Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
16 ವರ್ಷದಿಂದ ತುತ್ತು ಅನ್ನ ತಿನ್ನದೆ ಜೀವಿಸಿದ ಯುವತಿ..! ಈಕೆಯ ಕಥೆಯೇ ವಿಚಿತ್ರ..!
ಈ ಭೂಮಿ ಮೇಲಿರುವ ಸಕಲ ಜೀವರಾಶಿಗಳು ಆಹಾರ ಸೇವಿಸಿಯೇ ಬದುಕಬೇಕು. ಚಿಕ್ಕ ಇರುವೆ ಇಂದ ಹಿಡಿದು ದೊಡ್ಡ ದೊಡ್ಡ ಆನೆಗಳಿಗೂ ಆಹಾರ ವಿಲ್ಲದೆ ಬದುಕಲು ಸಾಧ್ಯವೇ ಇಲ್ಲ. ಆದರೆ ಕೆಲವೊಮ್ಮೆ ಪ್ರಾಣಿಗಳು ಹಲವು ದಿನಗಳವರೆಗೆ ಆಹಾರವಿಲ್ಲದೆ ಬದುಕುಳಿಯುತ್ತವೆ ಎಂದು ನಾವು ಕೇಳಿದ್ದೇವೆ, ಅಷ್ಟೇ ಏಕೆ ಮನುಷ್ಯರು ಸಹ ಕೆಲ ದಿನಗಳ ಕಾಲ ಆಹಾರವಿಲ್ಲದೆ ಬದುಕುಳಿಯಬಹುದು.
ಆದ್ರೆ ಇಲ್ಲೊಬ್ಬ ಯುವತಿ ಆಹಾರವನ್ನೇ ಮುಟ್ಟದೇ ನೀರು ಕುಡಿಯದೆ 16 ವರ್ಷದಿಂದ ಬದುಕಿದ್ದಾಳಂತೆ. ಇಥಿಯೋಪಿಯಾದ 26 ವರ್ಷದ ಯುವತಿಯೊಬ್ಬಳು ಕಳೆದ 16 ವರ್ಷದಿಂದ ಆಹಾರ ಸೇವಿಸದೆ ಬದುಕಿರುವುದಾಗಿ ಹೇಳಿಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ.

(ಫೋಟೋ ಕೃಪೆ: Drew Binsky Youtube)
ಆಕೆ 10 ವರ್ಷವಳಾಗಿದ್ದಾಗ ಆಕೆಯ ಕೊನೆಯ ಊಟ ಮಾಡಿದ್ದಳಂತೆ. ಅಂಬಾವ್ ಎಂಬ ಯುವತಿ 10ನೆ ವರ್ಷದಲ್ಲಿ ಕೊನೆಯದಾಗಿ ಆಕೆ 10 ವರ್ಷದವಳಿದ್ದಾಗ ಕೊನೆಯ ಊಟ ಇಥಿಯೋಪಿಯಾದ ಲೆಂಟಿಲ್ ಸ್ಟ್ಯೂ ಸೇವಿಸಿದ್ದಳಂತೆ. ಇದಾದ ಬಳಿಕ ಆಕೆ ಯಾವ ಆಹಾರವನ್ನು ಮುಟ್ಟಿಲ್ಲವಂತೆ. ಆಕೆಯ ಉಪವಾಸಕ್ಕೆ ಯಾವ ಕಾರಣವೂ ಇರಲಿಲ್ಲವಂತೆ.
ಈಗ ಒಂದು ಮಗುವಿನ ತಾಯಿಯಾಗಿರುವ ಅಂಬಾವ್ ಆರೋಗ್ಯವಾಗಿಯೇ ಇದ್ದಾರೆ. ಅಂಬಾವ್ ಅವರ ವಿಚಿತ್ರ ಸ್ಥಿತಿಯು ಗಮನಕ್ಕೆ ಬಂದಿಲ್ಲ, ಮತ್ತು ವರ್ಷಗಳಲ್ಲಿ, ಭಾರತ, ಕತಾರ್ ಮತ್ತು ದುಬೈನಲ್ಲಿ ವೈದ್ಯರು ಅವಳನ್ನು ಪರೀಕ್ಷಿಸಿದ್ದಾರೆ. ಆದರೆ ಇದುವರೆಗೆ ಯಾರೊಬ್ಬರೂ ಆಕೆಯ ದೇಹದಲ್ಲಿ ಯಾವುದೇ ದೋಷವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ ಮತ್ತು ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ.
ಇತ್ತೀಚೆಗೆ, ಡ್ರೂ ಬಿನ್ಸ್ಕಿ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಹೋಲ್ಡರ್ ಮತ್ತು ಯುಕೆ ಮೂಲದ ಯೂಟ್ಯೂಬರ್, ಅಂಬಾವ್ ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಭೇಟಿ ನೀಡಿದರು ಅವರೊಂದಿಗೆ ಆಕೆ ನೀಡಿದ್ದ ಹೇಳಿಕೆ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.
ಶಾಲೆಗೆ ಹೋಗುವಾಗ ಸುಳ್ಳು ಹೇಳಿದ್ದ ಅಂಬಾವ್
ಅಂಬಾವ್ ಶಾಲೆಗೆ ತೆರಳುವಾಗ ಮನೆಯಲ್ಲಿ ಯಾವಾಗಲೂ ತಿಂಡಿ ತಿನ್ನಲು ಹೇಳುತ್ತಿದ್ದರಂತೆ. ಆದರೆ ಪ್ರತಿ ಬಾರಿ ಮನೆಯವರು ಹೇಳಿದಾಗ ಆಕೆ ನಾನು ತಿಂಡಿ ತಿಂದಿರುವುದಾಗಿ ಸುಳ್ಳು ಹೇಳುತ್ತಿದ್ದಳಂತೆ. ಇದೇ ರೀತಿ ಹಲವು ದಿನಗಳವರೆಗೂ ಮುಂದುವರೆದಿತ್ತಂತೆ. ಹೀಗಾಗಿ ಆಕೆಗೆ ಬರುಬರುತ್ತಾ ಹಸಿವಾಗುವುದೇ ನಿಂತು ಹೋಯಿತಂತೆ, ಬಳಿಕ ಆಕೆ ಊಟ ಮಾಡುವುದನ್ನೇ ಬಿಟ್ಟು ಬಿಟ್ಟಳಂತೆ.
ಗರ್ಭಾವಸ್ಥೆಯಲ್ಲಿ ಗ್ಲೂಕೋಸ್ ಕುಡಿಯುತ್ತಿದ್ದ ಅಂಬಾವ್
ಅಂಬಾವ್ ಆಹಾರವಿಲ್ಲದೆ ಆರೋಗ್ಯವಾಗಿದ್ದಾಗ ಮದುವೆಯ ಜೊತೆ ಆಕೆ ಗರ್ಭಿಣಿಯೂ ಆದಳು. ಆದರೆ ಗರ್ಭಾವಸ್ಥೆಯಲ್ಲಿ ಊಟವಿಲ್ಲದೆ ಆಕೆ ಮಾತ್ರ ಆಕೆಯ ಮಗುವಿಗೂ ಕಷ್ಟವಾಗಿತ್ತು, ಈ ವೇಳೆ ಆಕೆಗೆ ಗ್ಲೂಕೋಸ್ ನೀಡಲಾಗಿತ್ತಂತೆ. ದೈಹಿಕ ಶಕ್ತಿಗಾಗಿ ಗ್ಲೋಕೋಸ್ ನೀರು ಆಕೆ ಕುಡಿಸಲಾಗುತ್ತಿತ್ತಂತೆ ಆದರೆ ಈ ಸಮಯದಲ್ಲು ಆಕೆ ಊಟ ಮಾಡಿರಲಿಲ್ಲ. ಇನ್ನು ಆಹಾರವಿಲ್ಲದೆ ಎದೆಹಾಲು ಉತ್ಪತ್ತಿಯಾಗುವುದು ಅಸಾಧ್ಯ ಎಂಬುದು ಎಲ್ಲರಿಗು ತಿಳಿದಿರುವ ವಿಚಾರ.
ಆಕೆಯ ಎದೆಯಲ್ಲಿ ಹಾಲು ಉತ್ಪತ್ತಿಯಾಗದ ಕಾರಣ ನವಜಾತ ಮಗುವಿಗೆ ಹಾಲುಣಿಸುವುದು ಕಷ್ಟವಾಗಿತ್ತು. ಮಗು ಆರೋಗ್ಯವಾಗಿ ಹುಟ್ಟಿದ್ದರು ಮಗುವಿಗೆ ಬೇಕಾಗಿದ್ದ ಅಗತ್ಯ ಪೋಷಕಾಂಶಗಳ ಕೊರತೆಯಂತು ಕಾಣುತ್ತಿತ್ತು, ಈ ನಡುವೆ ಎದೆಹಾಲು ಇಲ್ಲದಿರುವುದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿತ್ತು.
ಈ ವೇಳೆ ಮಗುವಿಗೆ ಕೃತಕ ಹಾಲು ಕುಡಿಸಲಾಗಿತ್ತು. ಹೀಗಾದಾಗ ಮಗು ಚೇತರಿಸಿಕೊಂಡಿತ್ತು. ಆದರೆ ಆಕೆ ಹೆರಿಗೆಯ ಸಮಯದಲ್ಲೂ ಯಾವುದೇ ಸಮಸ್ಯೆಗೆ ಒಳಗಾಗಲ್ಲಿಲ್ಲವಂತೆ. ಆದರೆ ಇಂದಿಗೂ ಆಕೆ ಆರೋಗ್ಯವಾಗಿಯೇ ಇದ್ದು, ಆಹಾರ, ಊಟ ಸೇವನೆಯಿಂದ ದೂರವೇ ಉಳಿದಿದ್ದಾಳೆ. ಆಕೆಯ ಈ ಪ್ರಕರಣ ವೈದ್ಯಕೀಯ ಲೋಕಕ್ಕೂ ಅಚ್ಚರಿಯಾಗಿಯೇ ಉಳಿದಿದೆ.



Click it and Unblock the Notifications
