Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಂಟಾರ್ಟಿಕಾದಲ್ಲೂ ಹರಡುತ್ತಿದೆ ಹಸಿರು..! ಇದು ಅಳಿವಿನ ಮುನ್ಸೂಚನೆ..!
ಇಡಿ ವಿಶ್ವಕ್ಕೆ ಈಗ ದೊಡ್ಡ ತೊಡಕಾಗಿರುವುದು ತಾಪಮಾನ ಏರಿಕೆ. ಜಾಗತಿಕ ತಾಪಮಾನ ಏರಿಕೆಯಿಂದ ಏನೆಲ್ಲಾ ಸಂಭವಿಸುತ್ತಿದೆ ಎಂಬುದು ನಾವೆಲ್ಲಾ ನೋಡುತ್ತಿದ್ದೇವೆ. ಆದ್ರೆ ಕೆಲವೊಂದು ಭಾಗದಲ್ಲಿ ನಾವು ಯಾರು ಅಂದುಕೊಳ್ಳದಂತಹ ಘಟನೆಗಳು ನಡೆಯುತ್ತಿವೆ. ಉದಾಹರಣೆಗೆ ಅತೀದೊಡ್ಡ ಮರುಭೂಮಿ ಸಹರಾದಲ್ಲಿ ಹಸಿರು ಕಾಣಿಸಿಕೊಳ್ಳುತ್ತಿರುವುದು, ಸೌದಿ ಮರುಭೂಮಿ ಕೂಡ ಈಗ ಹಸಿರಾಗುತ್ತಿರುವುದು ಅಚ್ಚರಿಗೆ ಕಾರಣವಾಗುತ್ತಿದೆ.
ಆದರೆ ಇದೆಲ್ಲದರ ನಡುವೆ ಗ್ಲೇಷಿಯರ್ ಕರಗಿ ನೀರಾಗಿ ಸಮುದ್ರ ಸೇರುತ್ತಿರುವ ಭೀತಿ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಅಂಟಾರ್ಟಿಕಾದಲ್ಲಿನ ಹಿಮವು ಬಹುಬೇಗ ಕರಗುತ್ತಿದೆ ಎಂಬುದು ನಮಗೆ ತಿಳಿದಿದೆ. ಹಾಗೆ ಅಲ್ಲಿನ ಹಿಮ ಪ್ರದೇಶ ವಿಜ್ಞಾನಿಗಳು ಅಂದಾಜಿಸಿದ್ದಕ್ಕಿಂತಲೂ ಬೇಗವಾಗಿ ಸಮುದ್ರ ಸೇರುತ್ತಿದೆ, ಹಾಗೆ ದೊಡ್ಡ ದೊಡ್ಡದಾಗಿ ಬಿರುಕು ಮೂಡುತ್ತಿದೆ.

ಒಂದು ವೇಳೆ ಈ ಹಿಮಗಳು ಕರಗಿ ನೀರಾಗಿ ಸಮುದ್ರ ಸೇರುತ್ತಾ ಬಂದರೆ ಸಮುದ್ರ ತೀರದ ನಗರಗಳಿಗೆ ಅಪಾಯ ತಪ್ಪಿದ್ದಲ್ಲ. ಆದರೆ ಈಗ ಹೊಸದೊಂದು ಅಧ್ಯಯನದಲ್ಲಿ ಈ ಅಂಟಾರ್ಕ್ಟಿಕಾ ಪ್ರದೇಶ ಹಸಿರು ಬಣ್ಣಕ್ಕೆ ತಿರುಗುತ್ತಿದೆಯಂತೆ. ಹೌದು ಮರುಭೂಮಿ ಹಸಿರು ಬಣ್ಣಕ್ಕೆ ತಿರುಗಿದರೆ ನಮಗೆ ಖುಷಿಯ ವಿಚಾರವೇ ಆದರೆ ಈ ಹಿಮ ಪ್ರದೇಶ ಹಸಿರಾದರೆ ಅಪಾಯ ಹತ್ತಿರವಾಗುತ್ತಿರುವ ಮುನ್ಸೂಚನೆಯಾಗಿದೆ.
ಹಿಂದಿನ ಮೂರು ದಶಕಗಳಿಗೆ ಹೋಲಿಸಿದರೆ ಇತ್ತೀಚಿನ ವರ್ಷಗಳಲ್ಲಿ ಈ ಬದಲಾವಣೆಯ ದರವು 30 ಪ್ರತಿಶತದಷ್ಟು ವೇಗವಾಗಿ ಹರಡುತ್ತಿದೆ. 1986 ಮತ್ತು 2001ರ ನಡುವೆ ನಡೆಸಲಾದ ಅಧ್ಯಯನದಲ್ಲಿ ಈ ಅಂಟಾರ್ಟಿಕಾ ಪ್ರದೇಶ ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಇದು ಸರಿ ಸುಮಾರು 12 ಚದರ ಕಿ.ಮೀಟರ್‌ಗೆ ಏರಿಕೆ ಕಂಡಿದೆ ಎಂದು ತಿಳಿದುಬಂದಿದೆ.
ನಿಮಗೆ ಅಚ್ಚರಿಯಾಗಬಹುದು ಹಸಿರು ಬಣ್ಣಕ್ಕೆ ತಿರುಗಿದರೆ ಏನು ಹಾನಿ ಎಂದು. ಹಿಮದ ಹೊದಿಕೆಯ ಬದಲು ಅಲ್ಲಿ ಹಸಿರು ಕಾಣಿಸಿಕೊಂಡರೆ ಆ ಜಾಗದಲ್ಲಿ ಹಿಮ ಕರಗಿದೆ ಎಂದರ್ಧ ಹಿಮದ ದಪ್ಪವಾದ ಹೊದಿಕೆ ನಿರಂತರವಾಗಿ ಕರಗಿ ಆ ಜಾಗದಲ್ಲಿ ಹಸಿರು ಮೂಡಲು ಆರಂಭಿಸಿದೆ. ಇಲ್ಲಿ ಹಿಮ ಕರಗುತ್ತಿರುವ ವೇಗ ಅಪಾಯದ ಮಟ್ಟದಲ್ಲಿದೆ.
ಹಲವು ಉಪಗ್ರಹದ ಚಿತ್ರಣಗಳು, ಹತ್ತಾರು ವರ್ಷದ ಅಧ್ಯಯನದಲ್ಲಿ ತೀವ್ರ ಗತಿಯ ಬೆಳವಣಿಗೆ ನಡೆಯುತ್ತಿರುವುದಕ್ಕೆ ದಾಖಲೆ ಒದಗಿಸುತ್ತಿದೆ. ಅಚ್ಚರಿ ವಿಚಾರವೆಂದರೆ ಈ ಪ್ರದೇಶದಲ್ಲಿ ಪಾಚಿ ಪ್ರಬೇಧದ ಸಸ್ಯ ಬೆಳೆಯುತ್ತಿದೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಬೆಳೆಯುವ ಏಕೈಕ ಸಸ್ಯ ಪ್ರಬೇಧ ಇದಾಗಿದೆ. ಹೀಗಾಗಿ ಹಿಮದ ನಡುವೆಯೂ ಪಾಚಿ ಬೆಳೆಯುತ್ತಿದೆ.
ಈ ಪಾಚಿಯ ಬೆಳವಣಿಗೆ ಹೊಂದಿರುವ ಪ್ರದೇಶದಲ್ಲಿ ಅಂದಾಜಿಸಿರುವುದಕ್ಕಿಂತ ಹೆಚ್ಚಿನ ತಾಪಮಾನ ನೋಡಬಹುದು. ತೀವ್ರ ಶಾಖದ ಕಾರಣಕ್ಕೆ ಹಿಮರಾಶಿಯ ಕರಗುವಿಕೆ ವೇಗ ಪಡೆದುಕೊಂಡಿದೆ. ಇಲ್ಲಿ ಹವಾಮಾನದ ಬದಲಾವನಣೆಯನ್ನು ನಾವು ಎದುರು ನೋಡಿದರು. ಈ ಸಸ್ಯಗಳು ಆ ಹವಾಮಾನಕ್ಕೆ ಹೊಂದಿಕೊಂಡು ಮತ್ತಷ್ಟು ಬೆಳವಣಿಗೆ ಹೊಂದುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
ಅಂಟಾರ್ಟಿಕಾದಲ್ಲಿನ ಮಣ್ಣು ಕಳಪೆಯಾಗಿದೆ ಅಥವಾ ಅಸ್ತಿತ್ವದಲ್ಲಿಲ್ಲ, ಆದರೆ ಸಸ್ಯದ ಜೀವಿತಾವಧಿಯಲ್ಲಿನ ಈ ಹೆಚ್ಚಳವು ಸಾವಯವ ಪದಾರ್ಥವನ್ನು ಸೇರಿಸುತ್ತದೆ ಮತ್ತು ಮಣ್ಣಿನ ರಚನೆಯನ್ನು ಸುಗಮಗೊಳಿಸುತ್ತದೆ - ಇತರ ಸಸ್ಯಗಳು ಬೆಳೆಯಲು ಸಂಭಾವ್ಯವಾಗಿ ದಾರಿ ಮಾಡಿಕೊಡುತ್ತದೆ" ಎಂದು ಈ ಅಧ್ಯಯನದ ಭಾಗಿಯಾಗಿರುವ ಬಾರ್ಟ್ಲೆಟ್ ಎಂಬ ಪರಿಸರ ತಜ್ಞ ಹೇಳಿದ್ದಾರೆ.
ಆದರೆ ಇದು ಭವಿಷ್ಯದ ದೃಷ್ಟಿಯಲ್ಲಿ ಬಹಳ ಗಂಭೀರ ವಿಚಾರವಾಗಿದೆ. ಇದು ಜಾಗತಿಕ ತಾಪಮಾನ ಏರಿಕೆಯ ಪರಿಣಾಮಕಾರಿ ಅಂಶಗಳಲ್ಲಿ ಗಮನಿಸಬೇಕಾದ ವಿಚಾರವಾಗಿದೆ. ಅಂಟಾರ್ಕ್ಟಿಕ ರಕ್ಷಿಸದೆ ಇದ್ದರೆ ಮಾನವ ಕುಲಕ್ಕೆ ಕಂಟಕ ಖಚಿತ ಎಂಬುದು ವಿಜ್ಞಾನಿಗಳ ವಾದವಾಗಿದೆ.



Click it and Unblock the Notifications