Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ನಟಿ ಅನುಷ್ಕಾ ಶರ್ಮಾ ಆಡಿಷನ್ ವಿಡಿಯೋ ವೈರಲ್..! ಹೇಗಿದ್ರು ನೋಡಿ..!
ಅನುಷ್ಕಾ ಶರ್ಮಾ ಈ ಹೆಸರು ಯಾರಿಗೆ ಗೊತ್ತಿಲ್ಲಾ ಹೇಳಿ, ಹಿಂದಿ ಸಿನಿಮಾ, ಬಾಲಿವುಡ್ ಬಗ್ಗೆ ತಿಳಿದವರಿಗೆ ಈ ಹೆಸರು ಚಿರಪರಿಚಿತ. ಬಾಲಿವುಡ್ ಬಗ್ಗೆ ನಿಮಗೆ ಗೊತ್ತಿಲ್ಲಾ ಅಂದ್ರು ನೀವೂ ಕ್ರಿಕೆಟ್ ಬಗ್ಗೆ ತಿಳಿದುಕೊಂಡಿದ್ರೆ ಅನುಷ್ಕಾ ಹೆಸರು ಕೇಳಿರ್ತೀರ. ಯಾಕಂದ್ರೆ ಭಾರತ ಕ್ರಿಕೆಟ್ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿಯ ಪತ್ನಿ ಯಾರಿಗೆ ಗೊತ್ತಿಲ್ಲ ಹೇಳಿ.
20ರ ದಶಕದಲ್ಲಿ ಬಾಲಿವುಡ್ ಸಿನಿಮಾದಲ್ಲಿ ಹಲ್‌ಚಲ್ ಎಬ್ಬಿಸಿದ್ದ, ಯುವಕರ ನಿದ್ದೆಗೆಡಿಸಿದ್ದ ಅನುಷ್ಕಾ ಶರ್ಮಾ ಈಗ ವಿರಾಟ್ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಮಗಳೊಂದಿಗೆ ಆಕೆ ಪತಿ ವಿರಾಟ್ ಕ್ರಿಕೆಟ್ ಜೀವನದ ಬೆನ್ನೆಲುಬಾಗಿ ಆತನ ಹಿಂದೆ ನಿಂತಿದ್ದಾಳೆ.

ಇಷ್ಟೆಲ್ಲಾ ಯಶಸ್ಸು ಕಂಡಿರುವ ಅನುಷ್ಕಾ ಶರ್ಮಾ ಅವರ ಹಳೆಯ ಮತ್ತು ಆಕೆಯ ಆಡಿಷನ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಆಕೆ ಬೆಂಗಳೂರಿನಿಂದ ಮುಂಬೈಗೆ ತೆರಳಿ ಮಾಡೆಲಿಂಗ್‌ಗಾಗಿ ಅವಕಾಶ ಹುಡುಕುತ್ತಿದ್ದ ವೇಳೆ ನಡೆದಿದ್ದ ಆಡಿಷನ್‌ನ ವಿಡಿಯೋ ತುಣುಕು ಇದಾಗಿದೆ. ಈ ವಿಡಿಯೋವನ್ನು ಕ್ಯಾಸ್ಟಿಂಗ್ ಏಜೆಂನ್ಸಿ ಮೊದಲು ಹಂಚಿಕೊಡಿದೆ. ಬಳಿಕ ಅನುಷ್ಕಾ ಶರ್ಮಾ ಅವರ ಫ್ಯಾನ್ ಪೇಜ್‌ಗಳಲ್ಲಿ ಹಂಚಿಕೊಳ್ಳಲಾಗಿದೆ.
2008ರಲ್ಲಿ ಅನುಷ್ಕಾ ಶರ್ಮಾ ಬಾಲಿವುಡ್‌ನಲ್ಲಿ ಮೊದಲ ಸಿನಿಮಾ ಮಾಡಿದ್ದರು. ಇದಕ್ಕೂ ಮುನ್ನ ಅವಕಾಶಕ್ಕಾಗಿ ಅವರೂ ಸಹ ಸಿಕ್ಕಾಪಟ್ಟೆ ಶ್ರಮ ಹಾಕಿದ್ದಾರೆ ಎನ್ನುವುದು ಈ ವಿಡಿಯೋದಿಂದ ತಿಳಿಯುತ್ತದೆ. 2008ರಲ್ಲಿ ಅವರು ಶಾರುಖ್ ಖಾನ್ ನಟನೆಯ 'ರಬ್ ನೆ ಬನಾದಿ ಜೋಡಿ' ಸಿನಿಮಾ ಮೂಲಕ ಸಿನಿ ರಂಗಕ್ಕೆ ಎಂಟ್ರಿಕೊಟ್ಟಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಈ ಸಿನಿಮಾದ ಬಳಿಕ ಶಾರುಖ್ ಅನುಷ್ಕಾ ಜೋಡಿ ಬಾಲಿವುಡ್‌ನಲ್ಲಿ ಮೋಡಿ ಮಾಡಿತ್ತು. ಆಕೆ ನಟಿಸಿದ್ದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಲೀಸ್ಟ್ ಸೇರಿಕೊಂಡವು, ಇತ್ತೀಚಿಗಿನ ಪಿಕೆ, ಬ್ಯಾಂಡ್ ಬಜಾ ಬರಾತ್, ಸುಲ್ತಾನ್, ಏ ದಿಲ್ ಹೆ ಮುಷ್ಕಿಲ್ ಸೇರಿ ಹತ್ತಾರು ಕೋಟಿ ಕ್ಲಬ್ ಸೇರಿರುವ ಸಿನಿಮಾಗಳಲ್ಲು ನಟಿಸಿದ್ದಾರೆ.
ಆದ್ರೆ ಇಷ್ಟೆಲ್ಲಾ ಹಿಟ್ ಸಿನಿಮಾ ಕೊಟ್ಟಿರುವ ಅನುಷ್ಕಾ ಹಿಂದೆ ಆಡಿಷನ್ಗಳಲ್ಲೂ ಭಾಗಿಯಾಗಿ ಶ್ರಮ ಹಾಕಿದ್ದಾರೆ. ಅವರು 18 ವರ್ಷವಿದ್ದಾಗ ಆಡಿಷನ್ ನೀಡಿರುವ ವಿಡಿಯೋ ತುಣುಕು ಇದಾಗಿದೆ. ಬಳಿಕ ಬಾಲಿವುಡ್ ಸಿನಿಮಾದಲ್ಲಿ ಸೈ ಎನಿಸಿಕೊಂಡಿದ್ದ ಅವರು, ವಿರಾಟ್ ಕೊಹ್ಲಿಯ ಜೊತೆ 2017ರಲ್ಲಿ ವಿವಾಹವಾದರು.
ಜಾಹಿರಾತು ಶೂಟ್‌ನಲ್ಲಿ ಇಬ್ಬರ ಭೇಟಿ
2013 ಜೂನ್‌ನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಶಾಂಪೂ ಬ್ರ್ಯಾಂಡ್‌ನ ಜಾಹೀರಾತಿನ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಸಂದರ್ಶನವೊಂದರಲ್ಲಿ ವಿರಾಟ್ ಈ ನೆನಪನ್ನು ಹಂಚಿಕೊಂಡಿದ್ದರು. ಈ ವೇಳೆ ಅನುಷ್ಕಾ ಉದ್ದದ ಹೀಲ್ಸ್ ಹಾಕಿದ್ದರು. ಹೀಗಾಗಿ ಆಕೆ ಮುಂದೆ ನಾನು ತೀರ ಚಿಕ್ಕವನಂತೆ ಕಾಣುತ್ತಿದ್ದೆ ಎಂದು ವಿರಾಟ್ ಹೇಳಿಕೊಂಡಿದ್ದರು.
ವಿರಾಟ್ ಜೊತೆ ವಿವಾಹ
2017ರ ಡಿಸೆಂಬರ್ 11 ರಂದು ಇಟಲಿಯ ಟಸ್ಕನಿಯ ಬೊರ್ಗೊ ಫಿನೊಚಿಟೊದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿರಾಟ್ ಮತ್ತು ಅನುಷ್ಕಾ ವಿವಾಹವಾದರು. ಇದರ ನಂತರ ಡಿಸೆಂಬರ್ 21 ರಂದು ದೆಹಲಿಯಲ್ಲಿ ತಾರೆಯರ ಮದುವೆಯ ಆರತಕ್ಷತೆ ನಡೆಯಿತು, ಇದು ಕ್ರಿಕೆಟ್ ದಿಗ್ಗಜರು ಸೇರಿ ಬಾಲಿವುಡ್ ಮಂದಿಯ ಸಮಾಗಮಕ್ಕೆ ಸಾಕ್ಷಿಯಾಗಿತ್ತು.
ಅನುಷ್ಕಾ ಫಿಟ್‌ನೆಸ್ ಗುಟ್ಟಾಗಿತ್ತು ಯೋಗ
ಅನುಷ್ಕಾ ಶರ್ಮಾ ಹಲವು ಬಾರಿ ತಮ್ಮ ಫಿಟ್‌ನೆಸ್ ಗುಟ್ಟೇನು ಅನ್ನೋದನ್ನು ಹಂಚಿಕೊಂಡಿದ್ದರು. ಆಕೆ 20 ವರ್ಷಕ್ಕೂ ಮೊದಲೇ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದರು. ಆಗಿನಿಂದ ತೀರಾ ಇತ್ತೀಚಿನವರೆಗೂ ಸಿನಿಮಾದಲ್ಲಿ ಲೀಡ್ ರೋಲ್‌ಗಳಲ್ಲೇ ಅವರು ನಟಿಸಿದ್ದರು. ಈ ಎಲ್ಲಾ ಪಾತ್ರದಲ್ಲೂ ಅವರು ಸ್ಲಿಮ್ ಆಗಿ ಫಿಟ್ ಆಗಿ ಕಾಣಿಸಿಕೊಂಡಿದ್ದರು. ಅವರೇ ಹೇಳಿದ್ದಂತೆ ನಿತ್ಯ ಯೋಗ ಮಾಡುತ್ತಿದ್ದರಂತೆ ಜೊತೆಗೆ ಕಠಿಣ ಆಹಾರ ಕ್ರಮ ಅವರ ಫಿಟ್‌ನೆಸ್‌ನ ಗುಟ್ಟಾಗಿತಂತೆ.



Click it and Unblock the Notifications
