Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬೆನ್ನು ನೋವಿಗೆ 8 ಜೀವಂತ ಕಪ್ಪೆ ನುಂಗಿದ ವೃದ್ಧೆ: ಆಮೇಲೆ ಆಗಿದ್ದೇನು ಗೊತ್ತಾ?
ಯಾವುದಾದರು ಚಿಕ್ಕ ಪುಟ್ಟ ಅನಾರೋಗ್ಯ ಸಮಸ್ಯೆಗಳಿಗೆ ಮನೆಯಲ್ಲೇ ಮದ್ದು ತೆಗೆದುಕೊಳ್ಳುವುದು ನೋಡಿರಬಹುದು. ಅದ್ರಲ್ಲೂ ಗಂಭೀರ ಅಲ್ಲದ ಸಮಸ್ಯೆಗಳಿಗೆ ಮನೆಯಲ್ಲಿಯೇ ಸಣ್ಣ ಪುಟ್ಟ ಪರಿಹಾರಗಳ ಮಾಡಿಕೊಳ್ಳುವುದು ನೋಡಬಹುದು. ಇದು ಎಲ್ಲಾ ದೇಶದಲ್ಲೂ ಇರುವ ಸಾಮಾನ್ಯ ಪ್ರಕ್ರಿಯೆ ಹಾಗೆ ಚೀನಾದಲ್ಲೊಬ್ಬಾಕೆ ಈ ರೀತಿ ಮನೆ ಮದ್ದು ಮಾಡಿ ಸಮಸ್ಯೆಗೆ ಸಿಲುಕಿರುವ ಘಟನೆ ವರದಿಯಾಗಿದೆ.
ವಿಪರೀತ ಸೊಂಟ ನೋವಿನಿಂದ ಬಳಲುತ್ತಿದ್ದ 82 ವರ್ಷದ ವೃದ್ಧೆಯೊಬ್ಬರು 08 ಜೀವಂತ ಕಪ್ಪೆಗಳ ನುಂಗಿದರೆ ನೋವು ಕಡಿಮೆಯಾಗಲಿದೆ ಎಂದು ಕಪ್ಪೆಯನ್ನು ತಿಂದು ಇನ್ನಿಲ್ಲದ ಸಮಸ್ಯೆ ತಂದುಕೊಂಡಿದ್ದಾರೆ. ಚೀನಾದ 82 ವರ್ಷದ ವೃದ್ಧೆ ಹರ್ನಿಯೇಟೆಡ್ ಡಿಸ್ಕ್‌ನಿಂದ ಉಂಟಾದ ಬೆನ್ನಿನ ನೋವನ್ನು ನಿವಾರಿಸುತ್ತದೆ ಎಂದು ನಂಬಿ ಎಂಟು ಸಣ್ಣ ಜೀವಂತ ಕಪ್ಪೆಗಳನ್ನು ನುಂಗಿದ್ದಾರೆ.

ಬೆನ್ನು ನೋವು ಕಾಣಿಸಿಕೊಂಡ ಬಳಿಕ ಆಕೆಗೆ ಮತ್ತೊಬ್ಬರು ಈ ಸಣ್ಣ ಕಪ್ಪೆ ಮರಿಗಳ ಜೀವಂತವಾಗಿ ನುಂಗಿದರೆ ನೋವು ಕಡಿಮೆಯಾಗಲಿದೆ ಎಂಬ ಸಲಹೆ ನೀಡಿದ್ದಾರೆ. ಇದನ್ನು ನಂಬಿದ ಆಕೆ ಕುಟುಂಬಸ್ಥರ ಬಳಿ ತಂದು ಕೊಡುವಂತೆ ಕೇಳಿದ್ದಾರೆ, ಆದ್ರೆ ಯಾವ ಕಾರಣಕ್ಕೆ ಕಪ್ಪೆಗಳು ಬೇಕು ಎಂಬುದನ್ನು ಆಕೆ ತಿಳಿಸಿಲ್ಲ.
ಆಕೆಯ ಮಾತು ಕೇಳಿ ಮನೆಯವರು ಕೂಡ ಕಪ್ಪೆ ಮರಿಗಳನ್ನು ತಂದು ನೀಡಿದ್ದಾರೆ. ಆಕೆ ನೋವು ತಾಳಲಾರದೆ 8 ಜೀವಂತ ಕಪ್ಪೆಗಳನ್ನು ನುಂಗಿದ್ದಾಳೆ. ಆದ್ರೆ ಇದು ನೋವು ಕಡಿಮೆ ಮಾಡುವ ಬದಲಾಗಿ ಮತ್ತಷ್ಟು ಹೆಚ್ಚು ಮಾಡಿದೆ. ಈ ಬಾರಿ ಬೆನ್ನು ನೋವಿನ ಜೊತೆಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದೆ.
ಹೊಟ್ಟೆ ನೋವಿನಿಂದ ನರಳುತ್ತಿದ್ದ ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಕಪ್ಪೆಗಳಿಂದಾಗಿ ಆಕೆಯ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ. ಹಾಗೆ ಸ್ಪಾರ್ಗನಮ್‌ನಂತಹ ಪರಾವಲಂಬಿಗಳು ಆಕೆಯ ದೇಹಕ್ಕೆ ಸೋಂಕು ತಗುಲಿದವು. ಆಕೆಗೆ ತೀವ್ರವಾದ ನೋವು ಕಾಣಿಸಿದ್ದಲ್ಲದೆ ನಡೆಯಲು ಆಗದೆ ಇರುವಷ್ಟು ಅಸ್ವಸ್ಥತೆ ಕಾಡಿದೆ.
ಆಕೆಯನ್ನು ಹ್ಯಾಂಗ್‌ಝೌನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ವೈದ್ಯರು ಆಕೆಯ ಪರೀಕ್ಷೆ ನಡೆಸಿ ಉದರದಲ್ಲಿ ಉಂಟಾಗಿರುವ ಸೋಂಕನ್ನು ಪತ್ತೆ ಮಾಡಿದರು. ಹಾಗೆ ಸೋಂಕಿನ ತೀವ್ರತೆಯ ಆಧಾರ ಮೇಲೆ ಆಕೆ ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಬೇಕಾಯಿತು. ಈ ಕಪ್ಪೆಗಳು ಉಂಟುಮಾಡಿದ ಸೋಂಕು ಜೀರ್ಣ ಕ್ರಿಯೆ ವ್ಯವಸ್ಥೆಯಿಂದ ಹಿಡಿದು ಶ್ವಾಸಕೋಶದ ಕ್ರಿಯೆಯಲ್ಲೂ ನಾಟಕೀಯ ಬದಲಾವಣೆಗೆ ಕಾರಣವಾದವು. ಇದು ಪರಾವಲಂಬಿಗಳ ಸೋಂಕಿಗೆ ಕಾರಣವಾಯಿತು. ಜೀವಕ್ಕೂ ಕೂಡ ಹಾನಿ ಮಾಡುವಂತಹ ತೀವ್ರ ಸ್ವರೂಪದ ಸೋಂಕು ಇದಾಗಿತ್ತು.
ಕಪ್ಪೆಗಳಿಂದ ನುಂಗುವುದರಿಂದ ಯಾವುದೇ ರೀತಿಯ ನೋವುಗಳು ಕಡಿಮೆಯಾಗುತ್ತದೆ ಎಂಬುದು ಎಲ್ಲಿಯೂ ದೃಢವಾಗಿಲ್ಲ. ಇದಕ್ಕೆ ಸಾಕ್ಷಿಗಳು ಕೂಡ ಇಲ್ಲ. ಆದ್ರೆ ಇದನ್ನು ನಂಬಿ ಚೀನಾದಲ್ಲಿ ವರ್ಷವೂ ಹಲವು ಅನಾರೋಗ್ಯ ಪ್ರಕರಣಗಳು ವರದಿಯಾಗುತ್ತವೆ. ಮನೆಯಲ್ಲಿ ಮಕ್ಕಳಿಗೂ ಕೂಡ ಈ ರೀತಿ ಮನೆ ಮದ್ದು ಎಂಬ ಕಾರಣಕ್ಕೆ ಕಪ್ಪೆಗಳನ್ನು ನುಂಗಿಸಲಾಗುತ್ತದೆ. ಕೆಲವೊಮ್ಮೆ ಇದು ಜೀವಕ್ಕೂ ಹಾನಿ ಮಾಡುವ ಸಾಧ್ಯತೆಗಳಿರುತ್ತವೆ.
ಸದ್ಯ ಜೀವಂತ ಕಪ್ಪೆಗಳ ನುಂಗಿದ್ದ ವೃದ್ಧೆ ಸತತ 2 ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡುವುದು ಇನ್ನು ತಡವಾಗಿದ್ದರೆ ಸೋಂಕು ವಿಪರೀತವಾಗಿ ಜೀವಕ್ಕೆ ಹಾನಿಯಾಗುತ್ತಿತ್ತು ಎಂದು ತಿಳಿದುಬಂದಿದೆ. ಚೀನಾದಲ್ಲಿ ಅನಾರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗೆ ದಾಖಲಾಗುವ ಮುನ್ನ ಮನೆಯಲ್ಲಿಯೇ ಹಲವು ರೀತಿಯ ಚಿಕಿತ್ಸೆಗಳ ಪಡೆಯುವುದು ಹಿಂದಿನಿಂದಲೂ ನಡೆದು ಬಂದಿದೆ.



Click it and Unblock the Notifications
