Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಅಯೋಧ್ಯೆಗೆ ಬೃಹತ್ ಗದೆ-ಬಿಲ್ಲು ಉಡುಗೊರೆ..! ಇದರ ಗಾತ್ರ ಎಷ್ಟು ಗೊತ್ತಾ?
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಂಡು ಈಗ ಪವಿತ್ರ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿದೆ. ನಿತ್ಯವು ಲಕ್ಷ ಲಕ್ಷ ಮಂದಿ ಭಕ್ತರು ರಾಮನ ದರ್ಶನ ಪಡೆಯಲು ಆಗಮಿಸುತ್ತಾರೆ. ಅಯೋಧ್ಯೆ ಈಗ ಹಿಂದೂಗಳ ಪವಿತ್ರ ಸ್ಥಳವಾಗಿದೆ. ದೇಶದ ಪ್ರಮುಖ ಶ್ರದ್ಧಾ ಕೇಂದ್ರಗಳ ಪೈಕಿ ಅಯೋಧ್ಯೆ ಸಹ ಒಂದಾಗಿದೆ.
ಇತ್ತ ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆಗೊಂಡ ಬಳಿಕ ಭಕ್ತರು ಆಗಮಿಸುತ್ತಿರುವ ಜೊತೆಗೆ ಅವರು ಹಲವು ರೀತಿಯ ಉಡುಗೊರೆಗಳ ಸಹ ತಂದಿದ್ದರು. ರಾಮನಿಗಾಗಿ ಅರ್ಪಿಸಲು ಹಲವು ರೀತಿಯ ಉಡುಗೊರೆಗಳ ತಂದು ಸಮರ್ಪಿಸಿದ್ದರು. ಅದರಲ್ಲಿ ಕೆಲವೊಂದು ಅತ್ಯಂತ ಬೆಲೆ ಬಾಳುವ ಉಡುಗೊರೆಗಳು ಸಹ ಆಗಿದ್ದವು.

ಆದರೆ ಈಗ ಮತ್ತೊಂದು ವಿಶೇಷ ಉಡುಗೊರೆಯೊಂದು ಅಯೋಧ್ಯೆ ತಲುಪಿದೆ. ರಾಜಸ್ಥಾನದ ಸಿರೋಹಿಯಲ್ಲಿರುವ ಕುಶಲಕರ್ಮಿ ಅಯೋಧ್ಯೆಯ ರಾಮಮಂದಿರಕ್ಕಾಗಿ ಅರ್ಪಿಸಲು ಬೃಹತ್ ಗದೆ ಮತ್ತು ಬಿಲ್ಲು ಸಿದ್ಧಪಡಿಸಿದ್ದಾರೆ. 3,200 ಕೆಜಿ ತೂಕದ 26 ಅಡಿ ಎತ್ತರದ ಗದೆ ಮತ್ತು 3,000 ಕೆ.ಜಿ ತೂಕದ ಬಿಲ್ಲು ರಚಿಸಿದ್ದಾರೆ.
ಈ ಬೃಹತ್ ಗದೆ ಹಾಗೂ ಬಿಲ್ಲು ರಚಿಸಲು ಅವರು ಪಂಚಧಾತುಗಳಾದ ಚಿನ್ನ, ಬೆಳ್ಳಿ, ತಾಮ್ರ, ಸತು ಮತ್ತು ಕಬ್ಬಿಣ ಮಿಶ್ರಣ ಬಳಸಲಾಗಿದೆ. ಇವುಗಳನ್ನು ಸಿರೋಹಿಯ ಶಿಯೋಗಂಜ್‌ನಿಂದ ಧಾರ್ಮಿಕ ಮೆರವಣಿಗೆಯಾಗಿ ಕಳುಹಿಸಲಾಯಿತು. ಬಿಲ್ಲು ಮತ್ತು ಗದೆಯನ್ನು ರಾಮ ಮತ್ತು ಹನುಮಂತನ ಪ್ರಾಥಮಿಕ ಆಯುಧಗಳೆಂದು ಪರಿಗಣಿಸಲಾಗಿದೆ. ಅದನ್ನು ಅಯೋಧ್ಯೆಗೆ ರಾಮರಥದಲ್ಲಿ ಕಳುಹಿಸಲಾಗಿದೆ. ಇದನ್ನು ರಾಮಮಂದಿರದಲ್ಲಿ ರಾಮ ಮತ್ತು ಹನುಮಂತನ ವಿಗ್ರಹಗಳ ಬಳಿ ಪ್ರತಿಷ್ಠಾಪನೆ ಮಾಡುವ ಸಂಭವವಿದೆ.
ಈ ರಾಮ ರಥವು ಅಯೋಧ್ಯೆಗೆ ತಲುಪುವ ಮುನ್ನ ವಿಧಿ ವಿಧಾನಗಳ ಪ್ರಕಾರವಾಗಿ ಪೂಜೆ ನೆರವೇರಿಸಲಾಗಿದೆ. ಸನಾತನ ಸೇವಾ ಸಂಸ್ಥಾನವು ಶಿಯೋಗಂಜ್‌ನ ಮಹಾರಾಜ ಮೈದಾನದಲ್ಲಿ ಅದ್ಧೂರಿ ಸಮಾರಂಭ ಸಹ ಏರ್ಪಡಿಸಲಾಗಿತ್ತು. ಬಳಿಕ ಅಲ್ಲಿಂದ ರಾಮ ರಥವನ್ನು ಅಯೋಧ್ಯೆಗೆ ಕಳುಹಿಸಲಾಗಿತ್ತು.
ಈ ಗದೆ ಹಾಗೂ ಬಿಲ್ಲನ್ನು ಕಲಾವಿದ ಕೈಲಾಶ್ ಕುಮಾರ್ ಸುತಾರ್ ಮತ್ತು ಹಿತೇಶ್ ಸೋನಿ ಅವರ ಮೇಲ್ವಿಚಾರಣೆಯಲ್ಲಿ ಸಿರೋಹಿಯ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ. 18 ಕುಶಲಕರ್ಮಿಗಳ ತಂಡ ಈ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಈ ರಾಮ ರಥ ಯಾತ್ರೆಯು ಬಿಹಾರ್, ಜೈಪುರ, ಆಗ್ರಾ ಮತ್ತು ಲಕ್ನೋ ಮೂಲಕ ಅಯೋಧ್ಯೆಯನ್ನು ತಲುಪಲಿದೆ. ರಾಮ ರಥ ಯಾತ್ರೆಯು ಜೂನ್ 16 ರಂದು ಅಯೋಧ್ಯೆಯನ್ನು ತಲುಪಲಿದೆ. ಜೂನ್ 17 ರಂದು ಧಾರ್ಮಿಕ ಪೂಜೆ ಮತ್ತು ಮಂತ್ರಗಳ ಪಠಣದ ನಡುವೆ ರಾಮಮಂದಿರ ಆವರಣದಲ್ಲಿ ಶ್ರೀ ರಾಮ ಮತ್ತು ಹನುಮಂತನ ಪಾದಗಳಿಗೆ ಬಿಲ್ಲು ಮತ್ತು ಗದೆಯನ್ನು ಅರ್ಪಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಮೊದಲು ಸೂರತ್ ಕೈಗಾರಿಕೋದ್ಯಮಿಯೊಬ್ಬರು ರಾಮಲಲ್ಲಾ ವಿಗ್ರಹಕ್ಕೆ 11 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು. ಈ ಕಿರೀಟವನ್ನು ಗ್ರೀನ್‌ಲ್ಯಾಬ್ ಡೈಮಂಡ್ಸ್‌ನ ಮುಖೇಶ್ ಪಟೇಲ್ ತಯಾರಿಸಿದ್ದರು. ಚಿನ್ನದ ಕಿರೀಟವು ಅಮೂಲ್ಯವಾದ ಕಲ್ಲುಗಳಿಂದ ಅಲಂಕರಿಸಿದ್ದು ಆರು ಕಿಲೋಗ್ರಾಂಗಳಷ್ಟು ತೂಕವಿತ್ತು. ಗ್ರೀನ್‌ಲ್ಯಾಬ್ ಡೈಮಂಡ್ಸ್‌ನ ಇಬ್ಬರು ಉದ್ಯೋಗಿಗಳನ್ನು ಜನವರಿ 5 ರಂದು ಅಯೋಧ್ಯೆಗೆ 51 ಇಂಚಿನ ರಾಮ್ ಲಲ್ಲಾ ಮೂರ್ತಿಯ ತಲೆಯನ್ನು ಅಳತೆ ಮಾಡಲು ಕಳುಹಿಸಲಾಗಿತ್ತು. ಕಿರೀಟವು 4.5 ಕಿಲೋಗ್ರಾಂಗಳಷ್ಟು ಚಿನ್ನದಿಂದ ಮಾಡಲ್ಪಟ್ಟಿದ್ದು, ಇತರ ಅಮೂಲ್ಯ ಕಲ್ಲುಗಳ ಜೊತೆಗೆ ಸಣ್ಣ ಮತ್ತು ದೊಡ್ಡ ಗಾತ್ರದ ವಜ್ರಗಳು, ಮುತ್ತುಗಳು ಮತ್ತು ನೀಲಮಣಿಗಳಿಂದ ಅಲಂಕೃತವಾಗಿತ್ತು. ಇದಿಷ್ಟೇ ಅಲ್ಲ ಹಲವು ಮಂದಿ ಹತ್ತಾರು ರೀತಿಯ ಅತ್ಯಮೂಲ್ಯ ಉಡುಗೊರೆ ನೀಡಿದ್ದಾರೆ.



Click it and Unblock the Notifications
