Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ರೊಟ್ಟಿ ಮೇಲೆ ಶೇ.5 ರಷ್ಟು ಜಿಎಸ್‌ಟಿ ಪರೋಟಾ ಮೇಲೆ 18ರಷ್ಟು ಜಿಎಸ್‌ಟಿ.! ಈ ವ್ಯತ್ಯಾಸ ಏಕೆ?
ನಾವು ಬಳಸುವ ಪ್ರತಿಯೊಂದು ವಸ್ತುಗಳ ಮೇಲೆಯೂ ತೆರಿಗೆ ಹಾಕುತ್ತಾರೆ. ಇದರಿಂದ ಸರ್ಕಾರದ ಬೊಕ್ಕಸ ತುಂಬುತ್ತದೆ. ದೇಶದ ಅಭಿವೃದ್ಧಿಗಾಗಿ ತೆರಿಗೆ ಹಣ ಬಳಕೆಯಾಗುತ್ತದೆ. ಆದರೆ ಎಲ್ಲಾ ವಸ್ತುಗಳ ಮೇಲೆಯೂ ಒಂದೇ ರೀತಿಯ ತೆರಿಗೆ ಇರುವುದಿಲ್ಲ ಎಂಬುದು ನಮಗೆ ಗೊತ್ತಿದೆ. ಅದರಲ್ಲೂ ದಿನ ಬಳಕೆ ವಸ್ತುಗಳ ಮೇಲೆ ಸ್ವಲ್ಪ ಕಡಿಮೆ ತೆರಿಗೆ ಇದ್ದರೆ ಐಷಾರಾಮಿ ವಸ್ತುಗಳ ಮೇಲೆ ವಿಪರೀತ ತೆರಿಗೆ ಹಾಕಲಾಗುತ್ತದೆ.
ಆದರೆ ನಾವು ಸೇವಿಸುವ ಆಹಾರ ಪದಾರ್ಥಗಳ ಮೇಲೂ ಜಿಎಸ್‌ಟಿ ಹಾಕಲಾಗುತ್ತದೆ. ನಾವು ಸೇವಿಸುವ ರೊಟ್ಟಿ, ಪರೋಟದ ಮೇಲೂ ಜಿಎಸ್‌ಟಿ ಇದೆ. ಆದ್ರೆ ಇದರಲ್ಲಿ ರೊಟ್ಟಿಯ ಮೇಲೆ ಕಡಿಮೆ ಜಿಎಸ್‌ಟಿ ಇದ್ದರೆ ಪರೋಟಾದ ಮೇಲೆ ತುಸು ಹೆಚ್ಚಿನ ತೆರಿಗೆ ಹಾಕಲಾಗಿರುತ್ತದೆ.

ರೊಟ್ಟಿ ಮೇಲೆ ಕೇವಲ ಶೇ 5ರಷ್ಟು ಜಿಎಸ್‌ಟಿ ಹಾಕಿದ್ದರೆ ಪರೋಟದ ಮೇಲೆ ಶೇ. 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಎರಡು ಸಹ ಹಿಟ್ಟಿನಿಂದ ಮಾಡಲ್ಪಟ್ಟಿದ್ದರೂ ಎರಡಕ್ಕೂ ಬೇರೆ ಬೇರೆ ರೀತಿಯ ಜಿಎಸ್‌ಟಿ ಹಾಕಲಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ?ಒಂದೇ ರೀತಿಯ ಎರಡು ಆಹಾರಗಳ ತೆರಿಗೆ ದರಗಳಲ್ಲಿನ ಈ ವ್ಯತ್ಯಾಸವು ಭಾರತದ ಸರಕು ಮತ್ತು ಸೇವಾ ತೆರಿಗೆ (GST) ವ್ಯವಸ್ಥೆಯ ಸಂಕೀರ್ಣತೆಯನ್ನು ತೋರಿಸುತ್ತದೆ.
ಜಿಎಸ್‌ಟಿ ದರಗಳು ಏಕೆ ಭಿನ್ನವಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು, ರೊಟ್ಟಿ ಮತ್ತು ಪರೋಟಾ ಯಾವುದರಿಂದ ತಯಾರಿಸಲಾಗುತ್ತದೆ ಎಂಬುದನ್ನು ನೋಡುವುದು ಮುಖ್ಯ. ರೋಟಿಯು ಅಕ್ಕಿ ಅಥವಾ ಗೋಧಿ ಹಿಟ್ಟು, ನೀರು ಮತ್ತು ಉಪ್ಪಿನಿಂದ ತಯಾರಿಸಿದ ಸರಳವಾದ ಫ್ಲಾಟ್ಬ್ರೆಡ್ ಆಗಿದೆ. ಇಲ್ಲಿ ಎಣ್ಣೆಯ ಬಳಕೆ ಕಡಿಮೆ. ಆದರೆ ಪರೋಟ ತಯಾರಿಕೆಯ ಕ್ರಮ ಇದಕ್ಕಿಂತ ಭಿನ್ನ. ಅಲ್ಲದೆ ಹೆಚ್ಚು ಸಂಸ್ಕರಿಸಿದ ಪದಾರ್ಥಗಳ ಅಗತ್ಯವಿರುತ್ತದೆ.
ಮತ್ತೊಂದು ಕಡೆ ಪರೋಟವನ್ನು ಪ್ಯಾಕ್ ಮಾಡಬಹುದಾದ ಆಹಾರ ಎಂದು ಪರಿಗಣಿಸಲಾಗಿದೆ. ಪ್ಯಾಕ್ ಮಾಡಬಹುದಾದ ಆಹಾರ ಪದಾರ್ಥಗಳ ಮೇಲಿನ ತೆರಿಗೆ ಅಧಿಕವಿರುತ್ತದೆ. ಆದರೆ ಇತ್ತೀಚಿಗೆ ಸಂಸ್ಥೆಯೊಂದು ಪರೋಟಾ ಮೇಲಿ 18ರಷ್ಟು ತೆರಿಗೆ ವಿರೋಧಿಸಿ ಗುಜರಾತ್ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ಸ್ ಮೇಲ್ಮನವಿ ಸಲ್ಲಿಸಿತ್ತು. ಆದರೆ ಈ ಕುರಿತ ಪರಿಶೀಲನೆಯಲ್ಲಿ ಪರೋಟಾಗೆ 18ರಷ್ಟು ತೆರಿಗೆ ಹಾಕಿರುವುದನ್ನೇ ಎತ್ತಿಹಿಡಿಯಲಾಗಿತ್ತು.
ರೋಟಿ ಮತ್ತು ಚಪಾತಿ HSN ಅಧ್ಯಾಯ 1905 ರ ಅಡಿಯಲ್ಲಿವೆ, ಅಂದರೆ ಅವುಗಳ ನೇರ ತಯಾರಿಕೆ ಮತ್ತು ಬಳಕೆಯಿಂದಾಗಿ ಅವು 5 ಪ್ರತಿಶತದಷ್ಟು ಕಡಿಮೆ GST ದರ ವಿಧಿಸಲಾಗುತ್ತದೆ.
ಜಿಎಸ್‌ಟಿ ವ್ಯವಸ್ಥೆ ಅಡಿಯಲ್ಲಿ ತೆರಿಗೆ ಪ್ರಮಾಣವನ್ನು ಸರಳಗೊಳಿಸುವ ಸಂಬಂಧ ಪರಿಶೀಲನೆ ನಡೆಸಲು 2021ರ ಸೆಪ್ಟೆಂಬರ್‌ನಲ್ಲಿ ಸಚಿವರ ಸಮಿತಿ ರಚಿಸಲಾಗಿದೆ. ಈ ಸಮಿತಿಯು 2022ರ ಜೂನ್‌ನಲ್ಲಿ ನಡೆದ ಸಭೆಯಲ್ಲಿ ಮಧ್ಯಂತರ ವರದಿ ಸಲ್ಲಿಸಿದೆ. ಜಿಎಸ್‌ಟಿ ದರ ಸುಧಾರಣೆ, ವಿನಾಯಿತಿ ಸೌಲಭ್ಯ ಹಾಗೂ ಜಿಎಸ್‌ಟಿ ವರಮಾನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಮಿತಿಯು ವರದಿ ಸಲ್ಲಿಸಲಿದೆ. ಸದ್ಯ ಜಿಎಸ್‌ಟಿ ಅಡಿಯಲ್ಲಿ ಶೇ 5, ಶೇ 12, ಶೇ 18, ಶೇ.28 ಹೀಗೆ 4 ಹಂತದ ಜಿಎಸ್‌ಟಿ ದರ ನಿಗಧಿಯಾಗಿರುತ್ತದೆ.
ರೊಟ್ಟಿ ಮತ್ತು ಪರೋಟಾ ನಡುವಿನ GST ದರಗಳಲ್ಲಿನ ವ್ಯತ್ಯಾಸವು ತೆರಿಗೆ ಅಧಿಕಾರಿಗಳು ಆಹಾರ ಪದಾರ್ಥಗಳನ್ನು ಅವುಗಳ ಸಂಯೋಜನೆ ಮತ್ತು ಸಂಸ್ಕರಣೆಯ ಅಗತ್ಯಗಳ ಆಧಾರದ ಮೇಲೆ ಹೇಗೆ ವರ್ಗೀಕರಿಸುತ್ತಾರೆ. ರೊಟ್ಟಿಯು ಅದರ ಸರಳತೆಯಿಂದಾಗಿ ಕಡಿಮೆ ತೆರಿಗೆಯನ್ನು ಹೊಂದಿದೆ, ಪರೋಟಾದ ಹೆಚ್ಚು ಸಂಕೀರ್ಣವಾದ ತಯಾರಿಕೆಯು ಅದರ ಹೆಚ್ಚಿನ GST ದರವನ್ನು ಹೊಂದಿದೆ.



Click it and Unblock the Notifications