Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ರಾಮನ ವಿರುದ್ಧ ಕಲಿಯುಗದಲ್ಲಿ ದಾಖಲಾಗಿತ್ತು ಕೇಸ್..! ಶಿಕ್ಷೆ ಆಗಿತ್ತಾ.? ಮುಂದೆನಾಯ್ತು..?
ಮರ್ಯಾದಾ ಪುರುಷ ಶ್ರೀರಾಮ ಅಯೋಧ್ಯೆಯನ್ನಾಳಿದ ಮಹಾಪುರುಷ. ಇದ್ದರೆ ರಾಮನಂತಹ ಆದರ್ಶ ಪುರುಷ ಇರಬೇಕು, ಬಾಳಿದರ ರಾಮನಂತೆ ಬಾಳಬೇಕು ಎಂಬ ಮಾತಿದೆ. ಏಕೆಂದರೆ ಆತ ಮಾತಿಗೆ ತಪ್ಪಿ ಎಂದು ನಡೆದುಕೊಂಡಿಲ್ಲವಂತೆ. ಅಲ್ಲದೆ ಮಹಿಳೆಯರು ಸಹ ಸಿಕ್ಕತೆ ರಾಮನಂತ ಪತಿ ಸಿಗಬೇಕು ಎಂದು ಆಶಿಸುತ್ತಾರೆ. ರಾಮನಂತ ಮಕ್ಕಳ ಪಡೆಯಲು ಪೋಷಕರು ಇಚ್ಛಿಸುತ್ತಾರೆ.
ಇಷ್ಟೆಲ್ಲಾ ಗುಣಗಳ ಹೊಂದಿದ್ದ ರಾಮ ತಾನು ಮಾಡದ ತಪ್ಪಿಗಾಗಿ ವನವಾಸ ಅನುಭವಿಸಿದ್ದು, ಸೀತೆ ಅಪಹರಣವಾಗಿದ್ದು ಈ ಎಲ್ಲಾ ರಾಮಾಯಣದ ಕಥೆಗಳು ನಿಮಗೆ ಗೊತ್ತಿದೆ. ಆದರೆ ಕಲಿಯುಗದಲ್ಲಿ ರಾಮನ ವಿರುದ್ಧ ದಾಖಲಾಗಿದ್ದ ಈ ಪ್ರಕರಣದ ಬಗ್ಗೆ ಗೊತ್ತಾ? ಹೌದು ನಿಮಗೆ ಅಚ್ಚರಿಯಾಗಬಹುದು, ರಾಮನ ವಿರುದ್ಧ ಕಲಿಯುಗದಲ್ಲಿ ಕೇಸ್‌ವೊಂದು ದಾಖಲಾಗಿತ್ತು.

ರಾಮನ ವಿರುದ್ಧವೇ ಕೇಸ್ ಹಾಕಿದ್ದು ಯಾರು?, ಪ್ರಕರಣ ದಾಖಲಿಸುವಂತಹ ತಪ್ಪು ಶ್ರೀರಾಮ ಏನು ಮಾಡಿದ್ದ?, ಕೇಸ್ ದಾಖಲಾದ ಬಳಿಕ ಮುಂದೇನಾಯಿತು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ ನೋಡಿ.
ಶ್ರೀರಾಮ ಮಹಿಳೆಯನ್ನು ಆತ ಕ್ರೂರವಾಗಿ ನಡೆಸಿಕೊಂಡಿದ್ದ ಎಂದು ವಕೀಲರೊಬ್ಬರು ಕೋರ್ಟ್ ಮೆಟ್ಟಿಲೇರಿ ದೂರು ದಾಖಲಿಸಿದ್ದರು. 2016ರಲ್ಲಿ ಉತ್ತರ ಬಿಹಾರದ ಸೀತಾಮರ್ಹಿಯ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ಎದುರು ಅವರು ದೂರು ದಾಖಲಿಸಿದ್ದರು.
ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯದಲ್ಲಿ ದಾಖಲಾದ 'ಪ್ರಕರಣ'ವು ಭಗವಾನ್ ರಾಮನ ವಿರುದ್ಧ ಮಾಡಬೇಕೆಂದು ಕೋರಲಾಗಿದೆ, ಮಹಿಳೆಯರನ್ನು ನಡೆಸಿಕೊಳ್ಳುವಲ್ಲಿ ರಾಮ ಎಡುವಿದ್ದಾನೆ ಎಂದು ದೂರಲಾಗಿತ್ತು. ದೂರುದಾರ ಠಾಕೂರ್ ಚಂದನ್ ಕುಮಾರ್ ಸಿಂಗ್ ಅವರು ರಾಮ ಸೀತಾದೇವಿಯನ್ನು ಯಾವುದೇ ಸೂಕ್ತ ಸಮರ್ಥನೆ ಇಲ್ಲದೆ ಕಾಡಿನ ವನವಾಸ ಜೀವನಕ್ಕೆ ಕಳುಹಿಸಿದ್ದ ಎಂದು ಆರೋಪಿಸಿದ್ದರು
ಸೀತಾದೇವಿಯ ಯಾವುದೇ ತಪ್ಪಿಲ್ಲದಿದ್ದರೂ ಆಕೆಯ ವಿರುದ್ಧ ಆರೋಪ ಹೊರಿಸಿ ವನವಾಸಕ್ಕೆ ಕಳುಹಿಸಿದ್ದರು. ಇದು ರಾಜ ರಾಮನಿಂದ ಬಂದ ಕಪಟ ಆದೇಶವಾಗಿತ್ತು. ಒಬ್ಬ ಪುರುಷನು ತನ್ನ ಹೆಂಡತಿಯನ್ನು ಕಾಡಿನಲ್ಲಿ ವಾಸಿಸಲು ಕಳುಹಿಸುವಷ್ಟು ಕ್ರೂರನಾಗುವುದು ಹೇಗೆ? ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಸಿಂಗ್ ಇದನ್ನು ರಾಮನು ತನ್ನ ಹೆಂಡತಿಯ ಮೇಲೆ ಎಸಗಿದ ನಾನ್-ಕಾಗ್ನಿಸೇಬಲ್ ಅಪರಾಧದ ನಿದರ್ಶನವೆಂದು ಉಲ್ಲೇಖಿಸಿದ್ದರು, ಸಾಯುವವರೆಗೂ ತನ್ನ ಪತಿಯೊಂದಿಗೆ ಬದುಕುವುದಾಗಿ ಸೀತೆ ಅಗ್ನಿ ಪ್ರವೇಶ ಮಾಡಿದ ನಡುವೆಯೂ ರಾಮ ಈ ರೀತಿ ಮಾಡಿದ್ದಾನೆ ಎಂದು ಆರೋಪಿಸಿದ್ದರು.
"ಕಾಡಿನಲ್ಲಿ ಸರೀಸೃಪಗಳು ಮತ್ತು ಸಸ್ತನಿಗಳು ಸೇರಿದಂತೆ ಕಾಡು ಪ್ರಾಣಿಗಳ ನಡುವೆ ಮಹಿಳೆ ಒಂಟಿಯಾಗಿ ಹೇಗೆ ಬದುಕಬಹುದು ಎಂದು ರಾಮನು ಒಂದು ಕ್ಷಣವೂ ಯೋಚಿಸಲಿಲ್ಲ" ಎಂದು ಸಿಂಗ್ ಹೇಳಿದರು. ಬಳಿಕ ಈ ಪ್ರಕರಣದ ವಿಚಾರಣೆ ನಡೆಸಿದ್ದ ಪೀಠ, ವಕೀಲರ ವಾದವನ್ನು ನಿರಾಕರಿಸಿದ್ದರು. ಅಲ್ಲದೆ ಅರ್ಜಿಯನ್ನು ತಿರಸ್ಕರಿಸಿ ಪ್ರಕರಣ ಇತ್ಯರ್ಥ ಮಾಡಿದ್ದರು.
ಕ್ಷಮೆ ಕೋರಿದ್ದ ವಕೀಲ
ರಾಮನ ವಿರುದ್ಧ ಪ್ರಕರಣ ದಾಖಲಿಸಿದ್ದಾಗಿನಿಂದ ಭಾರೀ ಚರ್ಚೆಗೆ ಒಳಗಾಗಿದ್ದ ವಕೀಲ ಬಳಿಕ ಇದು ಯಾರೊಬ್ಬರ ಧಾರ್ಮಿಕ ಭಾವನೆಗೆ ಧಕ್ಕೆ ತರುವುದು ಅವರ ಉದ್ದೇಶವಲ್ಲ ಎಂದಿದ್ದರು. ನಾನು ಪ್ರಾಮಾಣಿಕವಾಗಿ ರಾಮನ ನಡುವಳಿಕೆಯನ್ನು ಜನರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ದೂರು ನೀಡಿದ್ದೆ, ನಾನು ಸಹ ರಾಮನ ಭಕ್ತನಾಗಿದ್ದೇನೆ ಎಂದಿದ್ದರು. ಅವರು ದೂರು ನೀಡಿದ ಬಳಿಕ ವಕೀಲರ ವಿರುದ್ಧ ಪ್ರತಿಭಟನೆ ನಡೆದಿದ್ದವು.



Click it and Unblock the Notifications
