Latest Updates
-
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್
ಕೈಗಳಿಗೆ 6 ಲೀಟರ್ ವ್ಯಾಸಲಿನ್ ಚುಚ್ಚಿಕೊಂಡ ಯುವಕ..! ಆಮೇಲೆ ಆಗಿದ್ದೇನು?
ಇತ್ತೀಚಿನ ವರ್ಷಗಳಲ್ಲಿ ಯುವಕರು ಹೆಚ್ಚಾಗಿ ದೇಹವನ್ನು ಹುರಿಯಾಗಿರಿಸಲು ಕಟ್ಟು ಮಸ್ತಾಗಿ ಕಾಣವೇಕು ಎಂದು ಜಿಮ್‌ಗೆ ಹೋಗುತ್ತಾರೆ. ಅಲ್ಲದೆ ಸಿಕ್ಕ ಸಿಕ್ಕ ಪ್ರೋಟೀನ್ ಪೌಡರ್‌ಗಳು, ಇಂಜೆಕ್ಷನ್‌ಗಳನ್ನು ಹಾಕಿಸಿಕೊಳ್ಳುತ್ತಾರೆ. ಏಕೆಂದರೆ ಆರೋಗ್ಯಕರ ಶೈಲಿಯಲ್ಲಿ ದೇಹವನ್ನು ಸಿಕ್ಸ್ ಪ್ಯಾಕ್ ಬಾಡಿಯನ್ನಾಗಿ ಮಾಡುವುದು ಸವಾಲಿನ ಕೆಲಸ. ಹೀಗಾಗಿ ಸುಲಭ ಮಾರ್ಗವನ್ನ ಆವರು ಆಯ್ಕೆ ಮಾಡಿಕೊಳ್ಳುತ್ತಾರೆ.
ಅದರಲ್ಲೂ ಜಿಮ್‌ಗೆ ಹೋಗಿ ಬಾಡಿ ಫಿಟ್ ಆಗಿ ಇರುವಂತೆ ನೋಡಿಕೊಳ್ಳಬೇಕು ಅನ್ನೋದು ಎಲ್ಲರ ಕನಸು ಸಹ ಆಗಿರುತ್ತೆ. ಇದಕ್ಕಾಗಿ ಯುವಕರು ಸಾವಿರಾರು ರೂಪಾಯಿ ಖರ್ಚು ಸಹ ಮಾಡುತ್ತಾರೆ. ಏಕೆಂದರೆ ಸ್ನಾಯುಗಳ ಬೆಳೆಸುವುದು, ಸಿಕ್ಸ್ ಪ್ಯಾಕ್ ಮಾಡುವುದು ಒಂದು ಹವ್ಯಾಸ ಆಗಿಬಿಟ್ಟಿದೆ. ಅದ್ರೆ ಬಾಡಿ ಬಿಲ್ಡಿಂಗ್ ಮಾಡಬೇಕಾದ್ರೆ ಹಲವು ರೀತಿ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ನಿತ್ಯ ಡಯೆಟ್ ಮಾಡುವುದು, ಕಠಿಣ ಶ್ರಮದ ಜೊತೆ ಸಮಯವೂ ತೆಗೆದುಕೊಳ್ಳುತ್ತದೆ.

ಆದ್ರೆ ಯುವ ಜನತೆಗೆ ಎಲ್ಲವೂ ವೇಗವಾಗಿ ಕೈಗೆ ಸಿಗಬೇಕು. ಹೀಗಾಗಿ ಅವರು ಇಂಜೆಕ್ಷನ್‌ಗಳು, ಪೌಡರ್‌ಗಳ ಮೊರೆ ಹೋಗುತ್ತಾರೆ. ಯಾಕಂದ್ರೆ ಈ ರೀತಿ ಮಾಡಿದ್ರೆ ನಿಗದಿತ ಸಮಯಕ್ಕೆ ಬಹುಬೇಗ ಒಳ್ಳೆಯ ದೇಹ ಪಡೆಯಬಹುದು ಜೊತೆಗೆ ಕಷ್ಟಪಡುವ ಅಗತ್ಯವೂ ಇರುವುದಿಲ್ಲ.
ಆದ್ರೆ ಇಲ್ಲೊಬ್ಬ ಯುವಕ ಈ ರೀತಿ ಅಡ್ಡದಾರಿಯಲ್ಲಿ ಬಲಾಢ್ಯ ದೇಹ ಪಡೆಯಲು ಹೊಗಿ ಯಡವಟ್ಟು ಮಾಡಿಕೊಂಡಿದ್ದಾನೆ. ಕಿರಿಲ್ ತೆರೆಶಿನ್ ರಷ್ಯಾದ ಯುವಕ ತನ್ನ ತೋಳುಗಳಿಗೆ ವ್ಯಾಸಲಿನ್ ದ್ರವ ಇಂಜೆಕ್ಟ್ ಮಾಡಿಕೊಂಡು ಈಗ ಆಪತ್ತಿಗೆ ಸಿಲುಕಿದ್ದಾನೆ. ಆತ ದೇಹದಾರ್ಢ್ಯ ಪ್ರದರ್ಶನಕ್ಕೆ ಹೆಸರಾಗಿರುವ ಯುವಕನಾಗಿದ್ದು, ರಷ್ಯಾದ ಪಾಪ್‌ಐ, ಬಜೂಕಾ ಹ್ಯಾಂಡ್ಸ್ ಎಂಬ ಹೆಸರು ಸಹ ಆತನಿಗಿದೆ.
ಈಗ ವೈರಲ್ ಆಗಿರುವ ಕ್ಲಿಪ್‌ನಲ್ಲಿ, ಅವರು ತಮ್ಮ ಸ್ನಾಯುಗಳನ್ನು ಪ್ರದರ್ಶಿಸುವುದನ್ನು ಕಾಣಬಹುದು ಮತ್ತು ಅವರು ಪ್ರತಿ ಕೈಗೆ ಮೂರು ಲೀಟರ್ ವ್ಯಾಸಲಿನ್ ಅನ್ನು ಚುಚ್ಚಿಕೊಂಡಿದ್ದಾರಂತೆ. ಒಟ್ಟು ಆರು ಲೀಟರ್ ವ್ಯಾಸಲಿನ್ ಅನ್ನು ಕೈಗೆ ಹಾಕಿಕೊಂಡಿಡ್ದಾರೆ. ವ್ಯಾಸಲಿನ್ ಪೆಟ್ರೋಲಿಯಂ ಉತ್ಪನ್ನವಾಗಿದ್ದು ದೇಹದಲ್ಲಿ ಕರಗುವುದಿಲ್ಲ. ಜೊತೆಗೆ ಅದು ಸ್ನಾಯು ಉಬ್ಬಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಈ ರೀತಿ ನೇರವಾಗಿ ಕೈಗೆ ಚುಚ್ಚಿಕೊಳ್ಳುವುದು ಅಪಾಯಕಾರಿಯಾಗಿದೆ.
ಆ ಯುವಕ ವ್ಯಾಸಲಿನ್ ಚುಚ್ಚಿಕೊಂಡ ಬಳಿಕ ಅನಾರೋಗ್ಯಕ್ಕೆ ಒಳಗಾಗಿದ್ದಾನೆ. ಆದತನ ದೇಹದಲ್ಲಿ ಆಗುತ್ತಿರುವ ಬದಲಾವಣೆಯನ್ನು ಆತನ ಅಭಿಮಾನಿಗಳೇ ಗುರುತಿಸಿದ್ದಾರೆ. ಈ ರೀತಿ ಮಾಡಿದ್ದರಿಂದಾಗಿ ಅವರಿಗೆ ರಕ್ತದ ಹರಿವು ಮತ್ತು ಅಂಗಾಂಶ ಹಾನಿಯಂತಹ ತೀವ್ರ ಸಮಸ್ಯೆಗಳನ್ನು ಉಂಟುಮಾಡಿತು. ಜೆಲ್ಲಿ ಮತ್ತು ಹಾನಿಗೊಳಗಾದ ಅಂಗಾಂಶವನ್ನು ತೆಗೆದುಹಾಕಲು ಅವರು ಅನೇಕ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ವರದಿಯ ಪ್ರಕಾರ, ಅವರು ತಮ್ಮ ಕೈಗಳನ್ನು ಕತ್ತರಿಸಬೇಕಾದ ಅಪಾಯಕ್ಕೆ ಒಳಗಾದರು.
ಈ ವಿಡಿಯೋವನ್ನು ಅವರು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅವರ ವಿಡಿಯೋ ನೋಡಿ ಜನ ಶಾಕ್ ಆಗಿದ್ದಾರೆ. ಅಲ್ಲದೆ ಇದರ ಅಪಾಯಗಳ ಕುರಿತಂತೆ ಆಘಾತ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಅಡ್ಡದಾರಿಗಳಿಂದಾಗಿ ಒಬ್ಬರ ಜೀವವೇ ಹೋಗಬಹುದು. ಇದು ಆರೋಗ್ಯಕರ ದಾರಿಯಲ್ಲಿ ದೇಹ ಬೆಳೆಸುವ ರೀತಿಯಲ್ಲ. ಇದು ಖಂಡಿತ ಅನಾರೋಗ್ಯಕರ ಎಂದು ಹೇಳಿದ್ದಾರೆ.
ಆದ್ರೆ ಈ ರೀತಿ ಮಾಡುವುದರಿಂದ ಬಹುಬೇಗ ಕಟ್ಟು ಮಸ್ತಾದ ದೇಹ ಪಡೆಯಬಹುದು. ಡೇಟಿಂಗ್‌ಗಾಗಿ ಹುಡುಗಿಯರ ಹುಡುಕಬಹುದು ಎಂದು ಹೀಗೆ ಮಾಡಿರುವುದಾಗಿ ಆತನೆ ಒಪ್ಪಿಕೊಂಡಿದ್ದಾನಂತೆ. ಆದರೆ ದೇಹ ಚೆನ್ನಾಗಿ ಕಾಣವೇಕು ಅಂತ ಆತ ತನ್ನ ಜೀವಕ್ಕೆ ಅಪಾಯ ತಂದುಕೊಂಡಿದ್ದು ಮಾತ್ರ ನಿಜವಾಗಲು ವಿಪರ್ಯಾಸ. ಆರೋಗ್ಯಕರವಾದ ರೀತಿಯಲ್ಲಿ ದೇಹ ಬೆಳೆಸಿದರೆ ಫಿಟ್ ಆಗಿ ಇರುವ ಜೊತೆಗೆ ಹಲವು ವರ್ಷಗಳ ಕಾಲ ಅದೇ ರೀತಿಯ ದೇಹ ಇಳಿಸಿಕೊಳ್ಳಬಹುದು.



Click it and Unblock the Notifications