Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
AI ವೈರಲ್ ವೀಡಿಯೋ: ಅತ್ತಿತ್ತ ನೋಡಿ ಮಂದಹಾಸ ಬೀರುತ್ತಿರುವ ಅಯೋಧ್ಯೆಯ ಬಾಲರಾಮ ವಿಗ್ರಹ!
ಜನವರಿ 22ಕ್ಕೆ ಅಯೋಧ್ಯೆ ರಾಮ ಮಂದಿರಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ. ಆ ಬಾಲ ರಾಮನ ಭವ್ಯ ಮೂರ್ತಿಯನ್ನು ನೋಡಲು ಎರಡು ಕಣ್ಣುಗಳು ಸಾಲದು, ಅವನನ್ನು ನೋಡುತ್ತಿದ್ದರೆ ಭಕ್ತಿಯಲ್ಲಿ ಕಳೆದು ಹೋಗಿ ಬಿಡುತ್ತೇವೆ.
ಆದರೆ ಆ ಬಾಲರಾಮ ನಮ್ಮಂತೆ ಕಣ್ಣಗಳನ್ನು ಅತ್ತಿತ್ತ ಚಲಿಸುವ ದೃಶ್ಯ ನೋಡಿದಾಗ ಸಾಕ್ಷಾತ್ ರಾಮನೇ ಪ್ರತ್ಯಕ್ಷವಾದಂತೆ ಭಾಸವಾಗುವುದು. ಕಣ್ಮುಚ್ಚಿ ತೆರೆಯುತ್ತಿರುವ ಬಾಲ ರಾಮ AI ತಂತ್ರಜ್ಞಾನ ಸೃಷ್ಟಿಯಾಗಿದೆ. ಇದೀಗ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಗಮನ ಸೆಳೆಯುತ್ತಿದೆ. ಅಯೋಧ್ಯೆಯ ಬಾಲರಾಮನ ಮೂರ್ತಿಯ ಫೋಟೋಗೆ AI ತಂತ್ರಜ್ಞಾನ ಬಳಸಿ ಬಾಲರಾಮನ ನಮ್ಮನ್ನು ನೋಡುತ್ತಿರುವಂತೆ ಭಾಸವಾಗುವ ವೀಡಿಯೋ ಕ್ರಿಯೇಟ್ ಮಾಡಿದ್ದಾರೆ.

Now, who did this? ಎಂಬ ಕ್ಯಾಪ್ಷನ್ ನೀಡಿ X ಬಳಕೆದಾರರು ಈ ವೀಡಿಯೋ ಶೇರ್ ಮಾಡಿದ್ದಾರೆ, ಈ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ಗಮನ ಸೆಳೆದಿದೆ. ಈ ವೀಡಿಯೋ ಅಷ್ಟೊಂದು ಆಕರ್ಷಕವಾಗಿದೆ, ಆ ಶ್ರೀರಾಮ ನಮ್ಮನ್ನು ನೇರವಾಗಿ ನೋಡುತ್ತಿರುವಂತೆ, ನಮ್ಮ ಜೊತೆ ನಿಂತಿರುವಂತೆ ಭಾಸವಾಗುವುದು.
Now who did this? 🤩🙏 #Ram #RamMandir #RamMandirPranPrathistha #RamLallaVirajman #AyodhaRamMandir #Ayodha pic.twitter.com/2tOdav7GD6
— happymi (@happymi_) January 22, 2024
ಕಣ್ಣನ್ನು ಮಿಟುಕಿಸುವುದು ಮಾತ್ರವಲ್ಲ ಕತ್ತನ್ನು ಅತ್ತಿತ್ತ ಅಲ್ಲಾಡಿಸಿ ನೋಡುತ್ತಾನೆ, ಮುಖದಲ್ಲಿ ನಗು ಇರುತ್ತದೆ, ಇದನ್ನು ನೋಡಿದವರು ವಾವ್ ಎಷ್ಟೊಂದು ಆಕರ್ಷಕವಾಗಿದೆ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ.
ಬಾಲರಾಮನ ವಿಗ್ರಹ
ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿರುವ ಬಾಲ ರಾಮನ ವಿಗ್ರಹವನ್ನು ಕೆತ್ತಿರುವ ಶಿಲ್ಪಿ ನಮ್ಮ ಕರ್ನಾಟಕದ ಮೈಸೂರಿನ ಅರುಣ್ ಯೋಗಿರಾಜ್. ಬಾಲರಾಮ ಆಭರಣಗಳಿಂದ ಅಲಂಕೃತವಾಗಿ ಗುಡಿಯಲ್ಲಿ ಇರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಚಿನ್ನದ ಕಿರೀಟ, ಕುಂಡಲ, ಹಾರಗಳು, ಹಣೆಯಲ್ಲಿ ಕೆಂಪು ಬಣ್ಣದ ತಿಲಕ, ವಜ್ರದ ಆಭರಣಗಳಿಂದ ಅಲಂಕೃತವಾಗಿರುವ ಬಾಲರಾಮನ ರೂಪಕ್ಕೆ ಮರುಳಾಗದ ಭಕ್ತರೇ ಇಲ್ಲ.
ಆಭರಣಗಳನ್ನು ಅಧ್ಯಯನ ಮಾಡಿ ಮಾಡಲಾಗಿದೆ
ಬಾಲರಾಮ ಧರಿಸಿರುವ ಆಭರಣಗಳನ್ನು ಸುಮ್ಮನೆ ಮಾಡಿಲ್ಲ, ಇದನ್ನು ಆಧ್ಯಾತ್ಮ ರಾಮಾಯ, ವಾಲ್ಮಿಕಿ ರಾಮಾಯಣ ಅಧ್ಯಯನ ಮಾಡಿ ತಯಾರಿಸಲಾಗಿದೆ.
ಶ್ರೀ ರಾಮ ರಕ್ಷಾ ಸ್ತೋತ್ರ
ಶ್ರೀಗಣೇಶಾಯ ನಮಃ ಅಸ್ಯ ಶ್ರೀರಾಮರಕ್ಷಾಸ್ತೋತ್ರಮಂತ್ರಸ್ಯ |
ಬುಧಕೌಶಿಕಋಷಿಃ |
ಶ್ರೀಸೀತಾರಾಮಚಂದ್ರೋ ದೇವತಾ |
ಅನುಷ್ಟುಪ್ ಛನ್ದಃ | ಸೀತಾ ಶಕ್ತಿಃ |
ಶ್ರೀಮದ್ಧನುಮಾನ್ ಕೀಲಕಮ್ |
ಶ್ರೀರಾಮಚಂದ್ರಪ್ರೀತ್ಯರ್ಥೇ ಜಪೇವಿನಿಯೋಗಃ |
ಅಥ ಧ್ಯಾನಮ್ |
ಧ್ಯಾಯೇದಾಜಾನಬಾಹುಂ ಧೃತಶರಧನುಷಂಬದ್ಧಪದ್ಮಾಸನಸ್ಥಮ್ |
ಪೀತಂ ವಾಸೋ ವಸಾನಂನವಕಮಲದಲಸ್ಪರ್ಧಿನೇತ್ರಂ ಪ್ರಸನ್ನಮ್ |
ವಾಮಾಙ್ಕಾರುಢಸೀತಾಮುಖಕಮಲಮಿಲಲ್ಲೋಚನಂನೀರದಾಭಂ |
ನಾನಾಲಙ್ಕಾರದೀಪ್ತಂ ದಧತಮುರುಜಟಾಮಣ್ಡನಂರಾಮಚಂದ್ರಮ್ || ಇತಿ ಧ್ಯಾನಮ್ |
ರಾಮನ ಸರಳ ಮಂತ್ರಗಳು
ಓಂ ಜಾನಕೀ ವಲ್ಲಭಾಯ ಸ್ವಾಹಾ
ಓಂ ನಮೋ ಭಗವತೇ ರಾಮಚಂದ್ರಾಯ
ಓಂ ರಾಮಾಯ ಧನುಷ್ಪಾಣಯೇ ಸ್ವಾಹಾಃ ಶ್ರೀರಾಮ ಶರಣಂ ಮಮ ರಂ ರಾಮಾಯ ನಮಃ
ಓಂ ರಾಮಚಂದ್ರಾಯ ನಮಃ
ಓಂ ರಾಮಭದ್ರಾಯ ನಮಃ ಶ್ರೀರಾಮ ಜಯ ರಾಮ, ಜಯ - ಜಯ ರಾಮ ಓಂ ದಶರಥಾಯ ವಿದ್ಮಹೇ ,
ಸೀತಾ ವಲ್ಲಭಾಯ ಧೀಮಹಿ,
ತನ್ನೋ ಶ್ರೀರಾಮಃಪ್ರಚೋದಯಾತ್||
ರಾಮ ರಾಮೇತಿ, ರಮೇ ರಾಮೇ ಮನೋರಮೇ|
ಸಹಸ್ರನಾಮ ತತ್ತುಲ್ಯಂ, ರಾಮನಾಮ ವರಾನನೇ||



Click it and Unblock the Notifications