Latest Updates
-
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ
ಬೆಂಗಳೂರಿನಲ್ಲಿರುವ ರೆಸ್ಟೋರೆಂಟ್‌ನ ಈ 3D ಜಾಹೀರಾತು ಮಾತ್ರ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ, ಕಾರಣವೇನು?
ಕೆಲವರು ಎಷ್ಟೊಂದು ಕ್ರಿಯೇಟಿವ್ ಆಗಿರುತ್ತಾರೆ ಎಂದರೆ ಅವರ ಕ್ರಿಯೇಟಿವಿಟಿ ನೋಡಿ ಅವರ ಕೌಶಲ್ಯಕ್ಕೆ ತಲೆದೂಗಲೇಬೇಕು, ಅಂಥದ್ದೊಂದು ಕ್ರಿಯೇಟಿವ್ ವೀಡಿಯೋ ವೈರಲ್ ಆಗುತ್ತಿದೆ, ಅದೊಂದು ಟೀ ಹಾಹೀರಾತು, ಆದರೆ ಆ ಜಾಹೀರಾತು ನೋಡುತ್ತಿದ್ದಂತೆ ಈಗ ಟೀ ಕುಡಿಯಬೇಕು ಎಂದನಿಸುವುದು, ಅದರಲ್ಲಿಯೂ ಟೀ ಪ್ರಿಯರಾಗಿದ್ದರೆ ಅದು ನೋಡಿದ ಮೇಲೆ ಟೀ ಸವಿಯದೆ ಮುಂದೆ ಪ್ರಯಾಣಿಸಲು ಮನಸ್ಸಾಗಲ್ಲ, ಅಷ್ಟೊಂದು ಕ್ರಿಯೇಟಿವ್ ಆಗಿದೆ ಆ ವೀಡಿಯೋ...

ಹೋಟೆಲ್‌ನ ವ್ಯಕ್ತಿಯೊಬ್ಬರು ಟೀ ಮಾಡಿ ತಿರುಗಿ ನಮ್ಮ ಕಡೆಗೆ ಟೀ ಗ್ಲಾಸ್ ಚಾಚುವಂತಿರುವ 3D ಜಾಹೀರಾತಿನ ವೀಡಿಯೋ ಅದು. ಬೆಂಗಳೂರು ತಿಂಡೀಸ್ ಎಂಬ ಜಾಹೀರಾತಿನ ವೀಡಿಯೋ ಅದು. ನೋಡಿದರೆ ಅಲ್ಲೊಂದು ಜಾಹೀರಾತು ಅದರ ಮುಂದೆ ಆ ರೆಸ್ಟೋರೆಂಟ್‌ನ ಉದ್ಯೋಗಿ ನಿಂತಿದ್ದಾರೆ, ಒಂದು ಸೆಕೆಂಡ್ ನೋಡುತ್ತಿದ್ದಾರೆ, ಅವರು ಟೀ ಮಾಡುತ್ತಿದ್ದಾರೆ, ಅಷ್ಟೇ ಏಕೆ ಆ ಟೀ ನಮಗೆ ನೀಡುತ್ತಿದ್ದಾರೆ ಎಂದು ಅನಿಸುವಂತೆ ಆ ಜಾಹೀರಾತನ್ನು 3D ತಂತ್ರಜ್ಞಾನ ಬಳಸಿದೆ. ಅವರು ತಮ್ಮ ರೆಸ್ಟೋರೆಂಟ್ ಬಗ್ಗೆ ಪ್ರಚಾರ ನೀಡಲು ಈ ವೀಡಿಯೋ ಮಾಡಿದ್ದು ಈಗ ಸಾಮಾಜಿಕ ತಾಣದಲ್ಲಿ ತುಂಬಾನೇ ಸದ್ದು ಮಾಡುತ್ತಿದೆ ಈ ವೀಡಿಯೋ.
ಈ ಹೋರ್ಡಿಂಗ್ಸ್ ಫೇಕ್ ಎಂಬ ವಾದ ಕೂಡ ಇದೆ
ರೆಸ್ಟೋರೆಂಟ್‌ನವರು ನಮ್ಮ ಬೆಂಗಳೂರಿನಲ್ಲಿ ಎಲ್ಲಿ ಈ ಹೋರ್ಡಿಂಗ್ ಹಾಕಿದ್ದಾರೆ ಎಂಬುವುದನ್ನು ಹಾಕಿಲ್ಲ, ಬೆಂಗಳೂರು ಟ್ರಾಫಿಕ್ , ರಸ್ತೆ ಬದಿಯ ಜಾಹೀರಾತು ಬೋರ್ಡ್‌ನಲ್ಲಿ ಈ ಜಾಹೀರಾತು ಇದೆ ಎಂಬಂತೆ ಚಿತ್ರೀಕರಿಸಲಾಗಿದೆ, ಆದರೆ ಬೆಂಗಳೂರಿನ ಯಾವ ಸ್ಥಳದಲ್ಲಿ ಇಂಥ ಒಂದು ಜಾಹೀರಾತು ಬೋರ್ಡ್ ಕಾಣಬಹುದು ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ, ಆದರೆ ಇಂಥದ್ದೊಂದು ರೆಸ್ಟೋರೆಂಟ್ ಇದೆ ಅವರೇ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಈ ವೀಡಿಯೋ ಪೋಸ್ಟ್ ಮಾಡಿದ್ದಾರೆ.
ಯಾವುದೇ ಜಾಹೀರಾತಿನ ಉದ್ದೇಶ ಜನರ ಗಮನ ಸೆಳೆಯುವುದು, ಅದರಲ್ಲಿ ಈ ವೀಡಿಯೋ ಯಶಸ್ವಿಯಾಗಿದೆ
ಈ ರೆಸ್ಟೋರೆಂಟ್‌ನವರು ಇಂಥದ್ದೊಂದು ಹೋರ್ಡಿಂಗ್ಸ್ ಹಾಕಿದ್ದು, ಇದು ನಿಮ್ಮ ಏರಿಯಾದಲ್ಲಿ ಇದ್ದರೆ ಕಮೆಂಟ್ ಮಾಡಿ, ಇಲ್ಲಾ ಅವರು ಗ್ರಾಹಕರ ಗಮನ ಸೆಳೆಯಷ್ಟೇ ಈ ವೀಡಿಯೋ ಮಾಡಿದ್ದಾರೆ ಎಂದಾದರೆ ಇನ್ನೂ ಸೂಪರ್, ಏಕೆಂದರೆ ಈಗಾಗಲೇ ಈ ಪೋಸ್ಟ್ ವೈರಲ್ ಆಗಿದೆ. ಬೆಂಗಳೂರಿನವರು ಇದು ಎಲ್ಲಿದೆ ಎಂಬುವುದರ ಬಗ್ಗೆ ಮಾತನಾಡುತ್ತಿದ್ದಾರೆ, ಹಾಗಾಗಿ ಇವರು ತಮ್ಮ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲದೆ ಇಂಥದ್ದೊಂದು ವೀಡಿಯೋ ಮಾಡಿರುವ ಅವರ ಕ್ರಿಯೇಟಿವಿಟಿಗೆ ಮೆಚ್ಚಲೇಬೇಕು ಅಲ್ವಾ? ಈ ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಪೈಪೋಟಿ ಇದೆ, ನಾವು ಇತರರಿಗಿಂತ ಹೇಗೆ ಭಿನ್ನವಾಗಿರುತ್ತೇವೆ ಎಂಬುವುದು ಮುಖ್ಯವಾಗುತ್ತೆ, ಆವಾಗ ಮಾತ್ರ ಗಮನ ಸೆಳೆಯಲು ಸಾಧ್ಯ. ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಸಂಬಂಧಿಸಿದಂತೆ ಹಲವು ಜಾಹೀರಾತು ನೋಡುತ್ತೇವೆ, ಅದರೆ ಈ ವೀಡಿಯೋ ಮಾತ್ರ ಅದೆಲ್ಲದಕ್ಕಿಂತ ಭಿನ್ನವಾಗಿದೆ ಅಲ್ವಾ? ಈ ಮಾರ್ಕೆಟಿಂಗ್ ಸ್ಕಿಲ್ ಮೆಚ್ಚಿಕೊಳ್ಳಲೇಬೇಕು, ಅಲ್ವಾ? ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಮೆಂಟಿಸಿ, ಅಲ್ಲದೆ ನೀವು ನಿಜವಾಗಲೂ ಈ ಹೋರ್ಡಿಂಗ್ಸ್ ನೋಡಿದರೆ ಕಮೆಂಟಿಸಿ...



Click it and Unblock the Notifications
