Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಬಿಗ್ ಬಾಸ್ ವಿನ್ನರ್‌ಗೆ ಬಹುಮಾನ ಘೋಷಿಸಿದ್ದ ನಟ ಸುದೀಪ್; ಗಿಲ್ಲಿಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?
ಬಿಗ್ ಬಾಸ್ ಸೀಸನ್ 12ರ ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ವೀಕ್ಷಕರ ನಿರೀಕ್ಷೆಯಂತೆ ಗಿಲ್ಲಿ ನಟ ವಿನ್ನರ್ ಆಗಿದ್ದಾರೆ. ಬಿಗ್ ಬಾಸ್ ಆರಂಭದಿಂದಲೂ ಗಿಲ್ಲಿ ನಟ ಈ ಬಾರಿಯ ಬಿಗ್ ಬಾಸ್ ವಿನ್ ಆಗಲಿದ್ದಾರೆ ಎಂಬ ಮಾತುಗಳು ಕೇಳುತ್ತಲೇ ಇದ್ದವು. ಅದರಂತೆ ಗಿಲ್ಲಿಗೆ ದಾಖಲೆ ಪ್ರಮಾಣದಲ್ಲಿ ಓಟ್‌ಗಳು ಬಂದಿದ್ದವು. ಬಳಿಕ ವೇದಿಕೆಯಲ್ಲಿ ಕಿಚ್ಚ ಸುದೀಪ್ ಗಿಲ್ಲಿ ಅವರನ್ನು ವಿಜೇತರೆಂದು ಘೋಷಿಸಿದರು. ಹಾಗೆ ರಕ್ಷಿತಾ ರನ್ನರ್ ಅಪ್ ಆಗಿದ್ದಾರೆ.
ಬಿಗ್ ಬಾಸ್ ಅಂದ್ರೆ ವ್ಯಕ್ತಿತ್ವದ ಆಟ. ಅಲ್ಲಿ ಪ್ರತಿಭೆಯೊಂದಿಗೆ ಮಾತು ಬಹಳ ಮುಖ್ಯ. ಗಿಲ್ಲಿ ನಟನ ಕಾಮಿಡಿ ಟೈಮಿಂಗ್, ಹಾಗೆ ಟಾಸ್ಕ್ ಸೇರಿ ಆತನ ಮಾತುಗಳಿಗೆ ವೀಕ್ಷಕರು ಮನಸೋತಿದ್ದರು. ಇಡೀ ಫ್ಯಾಮಿಲಿ ಕುಳಿತು ನೋಡುವಂತಹ ತಿಳಿ ಹಾಸ್ಯದ ಮೂಲಕ ಗಿಲ್ಲಿ ಹೆಸರು ಪಡೆದರು. ಹಾಗೆ ಎಲ್ಲರಿಗೂ ಆತನನ್ನೇ ಗೆಲ್ಲಿಸಬೇಕು ಎಂಬ ಹಠದ ಮೂಲಕ ಓಟ್ ಮಾಡಿರುವುದು ನೋಡಬಹುದು.

ಸದ್ಯ ಗಿಲ್ಲಿಗೆ 50 ಲಕ್ಷ ರೂಪಾಯಿ ನಗದು ರೂಪದ ಬಹುಮಾನ ಹಾಗೆ ಟ್ರೋಫಿ ಒಲಿದು ಬಂದಿದೆ. ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನಿಗೆ ಪ್ರಾಯೋಜಕರ ಕಡೆಯಿಂದ 50 ಲಕ್ಷ ರೂಪಾಯಿ ಬಹುಮಾನ ಹಣ ಲಭಿಸಿದೆ. ಹಾಗೆ ಮಾರುತಿ ಸುಜುಕಿಯ ಹೊಸ ವಿಕ್ಟೋರಿಯಸ್ ಕಾರು ಸಹ ಬಹುಮಾನವಾಗಿ ನೀಡಲಾಗುತ್ತದೆ. ಇದರ ಜೊತೆಗೆ ಹಲವರು ಬಹುಮಾನ ಘೋಷಿಸಿದ್ದು ವಿಶೇಷವಾಗಿತ್ತು.
ಗಿಲ್ಲಿ ಪಡೆದ ಬಹುಮಾನದ ಮೊತ್ತ ಎಷ್ಟು?
ಗಿಲ್ಲಿಗೆ ಪ್ರಾಯೋಜಕರ ಕಡೆಯಿಂದ 50 ಲಕ್ಷ ರೂಪಾಯಿ ಸಿಕ್ಕಿದೆ. ಅದರಂತೆ ಗಿಲ್ಲಿ ಬಿಗ್ ಬಾಸ್ ವಿನ್ ಆದರೆ 20 ಲಕ್ಷ ರೂಪಾಯಿ ನೀಡುತ್ತೇನೆ ಎಂದು ಮೊದಲೇ ಜೆಡಿಎಸ್ ಎಂಎಲ್‌ಸಿ, ಸಾಯಿ ಗೋಲ್ಡ್ ಪ್ಯಾಲೆಸ್‌ನ ಮಾಲಿಕರಾದ ಶರವಣ ಅವರು ಘೋಷಿಸಿದ್ದರು. ಗಿಲ್ಲಿಗೆ ಪ್ರಾಯೋಜನಕರ ಬಹುಮಾನದ ಜೊತೆಗೆ ಈ ಹಣ ಕೂಡ ಸಿಗಲಿದೆ. ಹಾಗೆ ನಟ ಕಿಚ್ಚ ಸುದೀಪ್ ಕಡೆಯಿಂದಲೂ ಗಿಲ್ಲಿ ನಟನಿಗೆ ಬಹುಮಾನ ಹಣ ಲಭಿಸಿದೆ. ಕಿಚ್ಚ ಸುದೀಪ್ ಮನಗೆದ್ದಿರುವ ಗಿಲ್ಲಿಗೆ ತಮ್ಮ ವೈಯಕ್ತಿವಾಗಿ ಬಹುಮಾನ ನೀಡುವುದಾಗಿ ಘೋಷಿಸಿದರು. ನಾವು ಕೂಡ ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಪ್ರೀತಿಯಿಂದ 10 ಲಕ್ಷ ರೂಪಾಯಿ ನೀಡುವುದಾಗಿ ಸುದೀಪ್ ವೇದಿಕೆಯಲ್ಲಿ ಘೋಷಿಸಿದರು.
ಹೀಗೆ ಒಟ್ಟಾರೆ ಗಿಲ್ಲಿ 80 ಲಕ್ಷ ರೂಪಾಯಿ ಬಹುಮಾನದ ರೂಪದಲ್ಲಿ ಕೈಸೇರಿದೆ. ಅದರ ಜೊತೆಗೆ ಹತ್ತು ಹಲವು ಕೂಪನ್‌ಗಳು, ಬಹುಮಾನಗಳು, ಸನ್ಮಾನಗಳು ಇನ್ನೂ ಬರುವ ನಿರೀಕ್ಷೆಗಳಿವೆ.
ಯಾರು ಈ ಗಿಲ್ಲಿ ನಟ?
ಗಿಲ್ಲಿ ನಟನ ನಿಜವಾದ ಹೆಸರು ನಟರಾಜ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರದ ರೈತ ಕುಟುಂಬದಿಂದ ಬಂದಿರುವ ವ್ಯಕ್ತಿ. ಐಟಿಐ ಕೋರ್ಸ್ ಮುಗಿಸಿ ಬೆಂಗಳೂರು ಕಡೆ ಪ್ರಯಾಣ ಮಾಡಿದ್ದ ಅವರು, ಆರಂಭದಲ್ಲಿ ಸಿನಿಮಾ ನಿರ್ದೇಶಕರ ಬಳಿ ಕೆಲಸಕ್ಕೆ ಅಲೆದಾಡಿದ್ದಾರೆ. ಇದಾದ ಬಳಿಕ ಅವರು ಜೀ ಕನ್ನಡದಲ್ಲಿ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡ ಬಳಿಕ ಗಿಲ್ಲಿ ನಟ ಎಂಬುದಾಗಿ ಫೇಮಸ್ ಆದರು. ಹಾಗೆ ಇತ್ತೀಚಿಗೆ ನಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾದಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಇಷ್ಟೇ ಅಲ್ಲ ಗಿಲ್ಲಿ ಸುಮಾರು 5ಕ್ಕೂ ಹೆಚ್ಚು ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದಾರೆ. ಆದ್ರೆ ಯಾವುದೇ ಶೋನಲ್ಲಿ ವಿನ್ನರ್ ಆಗಿರಲಿಲ್ಲ. ನಂತರ ಬಿಗ್ ಬಾಸ್ ವೇದಿಕೆಯಲ್ಲೂ ಅವರು ಸೈ ಎನಿಸಿಕೊಂಡರು.



Click it and Unblock the Notifications
