Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
500 ವರ್ಷಗಳ ಬಳಿಕ ಅಕ್ಷಯ ತೃತೀಯದಂದು ಗುರು ಸಂಚಾರ: ಈ ರಾಶಿಗಳಿಗೆ ತುಂಬಾನೇ ಅದೃಷ್ಟ
ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಅಕ್ಷಯ ತೃತೀಯ ಆಚರಿಸಲಾಗುವುದು. ಈ ವರ್ಷ ಏಪ್ರಿಲ್ 22ರಂದು ಆಚರಿಸಲಾಗುವುದು. ಹಿಂದೂ ನಂಬಿಕೆ ಪ್ರಕಾರ ಈ ದಿನವನ್ನು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ. ಈ ವರ್ಷ ಅಕ್ಷಯ ತೃತೀಯದ ಮತ್ತೊಂದು ವಿಶೇಷವೆಂದರೆ 12 ವರ್ಷಗಳ ಬಳಿಕ ಮೇಷ ರಾಶಿಗೆ ಗುರು ಸಂಚಾರ ವಾಗುತ್ತಿದೆ.ಈ ಘಟನೆ 500 ವರ್ಷಗಳ ಬಳಿಕ ಸಂಭವಿಸಲಿದೆ. ಮೇಷ ರಾಶಿಗೆ ಗುರು ಸಂಚಾರದ ಅಕ್ಷಯ ತೃತೀಯದಂದು ಉಂಟಾಗುವುದರಿಂದ ತುಂಬಾನೇ ಶುಭ ಯೋಗ ಏರ್ಪಡಲಿದೆ.

ಈ ದಿನ ಮಾಲವ್ಯ ಯೋಗ ಏರ್ಪಡಲಿದೆ. ಅಕ್ಷಯ ತೃತೀಯವನ್ನು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗುವುದು, ದಿನವೇ ಗುರು ಸಂಚಾರವಾಗಿರುವುದಿಂದ ಈ ದಿನ ಮತ್ತಷ್ಟು ವಿಶೇಷವಾಗಿದೆ. ಈ ವಿಶೇಷ ದಿನದಂದು ಉಂಟಾಗಿರುವ ಶುಭ ಯೋಗ ಈ ರಾಶಿಗಳಿಗೆ ತುಂಬಾನೇ ಅನುಕೂಲಕರವಾಗಿದೆ. ಆ ಅದೃಷ್ಟದ ರಾಶಿಗಳಾವುವು ಎಂದು ನೋಡೋಣ.
ವೃಷಭ ರಾಶಿ
ವೃಷಭ ರಾಶಿಯವರ 12ನೇ ಮನೆಗೆ ಗುರು ಸಂಚಾರವಾಗುತ್ತುದೆ. ಅಕ್ಷಯ ತೃತೀಯದಂದು ಮಾಲವ್ಯ ಯೋಗ ಏರ್ಪಡುವುದರಿಂದ ನಿಮಗೆ ಈ ಅಕ್ಷಯ ತೃತೀಯ ಫಲಿತಾಂಶ ನೀಡಲಿದೆ. ಈ ಅಕ್ಷಯ ತೃತೀಯದಂದು ನೀವು ಬಟ್ಟೆ, ಆಭರಣಗಳಿಂದ ಪ್ರಯೋಜನ ಪಡೆಯುತ್ತೀರಿ. ಗುರುವಿನ ಕೃಪೆಯಿಂದಾಗಿ ಗುರು ಮೇಷ ರಾಶಿಯಲ್ಲಿರುವಾಗ ನಿಮ್ಮ ಎಲ್ಲಾ ಆಸೆಗಳು ಈಡೇರಲಿದೆ. ನೀವು ಕುಟುಂಬ ಮತ್ತು ಪ್ರಣಯ ಜೀವನದ ವಿಷಯದಲ್ಲಿ ನೆಮ್ಮದಿ ಇರಲಿದೆ. ಆದರೆ ಗುರು ಮೇಷ ರಾಶಿಯಲ್ಲಿರುವಾಗ ನೀವು ಅನಗ್ಯತವಾಗಿ ಹಣವನ್ನು ಖರ್ಚು ಇಡಲೇಬೇಡಿ. ನೀವು ಹಣವನ್ನು ಖರ್ಚು ಮಾಡುವಾಗ ಸ್ವಲ್ಪ ಜಾಗರೂಕರಾಗಿರಬೇಕು. ಗುರುವಿನ ಸಂಕ್ರಮಣದ ಸಮಯದಲ್ಲಿ ನಿಮ್ಮ ಎಲ್ಲಾ ಇಷ್ಟಾರ್ಥಗಳೂ ಈಡೇರುತ್ತವೆ.
ಗುರು ನಿಮ್ಮ ರಾಶಿಯ 12ನೇ ಮನೆಯಲ್ಲಿ ಇರುವುದರಿಂದ ಈ ಪರಿಹಾರ ಮಾಡಿ
* ನೀವು ಏನಾದರೂ ಮಹತ್ವದ ಕಾರ್ಯಕ್ಕೆ ಹೋಗುವಾಗ ಹಳದಿ ಬಟ್ಟೆ ಧರಿಸಿ
* ಹಳದಿ ಬಣ್ಣದ ಕಲ್ಲು ಇರುವ ಆಭರಣ ಧರಿಸಿ
* ಪ್ರತಿದಿನ ಗುರು ಬೀಜ ಮಂತ್ರ ಪಠಿಸಿ
* ಗುರುವಾರ ಉಪವಾಸವಿದ್ದು ವಿಷ್ಣುವನ್ನು ಆರಾಧಿಸಿ.
ಸಿಂಹ ರಾಶಿ
ಸಿಂಹ ರಾಶಿಯವರು ಗುರು ಸಂಕ್ರಮಣದ ಸಮಯದಲ್ಲಿ ಪ್ರಯೋಜವನ್ನು ಪಡೆಯಬಹುದು. ಸಿಂಹ ರಾಶಿಯವರಲ್ಲಿ 9ನೇ ಮನೆಯಲ್ಲಿ ಗುರು ಇರಲಿದೆ. ನೀವು ಏನಾದರೂ ಹೊಸ ವ್ಯವಹಾರ ಮಾಡಿದರೆ ನೀವು ಲಾಭಗಳಿಸುವಿರಿ. ನೀವು ವಿದೇಶಕ್ಕೆ ಹೋಗಲು ಬಯಸಿದರೆ ಈ ಅವಧಿಯಲ್ಲಿ ನಿಮ್ಮ ಬಯಕೆ ಕೂಡಿ ಬರಲಿದೆ. ಈ ಅವಧಿಯಲ್ಲಿ ಕುಟುಂಬದಲ್ಲಿ, ಸಮಾಜದಲ್ಲಿ ಖ್ಯಾತಿ ಹೆಚ್ಚಾಗುವುದು. ಅಲ್ಲದೆ ಈ ಸಂಚಾರವು ವಿದ್ಯಾರ್ಥಗಳಿಗೆ ತುಂಬಾ ಒಳ್ಳೆಯದಿದೆ.
ಗುರು 9ನೇ ಮನೆಯಲ್ಲಿ ಇರುವಾಗ ಈ ಪರಿಹಾರ ಮಾಡಿ
* ಪ್ರತಿ ಗುರುವಾರ ಉಪವಾಸವಿದ್ದು ವಿಷ್ಣುವನ್ನು ಆರಾಧಿಸಿ
* ಗುರು ಬೀಜ ಮಂತ್ರ ಪಠಿಸಿ
* ಹಳದಿ ಬಣ್ಣದ ವಸ್ತ್ರ ನಿಮಗೆ ಶುಭವಾಗಿದೆ.
ವೃಶ್ಚಿಕ ರಾಶಿ
ಏಪ್ರಿಲ್ 22 ರಂದು ಗುರು ಸಂಚಾರ ವೃಶ್ಚಿಕ ರಾಶಿಯವರಿಗೆ ತುಂಬಾ ಒಳ್ಳೆಯದಿದೆ. ವೃಶ್ಚಿಕ ರಾಶಿಯವರಲ್ಲಿ ಗುರು 6ನೇ ಮನೆಯಲ್ಲಿ ಇರಲಿದೆ. ಕೋರ್ಟ್‌ನಲ್ಲಿ ಏನಾದರೂ ಕೇಸ್ ನಡೆಯುತ್ತಿದ್ದರೆ ತೀರ್ಪು ನಿಮ್ಮ ಪರ ಬರಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ವ್ಯಾಪಾರಸ್ಥರು ಹಾಗೂ ಸ್ವಂತ ಉದ್ಯೋಗ ಮಾಡುತ್ತಿರುವವರು ಈ ಅವಧಿಯಲ್ಲಿ ಲಾಭ ಗಳಿಸುವಿರಿ. ನೀವು ಆಸ್ತಿ ಅಥವಾ ಮನೆಗೆ ಹೂಡಿಕೆ ಮಾಡಲು ಬಯಸಿದರೆ ಈ ಅವಧಿಯಲ್ಲಿ ನಿಮ್ಮ ಕನಸು ನನಸಾಗಲಿದೆ.
ಗುರು 6ನೇ ಮನೆಯಲ್ಲಿ ಇರುವಾಗ ಈ ಪರಿಹಾರ ಮಾಡಿ
* ನಿರ್ಗತಿಕರಿಗೆ ಸಹಾಯ ಮಾಡಿ
* ಗುರು ಬೀಜ ಮಂತ್ರ ಪ್ರತಿದಿನ 108 ಬಾರಿ ಪಠಿಸಿದರೆ ಹೆಚ್ಚಿನ ಶುಭ ಸಿಗಲಿದೆ.
ಸೂಚನೆ: ಈ ಕುರಿತ ಹೆಚ್ಚಿನ ಮಾಹಿತಿಗೆ ನಿಮ್ಮ ಜ್ಯೋತಿಷಿಗಳ ಸಹಾಯ ಪಡೆಯಬಹುದು:



Click it and Unblock the Notifications
