Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ವರ್ಷ ಅನಂತ ಚತುರ್ದಶಿ ಯಾವಾಗ? ಅನಂತ ಸೂತ್ರದ ಮಹತ್ವವೇನು?
ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಚತುರ್ದಶಿಯನ್ನು ಅನಂತ ಚತುರ್ದಶಿ ಎಂದು ಆಚರಿಸಲಾಗುವುದು. ಈ ದಿನ ಗಣೇಶ ವಿಸರ್ಜನೆಯ ದಿನವೂ ಹೌದು. ಅನಂತ ಚತುರ್ದಶಿಯಂದು ಶ್ರೀ ವಿಷ್ಣು ಅನಂತ ಪದ್ಮನಾಭನಾಗಿ ಅವತಾರ ತಾಳಿದ ದಿನ ಎಂದು ಹೇಳಲಾಗುವುದು. ಈ ದಿನ ಶ್ರೀ ವಿಷ್ಣುವಿನ ಆರಾಧನೆಗೆ ತುಂಬಾನೇ ಮಹತ್ವವಿದೆ. ಈ ವರ್ಷ ಅನಂತ ಚತುರ್ದಶಿ ಯಾವಾಗ? ಪೂಜಾ ಮುಹೂರ್ತ ಹಾಗೂ ಈ ದಿನದ ಪೂಜೆಯ ಮಹತ್ವವೇನು ಎಂದು ನೋಡೋಣ ಬನ್ನಿ:

2023ರಲ್ಲಿ ಅನಂತ ಚತುರ್ದಶಿ ಯಾವಾಗ?
ಈ ವರ್ಷ ಅನಂತ ಚತುರ್ದಶಿಯನ್ನು ಸೆಪ್ಟೆಂಬರ್ 28 ಗುರುವಾರದಂದು ಆಚರಿಸಲಾಗುವುದು.
ಅನಂತ ಚತುರ್ದಶಿ ತಿಥಿ ಪ್ರಾರಂಭ: ಸೆಪ್ಟೆಂಬರ್ 27 ರಾತ್ರಿ 10:18ಕ್ಕೆ
ಅನಂತ ಪೂಜಾ ಮುಹೂರ್ತ: ಸೆಪ್ಟೆಂಬರ್ 28 ಬೆಳಗ್ಗೆ 06:28ರಿಂದ ಸಂಜೆ 06:49ರವರೆಗೆ
ಅನಂತ ಚತುರ್ದಶಿ ತಿಥಿ ಮುಕ್ತಾಯ: ಸೆಪ್ಟೆಂಬರ್ 28 ಸಂಜೆ 06:49ಕ್ಕೆ
ಅನಂತ ಚತುರ್ದಶಿ ಏಕೆ ಆಚರಿಸಲಾಗುವುದು, ಇದರ ಮಹತ್ವವೇನು?
ಶ್ರೀವಿಷ್ಣು ಶೇಷನಾಗನ ಮೇಲೆ ಮಲಗಿರುತ್ತಾನೆ, ಸುಖ, ದುಃಖವನ್ನು ಸಮಾನಾಗಿ ಸ್ವೀಕರಿಸಿಕೊಂಡು ಹೋಗಬೇಕು ಎಂಬ ತತ್ತ್ವವನ್ನು ಸೂಚಿಸುತ್ತದೆ. ಗಣೇಶ ನಮ್ಮ ದೇಹವನ್ನು ಪ್ರತಿನಿಧಿಸುತ್ತದೆ. ಗಣೇಶನನ್ನು ನೀರಿನಲ್ಲಿ ವಿಸರ್ಜನೆ ಮಾಡಿದಾಗ ನೀರಿನಲ್ಲಿ ಕರಗಿದಂತೆ ನಮ್ಮ ದೇಹ ಪರಮಾತ್ಮನಲ್ಲಿ ಐಕ್ಯವಾಗಬೇಕು ಎಂದು ಹೇಳಲಾಗುವುದು.
ಅನಂತ ಚತುರ್ದಶಿ ಆಚರಣೆ ಹೇಗೆ?
* ಬೆಳಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಧರಿಸಿ ಕಲಶ ಪ್ರತಿಷ್ಠಾಪಿಸಿ, ಕಲಶ ಹಾಗೂ ಶ್ರೀ ವಿಷ್ಣುವಿನ ಮೂರ್ತಿ ಅಥವಾ ಫೋಟೋವನ್ನು ಕಮಲದ ಹೂವುಗಳಿಂದ ಅಲಂಕರಿಸಿ.
* ಒಂದು ತಟ್ಟೆಗೆ ಕುಂಕುಮ ಮಿಶ್ರ ಮಾಡಿದ ರೇಷ್ಮೆ ನೂಲಿಗೆ 14 ಗಂಟು ಹಾಕಿ ಶ್ರೀವಿಷ್ಣುವಿನ ಫೋಟೋದ ಬಳಿಯಿಟ್ಟು ಪೂಜೆ ಮಾಡ ಬೇಕು, ಇದನ್ನು ಅನಂತ ಸೂತ್ರ ಎಂದು ಕರೆಯಲಾಗುವುದು.
ಅನಂತ ಸೂತ್ರ ಏನನ್ನು ಸೂಚಿಸುತ್ತದೆ?
ಅನಂತ ಚತುರ್ದಶಿಯನ್ನು ಪಾಲಿಸುವವರು ಅನಂತ ಸೂತ್ರವನ್ನು ಕಟ್ಟಿಕೊಳ್ಳುತ್ತಾರೆ. ಸಾಕ್ಷಾತ್ ಭಗವಾನ್ ವಿಷ್ಣು ಅನಂತ ಸೂತ್ರದಲ್ಲಿ ನೆಲೆಸಿರುತ್ತಾನೆ ಎಂಬ ನಂಬಿಕೆಯಲ್ಲಿ ಅನಂತ ಸೂತ್ರ ಕಟ್ಟಲಾಗುವುದು. ಅನಂತರ ಸೂತ್ರ 14 ಗಂಟುಗಳಿರುವ ದಾರ. ಆ ದಾರದಲ್ಲಿರುವ 14 ಗಂಟು ಭೂಲೋಕ, ಭುವರ್ಲೋಕ, ಸ್ವರ್ಲೋಕ, ಮಹಾಲೋರ್ಕ, ಜನಲೋಕ, ತಪೋಲೋಕ, ಬ್ರಹ್ಮಲೋಕ, ಅತಳ ಲೋಕ, ವಿತಳ ಲೋಕ. ಸತಳ ಲೋಕ, ರಸಾತಳ ಲೋಕ, ಮಹಾತಳ ಲೋಕ, ತಳಾತಳ ಲೋಕ, ಪಾತಾಳ ಲೋಕ ಹೀಗೆ 14 ಲೋಕವನ್ನು ಪ್ರತಿನಿಧಿಸುತ್ತದೆ ಎಂದು ಹೇಳಲಾಗುವುದು.
ಅನಂತ ಸೂತ್ರವನ್ನು ಯಾರು ಹೇಗೆ ಬಳಸಬೇಕು?
ಈ ಅನಂತ ಸೂತ್ರವನ್ನು ಉಪವಾಸವಿದ್ದು ಶ್ರೀ ವಿಷ್ಣುವನ್ನು ಪೂಜೆ ಮಾಡಿದವರು ಮಾತ್ರ ಕಟ್ಟಬೇಕು. ಪುರುಷರು ಬಲಗೈಗೆ, ಮಹಿಳೆಯರು ಎಡಗೈಗೆ ಕಟ್ಟಬೇಕು.
ಅನಂತ ಚತುರ್ದಶಿ ಆಚರಣೆಯಪ್ರಯೋಜನವೇನು?
* ಈ ಉಪವಾಸ ವ್ರತವನ್ನು ಸತತ 14 ದಿನ ಆಚರಿಸಿದರೆ ಮೋಕ್ಷ ಸಿಗುವುದು, ಶ್ರೀ ವಿಷ್ಣುವಿನ ಲೋಕದಲ್ಲಿ ಸ್ಥಾನ ಸಿಗುವುದು ಎಂದು ಹೇಳಲಾಗುವುದು.
* ಈ ವ್ರತ ಮಾಡುವುದರಿಂದ ನಿಮ್ಮ ಮನೋಕಾಮನೆಗಳು ಈಡೇರುವುದು
* ಜೀವನದಲ್ಲಿನ ಕಷ್ಟಗಳು, ಅಡಚಣೆಗಳು ದೂರಾಗುವುದು
* ಸಂತೋಷ, ಸಮೃದ್ಧಿ ಹೆಚ್ಚಾಗುವುದು.
ಅನಂತ ಚತುರ್ದಶಿ ಪೌರಾಣಿಕ ಕತೆ
ಶ್ರೀ ಕೃಷ್ಣನು ಪಾಂಡವರಿಗೆ ಈ ಚತುರ್ದಶಿ ಮಹತ್ವದ ಬಗ್ಗೆ ಹೇಳುತ್ತಾನೆ. ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಶ್ರೀಕೃಷ್ಣನ ಬಳಿ ತಾವು ಕಳೆದುಕೊಂಡ ರಾಜ್ಯ ಮರಳಿ ಪಡೆಯಲು ಏನು ಮಾಡಬೇಕು ಎಂದು ಕೇಳಿದಾಗ ಶ್ರೀ ಕೃಷ್ಣನು ಪಾಂಡವರಿಗೆ ಈ ವ್ರತದ ಮಹತ್ವದ ಬಗ್ಗೆ ಹೇಳುತ್ತಾನೆ. ಅದರಂತೆ ಪಾಂಡವರು ಈ ವ್ರತವನ್ನು ಭಕ್ತಿಯಿಂದ ಆಚರಿಸುತ್ತಾರೆ. ನಂತರ ಯುಧಿಷ್ಠರನಿಗೆ ತನ್ನ ರಾಜ್ಯ ಮರಳಿ ಪಡೆಯಲು ಸಾಧ್ಯವಾಯ್ತು.
ಆದ್ದರಿಂದ ಈ ವ್ರತವನ್ನು ಆಚರಿಸುತ್ತಾರೋ ಅವರ ಮನೋಕಾಮನೆಗಳು ನೆರವೇರುವುದು.



Click it and Unblock the Notifications