Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಟಿ ಕಾವ್ಯಾ ಗೌಡ ಮೇಲೆ ಹಲ್ಲೆ, ಕುಟುಂಬದಲ್ಲಿ ಬಿರುಕು; ಯಾರು ಈ ನಟಿ ಗೊತ್ತಾ?
ನಟಿ ಕಾವ್ಯಾ ಗೌಡ ಕುಟುಂಬದಲ್ಲಿನ ಕಲಹ ಈಗ ಬೀದಿ ರಂಪವಾಗಿದೆ. ತಮ್ಮ ಕುಟುಂಬ ವಿರುದ್ಧವೇ ಗಂಭೀರ ಆರೋಪ ಮಾಡಿರುವ ನಟಿ ಕಾವ್ಯಾ ಗೌಡ ದೂರು ನೀಡಿದ್ದಾರೆ. ಸಂಬಂಧಿಕರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಾವ್ಯಗೌಡ ಪತಿ ಸೋಮಶೇಖರ್ ಹಾಗೂ ನಂದೀಶ್ ಇಬ್ಬರು ಸೋದರರು. ಇಬ್ಬರ ಮಧ್ಯೆ ಈಗ ಆಸ್ತಿ ಕಲಹ ಈಗ ಕೌಟುಂಬಿಕ ಕಲಹವಾಗಿ ಮಾರ್ಪಟ್ಟಿದೆ.
ನಂದೀಶ್ ಪತ್ನಿ ಪ್ರೇಮಾ ಪೋಷಕರು ಕಾವ್ಯಗೌಡ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ. ನಟಿ ಕಾವ್ಯ ಗೌಡ ಹಾಗೂ ಪತಿ ಸೋಮಶೇಖರ್ ಮೇಲೆ ನಿನ್ನೆ ಮನೆಯಲ್ಲಿ ಹಲ್ಲೆ ನಡೆಸಲಾಗಿದೆ. ಸೋಮಶೇಖರ್ ಅವರ ಅತ್ತಿಗೆಯ ತಂದೆಯಿಂದ ಹಲ್ಲೆ ನಡೆದಿದೆ ಎಂಬ ಆರೋಪ ಮಾಡಲಾಗಿದೆ. ಕಾವ್ಯ ಗೌಡ ಪತಿ ಸೋಮಶೇಖರ್ ಅವರು ಉದ್ಯಮಿ 2021ರಲ್ಲಿ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‌ನಲ್ಲಿ ಇವರ ವಿವಾಹ ನೆರವೇರಿತ್ತು.

ಯಾರು ಈ ಕಾವ್ಯಾ ಗೌಡ
ಕಾವ್ಯಾ ಗೌಡ ಕನ್ನಡ ಕಿರುತೆರೆ ಹಾಗೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. 1992ರಲ್ಲಿ ಜನಿಸಿದ ಕಾವ್ಯಾ ಅವರಿಗೆ ಭವ್ಯ ಗೌಡ ಹಾಗೂ ಓರ್ವ ಸಹೋದರ ಕೂಡ ಇದ್ದಾನೆ. ಕಾವ್ಯಾ ಗೌಡ ಅವರು ಮೀರಾ ಮಾಧವ, ಗಾಂಧಾರಿ, ರಾಧಾ ರಮಣ ಹಾಗೆ ರಿಯಾಲಿಟಿ ಶೋ ಆಗಿದ್ದ ಪ್ಯಾಟೆ ಮಂದಿ ಕಾಡಿಗ್ ಬಂದ್ರು ಶೋನಲ್ಲಿ ಕಾವ್ಯ ಗೌಡ ಕಾಣಿಸಿಕೊಂಡಿದ್ದರು. ಹಾಗೆ ವಿ. ರವಿಚಂದ್ರನ್ ನಟನೆಯ ಬಕಾಸುರ ಎಂಬ ಸಿನಿಮಾದಲ್ಲೂ ಸಹ ನಟಿಸಿದ್ದಾರೆ. ಕಾವ್ಯಾ ಗೌಡ ಅವರು ಬರೋಬ್ಬರಿ 182ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಟಾಲಿವುಡ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಜೊತೆಗೂ ಜಾಹೀರಾತು ಒಂದರಲ್ಲಿ ತೆರೆ ಹಂಚಿಕೊಂಡಿದ್ದಾರೆ.
ಸಿನಿಮಾದಲ್ಲಿ ಕಡಿಮೆ ಅವಕಾಶಗಳ ನಡುವೆ ಅವರು ಧಾರವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಕಾವ್ಯಾ ಅವರ ಫ್ಯಾಷನ್ ಸೆನ್ಸ್ ಅನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಕಿರುತೆರೆಯಿಂದ ಹೊರ ಬಂದರೂ ನಟಿ ಕಾವ್ಯಾ ಗೌಡ ಅವರು ಸೋಶೀಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಅಲ್ಲದೇ, ತಮ್ಮ ಅಭಿಮಾನಿಗಳೋಂದಿಗೆ ಸಂಪರ್ಕವನ್ನು ಕಡಿತಗೊಳಿಸದೇ, ಸದಾ ತಮ್ಮ ವಯಕ್ತಿಕ ಜೀವನದ ಬಗ್ಗೆ ಅಪ್ ಡೇಟ್ ಗಳನ್ನು ಮಾಡುತ್ತಿರುತ್ತಾರೆ. ಹಾಗೆ 2021ರಲ್ಲಿ ಉದ್ಯಮಿ ಸೋಮಶೇಖರ್ ಅವರನ್ನು ವಿವಾಹವಾಗಿದ್ದರು, ಅವರ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ದುಬೈನಲ್ಲಿ ನಡೆದಿತ್ತು.
ರಾಮ ಮಂದಿರ ಉದ್ಘಾಟನೆಯ ದಿನ ಮಗಳ ನಾಮಕರಣ
ಕಾವ್ಯಾ ಗೌಡಾಗೆ ಹೆಣ್ಣು ಮಗು ಜನಿಸಿತ್ತು. ಅವರು ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ ದಿನದಂದು ತಮ್ಮ ಮಗಳಿಗೆ ನಾಮಕರಣ ಮಾಡಿದ್ದರು. ಸಿಯಾ ಎಂಬ ಹೆಸರು ಇಟ್ಟಿದ್ದರು. ಸಿಯಾ ಎಂದರೆ ಸೀತೆ ಎಂಬ ಅರ್ಥ ಬರಲಿದೆ. ಇನ್ನು ಕಳೆದ ವಾರ ಅಂದರೆ ಜನವರಿ 22ರಂದು ಮಗಳು ಸಿಯಾಳ ಎರಡನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದರು. ಹುಟ್ಟುಹಬ್ಬದಂದು ಕಪ್ಪು-ಬಿಳಿ ಸಂಯೋಜನೆಯ ಉಡುಪನ್ನು ಧರಿಸಿ ಮಗಳ ಕೈಯಲ್ಲಿ ಕೇಕ್ ಕತ್ತರಿಸಿದ್ದರು.



Click it and Unblock the Notifications
