Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
3D ಆರ್ಟಿಸ್ಟ್ ಕ್ರಿಯೇಟ್ ಮಾಡಿದ ಈ ವೀಡಿಯೋ ನೋಡಿದರೆ ಖಂಡಿತ ವೇಗವಾಗಿ ಗಾಡಿ ಚಲಾಯಿಸಲು ಧೈರ್ಯ ಬರಲ್ಲ!
ಏನೇ ಹೇಳಿ ಈ 3D ಆರ್ಟಿಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು , ಏಕೆಂದರೆ ಮಜೀದ್ ಮೌಸಾವಿ ಮಾಡಿರುವ ಈ 3D ವೀಡಿಯೋ ಇದೆಯೆಲ್ಲಾ ವಾಸ್ತವನ್ನು ಕಟ್ಟಿದಂತಿದೆ, ಅದನ್ನು ನೋಡುವಾಗ ನಮಗೇ ಒಂದು ಕ್ಷಣ ಉಸಿರು ಬಡಿತ ತೀವ್ರವಾಗುವುದು, ಅತಿವೇಗದ ಚಾಲನೆ ನಮ್ಮ ಬದುಕನ್ನು ಹೇಗೆ ನಾಶ ಮಾಡುತ್ತದೆ ಎಂಬುವುದನ್ನು ಎಷ್ಟೊಂದು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಈ ವೀಡಿಯೋ ನೋಡಿದವರು ಯಾರೇ ಆಗಲಿ ವೇಗವಾಗಿ ಓಡಿಸುವ ಧೈರ್ಯ ಮಾಡಲ್ಲ
ವೇಗವಾಗಿ ಗಾಡಿ ಚಲಾಯಿಸಬೇಡಿ ಎಂದು ಪೊಲೀಸರು ಎಷ್ಟೇ ಹೇಳಿದರೂ ಯಾರೂ ಕಿವಿಗೆ ಹಾಕಿಕೊಳ್ಳುವುದಿಲ್ಲ, ನಮ್ಮ ಆಪ್ತರಿಗೆ ಅಪಘಾತವಾದಾಗ ಆ ಸಂಕಟದ ಅರಿವು ಉಂಟಾಗುತ್ತದೆ, ಅತಿ ವೇಗದ ಚಾಲನೆಯಿಂದಾಗಿ ಎಷ್ಟೋ ಜನ ಸುಮ್ಮನೆ ಯಮನ ಪಾದ ಸೇರಿದ್ದಾರೆ. ಆದರೆ ಈ ವೀಡಿಯೋ ಮಾತ್ರ ಅಪಘಾತದ ಭಯಾನಕ ದೃಶ್ಯವನ್ನು ನಮ್ಮ ಕಣ್ಣಿಗೆ ಮಾತ್ರವಲ್ಲ ಮನಸ್ಸಿಗೆ ತಟ್ಟುವಂತೆ ಕಟ್ಟಿಕೊಟ್ಟಿದ್ದು ಈ ವೀಡಿಯೋ ಇದೀಗ ವೈರಲ್ ಆಗುತ್ತಿದೆ.
ರೋಡ್ ಖಾಲಿಯಿದೆ ಎಂದು ಗಾಡಿಯ ವೇಗ ಹೆಚ್ಚಿಸಬೇಡಿ
ಕೆಲವರು ಗಾಡಿ ಖಾಲಿಯಿದೆ ಎಂದು ಸಕತ್ ಥ್ರಿಲ್‌ಗಾಗಿ ಗಾಡಿಯ ವೇಗ ಹೆಚ್ಚಿಸುತ್ತಾರೆ. ಆದರೆ ಈ ರೀತಿ ಗಾಡಿ ಚಲಾಯಿಸಿದಾಗ ಮುಂದೆ ಬರುವ ಒಂದು ಕ್ಷಣ ಯೋಚಿಸುವುದಿಲ್ಲ, ಇನ್ನೇನು ಅಪಘಾತವಾಗುತ್ತೆ ಎಂದು ಅನಿಸಿದಾಗ ಆ ಕ್ಷಣದಲ್ಲಿ ಬರುವ ಉಸಿರು ಎಲ್ಲವೂ ಈ ವೀಡಿಯೋದಲ್ಲಿ ಸೆರೆಯಾಗಿದೆ.
ವೇಗವಾಗಿ ಗಾಡಿ ಚಲಿಸುತ್ತಿದ್ದಾಗ ಸಾವು ಹೇಗೆ ಕಾಯುತ್ತಿರುತ್ತಿದೆ ಎಂಬುವುದನ್ನು ವೀಡಿಯೋದಲ್ಲಿ ಕಟ್ಟಿಕೊಡಲಾಗಿದೆ. ಆ ರಸ್ತೆಯಲ್ಲಿ ಹೆಚ್ಚು ಗಾಡಿಗಳಿರಲಿಲ್ಲ, ಸುಂದರವಾದ ಪ್ರಕೃತಿ, ಒಂದು ಬೈಕ್ ಹೋಗುತ್ತೆ, ಅದರ ಹಿಂದೆ ಮತ್ತೊಂದು ಬೈಕ್ ಹೀಗೆ ವೇಗವಾಗಿ ಎದುರಾಗಿ ಬರುತ್ತೆ ಒಂದು ಟೆಂಪೋ... ಓಹೋ ಒಂದು ಕ್ಷಣ ಎಲ್ಲವೂ ಮುಗಿಯುತ್ತೆ.
ಅತಿಯಾದ ವೇಗ ಅಪಘಾತಕ್ಕೆ ದಾರಿ
ಬಹುತೇಕ ಗಾಡಿ ಅಪಘಾತಗಳು ಉಂಟಾಗುವುದು ಅತಿಯಾದ ವ್ಯಕ್ತಿ, ತುಂಬಾ ವೇಗವಾಗಿ ಗಾಡಿ ಚಲಾಯಿಸುವುದರಿಂದ ನಾವು ನಮ್ಮ ಪ್ರಾಣಕ್ಕೆ ಅಪಾಯ ತಂದೊಡ್ಡುವುದು ಪಾತ್ರವಲ್ಲ ಇತರ ಅಮಾಯಕರ ಪ್ರಾಣಕ್ಕೆ ಕೂಡ ಅಪಾಯ ತಂದೊಡ್ಡಬಹುದು. ಆದ್ದರಿಂದ ನೀವು ತಲುಪಬೇಕಾದ ಕಡೆ ತಲುಪಲು ಸ್ವಲ್ಪ ಹೆಚ್ಚು ಸಮಯ ಬೇಕಾಗಬಹುದು, ಆದರೂ ಸಾವಧಾನವಾಗಿ ಗಾಡಿ ಓಡಿಸಬೇಕು, ಅತಿ ವೇಗದ ಚಾಲನೆ ಈ ಲೋಕದಿಂದ ಬೇಗನೆ ಹೊರಡುವಂತೆ ಮಾಡುತ್ತದೆ.
ಜಾಗ್ರತೆ ಮೂಡಿಸುವ ವೀಡಿಯೋಗೆ ಅಪಾರ ಮೆಚ್ಚುಗೆ
ಈ ವೀಡಿಯೋ ನೋಡಿದವರು ಎಷ್ಟು ಚೆನ್ನಾಗಿ ವಿವರಿಸಿದ್ದಾರೆ, ಈ ವೀಡಿಯೋ ನೋಡಿದ ಬಳಿಕ ಯಾರೂ ವೇಗವಾಗಿ ಹೋಗಲು ಯೋಚಿಸುವುದಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ, ಈ ವೀಡಿಯೋಗೆ ಇದುವರೆಗೆ 156 ಮಿಲಿಯನ್ ವ್ಯೂವ್ಸ್ ಬಂದಿದೆ.
Oh my God. I was so scared. I felt that it was me riding the bike and got mini heart attack." ( ಓ ದೇವರೇ ನನಗೆ ತುಂಬಾಏ ಭಯವಾಯ್ತು. ನಾನೇ ಬೈಕ್ ಚಲಾಯಿಸುತ್ತಿದ್ದೇನೆ ಎಂದು ಅನಿಸಿ ಚಿಕ್ಕದಾಗಿ ಹೃದಯಾಘಾತವೇ ಆಯ್ತು) ಎಂದು ಕಮೆಂಟ್ ಮಾಡಿದ್ದಾರೆ.
ಹೌದು 3D ಎಫೆಕ್ಟ್‌ನ ಈ ವೀಡಿಯೋ ನೋಡಿದಾಗ ನಾವೇ ಓಡಿಸುತ್ತಿದ್ದೇವೆ ಎಂದು ಒಂದು ಕ್ಷಣ ಅನಿಸುವುದು, ವೇಗವಾಗಿ ಚಲಿಸುವಾಗ ಪಿಶಾಚಿಗಳು ಕಾಯುತ್ತಿರುವಂಥ ಎಫೆಕ್ಟ್ ಕೂಡ ಚೆನ್ನಾಗಿದೆ, ಅತಿಯಾದ ವೇಗ ಪ್ರಾಣಕ್ಕೆ ಯಾವ ರೀತಿ ಕುತ್ತು ತರುತ್ತದೆ ಎಂಬುವುದನ್ನು ಮನಮುಟ್ಟುವಂತೆ ತಲುಪಿಸುವಲ್ಲಿ ಈ ವೀಡಿಯೋ ಯಶಸ್ವಿಯಾಗಿದೆ.



Click it and Unblock the Notifications
