023, 21:05 [IST]
X
Desktop Bottom Promotion