Chanakya Niti: ಯಾವ ವ್ಯಕ್ತಿ ಶ್ರೀಮಂತನಾಗುತ್ತಾನೆ? ನೀವು ಅವರಲ್ಲಿ ಒಬ್ಬರೇ? ಈಗಲೇ ನೋಡಿ

ಪ್ರತಿಯೊಬ್ಬರು ಶ್ರೀಮಂತಿಕೆಯ (rich) ಜೀವನ ನಡೆಸಲು ಬಯಸುತ್ತಾರೆ. ಅಪಾರ ಸಂಪತ್ತು ಹೊಂದಲು ಇಷ್ಟಪಡುತ್ತಾರೆ. ಆದರೆ, ಇಂತಹ ವ್ಯಕ್ತಿಗಳು ಜೀವನದಲ್ಲಿ ಎಂದಿಗೂ ಶ್ರೀಮಂತರಾಗಲು ಸಾಧ್ಯವೇ ಇಲ್ಲ! ಹೌದು, ಸಾವಿರಾರು ವರ್ಷಗಳ ಹಿಂದೆ, ಚಾಣಕ್ಯನು (Chanakya Niti) ಕೆಲವು ನೀತಿಗಳನ್ನು ಹೇಳಿದ್ದನು. ಅದು ಇಂದಿಗೂ ಅಷ್ಟೇ ನಿಖರ ಮತ್ತು ವಾಸ್ತವವಾಗಿದೆ. ಯಾವ ಜನರು ಶ್ರೀಮಂತರಾಗುತ್ತಾರೆ ಮತ್ತು ಏಕೆ ಎಂದು ಚಾಣಕ್ಯ (Chanakya) ಹೇಳಿದ್ದನು. ನಾವು ಅವರಲ್ಲಿ ಒಬ್ಬರೇ? ಎಂಬ ಕುತೂಹಲ ನಿಮ್ಮಲ್ಲಿ ಮೂಡುವುದು ಸಹಜ. ಈ ಸಾಲಿನಲ್ಲಿ ನೀವು ಇದ್ದೀರಿಯೇ ಎಂದು ಈಗಲೇ ನೋಡಿಕೊಳ್ಳಿ.

ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಪ್ರಗತಿ ಸಾಧಿಸಬೇಕು ಮತ್ತು ಗೌರವ ಪಡೆಯಬೇಕೆಂಬ ಬಯಕೆ ಇರುತ್ತದೆ. ಆದರೆ, ಇದಕ್ಕೆ ಕೇವಲ ಕಠಿಣ ಪರಿಶ್ರಮ ಸಾಕಾಗಲ್ಲ. ಸಾಮಾನ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯು ಸಂಪತ್ತಿನ ಕೊರತೆ ಅನುಭವಿಸುತ್ತಾನೆ. ಕೆಲವೊಮ್ಮೆ ಕಷ್ಟಪಟ್ಟು ಕೆಲಸ ಮಾಡಿದ ಬಳಿಕವೂ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ತಪ್ಪು ಎಲ್ಲಿ ನಡೆಯುತ್ತಿದೆ ಎಂದು ನಾವು ಆಶ್ಚರ್ಯ ಪಡುತ್ತೇವೆ. ಇದಕ್ಕೆ ಸರಿಯಾದ ನಿರ್ದೇಶನ ಮತ್ತು ತಿಳುವಳಿಕೆ ಸಹ ಅತ್ಯಗತ್ಯ. ಈ ಪೈಕಿ ಸಾವಿರಾರು ವರ್ಷಗಳ ಹಿಂದೆ ಚಾಣಕ್ಯರು ಹೇಳಿದ ನೀತಿಗಳು, ನಮಗೆ ಇನ್ನೂ ಬಹಳ ಮುಖ್ಯ. ನಾವು ಚಾಣಕ್ಯನ ಸಲಹೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಸುಲಭವಾಗಿ ಯಶಸ್ಸನ್ನು ಪಡೆಯಬಹುದು.

Who will become rich

ಕಷ್ಟಪಟ್ಟು ಕೆಲಸ ಮಾಡಿದರೆ ಸಾಲದು

ಚಾಣಕ್ಯನು ತನ್ನ 'ಚಾಣಕ್ಯ ನೀತಿ'ಯಲ್ಲಿ ಜನರು ಜೀವನದಲ್ಲಿ ಸಂಪತ್ತು ಮತ್ತು ಯಶಸ್ಸನ್ನು ಪಡೆಯಬಹುದು ಎಂದು ಹೇಳಿದ್ದಾನೆ. ಕೇವಲ ಕಷ್ಟಪಟ್ಟು ಕೆಲಸ ಮಾಡಿದರೆ ಸಾಲದು ಎಂದು ಚಾಣಕ್ಯ ಸ್ಪಷ್ಟವಾಗಿ ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾನೆ. ನಮ್ಮ (ವ್ಯಕ್ತಿಯ) ಆಲೋಚನೆ, ಅಭ್ಯಾಸಗಳು ಮತ್ತು ನಡವಳಿಕೆ ಸಹ ಬಹಳ ಮುಖ್ಯ ಎಂದು ಒತ್ತಿ ಹೇಳಿದ್ದಾನೆ. ಸಮಯವನ್ನು ಗೌರವಿಸುವ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ತನ್ನ ಗುರಿಯ ಮೇಲೆ ಕೇಂದ್ರೀಕರಿಸುವ ವ್ಯಕ್ತಿ ಮಾತ್ರ ಮುಂದೆ ಸಾಗುತ್ತಾನೆ ಎನ್ನುವುದು ಚಾಣಕ್ಯರ ಮಾತು.

ತಪ್ಪುಗಳಿಂದ ಕಲಿಯುವ ವ್ಯಕ್ತಿ ಯಶಸ್ವಿಯಾಗುತ್ತಾನೆ

ತನ್ನನ್ನು ತಾನು ನಂಬುವ, ನಿರಂತರವಾಗಿ ತನ್ನ ತಪ್ಪುಗಳಿಂದ ಕಲಿಯುವ ಮತ್ತು ಕಲಿಯುವ ವ್ಯಕ್ತಿ ಯಶಸ್ವಿಯಾಗುತ್ತಾನೆ ಎಂದು ಚಾಣಕ್ಯ ಹೇಳಿದ್ದಾನೆ. ಸೋಮಾರಿತನ ಅಳವಡಿಸಿಕೊಂಡಿರುವವರು ಅಥವಾ ಪ್ರತಿಯೊಂದು ಕೆಲಸವನ್ನು ಮುಂದೂಡುತ್ತಿರುವವರು ಎಂದಿಗೂ ಶ್ರೀಮಂತರಾಗಲು ಸಾಧ್ಯವಿಲ್ಲ. ಅಂತಹ ಜನರು ತಮ್ಮ ಜೀವನದುದ್ದಕ್ಕೂ ಇತರರ ಮೇಲೆ ಅವಲಂಬಿತರಾಗಿರುತ್ತಾರೆ ಎಂದು ವಿವರಿಸಿದ್ದಾನೆ.

Take a Poll

ಸಂಪತ್ತು ಮತ್ತು ಗೌರವ ಎರಡೂ ಸಿಗುತ್ತದೆ

ವಿಶೇಷವಾಗಿ ಚಾಣಕ್ಯನು, ಯಾವಾಗಲೂ ಸ್ವಾವಲಂಬನೆಗೆ ಒತ್ತು ನೀಡುತ್ತಿದ್ದನು. ತಮ್ಮ ಕಠಿಣ ಪರಿಶ್ರಮವನ್ನು ನಂಬಬೇಕು. ಅಡ್ಡದಾರಿಗಳಿಲ್ಲದೆ ಮುನ್ನಡೆಯುವವರಿಗೆ ಸಂಪತ್ತು ಮತ್ತು ಗೌರವ ಎರಡೂ ಸಿಗುತ್ತದೆ ಎಂದು ಚಾಣಕ್ಯ ನಂಬಿದ್ದನು. ನೀವು ಜೀವನದಲ್ಲಿ ಸಾಧನೆ ಮಾಡಲು ಬಯಸಿದರೆ, ಚಾಣಕ್ಯನ ಈ ಸಲಹೆಗಳನ್ನು ಅನುಸರಿಸಲು ಪ್ರಾರಂಭಿಸಬೇಕು. ಈ ನೀತಿಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಅಲ್ಲದೆ, ನಿಮ್ಮನ್ನು ಬುದ್ಧಿವಂತ ಮತ್ತು ಬಲಿಷ್ಠ ವ್ಯಕ್ತಿಯನ್ನಾಗಿ ಮಾಡಬಹುದು.

ಜ್ಞಾನವೇ ಅತ್ಯಂತ ದೊಡ್ಡ ಸಂಪತ್ತು

ಜ್ಞಾನವಿಲ್ಲದೆ ಪ್ರಗತಿ ಕಷ್ಟ. ನೀವು ಜ್ಞಾನದ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ಚಾಣಕ್ಯನು ಜ್ಞಾನವೇ ಅತ್ಯಂತ ದೊಡ್ಡ ಸಂಪತ್ತು ಎಂದು ಹೇಳಿದ್ದಾನೆ. ಅಧ್ಯಯನ ಮತ್ತು ಕಲಿಕೆಯನ್ನು ನೀವು ಕರಗತ ಮಾಡಿಕೊಳ್ಳಬೇಕು. ಆಗ, ನೀವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ವಿಯಾಗಬಹುದು. ನಿಮ್ಮ ಸಮಯವನ್ನು ಗೌರವಿಸಬೇಕು. ಸಮಯವನ್ನು ಸರಿಯಾಗಿ ಬಳಸುವುದು ಬಹಳ ಮುಖ್ಯ. ಸಮಯಕ್ಕೆ ಬೆಲೆ ಕೊಡುವವರು ಮಾತ್ರ ಜೀವನದಲ್ಲಿ ಮುಂದೆ ಸಾಗುತ್ತಾರೆ. ಸೋಮಾರಿತನವನ್ನು ತಪ್ಪಿಸಿ ಪ್ರತಿ ಕ್ಷಣವನ್ನೂ ಸರಿಯಾಗಿ ಬಳಸಿಕೊಳ್ಳಿ ಎನ್ನುವುದು ಚಾಣಕ್ಯನ ಸಲಹೆ.

ಇದರೊಂದಿಗೆ, ಸರಿಯಾದ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ವಿಷಯದಲ್ಲಿ ನಿಮ್ಮ ಬುದ್ಧಿವಂತಿಕೆ ಬಹಳ ಮುಖ್ಯ. ಜೊತೆಗೆ ತಾಳ್ಮೆ ಮತ್ತು ಪರಿಶ್ರಮ ಇರಬೇಕು. ಜೀವನದಲ್ಲಿ ಕಷ್ಟಗಳು ಬರುತ್ತವೆ. ಆದರೆ, ತಾಳ್ಮೆ ಕಳೆದುಕೊಳ್ಳಬಾರದು. ಸತ್ಯವನ್ನು ಹೇಳುವುದು ಒಳ್ಳೆಯದು. ಗೌರವ ಮತ್ತು ತಿಳುವಳಿಕೆಯಿಂದ ಮಾತನಾಡಬೇಕು. ಆಗ, ನಿಮ್ಮ ಗೌರವವು ಉಳಿಯುತ್ತದೆ ಎಂದು ಚಾಣಕ್ಯ ಹೇಳಿದ್ದಾನೆ.

English summary

According To Chanakya Niti These People Become Rich

According To Chanakya Niti These People Become Rich: These People They Will Never Become Rich
Story first published: Friday, June 6, 2025, 14:00 [IST]
X
Desktop Bottom Promotion