Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಜೀವನದಲ್ಲಿ ಒಳ್ಳೆಯದಾಗಬೇಕೆಂದರೆ ಹೀಗೆ ಮಾಡಿ ಎನ್ನುತ್ತೆ ಗರುಡ ಪುರಾಣ
ವಿಷ್ಣುವು ಗರುಡನಿಗೆ ಹೇಳುವ ಕಥೆಯೇ ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ. ಒಬ್ಬ ಸಾಮಾನ್ಯ ಮನುಷ್ಯನ ಜೀವನಕ್ಕೆ ಬೇಕಾಗುವ ಎಲ್ಲಾ ಜೀವನ ಪಾಠಗಳು ಇದರಲ್ಲಿದೆ. ಅಷ್ಟೇ ಯಾಕೆ ಗರುಡ ಪುರಾಣದಲ್ಲಿ ಸ್ವರ್ಗವೊಂದನ್ನು ಬಿಟ್ಟು ನರಕ, ಪಿತೃಲೋಕ, ಆತ್ಮದ ಎರಡನೇ ದೇಹದ ಜೊತೆಗೆ ಮಾತಾನಾಡುವ ಸಂಭಾಷಣೆಯೂ ಇದರಲ್ಲಿದೆ. ಗರುಡ ಪುರಾಣದ ಉದ್ದೇಶ ಸಾಮಾನ್ಯ ಮನುಷ್ಯರನ್ನು ಖುಷಿಯಾಗಿರಿಸುವುದು ಅಷ್ಟೇ.
ಗರುಡ ಪುರಾಣವು ಪುರುಷ ಹಾಗೂ ಮಹಿಳೆಯರನ್ನು ಉದ್ದೇಶಿಸಿ ಅದೊಂದು ಮಾತನ್ನು ಹೇಳುತ್ತೆ. ಅಷ್ಟಕ್ಕು ಗರುಡ ಪುರಾಣದ ಪ್ರಕಾರ ಪುರುಷ ಅಥವಾ ಮಹಿಳೆಯರು ಮಾಡಬೇಕಾದ ಕೆಲಸಗಳು ಯಾವುದು ಅನ್ನೋದನ್ನ ನೋಡೋಣ.

1. ಪ್ರತಿಯೊಬ್ಬರಿಗೂ ಗೌರವ ನೀಡುವುದು
ಗರುಡ ಪುರಾಣದ ಪ್ರಕಾರ ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಒಬ್ಬರಿಗೆ ಗೌರವ ಕೊಡುವ ಗುಣಗಳನ್ನು ಬೆಳೆಸಿಕೊಂಡಿರಬೇಕು. ಒಬ್ಬ ವ್ಯಕ್ತಿಗೆ ಗೌರವ ಕೊಡುವುದು ತುಂಬಾನೇ ಮುಖ್ಯ. ನಾವು ಆಡುವ ಮಾತು ನಮ್ಮ ತನವನ್ನು ತೋರಿಸುತ್ತದೆ. ಹೀಗಾಗಿ ಯಾರಿಗೂ ಅವಾಚ್ಯ ಶಬ್ಧಗಳಿಂದ ನಿಂದಿಸಬಾರದು. ಬೇರೆಯವರ ಮುಂದೆ ಅವರನ್ನು ಅವಮಾನಿಸಬಾರದು. ಒಂದು ವೇಳೆ ನಾವು ಹೀಗೆ ನಡೆದುಕೊಂಡರೆ ಒಂದಲ್ಲ ಒಂದು ದಿನ ನಾವು ಅಂತಹದ್ದೇ ಪರಿಸ್ಥಿತಿಯನ್ನು ಎದುರಿಸುತ್ತೇವೆ. ಕರ್ಮ ಅನ್ನೋದು ತಿರುಗಿಸಿ ಹೊಡೆಯದೇ ಬಿಡೋದಿಲ್ಲ ಎಂದು ಗರುಡ ಪುರಾಣದಲ್ಲಿ ಉಲ್ಲೇಖವಾಗಿದೆ.
2. ಬೇರೆಯವರ ಮನೆಯಲ್ಲಿ ಶಾಶ್ವತವಾಗಿ ವಾಸ ಮಾಡಬೇಡಿ
ಗರುಡ ಪುರಾಣದ ಪ್ರಕಾರ ಮಹಿಳೆಯರಾಗಲಿ-ಪುರುಷರಾಗಲಿ ತಮ್ಮ ತಮ್ಮ ಮನೆಯಲ್ಲಿ ವಾಸ್ತವ್ಯ ಹೂಡಬೇಕೇ ವಿನಹ ಬೇರೆಯವರ ಮನೆಯಲ್ಲಿ ನೆಲೆಸೋದು ಒಳ್ಳೆಯದಲ್ಲ. ಅದು ನಿಮ್ಮ ಗೌರವಕ್ಕೆ ಧಕ್ಕೆ ತರುತ್ತದೆ. ನೀವು ಬೇರೆಯವರಿಂದ ನಿಂದನೆಗೂ ಒಳಗಾಗಬೇಕಾಗುತ್ತದೆ. ಹೀಗಾಗಿ ಸಂಬಂಧಿಕರು, ಸ್ನೇಹಿತರ ಮನೆಗೆ ಹೋದರೂ ಕೂಡ ಅಲ್ಲಿ ಹೆಚ್ಚು ದಿನ ಉಳಿದುಕೊಳ್ಳಬೇಡಿ. ಇನ್ನೂ ಮಹಿಳೆಯರಿಗೆ ಬೇರೆಯವರ ಮನೆ ಸುರಕ್ಷಿತ ಸ್ಥಳವು ಅಲ್ಲ ಅನ್ನುತ್ತೆ ಗರುಡ ಪುರಾಣ.
3. ಗಂಡ-ಹೆಂಡತಿ ಜೊತೆಯಲ್ಲಿ ಬಾಳಬೇಕು
ಮೂರು ಗಂಟು ಬೆಸೆದು ಮದುವೆಯಾದ ಮೇಲೆ ಗಂಡ-ಗೆಂಡತಿ ಒಟ್ಟಾಗಿ ಬಾಳಬೇಕು. ಕೆಲವೊಂದು ಸಾರಿ ಕೆಲಸದ ವಿಚಾರಕ್ಕೆ ಗಂಡ ದೂರದ ಊರಿಗೆ ಹೋಗಬೇಕಾಗಿ ಬರುತ್ತದೆ. ಇಂತಹ ಸಂದರ್ಭದಲ್ಲಿ ಪರವಾಗಿಲ್ಲ. ಅದನ್ನು ಬಿಟ್ಟು ಬೇರೆ ಯಾವ ಕಾರಣಕ್ಕೂ ಗಂಡ-ಹೆಂಡತಿ ಬೇರೆ ಬೇರೆಯಾಗಿ ವಾಸಿಸಲೇ ಬಾರದು ಅಂತಾರೆ ಚಾಣಕ್ಯ. ದೂರ ದೂರ ಇದ್ದಾಗ ಮನಸ್ಥಾಪ ಹೆಚ್ಚಾಗುತ್ತದೆ. ಹೀಗಾಗಿ ದಂಪತಿಗಳು ಒಟ್ಟಾಗಿ ಇರಬೇಕು ಅನ್ನುತ್ತೆ ಗರುಡ ಪುರಾಣ.
4. ಚಾರಿತ್ರ್ಯ ಚೆನ್ನಾಗಿರಲಿ
ಗರುಡ ಪುರಾಣದ ಪ್ರಕಾರ ಗಂಡಾಗಲಿ-ಹೆಣ್ಣಾಗಲಿ ಇಬ್ಬರಿಗೂ ಚಾರಿತ್ರ್ಯ ತುಂಬಾನೇ ಮುಖ್ಯವಾಗುತ್ತದೆ. ಯಾವ ಕಾರಣಕ್ಕೂ ನಿಮ್ಮ ಚಾರಿತ್ರ್ಯ ಹಾಳು ಮಾಡಕೊಳ್ಳಬೇಡಿ. ಜೀವನದಲ್ಲಿ ಎಂತಹ ಪರಿಸ್ಥಿತಿ ಎದುರಾದ್ರು ಕೂಡ ರಾಜಿ ಮಾಡಿಕೊಳ್ಳಲೇಬೇಡಿ. ನಿಮ್ಮ ತನವನ್ನು ನೀವು ಕಾಪಾಡಿಕೊಂಡರೆ ಸಮಾಜದಲ್ಲಿ ತಲೆಎತ್ತಿ ನಡೆಯೋದಕ್ಕೆ ಸಾಧ್ಯವಾಗುತ್ತೆ.
ಗರುಡ ಪುರಾಣದ ಈ ತಪ್ಪುಗಳನ್ನು ಮಾಡಲೇಬೇಡಿ. ಒಂದು ವೇಳೆ ತಪ್ಪು ಮಾಡಿದ್ದೇ ಆದರೆ ನಿಮ್ಮ ಗೌರವ, ಮರ್ಯಾದೆಯನ್ನು ನಿಮ್ಮ ಕೈಯಾರೆ ನೀವೆ ಹಾಳು ಮಾಡಿಕೊಂಡಂತೆ.



Click it and Unblock the Notifications



