Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ರಾಮನ ನೋಡುವವರೆಗೂ ಚಪ್ಪಲಿ ಧರಿಸಲ್ಲ ಎಂದು ಪ್ರತಿಜ್ಞೆ..! 11 ವರ್ಷದ ಬಳಿಕ ವ್ರತ ಅಂತ್ಯ
ಅಯೋಧ್ಯೆಯಲ್ಲಿ ನೂರಾರು ವರ್ಷದ ಕನಸಾಗಿದ್ದ ಭವ್ಯ ರಾಮ ಮಂದಿರ ನಿರ್ಮಾಣಗೊಂಡು ಭಕ್ತರ ಆಸೆ ಇಡೇರಿದೆ. ನೂರಾರು ವರ್ಷ ಲಕ್ಷಾಂತರ ಮಂದಿ ಈ ದೇವಾಯಲಕ್ಕಾಗಿ ಹೋರಾಡಿದ್ದಾರೆ. ದೇಶದ ಹಿಂದೂ ಜನತೆ ಈ ದೇವಾಲಯ ನಿರ್ಮಾಣಕ್ಕಾಗಿ ಹಗಲು ರಾತ್ರಿ ಕನಸು ಕಂಡಿದ್ದಾರೆ. ಹಾಗೆ ನೂರಾರು ಮಂದಿ ವ್ರತಗಳ ಪಾಲಿಸಿದ್ದಾರೆ. ಶಪಥ ಮಾಡಿಯೂ ಗಮನ ಸೆಳೆದಿದ್ದಾರೆ.
ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ಸಾಧು ಒಬ್ಬರು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ದೊಡ್ಡ ದೇವಾಲಯವನ್ನು ನಿರ್ಮಿಸುವವರೆಗೆ 11 ವರ್ಷಗಳ ಕಾಲ ಚಪ್ಪಲಿಯನ್ನು ಧರಿಸುವುದಿಲ್ಲ ಎಂದು ಶಪಥ ಮಾಡಿದ್ದರು. ಅವರೀಗ ರಾಮನ ದರ್ಶನ ಪಡೆದು ತಮ್ಮ 11 ವರ್ಷದ ವ್ರತವನ್ನು ಸಮಾಪ್ತಿಗೊಳಿಸಿದ್ದಾರೆ.

ಗಜಾನನ ಮಹಾಜನ್ ಎಂಬ ಭಕ್ತ ಲೋಣಿ ಗ್ರಾಮದಲ್ಲಿ ವಾಸಿಸುತ್ತಿದ್ದು, 11 ವರ್ಷಗಳ ಹಿಂದೆ ನಾನು ಅಯೋಧ್ಯೆಯಲ್ಲಿ ಶ್ರೀರಾಮನಿಗೆ ದೊಡ್ಡ ಮಂದಿರವನ್ನು ನಿರ್ಮಿಸುವವರೆಗೂ ಕಾಲಿಗೆ ಚಪ್ಪಲಿ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೆ. ಮಂದಿರ ನಿರ್ಮಾಣ ಆಗುವವರೆಗೂ ನಾನು ಚಪ್ಪಲಿ ಹಾಕಿರಲಿಲ್ಲ. ಈಗ ಶ್ರೀರಾಮನ ದೊಡ್ಡ ದೇವಾಲಯವನ್ನು ನಿರ್ಮಿಸಲಾಗಿದೆ. ನಾನು ಬೈಕಿನಲ್ಲಿ ಭಗವಾನ್ ಶ್ರೀರಾಮನ ಅಯೋಧ್ಯೆಗೆ ತಲುಪಿ ರಾಮಲಾಲನ ದರ್ಶನ ಪಡೆದೆ. ಈಗ 11 ವರ್ಷಗಳ ನಂತರ ಮತ್ತೆ ಚಪ್ಪಲಿ ಹಾಕಲು ಆರಂಭಿಸುತ್ತೇನೆ ಎಂದಿದ್ದಾರೆ.
ಸದ್ಯ ಗಜಾನನ ನೀರಿನ ವ್ಯಾಪಾರ ನಡೆಸುತ್ತಿದ್ದಾರೆ. ಶ್ರೀರಾಮ ಲಲ್ಲಾ ದೊಡ್ಡ ದೇವಸ್ಥಾನದಲ್ಲಿ ಕುಳಿತಾಗ ಮಾತ್ರ ನಾನು ಚಪ್ಪಲಿಯನ್ನು ಧರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದರು. ಈ ಮೂಲಕ ನಾನು ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಆದರೆ ನಾನು ನನ್ನ ಪ್ರತಿಜ್ಞೆಯನ್ನು ಮುರಿಯಲು ಬಿಡಲಿಲ್ಲ. ನಾನು ಅದನ್ನು ನಿರಂತರವಾಗಿ ನಡೆಸಿಕೊಂಡು ಬಂದು ಕೊನೆಗೂ ಅಯೋಧ್ಯೆ ತಲುಪಿದ ಬಳಿಕವೇ ಚಪ್ಪಲಿ ಧರಿಸಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
30 ವರ್ಷದ ಬಳಿಕ ಮೌನ ವ್ರತ ಮುರಿದಿದ್ದ ಮಹಿಳೆ
ಇನ್ನು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗುವವರೆಗೂ ಮಾತನಾಡದಿರಲು ನಿರ್ಧರಿಸಿದ್ದ ಮಹಿಳಾ ಭಕ್ತೆಯೊಬ್ಬಳು, ಮೌನ ವ್ರತ ಆಚರಿಸಿದ್ದಳು, ಅದು ಒಂದೆರಡು ದಿನಗಳ ಕಾಲ ಮಾತ್ರವಲ್ಲ ಬರೋಬ್ಬರಿ 30 ವರ್ಷಗಳ ಕಾಲ. ಹೌದು 30 ವರ್ಷಗಳಿಂದ ಆಕೆ ಔನ ವ್ರತಕ್ಕೆ ಜಾರಿ ಯಾರೊಂದಿಗೂ ಮಾತನಾಡುತ್ತಲೇ ಇರಲಿಲ್ಲ.
ಜಾರ್ಖಂಡ್‌ನ 85 ವರ್ಷದ ಮಹಿಳೆಯೊಬ್ಬರು ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯೊಂದಿಗೆ ತನ್ನ ಕನಸು ನನಸಾಗುವ ನಂತರ ಮೂರು ದಶಕಗಳ ಸುದೀರ್ಘ 'ಮೌನ ವ್ರತ' ವನ್ನು ಮುರಿದಿದ್ದರು. 1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ದಿನವೇ ಸರಸ್ವತಿ ದೇವಿ ಎಂಬಾಕೆ ಈ ವ್ರತ ಆರಂಭಿಸಿದ್ದರು. ಹಾಗೆ ರಾಮನ ದೇವಾಲಯ ನಿರ್ಮಾಣ ಆಗುವವರೆಗೂ ಮಾತನಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು.
ಇದಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಂಡಾಗ ಧನಬಾದ್ ನಿವಾಸಿ ಸರಸ್ವತಿ ದೇವಿ ದೇವಸ್ಥಾನದ ಉದ್ಘಾಟನೆಯನ್ನು ವೀಕ್ಷಿಸಲು ರೈಲಿನಲ್ಲಿ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಅಯೋಧ್ಯೆಯಲ್ಲಿ 'ಮೌನಿ ಮಾತಾ' ಎಂದು ಜನಪ್ರಿಯವಾಗಿರುವ ದೇವಿ, ಸಂಜ್ಞೆ ಭಾಷೆಯ ಮೂಲಕ ಕುಟುಂಬ ಸದಸ್ಯರೊಂದಿಗೆ ಸಂವಹನ ನಡೆಸುತ್ತಿದ್ದರು ಆದರೆ ಕಷ್ಟಕರವಾದ ವಾಕ್ಯಗಳನ್ನು ಬರೆಯುತ್ತಾರೆ. 2020ರ ವರೆಗೆ ಅವರು 'ಮೌನವ್ರತ'ದಿಂದ ವಿರಾಮ ತೆಗೆದುಕೊಂಡು ಪ್ರತಿದಿನ ಮಧ್ಯಾಹ್ನ ಒಂದು ಗಂಟೆ ಮಾತನಾಡುತ್ತಿದ್ದರಂತೆ, ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯಕ್ಕೆ ಅಡಿಪಾಯ ಹಾಕಿದ ದಿನ ಅವರು ಸಂಪೂರ್ಣವಾಗಿ ಮೌನವಾಗಿದ್ದರು. ಬಳಿಕ ದೇವಾಲಯ ಉದ್ಘಾಟನೆಗೊಂಡ ದಿನ ರಾಮ ಲಲ್ಲಾನ ದರ್ಶನ ಪಡೆದು ಆತನ ನಾಮದೇಯ ಪಠಿಸಿ ತಮ್ಮ ಮೌನ ವ್ರತವನ್ನು ಅಂತ್ಯಗೊಳಿಸಿದ್ದರು.



Click it and Unblock the Notifications
