ಬಣ್ಣ ಬದಲಿಸುವ ಗಣೇಶನ ದೇವಾಲಯ ಎಲ್ಲಿದೆ ಗೊತ್ತಾ? ಈ ಅಚ್ಚರಿ ಮೂರ್ತಿ ಕಥೆ ಏನು?

ನಮ್ಮ ದೇಶದಲ್ಲಿ ನೂರಾರು ಗಣೇಶನ ದೇವಾಲಯಗಳಿವೆ. ಒಂದೊಂದು ದೇವಾಲಯವು ಒಂದೊಂದು ಪುರಾಣ ಕಥಗಳನ್ನು ತನ್ನಲ್ಲಿಟ್ಟುಕೊಂಡಿದೆ. ಅದ್ರಲ್ಲೂ ದಕ್ಷಿಣ ಭಾರತದಲ್ಲಿರುವ ಹಲವು ದೇವಾಲಯಗಳು ಹತ್ತಾರು ವಿಶೇಷಗಳಿಂದ ಕೂಡಿವೆ. ನಮ್ಮ ರಾಜ್ಯದಲ್ಲೂ ಅಂತಹ ಅನೇಕ ವಿಭಿನ್ನ ವಿಶೇಷ ದೇವಾಲಯಗಳನ್ನು ನಾವು ನೋಡಬಹುದು.

ಆದ್ರೆ ಇಲ್ಲೊಂದು ದೇವಾಲಯ ನಿಮ್ಮ ಅಚ್ಚರಿಗೆ ಕಾರಣವಾಗೋದು ಖಚಿತ ಏಕೆಂದರೆ ಇದು ಅಂತಿಂತ ದೇವಾಲಯ ಅಲ್ಲವೇ ಅಲ್ಲ. ನೀವು ಸಾರ್ವಜನಿಕ ಗಣೇಶೋತ್ಸವದಲ್ಲಿ ಚಿತ್ರ ವಿಚಿತ್ರ ಶೈಲಿ ಗಣೇಶನ ನೋಡಿರುತ್ತೀರಿ. ನಿಂತಿರುವ ಗಣೇಶ, ಕುಳಿತ ಗಣೇಶ, ಯೋಗ ಮಾಡುವ ಗಣೇಶ ಹೀಗೆ ಹತ್ತು ಹಲವು ಭಂಗಿಯಲ್ಲಿ ಹಲವು ಬಣ್ಣದಲ್ಲಿಯೂ ನೋಡಲು ಸಿಗುತ್ತಾನೆ.

Adhisaya Vinayagar Temple That Changes Idol Color Twice A Year

ಆದ್ರೆ ಇಲ್ಲೊಂದು ದೇವಾಲಯದಲ್ಲಿ ಗಣೇಶನ ವರ್ಷಕ್ಕೆ ಎರಡು ಬಾರಿ ತನ್ನ ಬಣ್ಣ ಬದಲಿಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣವಾಗುತ್ತಾನೆ. ಹೌದು ನಾವಿಂದು ತಮಿಳುನಾಡಿನ ಕನ್ಯಾಕುಮಾರಿಯ ಕೇರಳಪುರಂನಲ್ಲಿರುವ ಒಂದು ವಿಭಿನ್ನ ದೇವಾಲಯದ ಕುರಿತು ಹೇಳುತ್ತೇವೆ ಕೇಳಿ. ಈ ದೇವಾಲಯದಲ್ಲಿರುವ ಗಣೇಶನ ಮೂರ್ತಿಯೂ ವರ್ಷಕ್ಕೆ ಎರಡು ಬಾರಿ ತನ್ನ ಬಣ್ಣ ಬದಲಾಯಿಸುತ್ತೆ.

ಪ್ರತಿ ಆರು ತಿಂಗಳಿಗೊಮ್ಮೆ ಗಣೇಶನ ವಿಗ್ರಹದ ಬಣ್ಣ ಬದಲಾಗುತ್ತದೆ. ಉತ್ತರಾಯಣ ಕಾಲದವರೆಗೆ ಗಣೇಶನ ಬಣ್ಣ ಕಪ್ಪಾಗಿದ್ದರೆ ದಕ್ಷಿಣಾಯಣ ಕಾಲದಲ್ಲಿ ಈ ಮೂರ್ತಿಯ ಬಣ್ಣವು ಬಿಳಿಯಾಗಿ ಬದಲಾಗುತ್ತದೆ. ಮೂರ್ತಿಯ ಬಣ್ಣ ಬದಲಾಗುತ್ತಿರುವುದೇ ಗಣೇಶನ ಮಹಿಮೆ ಎನ್ನುತ್ತಾರೆ ಭಕ್ತರು. ಈ ದೇವಾಲಯವನ್ನು ಮಹಾದೇವ ಅತಿಶಯ ವಿನಯಗರ್ ದೇವಾಲಯ ಎಂದು ಕರೆಯಲಾಗುತ್ತದೆ. ಈ ದೇವಾಲಯದ ಆವರಣದಲ್ಲಿ ಸಿಹಿ ನೀರಿನ ಬಾವಿ ಕೂಡ ಇದೆ. ನೀರಿಗೆ ಬಣ್ಣವಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಈ ದೇವಾಲಯದಲ್ಲಿ ಗಣಪತಿಯು ಕಪ್ಪಾಗಿದ್ದಾಗ ಬಾವಿಯ ನೀರು ಬೆಳ್ಳಗಾಗುತ್ತದೆ, ಮತ್ತೆ ಗಣಪತಿ ಬಿಳಿ ಬಣ್ಣಕ್ಕೆ ತಿರುಗಿದ್ದಾಗ ಈ ಬಾವಿಯ ನೀರು ಕಪ್ಪಾಗುತ್ತದೆ.

ಇನ್ನೊಂದು ಅಚ್ಚರಿ ಎಂದರೆ ಈ ದೇವಾಲಯದ ಆವರಣದಲ್ಲಿರುವ ಗಾಳಿ ಮರವು ದಕ್ಷಿಣಾಯಣದಲ್ಲಿ ಚಿಗುರುವ ಬದಲು ಎಲೆಗಳ ಉದುರಿಸುತ್ತದೆ. ಹಾಗೆ ಉತ್ತರಾಯಣದಲ್ಲಿ ಎಲೆಗಳು ಉದುರುವ ಸಮಯದಲ್ಲಿ ಹೊಸ ಚಿಗುರು ಮೂಡಿರುತ್ತದೆ. ಹೀಗಾಗಿ ಈ ದೇವಾಲವು ಪವಾಡಗಳಿಂದಲೇ ಹೆಸರಾಗಿದೆ.

ಈ ದೇವಾಲಯವನ್ನು ಕ್ರಿ.ಶ 1317 ರಲ್ಲಿ ನಿರ್ಮಿಸಲಾಯಿತು. ಈ ದೇವಾಲಯಕ್ಕೆ 2300 ವರ್ಷಗಳ ಇತಿಹಾಸವಿದೆ ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ. ಇದು ವಾಸ್ತವವಾಗಿ ಶಿವನ ದೇವಾಲಯವಾಗಿದೆ. ಈ ದೇವಾಲಯದ ಆವರಣದಲ್ಲಿ ಹಿಂದೆ ಶಿವನ ದೇವಾಲಯವಿತ್ತು. ಅದರ ನಂತರ, ಈ ಭಗವಾನ್ ವಿನಾಯಕ ದೇವಾಲಯವನ್ನು ನಿರ್ಮಿಸಲಾಯಿತು ಎಂದು ಉಲ್ಲೇಖಗಳಿವೆ.

ಇನ್ನು ಆಂಧ್ರಪ್ರದೇಶದ ಪಾಲಕೋಲ್‌ನಲ್ಲಿ ಒಂದು ಶಿವನ ದೇವಾಲಯವಿದೆ ಅಲ್ಲಿಯೂ ಕೂಡ ಶಿವನ ಲಿಂಗವು ತನ್ನ ಬಣ್ಣ ಬದಲಾಯಿಸುತ್ತದೆ. ಅಮಾವಾಸ್ಯೆಯಂದು ಕಡು ಕಪ್ಪು ಬಣ್ಣಕ್ಕೆ ತಿರುಗಿದರೆ ಹುಣ್ಣಿಮೆಯಲ್ಲಿ ಬಿಳಿ ಬಣ್ಣದಲ್ಲಿ ಹೊಳೆಯುತ್ತದೆ. ಇನ್ನು ಈ ತಮಿಳುನಾಡಿನ ಗಣೇಶ ದೇವಾಲಯವು ಗಣೇಶ ಚತುರ್ಥಿಯಂದು ಭಕ್ತರಿಂದ ತುಂಬಿರುತ್ತದೆ. ಅಂದು ಸಿಹಿ ಕಡಬು, ತೆಂಗಿನಕಾಯಿ ಕಡಬು, ಮೋದಕ ಹೀಗೆ ಹಲವು ರೀತಿಯ ಸಿಹಿ ತಿಂಡಿಗಳ ತಂದು ಸಮರ್ಪಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಈ ವಿನಾಯಕ ಭಕ್ತರ ಎಲ್ಲಾ ವಿಘ್ನಗಳನ್ನು ನಿವಾರಿಸುತ್ತಾನೆ ಎಂದು ನಂಬಲಾಗಿದೆ.

ಈ ದೇವಾಲಯದ ಆವರಣದಲ್ಲಿಯೇ ದೊಡ್ಡ ಕಲ್ಲಿನ ನಾಗರಹಾವಿನ ಮೂರ್ತಿಯೂ ಇದೆ. ಇದು ಶಿವನಿಗೆ ಸೇರಲ್ಪಟ್ಟಿದ್ದು, ಶಿವರಾತ್ರಿಯಂದು ಇಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ಈ ಮೂರ್ತಿಯ ಬಣ್ಣ ಬದಲಾಗುವ ಪ್ರಕ್ರಿಯೆಗೆ ಹಲವರು ವೈಜ್ಞಾನಿಕ ಕಾರಣಗಳ ಕೊಡುತ್ತಾರೆ. ಆದರೆ ಇದರ ಹಿಂದಿರುವ ವೈಜ್ಞಾನಿಕತೆ ಎಲ್ಲಾ ಕಲ್ಪನೆಗಳಿಗೂ ಮೀರಿದ್ದಾಗಿದೆ.

English summary

Adhisaya Vinayagar Temple That Changes Idol Color Twice A Year

In a temple here, Ganesha surprises everyone by changing his color twice a year. Yes, we are talking about a different temple in Keralapuram, Kanyakumari, Tamil Nadu.
Story first published: Sunday, September 1, 2024, 13:05 [IST]
X
Desktop Bottom Promotion