Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಯಾರಲ್ಲಿ ಈ ಗುಣಗಳಲ್ಲಿರುತ್ತದೆಯೋ ಅವರು ಮಹಾಲಕ್ಷ್ಮೀಯ ಪ್ರತಿರೂಪವಂತೆ !
ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಪುರುಷ ದೇವರಿಗೆ ಎಷ್ಟು ಪ್ರಾಧಾನ್ಯತೆ ನೀಡಲಾಗುತ್ತದೆಯೋ ಅದೇ ರೀತಿ ಶಕ್ತಿ ದೇವತೆ ಎಂದು ಕರೆಯಲ್ಪಡುವ ಮಹಿಳಾ ದೇವತೆಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಲಾಗುತ್ತದೆ. ಸಾಧಾರಣವಾಗಿ ಎಲ್ಲಾ ಮಹಿಳೆಯರ ಗುಣ ಒಂದೇ ರೀತಿ ಇರೋದಿಲ್ಲ.
ಒಬ್ಬೊಬ್ಬರು ಒಂದೊಂದು ರೀತಿಯ ಗುಣಗಳನ್ನು ಹೊದಿರುತ್ತಾರೆ. ಆದರೆ ಯಾರಲ್ಲಿ ಈ ಗುಣಗಳಿರುತ್ತದೆಯೋ ಅವರನ್ನು ಮಹಾಲಕ್ಷ್ಮೀಯ ಪ್ರತಿರೂಪ ಎನ್ನಲಾಗುತ್ತದೆ. ಹಾಗಾದ್ರೆ ಮಹಿಳೆಯರಿಗೆ ಇರಬೇಕಾದ ಆ ಗುಣಗಳು ಯಾವುದು ಅನ್ನೋದನ್ನು ತಿಳಿಯೋಣ.

ಮಹಿಳೆಯರು ಇಲ್ಲದ ಈ ಪ್ರಪಂಚವನ್ನು ನಮ್ಮಿಂದ ಊಹಿಸಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಹಿಂದೂ ಧರ್ಮದಲ್ಲಿ ಮಹಿಳೆಯರನ್ನೂ ಅತ್ಯಂತ ಪೂಜ್ಯ ಭಾವದಿಂದ ಕಾಣಲಾಗುತ್ತದೆ. ಅಷ್ಟೇ ಯಾಕೆ ಈ ಸಮಾಜದ ಅಭಿವೃದ್ಧಿಯಲ್ಲೂ ಮಹಿಳೆಯರ ಪಾತ್ರ ಬಹಳಷ್ಟಿದೆ. ಇಂದು ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಮಹಾನ್ ಸಾಧನೆಗಳನ್ನು ಮಾಡಿ. ಪುರುಷರಿಗೂ ಸವಾಲ್ ಹಾಕುತ್ತಿದ್ದಾರೆ. ಇನ್ನೂ ಪುರುಷರಲ್ಲಿ ಇಲ್ಲದ ಕೆಲವೊಂದು ವಿಶೇಷ ಗುಣಗಳು ಮಹಿಳೆಯರಲ್ಲೂ ಇರುತ್ತದೆ. ಆ ಗುಣ ಮಾತೆ ಲಕ್ಷ್ಮೀಗಿದ್ದ ಗುಣವಾಗಿದೆ.
1. ಮಧುರವಾದ ಮಾತು
ಮಾತು ಮನೆ ಕೆಡಿಸಿತು ಅಂತಾರಲ್ಲ ಹಾಗೆ, ಮಹಿಳೆಯರ ಮಾತು ಯಾವಾಗಲೂ ಮೃದುವಾಗಿರಬೇಕು. ಪುರಾಣಗಳ ಪ್ರಕಾರ ಯಾವ ಮಹಿಳೆಯರು ಸುಮಧುರವಾಗಿ ಮಾತನಾಡುತ್ತಾರೋ ಅವರ ಆ ಮಾತು ಇಡೀ ಕುಟುಂಬಕ್ಕೆ ಶೋಭೆಯನ್ನುಂಟು ಮಾಡುತ್ತಂತೆ. ಮಹಿಳೆಯರು ಒಳ್ಳೆಯ ಮಾತುಗಳನ್ನು ಆಡಿದರೆ ಆಕೆಯ ಮಾತಿನಿಂದ ಇಡೀ ಕುಟುಂಬವನ್ನು ಒಟ್ಟು ಮಾಡುವ ಶಕ್ತಿಯಿದೆ. ಇಂತಹ ಮಹಿಳೆಯರು ತಾಯಿ ಹಾಗೂ ಆಕೆಯ ಗೌರವವನ್ನು ಹೆಚ್ಚಿಸುತ್ತಂತೆ. ಹೀಗಾಗಿ ಮಹಿಳೆಯರಿಗೆ ಮಾತು ಹಿಡಿತದಲ್ಲಿರಬೇಕು. ಯಾವಾಗ? ಏನು ಮಾತನಾಡುತ್ತಿದ್ದೀವಿ ಎಂಬ ಅರಿವಿರಬೇಕು.
2. ಶಿಕ್ಷಣ ಮತ್ತು ದೈರ್ಯ
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರದಂತೆ ಅಂತಾರಲ್ಲ. ಅದೇ ರೀತಿ ಒರ್ವ ಮಹಿಳೆ ಶಿಕ್ಷಣವನ್ನು ಪಡೆದರೆ ಇಡೀ ಸಮಾಜವೇ ಶಿಕ್ಷಣ ಪಡೆದಂತೆ. ಇಂತಹ ಮಹಿಳೆ ಇಡೀ ಕುಟುಂಬಕ್ಕೆ ಪ್ರೇರಣದಾಯಕಳಾಗಿರುತ್ತಾಳೆ. ಇದಿಷ್ಟೇ ಅಲ್ಲದೇ, ಶಿಕ್ಷಣದಿಂದ ಆಕೆ ದೈರ್ಯವಂತಳಾಗುತ್ತಾಳೆ. ಮಹಿಳೆ ಯಾವಾಗ ದೈರ್ಯವಂತಳಾಗಿರುತ್ತಾಳೋ ಆಗ ಆಕೆ ಎಂತಹ ಸಮಸ್ಯೆಯನ್ನಾದರೂ ಎದುರಿಸುತ್ತಾಳೆ.
3. ಧರ್ಮದ ತತ್ವಗಳನ್ನು ಪಾಲಿಸುವವರು
ಪುರಾಣಗಳ ಪ್ರಕಾರ ಮಹಿಳೆ ಯಾವಾಗ ಮನೆಯಲ್ಲಿ ಪೂಜೆ-ಪುನಸ್ಕಾರಗಳನ್ನು ಭಕ್ತಿಯಿಂದ ಕೈಗೊಳ್ಳುತ್ತಾರೋ ಆ ಮನೆಯಲ್ಲಿ ಸಮೃದ್ಧಿ ತುಂಬಿರುತ್ತದೆ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಮನೆಯ ಗೃಹಿಣಿಯಾದವಳು ಪೂಜಾ-ಕೈಂಕರ್ಯಗಳನ್ನು ಕೈಗೊಳ್ಳಲೇಬೇಕು. ಸಂಪ್ರದಾಯಗಳನ್ನು ಸರಿಯಾಗಿ ಪಾಲಿಸಿದ ಮನೆಯಲ್ಲಿ ದುಷ್ಟ ಶಕ್ತಿಗಳು ಸುಳಿಯೋದಕ್ಕೆ ಅವಕಾಶವಿಲ್ಲ. ಯಾವ ಮಹಿಳೆಗೆ ಧರ್ಮದ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆಯೋ ಆಗ ಆಕೆಗೆ ಒಳ್ಳೆಯದು ಹಾಗೂ ಕೆಟ್ಟದ್ದನ್ನು ಗುರುತಿಸುವ ಸಾಮರ್ಥ್ಯ ಹೊಂದಿರುತ್ತಾಳೆ. ಧರ್ಮದ ಬಗ್ಗೆ ತಿಳಿದಿರುವ ಮಹಿಳೆಯೊಬ್ಬಳು ತನ್ನ ಕುಟುಂಬವನ್ನು ಸನ್ಮಾರ್ಗದಲ್ಲೇ ನಡೆಸುತ್ತಾಳೆ. ಅವರನ್ನು ತಪ್ಪು ಹಾದಿ ತುಳಿಯೋದಕ್ಕೆ ಬಿಡೋದಿಲ್ಲ.
4. ಸಂಪತ್ತಿನ ಕ್ರೋಢೀಕರಣ
ಸಂಪತ್ತು ಕ್ರೋಢೀಕರಣವೆಂದರೆ ರಾಶಿ ರಾಶಿ ಹಣವನ್ನು ಕೂಡಿಡುವುದಲ್ಲ. ಕುಟುಂಬದ ಸಂಕಷ್ಟ ಕಾಲದಲ್ಲಿ ಇಂತಿಷ್ಟು ಹಣವನ್ನು ಮನೆಯ ಒಡತಿ ಗುಪ್ತವಾಗು ಕೂಡಿಡಬೇಕು. ಮಹಿಳೆಯಾದವಳಿಗೆ ಹಣವನ್ನು ಉಳಿತಾಯ ಮಾಡುವ ಕಲೆ ಗೊತ್ತಿರಲೇಬೇಕು. ನಿಮ್ಮ ಕೈಯಲ್ಲಿ ಎಷ್ಟೇ ಹಣವಿದ್ದರೂ ಕೂಡ ಅದನ್ನು ಯಾವ ರೀತಿ ಖರ್ಚು ಮಾಡಬೇಕು? ಅದ್ರಲ್ಲಿ ಎಷ್ಟು ಉಳಿತಾಯ ಮಾಡಬೇಕು ಅನ್ನೋದು ಮುಖ್ಯವಾಗಿ ಗೊತ್ತಿರಲೇಬೇಕು. ಅತಿಯಾಗಿ ಖರ್ಚು ಮಾಡುವ ಗುಣ ಮಹಿಳೆಯಲ್ಲಿದ್ದರೆ ಆ ಕುಟುಂಬಕ್ಕೆ ಒಳ್ಳೆಯದಲ್ಲ. ಇದು ಕುಟುಂಬಕ್ಕೆ ಶೋಭೆ ತರೋದಿಲ್ಲ.
ಮಹಿಳೆಯನ್ನು ಶಾಂತ ಸ್ವರೂಪಿ, ಕರುಣಾಮಯಿ ಎಂದು ಕರೆಯಲಾಗುತ್ತದೆ. ಈ ಗುಣಗಳ ಜೊತೆಗೆ ಮಹಿಳೆಯಲ್ಲಿ ಲಕ್ಷ್ಮೀಯಲ್ಲಿರುವ ಈ ನಾಲ್ಕು ಗುಣಗಳು ಇರಬೇಕು.



Click it and Unblock the Notifications
