Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಧಾರ್‌ನಂತೆ ಶಾಲಾ ಮಕ್ಕಳಿಗೆ 'ಅಪಾರ್' ಕಾರ್ಡ್..! ಇಲ್ಲಿದೆ ಸಂಪೂರ್ಣ ಮಾಹಿತಿ..!
ನಾವು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್, ಮತದಾನದ ಗುರುತಿನ ಚೀಟಿ, ಆಯುಷ್ಮಾನ್ ಕಾರ್ಡ್, ಜಾಬ್ ಕಾರ್ಡ್ ಹೀಗೆ ಹತ್ತಾರು ಕಾರ್ಡ್‌ಗಳ ಹೊಂದಿದ್ದೇವೆ. ಒಂದೊಂದು ಒಂದೊಂದು ರೀತಿಯಲ್ಲಿ ಉಪಯೋಗಕ್ಕೆ ಬರುವಂತಹ ಕಾರ್ಡ್ ಆಗಿವೆ. ಸರ್ಕಾರದ ಹಲವು ಯೋಜನೆಯ ಫಲಾನುಭವಿಗಳಾಗಬೇಕಾದರೆ ಈ ಕಾರ್ಡ್‌ಗಳ ಹೊಂದಿರುವುದು ಅಗತ್ಯ, ಆದರೆ ಈ ಕಾರ್ಡ್‌ಗಳ ಸಾಲಿಗೆ ಈಗ ಹೊಸದೊಂದು ಕಾರ್ಡ್ ಸೇರಿಕೊಳ್ಳುತ್ತಿದೆ.
ಹೌದು ಆದರೆ ಈ ಕಾರ್ಡ್ ಹಿರಿಯರಿಗೆ ಅಲ್ಲ ಬದಲಾಗಿ ಶಾಲೆಗೆ ಹೋಗುತ್ತಿರುವ ನಿಮ್ಮ ಮಕ್ಕಳಿಗೆ. ಕೇಂದ್ರ ಸರ್ಕಾರ ಕಳೆದ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡಿರುವಂತೆ ಶಾಲಾ ಮಕ್ಕಳಿಗೆ ವಿಭಿನ್ನ ಹಾಗೂ ಪ್ರತ್ಯೇಕ ಗುರುತಿನ ಕಾರ್ಡ್ ಹೊರತರಲು ಮುಂದಾಗಿದೆ. ಈ ಕಾರ್ಡ್‌ಗೆ 'ಅಪಾರ್' ( APAAR- Automated Permanent Academic Account Registry) ಕಾರ್ಡ್ ಎಂದು ಕರೆಯಲಾಗಿದೆ.

ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಅಡಿಯಲ್ಲಿ 2026-27 ರ ವೇಳೆಗೆ ಶಾಲಾ ವಿದ್ಯಾರ್ಥಿಗಳ ಎಲ್ಲಾ ಶಿಕ್ಷಣ ದಾಖಲೆಗಳನ್ನು ಅದರ 'ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ID' ಎಂಬ ಯೋಜನೆಯ ಅಡಿಯಲ್ಲಿ ಈ ಗುರುತಿನ ಚೀಟಿಗಳ ವಿತರಣೆಗೆ ಮುಂದಾಗಿದೆ. ಇದು ವಿದ್ಯಾರ್ಥಿಗಳಿಗೆ ಬಹಳಷ್ಟು ಕೆಲಸಕ್ಕೆ ಬರಲಿದೆ ಎಂದು ತಿಳಿಸಲಾಗಿದೆ.
ವಿದ್ಯಾರ್ಥಿ ಪಡೆದ ಪದವಿಗಳು, ಸ್ಕಾಲರ್‌ಶಿಪ್, ಬಹುಮಾಣ, ಕ್ರೆಡಿಟ್ ಅವರ ಶೈಕ್ಷಣಿಕ ದಾಖಲೆಗಳು, ಅವರ ಅಧ್ಯಯನ ವಿಷಯಗಳ ಇತಿಹಾಸ ಸೇರಿ ಹಲವು ಮಾಹಿತಿಯನ್ನು ಈ ಕಾರ್ಡ್‌ಗಳ ಒಳಗೊಂಡಿರಲಿದೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿಯ ಎಲ್ಲಾ ದಾಖಲೆಗಳು ಒಂದೇ ಕಾರ್ಡ್‌ನಲ್ಲಿ ಏಕೀಕೃತ ವಿಧಾಣಧ ಅಡಿಗೆ ತರುವಂತಹ ಯೋಜನೆ ಇದಾಗಿರಲಿದೆ.
APAAR ID ಕಾರ್ಡ್‌ನಲ್ಲಿ ಆಧಾರ್ ಕಾರ್ಡ್‌ನಂತೆಯೇ ವಿಶೇಷ ಗುರುತಿನ ಸಂಖ್ಯೆಗಳ ನೀಡಲಾಗುತ್ತದೆ. ಇದು ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಪ್ರಯಾಣ ಮತ್ತು ಸಾಧನೆಗಳನ್ನು ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಟ್ರ್ಯಾಕ್ ಮಾಡಲು ಸಹಾಯ ಮಾಡಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಪೋಷಕರನ್ನು ಒಂದು ನಗರದಿಂದ ಇನ್ನೊಂದು ನಗರಕ್ಕೆ ಅಥವಾ ಒಂದು ರಾಜ್ಯಕ್ಕೆ ಮತ್ತೊಂದು ರಾಜ್ಯಕ್ಕೆ ವರ್ಗಾಯಿಸುವ ಸಂದರ್ಭದಲ್ಲಿ ಸಹಾಯಕವಾಗಿರುತ್ತದೆ.
ಹಾಗೆ ಅರ್ಧದಲ್ಲಿ ಶಾಲೆಯನ್ನು ಬಿಟ್ಟಿರುವ, ಅನುತ್ತೀರ್ಣರಾದ ವಿದ್ಯಾರ್ಥಿಗಳ ವಿಶೇಷ ಮೇಲ್ವಿಚಾರಣೆ ಹಾಗೂ ಅವರನ್ನು ಮತ್ತೆ ಶಾಲೆಯತ್ತ ಕರೆತರುವುದರಿಂದ ಹಿಡಿದು ದೇಶದ ಸಾಕ್ಷರತೆಯ ಮಟ್ಟ ಹೆಚ್ಚಿಸಲು ಕೂಡ ಇದು ನೆರವಾಗಲಿದೆ ಎನ್ನಲಾಗಿದೆ. ಹಾಗೆ ಈ ಕಾರ್ಡ್‌ನಲ್ಲಿ ಅವರು ಸಮಗ್ರ ವರದಿಗಳು, ಫಲಿತಾಂಶಗಳು ಸೇರಿ ಎಲ್ಲಾ ಮಾಹಿತಿಯನ್ನು ಸುರಕ್ಷಿತವಾಗಿಡಬಹುದು.
ಅಪಾರ್ ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡಲಾಗುತ್ತದೆಯೇ?
ಈಗ ಎಲ್ಲಾ ಕಾರ್ಡ್‌ಗಳನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಗ್ ಮಾಡಲಾಗುತ್ತಿದೆ. ಈ ಅಪಾರ್ ಕಾರ್ಡ್ ಕೂಡ ಆಧಾರ್ ಜೊತೆಗೆ ಲಿಂಕ್ ಮಾಡಲಾಗುತ್ತದೆ. ಆದ್ರೆ ಅಪಾರ್ ಕರ್ಡ್‌ನ ಸಂಖ್ಯೆಗಳು ಬದಲಾಗುವುದಿಲ್ಲ. ಈ ಕಾರ್ಡ್‌ಗೆ ಪೋಷಕರ ಆಧಾರ್‌ನೊಂದಿಗೂ ಲಿಂಕ್ ಮಾಡಲಾಗುತ್ತದೆ. ಈ ಐಡಿಯು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಿಂದ ಪ್ರಾರಂಭವಾಗುವ ಶಾಲಾ ಶಿಕ್ಷಣ ವ್ಯವಸ್ಥೆಯಾದ್ಯಂತ ಸಾರ್ವತ್ರಿಕ ವಿದ್ಯಾರ್ಥಿ ಗುರುತಿಸುವಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಈ ಕಾರ್ಡ್ ಹೊಂದಲು ಶಿಕ್ಷಣ ಸಚಿವಾಲಯವು 2026-27 ರ ಗಡುವನ್ನು ಪ್ರಸ್ತಾಪಿಸಿದೆ. ಈಗಾಗಲೇ ಹಲವು ರಾಜ್ಯಗಳು ಈ ಕಾರ್ಡ್ ಅನ್ನು ವಿದ್ಯಾರ್ಥಿಗಳಿಗೆ ನೀಡಲು ಮುಂದಾಗಿವೆ. ಆಂಧ್ರ ಪ್ರದೇಶ, ಅಸ್ಸಾಂ ಸೇರಿ ಹಲವು ಕಡೆಗಳಲ್ಲಿ ಯೋಜನೆಗೆ ಚಾಲನೆ ಸಿಕ್ಕಿದೆ. ಇನ್ನು ಈ ಕಾರ್ಡ್ ಹೊಂದುವುದು ಪೋಷಕರು ಹಾಗೂ ವಿದ್ಯಾರ್ಥಿಗಳ ಆಲೋಚನೆಗೆ ಬಿಡಲಾಗಿದೆ. ಅಂದರೆ ಈ ಕಾರ್ಡ್ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂಬ ನಿಯಮ ಜಾರಿ ಮಾಡಲಾಗಿಲ್ಲ.



Click it and Unblock the Notifications
