Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಲಘು ವಿಮಾನವನ್ನೇ ಗಿಫ್ಟ್ ಆಗಿ ನೀಡಿದರೂ ಖುಷಿಯಾಗದ ಹುಡುಗಿ..! ಏಕೆ ಗೊತ್ತಾ?
ಹುಡುಗರು ತಮ್ಮ ಪ್ರೇಯಸಿಗೆ ಅಥವಾ ಮದುವೆಯಾಗಿದ್ದರೆ ಪತ್ನಿಯನ್ನು ಸಂತೋಷವಾಗಿಡಬೇಕು ಎಂದೇ ಬಯಸಿರುತ್ತಾರೆ. ಇದಕ್ಕಾಗಿ ಎಲ್ಲಾ ಪ್ರಯತ್ನವನ್ನು ಮಾಡುತ್ತಾರೆ. ಉಡುಗೊರೆ ಕೊಡುವುದು, ಹೊರಗೆ ಕರೆದುಕೊಂಡು ಹೋಗುವುದು. ಆಕೆ ಬಯಸಿದ ವಸ್ತುಗಳ ಆಕೆಗೆ ಕೊಡಿರುವುದನ್ನು ಮಾಡುತ್ತಾರೆ.
ಕೆಲವೊಮ್ಮೆ ಯುವತಿಯರು ಚಿಕ್ಕ ಚಿಕ್ಕ ಬಯಕೆಗಳ ಇಡೇರಿಸಿದರು ಖುಷಿ ಪಡುತ್ತಾರೆ. ಮತ್ತೆ ಕೆಲವೊಮ್ಮೆ ಮುನಿಸಿಕೊಳ್ಳುವುದು ಸಹ ಇದೆ. ಆದ್ರೆ ಇಲ್ಲೊಂದು ಪ್ರಕರಣದಲ್ಲಿ ಯುವತಿ ವರ್ತನೆ ಎಂತವರಿಗೂ ಶಾಕ್ ನೀಡಲಿದೆ. ಯುವಕ ಪ್ರೀತಿಯಿಂದ ನೀಡಿದ ಕೊಡುಗೆಯಿಂದ ಆಕೆ ತೃಪ್ತಿ ಪಡೆದೆ ಆತನ ವಿರುದ್ಧವೇ ಮುನಿಸಿಕೊಳ್ಳುತ್ತಾಳೆ.

ಆದ್ರೆ ಇದೇನು ಚಿಕ್ಕ ಪುಟ್ಟ ಗಿಫ್ಟ್ ಆಗಿರಲಿಲ್ಲ. ಇಷ್ಟೊಂದು ದುಬಾರಿ ಉಡುಗೊರೆ ನೀಡಿದರೂ ಆಕೆ ತೃಪ್ತಿಯಾಗದಿರುವುದು ಕಂಡು ಜನರೇ ಶಾಕ್ ಆಗಿದ್ದಾರೆ. ಅಚ್ಚರಿ ಎಂದರೆ ಯುವಕ ಆಕೆಯ ಖುಷಿ ಪಡಿಸಲು ಲಘು ವಿಮಾನವನ್ನೇ ಬಾಡಿಗೆ ಪಡೆದಿದ್ದ ಆದರೆ ಹುಡುಗಿ ಮಾತ್ರ ಇದರಿಂದ ಕಿಂಚಿತ್ತು ಸಂತಸಗೊಳ್ಳಲಿಲ್ಲ. ಬದಲಾಗಿದೆ ಆತನ ವಿರುದ್ಧ ಮುನಿಸಿಕೊಂಡಿರುವುದು ನೋಡಬಹುದು.
ಆರಿಸ್ ಯೇಗರ್ ಎಂಬ ಹಾಸ್ಯ ಕಲಾವಿದ ತನ್ನ ಗೆಳತಿ ರೋಮಾ ಅಬ್ದೆಸೆಲಾಮ್ ಎಂಬಾಕೆಯೊಂದಿಗೆ ಬಹಳ ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾನೆ. ಈ ನಡುವೆ ಆಕೆಯೆ ಸರ್ಪ್ರೈಸ್ ಆಗಿ ಗಿಫ್ಟ್ ನೀಡಲೆಂದು ಒಂದು ಲಘು ವಿಮಾನವನ್ನು ಒಂದು ದಿನದ ಮಟ್ಟಿದೆ ಬಾಡಿಗೆಗೆ ಪಡದಿದ್ದಾನೆ. ಲಘು ವಿಮಾನ ಬಾಡಿಗೆಗೆ ಪಡೆಯಬೇಕು ಅಂದರೆ ಕೋಟಿ ಕೋಟಿ ರೂಪಾಯಿ ಹಣ ನೀಡಬೇಕು. ಕೇವಲ ನಟರು, ಉದ್ಯಮಿಗಳು, ರಾಜಕಾರಣಿಗಳಿಂದ ಮಾತ್ರ ಇದು ಸಾಧ್ಯವಾಗುತ್ತದೆ.
ಆದ್ರೆ ಈ ವಿಡಿಯೋದಲ್ಲಿ ಆಕೆ ಮೊದಲು ಖುಷಿಯಲ್ಲಿ ಹಾರಾಡಿದ್ರು ಬಳಿಕ ಬೇಸರಗೊಂಡು ಸಿಟ್ಟಿನಲ್ಲಿ ವಿಮಾನದೊಳಗೆ ತೆರಳಿದ್ದಾಳೆ. ಇದನ್ನು ಕಂಡ ಯುವಕ ನಂಬಲಾಗದೆ ಬೇಸರ ಹೊರಹಾಕಿದ್ದಾನೆ. ಅಷ್ಟಕ್ಕೂ ಆಕೆ ಇಷ್ಟು ದುಬಾರಿ ಗಿಫ್ಟ್ ನೀಡಿದರು ಬೇಸರಗೊಂಡಿದ್ದೇಕೆ ಎಂಬುದನ್ನು ನೋಡೋದಾದ್ರೆ. ಆಕೆಗೆ ಈ ಲಘು ವಿಮಾನ ಬಾಡಿಗೆಗೆ ಖರೀದಿಸಿದ್ದು, ಇಷ್ಟವಿಲ್ಲವಂತೆ. ಬದಲಿಗೆ ಇಡೀ ವಿಮಾನವನ್ನು ಸ್ವಂತಕ್ಕೆ ಖರೀದಿಸಬೇಕಿತ್ತಂತೆ.
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಯುವಕ ತನ್ನ ಪ್ರೇಯಸಿಯ ಕಣ್ಣು ಮುಚ್ಚಿಕೊಂಡು ಲಘು ವಿಮಾನದ ಎದುರು ಕರೆತರುತ್ತಾನೆ. ಬಳಿಕ ಆಕೆಗೆ ಸರ್ಪ್ರೈಸ್ ಆಗಿ ವಿಮಾನ ತೋರಿಸುತ್ತಾನೆ. ಈ ವೇಳೆ ಆಖೆ ಕುಣೀದು ಕುಪ್ಪಳಿಸಿದ್ದಾಳೆ. ಅಲ್ಲದೆ ಈ ವಿಮಾನ ಖರೀದಿಸಿದ್ದೀಯಾ ಅದು ಸಹ ನನನಾಗಾಗಿ ಎಂದು ಹಾರಾಡುತ್ತಾಳೆ. ಆದರೆ ಈ ವಿಮಾನ ಖರೀದಿಸಿಲ್ಲ, ಬದಲಾಗಿ ಒಂದು ದಿನ ಬಾಡಿಗೆ ಪಡೆದಿದ್ದೇನೆ. ಒಂದು ದಿನ ಈ ವಿಮಾನದಲ್ಲಿ ನಾವು ಹಾರಾಡಬಹುದು ಎಂದು ಆತ ಹೇಳುತ್ತಾನೆ. ಆದರೆ ಯುವತಿ ಇದರಿಂದ ಬೇಸರಗೊಳ್ಳುತ್ತಾಳೆ. ನಿಜವಾಗಲು ಈ ವಿಮಾನವನ್ನು ಕ್ರಿಸ್‌ಮಸ್ ಕೊಡುಗೆಯಾಗಿ ನನಗೆ ಗಿಫ್ಟ್ ನೀಡುತ್ತಿಲ್ಲವೇ? ಎಂದು ಆಕೆ ಪ್ರಶ್ನಿಸುತ್ತಾಳೆ.
ಆದ್ರೆ ಆತ ನಾನಿದನ್ನು ಖರೀದಿಸಿಲ್ಲ ಬದಲಿಗೆ ಬಾಡಿಗೆ ಪಡೆದಿದ್ದೇನೆ ಎನ್ನುತ್ತಿದ್ದಾನೆ. ಇಷ್ಟಕ್ಕೆ ಬೇಸರ ಮಾಡಿಕೊಂಡ ಆಕೆ ಕೋಪದಲ್ಲಿ ವಿಮಾನ ಏರುತ್ತಿದ್ದಾಳೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಬಳಿಕ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜೊತೆಗೆ ಆಕೆಯ ವರ್ತನೆ ಕಂಡು ಜನರು ಶಾಕ್ ಆಗಿದ್ದಾರೆ. ಏಕೆಂದರೆ ಇಷ್ಟೊಂದು ದುಬಾರಿ ಗಿಫ್ಟ್ ಆಕೆ ಕಣ್ಣ ಮುಂದಿದ್ದರೂ ಅದರ ಬೆಲೆ ತಿಳಿಯದೆ ತನ್ನ ಗೆಳಯನ ಮೇಲೆ ಕೋಪ ಮಾಡಿಕೊಂಡು ತೆರಳುತ್ತಿರುವುದಕ್ಕೆ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.
ಆಕೆಗೆ ಈ ಗಿಫ್ಟ್ ಬೆಲೆ ತಿಳಿಯುತ್ತಿಲ್ಲ ಬದಲಾಗಿ ಹಣದಿಂದ ಎಲ್ಲವನ್ನು ಅಳೆಯುವ ಮೂಲಕ ತನ್ನತನ ಇಡೀ ಜಗತ್ತಿನ ಮುಂದಿಟ್ಟಿದ್ದಾಳೆ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ. ಒಂದು ವೇಳೆ ಆತ ಲಘು ವಿಮಾನ ಖರೀದಿಸಿದ್ದರೂ ಆಕೆ ಇದು ಸಣ್ಣ ವಿಮಾನ ದೊಡ್ಡ ವಿಮಾನ ಬೇಕೆಂದು ಕೋಪಿಸಿಕೊಳ್ಳುತ್ತಿದ್ದಳೇನೋ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.



Click it and Unblock the Notifications
