Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸಂಭಾವ್ಯ ರೈಲು ದುರಂತ ತಪ್ಪಿಸಿದ 12 ವರ್ಷದ ಬಾಲಕ..! ಹೇಗೆ ಗೊತ್ತಾ?
ರೈಲು ಅಪಘಾತಗಳು ಎಷ್ಟು ಭೀಕರವಾಗಿರುತ್ತವೆ ಎಂಬುದು ನಮಗೆಲ್ಲಾ ತಿಳಿದ ವಿಚಾರ. ಒಮ್ಮೆ ಈ ರೈಲು ಅಪಘಾತ ಸಂಭವಿಸಿದರೆ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಇನ್ನು ಹಲವಾರು ಮಂದಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾಗಬೇಕಾಗುತ್ತದೆ. ಇಂತಹ ಹಲವು ಅಪಘಾತಗಳು ನಡೆದಿವೆ ಕೂಡ.
ರೈಲು ಅಪಘಾತ ಸಂಭವಿಸಲು ಪ್ರಮುಖವಾಗಿ ರೈಲು ಹಳಿ ತಪ್ಪುವುದು, ಸಿಗ್ನಲಿಂಗ್ ಸಮಸ್ಯೆ, ತಾಂತ್ರಿಕ ಸಮಸ್ಯೆ ಹಾಗೂ ಕೆಲವು ಬಾರಿ ಮಾನವ ನಿರ್ಮಿತ ಸಮಸ್ಯೆಯೂ ಆಗಿರಲಿದೆ. ಹಳಿಯಲ್ಲಿ ಏನಾದರು ಸಮಸ್ಯೆ ಎದುರಾಗಿ ರೈಲು ಅಪಘಾತ ಸಂಭವಿಸುವುದೇ ಹೆಚ್ಚು. ಈಗ ಇಲ್ಲೊಂದು ಕಡೆ ಇದೇ ರೀತಿ ರೈಲ್ವೆ ಹಳಿ ಸಮಸ್ಯೆಯಿಂದ ಸಂಭವಿಸಬಹುದಾದ ಬಹುದೊಡ್ಡ ರೈಲು ಅಪಘಾತ ನಿಂತಿದೆ.

ಈ ರೈಲು ಅಪಘಾತವನ್ನು 12 ವರ್ಷದ ಬಾಲಕನೊಬ್ಬ ತಡೆದಿದ್ದಾನೆ. ಹೌದು ಬಿಹಾರದಲ್ಲಿ ಇತ್ತೀಚಿಗೆ 12 ವರ್ಷದ ಬಾಲಕ ಸಂಭಾವ್ಯ ರೈಲು ಅಪಘಾತ ತಡದು ಸುದ್ದಿಯಾಗಿದ್ದಾನೆ. ಮುಜಾಫರ್‌ಪುರ ರೈಲು ಮಾರ್ಗದ ಭೋಲಾ ಟಾಕೀಸ್ ಗುಮ್ಟಿ ಬಳಿ ರೈಲ್ವೆ ಹಳಿಯಲ್ಲಿ ಉಂಟಾದ ಸಮಸ್ಯೆ ಗುರುತಿಸಿದ 12 ವರ್ಷದ ಮೊಹಮ್ಮದ್ ಶಹಬಾಜ್ ರೈಲು ತಡೆದು ಮುಂದಾಗಬಹುದಾದ ಸಂಭಾವ್ಯ ದುರಂತ ತಡೆದಿದ್ದಾನೆ.
ಶಹಬಾಜ್ ಮನೆಯ ಬಳಿ ನಡೆದುಕೊಂಡು ಹೋಗುವಾಗ ಅಲ್ಲಿಯೇ ಹಾದು ಹೋಗುವ ರೈಲು ಕಂಬಿ ನೋಡಿ ಅದರಲ್ಲಿ ಬಿರುಕು ಬಂದಿರುವುದನ್ನು ಆತ ಗಮನಿಸಿದ್ದಾನೆ. ಅದೇ ಮಾರ್ಗದಲ್ಲಿ ಹೌರಾ-ಕೊತ್ಗೊಡಮ್ ಎಕ್ಸ್‌ಪ್ರೆಸ್ ಬರುತ್ತಿತ್ತು. ಈ ವೇಳೆ ಸಮಯ ಪ್ರಜ್ಞೆ ಮೆರೆದ ಆತ ತನ್ನ ಬಳಿ ಇದ್ದ ಕೆಂಪು ಟವೆಲ್ ಅನ್ನು ರೈಲಿನ ಮುಂದೆ ಪ್ರದರ್ಶಿಸಿದ್ದಾನೆ.
ಈ ಸೂಚನೆ ಗಮನಿಸಿದ ಲೋಕೋ ಪೈಲೆಟ್ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲುವಂತೆ ಮಾಡಿದ್ದಾನೆ. ಆದರೆ ಈ ವೇಳೆ ಚಾಲಕ ಹಾಗೂ ಒಳಗಿದ್ದ ಪ್ರಯಾಣಿಕರಿಗೆ ಏನು ನಡೆಯುತ್ತಿದೆ ಎಂದು ತಿಳಿಯಲಿಲ್ಲ. ಆದರೆ ಲೋಕೋ ಪೈಲಟ್ ಕೆಳಗಿಳಿದು ಬಂದು ಬಾಲಕನ ಪ್ರಶ್ನಿಸಿದಾಗ ಆತ ಕಂಬಿಗಳಲ್ಲಿ ಬಿರುಕು ಮೂಡಿರುವುದನ್ನು ತೋರಿಸಿದ್ದಾನೆ.
ಬಳಿಕ ಲೋಕೋ ಪೈಲಟ್ ರೈಲ್ವೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾನೆ. ಈ ವೇಳೆ ಆ ಮಾರ್ಗದಲ್ಲಿ ಬರುತ್ತಿದ್ದ ಎಲ್ಲಾ ರೈಲುಗಳ ತಡೆದು ಹಳಿಯಲ್ಲಿ ಉಂಟಾಗಿದ್ದ ಸಮಸ್ಯೆ ಬಗೆಹರಿಸಲು ಮುಂದಾಗಲಾಗಿದೆ. 12 ವರ್ಷದ ಈ ಬಾಲಕ ತೋರಿಸ ಜಾಣ್ಮೆ ಹಾಗೂ ಧೈರ್ಯದ ಕಾರಣದಿಂದ 1500ಕ್ಕೂ ಹೆಚ್ಚು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಆತನ ಕಾರ್ಯಕ್ಕೆ ಭಾರೀ ಮೆಚ್ಚುಗೆ ಕೇಳಿಬಂದಿತ್ತು.
ಘಟನೆಯ ನಂತರ, ಶಹಬಾಜ್ ಅವರ ಧೈರ್ಯಕ್ಕಾಗಿ ಎಲ್ಲೆಡೆಯಿಂದ ಮೆಚ್ಚುಗೆ ಕೇಳಿಬಂದಿದೆ. ಅಲ್ಲದೆ ಬಾಲಕನ ಕಾರ್ಯ ಮೆಚ್ಚಿ ಡಿಆರ್‌ಎಂ ಅಭಿನಂದಿಸಿದ್ದಾರೆ. ಜೊತೆಗೆ ರಾಷ್ಟ್ರೀಯ ಬಾಲ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಇದರ ಜೊತೆ ಆತನ ಕಾರ್ಯಕ್ಕೆ ಭಾರೀ ಮೆಚ್ಚುಗೆ ಕೇಳಿಬಂದಿದ್ದು, ಇಂತಹ ಮಕ್ಕಳ ಅಗತ್ಯವಾಗಿ ಇಂದಿನ ದಿನಕ್ಕೆ ಪ್ರಸ್ತುತವಾಗಿ ಬೇಕಾಗಿದೆ. ಇಂತಹ ಕೆಲಸ ಮಾಡಿದಾಗ ಅವರನ್ನು ಹುರಿದುಂಬಿಸುವ ಕಾರ್ಯವಾಗಬೇಕಿದೆ ಎಂದು ಜನ ಅಭಿಪ್ರಾಯ ಹೊರಹಾಕಿದ್ದಾರೆ. ಸದ್ಯ ಆತನಿಗೆ ಹಲವು ಸಂಸ್ಥೆಗಳು, ಇಲಾಖೆಗಳ ವತಿಯಿಂದ ಸನ್ಮಾನ, ಗೌರವ ನೀಡಲಾಗಿದೆ.
ಇತ್ತ ಈ ರೈಲಿನಲ್ಲಿ ಸುಮಾರು 1500ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ ಈಗ ಈ ಮಾರ್ಗದ ರೈಲ್ವೆ ಹಳಿ ದುರಸ್ಥಿ ಕಾರ್ಯ ಸಂಪೂರ್ಣವಾಗಿದ್ದು, ರೈಲು ಸಂಚಾರ ಎಂದಿನಂತಾಗಿದೆ. ಬಾಲಕನ ಸಮಯ ಪ್ರಜ್ಞೆಯಿಂದಾಗಿ ಒಂದಿಷ್ಟು ಜೀವವಂತು ಉಳಿದಿದೆ. ಅದೇ ರೀತಿ ರೈಲ್ವೆ ಸಿಬ್ಬಂದಿ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆಯೂ ಇದೆ



Click it and Unblock the Notifications
