Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಜೀವಂತ ಜಂತು ಹುಳು ವಾಂತಿ ಮಾಡಿದ ವ್ಯಕ್ತಿ..! ಇಷ್ಟು ದೊಡ್ಡ ಹುಳು ಹೊಟ್ಟೆಯೊಳಗಿತ್ತಾ?
ನೀವು ಚಿಕ್ಕವರಿರುವಾಗ ಜಂತು ಹುಳು ಅಥವಾ ಹೊಟ್ಟೆ ಹುಳಿವಿಗೆ ಔಷಧ ನೀಡುತ್ತಾರೆ. ಒಂದು ವೇಳೆ ಈ ಔಷಧ ನೀಡದೆ ಇದ್ದರೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಹೇಳಲಾಗುತ್ತದೆ. ಕೆಲವರಿಗೆ ಒಂದು ಬಾರಿ ಈ ಔಷಧಿ ಕೊಡಿಸುತ್ತಾರೆ. ಮತ್ತೆ ಕೆಲವರಿಗೆ ಹಲವು ಬಾರಿ ಈ ಔಷಧಿ ನೀಡಬೇಕಾಗುತ್ತದೆ.
ಜಂತು ಹುಳುಗಳು ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ ಆಗಿದ್ದರು ಅವುಗಳ ಸಂಖ್ಯೆ ಹೆಚ್ಚಾದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಮನುಷ್ಯರಿಗೆ ಮಾತ್ರವಲ್ಲ ಇವು ಪ್ರಾಣಿಗಳಿಗೂ ಇನ್ನಿಲ್ಲದ ಸಂಕಷ್ಟ ತಂದೊಡ್ಡುತ್ತವೆ. ಅದರಲ್ಲೂ ಸಾಕು ಪ್ರಾಣಿಗಳಲ್ಲಿ ಇವುಗಳ ಹಾವಳಿ ಹೆಚ್ಚಿರುತ್ತದೆ. ಸಾಕು ನಾಯಿ, ಬೆಕ್ಕು, ಜಾನುವಾರುಗಳಲ್ಲಿ ಇವು ಕಂಡುಬರುತ್ತದೆ.
ಜಂತು ಹುಳುಗಳು ದೊಡ್ಡದಾದರೆ ಅಥವಾ ಅವುಗಳ ಸಂಖ್ಯೆ ಅಧಿಕವಾದರೆ ಹೊಟ್ಟೆ ನೋವು, ಹಸಿವಾಗದಿರುವುದು, ತೂಕ ಇಳಿಕೆಯಂತಹ ಸಮಸ್ಯೆ ನಮಗೆ ಎದುರಾಗಬಹುದು. ಆದ್ರೆ ಇಲ್ಲೊಂದು ವಿಡಿಯೋದಲ್ಲಿ ಈಗ ಜಂತು ಹುಳುವಿನ ಕುರಿತು ನಿಮಗಿದ್ದ ಎಲ್ಲಾ ಆಲೋಚನೆಗಳನ್ನು ಬುಡಮೇಲು ಮಾಡಲಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ಯಿರ್ಯೋರ್ವ ಅತೀ ದೊಡ್ಡ ಜಂತು ಹುಳುವಿನ ವಿಡಿಯೋ ಶೇರ್ ಮಾಡಿದ್ದಾರೆ. ಇದು ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿತ್ತು ಎಂದಿದ್ದು, ಆತ ವಾಂತಿ ಮಾಡಿಕೊಂಡಾಗ ಹೊರಬಂದಿದೆ ಎಂದು ವಿವರಿಸಲಾಗಿದೆ.
ಏನಿದು ಘಟನೆ?
ರೋಗಿಯು ಹೊಟ್ಟೆ ನೋವು ಮತ್ತು ವಾಂತಿಯಾಗುವಂತೆ ಅನಿಸುತ್ತಿರುವ ಬಗ್ಗೆ ದೂರು ಹೇಳಿಕೊಂಡು ಮೆಡಿಕಲ್ ಶಾಪ್‌ಗೆ ಬಂದಿದ್ದರಂತೆ. ಹಾಗಾದರೆ ಅವರಿಗೆ ಮೆಡಿಕಲ್ ನವರು ಕೊನೆಯದಾಗಿ ನೀವು ಜಂತು ಹುಳುವಿಗೆ ಯಾವಾಗ ಔಷಧಿ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದಾಗ ಆತ ಸುಮಾರು 5 ವರ್ಷ ಆಗಿರಬಹುದು ಎಂದಿದ್ದಾನೆ. ಹೀಗಾಗಿ ಜಂತು ಹುಳುವಿನ ಔಷಧಿಯಾದ ವರ್ಮೋಕ್ಸ್ ಅನ್ನು ಕುಡಿಯಲು ಹೇಳಿದ್ದಾರೆ.
ಆತ ಮನೆಗೆ ಹೋದವನೆ ಈ ಔಷಧ ಕುಡಿದು ಮಲಗಿದ್ದ, ಬೆಳಗ್ಗೆ ಏಳುವಾಗ ವಾಂತಿಯಾಗುವ ಅನುಭವವಾಗಿದ್ದು, ಸಿಂಕ್ ಬಳಿ ಹೋಗಿ ಆತ ವಾಂತಿ ಮಾಡಿದಾಗ ಉದ್ದದ ಜಂತು ಹುಳು ಹೊರಬಂದಿದೆ. ಅಚ್ಚರಿ ಎಂದರೆ ಆ ಹುಳು ಜೀವಂತವಾಗಿದೆ. ಆತನ ಹೊಟ್ಟೆ ನೋವಿಗೆ ಈ ಜಂತು ಹುಳು ಕಾರಣವಾಗಿತ್ತು ಎಂದು ತಿಳಿದುಬಂದಿದೆ.
ಈ ವಿಡಿಯೋ ಹಂಚಿಕೊಂಡ ಬಳಿಕ ಈವರೆಗೆ ಸುಮಾರು 8 ಮಿಲಿಯನ್ ವೀಕ್ಷಣೆ ಕಂಡಿದೆ. ಇದನ್ನು ಕಂಡ ಜನರು ಅಚ್ಚರಿ ಹೊರಹಾಕಿದ್ದಾರೆ. ಇಷ್ಟು ದೊಡ್ಡ ಜಂತು ಹುಳು ಮಾನವರ ಹೊಟ್ಟೆಯಲ್ಲಿರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಎಷ್ಟು ವರ್ಷಕ್ಕೊಮ್ಮೆ ಹೊಟ್ಟೆ ಹುಳುವಿನ ಔಷಧಿ ತೆಗೆದುಕೊಳ್ಳಬೇಕು ಎಂಬ ಗೊಂದಲದಲ್ಲಿ ಬಿದ್ದಿದ್ದಾರೆ.
ಇತ್ತ ಹಲವರು ಈ ಜಂತು ಹುಳುಗಳಿಂದ ತಮಗಾದ ಅನುಭವವನ್ನೂ ಹಂಚಿಕೊಂಡಿದ್ದಾರೆ. ತಮಗೂ ಇದೇ ರೀತಿ ಅನುಭವವಾದ ಕುರಿತು ಈ ವಿಡಿಯೋದ ಕೆಳಗೆ ಕಮೆಂಟ್ ಮೂಲಕ ಹಂಚಿಕೊಂಡಿದ್ದಾರೆ. ಅದರಲ್ಲಿ ಕೆಲವರು ನಾವು ಸಹ ಈ ರೀತಿಯ ಹುಳುವನ್ನು ನೋಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಇಷ್ಟೊಂದು ದೊಡ್ಡ ಗಾತ್ರದ ಹುಳುವನ್ನು ನೋಡಿಲ್ಲ ಎಂದಿದ್ದಾರೆ.
ಹುಟ್ಟೆ ಹುಳುವಿನ ಏನು ಮಾಡಬೇಕು?
ಎಲ್ಲರಲ್ಲೂ ಜಂತು ಹುಳುಗಳು ಇರುವುದು ಸಾಮಾನ್ಯ. ಆದ್ರೆ ಅವುಗಳ ಸಂಖ್ಯೆ ಹೆಚ್ಚಾದರೆ ಅಪಾಯ. ಹೀಗಾಗಿ ನಿಮ್ಮಲ್ಲಿ ಪದೇ ಒದೇ ಹೊಟ್ಟೆ ನೋವು ಕಾಣಿಸುತ್ತಿದ್ದರೆ ವೈದ್ಯರ ಸಂಪರ್ಕ ಮಾಡಿ. ಇಲ್ಲದಿದ್ದರೆ ಮನೆಯಲ್ಲಿಯೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ಹೊಟ್ಟೆಹುಳುವಿಗೆ ಬೆಳ್ಳುಳ್ಳಿ ಒಳ್ಳೆಯ ಔಷಧಿಯಾಗಿದೆ. ಬೆಳ್ಳುಳ್ಳಿಯಲ್ಲಿ ಅಲಿಸಿನ್ ಮತ್ತು ಏಜಿನ್ ಎಂಬ ಅಂಶಗಳಿವೆ. ಇದು ಹೊಟ್ಟೆಯ ಹುಳುಗಳನ್ನು ತೆಗೆದುಹಾಕಲು ಅತ್ಯಂತ ಪರಿಣಾಮಕಾರಿ ಮನೆಮದ್ದುಗಳಾಗಿವೆ.
ಹಸಿ ಬೆಳ್ಳುಳ್ಳಿಯ ಎರಡು ಅಥವಾ ಮೂರು ಎಸಳುಗಳನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೊಟ್ಟೆಯ ಹುಳುಗಳು ಮಲದ ಮೂಲಕ ಹೊರಬರುತ್ತವೆ. ಈ ಸಮಸ್ಯೆಗಾಗಿ ಈ ಹಿಂದೆ ಹಳ್ಳಿಗಳಲ್ಲಿ ಬೆಳ್ಳುಳ್ಳಿ ಎಸಳುಗಳನ್ನು ಕೆಂಡ ಅಥವಾ ಇದ್ದಿಲಿನಲ್ಲಿ ಸುಟ್ಟು ತಿನ್ನುತ್ತಿದ್ದರೆಂಬುದನ್ನು ಇಲ್ಲಿ ಗಮನಿಸಬಹುದು. ಜೊತೆಗೆ ಆಹಾರದಲ್ಲಿ ಬೆಳ್ಳುಳ್ಳಿ ಪ್ರಮಾಣವನ್ನು ಹೆಚ್ಚಿಸುವುದರಿಂದ ಅವುಗಳನ್ನು ತಿನ್ನುವ ಮೂಲಕ ಪ್ರಯೋಜನವನ್ನು ನೀಡುತ್ತದೆ.



Click it and Unblock the Notifications