Latest Updates
-
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್!
3.8 ಅಡಿ ಎತ್ತರ ಛೋಟಾ ಬಾಬಾ ಕುಂಭ ಮೇಳದ ಆಕರ್ಷಣೆ..! ಆತನ ಕಥೆ ಏನು ಗೊತ್ತಾ?
ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಸಮ್ಮೇಳನ ಎಂಬ ಕೀರ್ತಿ ಪಡೆದಿರುವ ಮಹಾಕುಂಭಮೇಳಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇದೇ ಜನವರಿ 13ರಂದು ಕುಂಭ ಮೇಳ ಆರಂಭಗೊಂಡು ತಿಂಗಳ ಕಾಲ ನಡೆಯಲಿದೆ. ಹೀಗಾಗಿ ಇಡೀ ವಿಶ್ವದ ಗಮನ ಈಗ ಪ್ರಯಾಗ್‌ರಾಜ್‌ನತ್ತ ಇದೆ. ಇನ್ನು ಈ ಕುಂಭಮೇಳದಲ್ಲಿ ಭಾಗಿಯಾಗಲು ಈಗಾಗಲೇ ಸಾಧುಗಳು, ಸಂತರು, ಭಕ್ತರು ಆಗಮಸುತ್ತಿದ್ದಾರೆ.
ತಿಂಗಳಿಗೂ ಹೆಚ್ಚು ದಿನಗಳ ಕಾಲ ಪ್ರಯಾಗ್‌ರಾಜ್‌ನಲ್ಲಿ ಸಾಧುಗಳು ಕಂಡುಬರುತ್ತಾರೆ. ಹೀಗಾಗಿ ಅಲ್ಲಿಯೇ ಅವರು ತಾತ್ಕಾಲಿಕ ಟೆಂಟ್‌ಗಳ ರೂಪಿಸಿಕೊಂಡಿರುತ್ತಾರೆ. ಹಾಗೆ ಸರ್ಕಾರ ಅಲ್ಲಿ ಅತ್ಯಾಧುನಿಕ ಸೌಲಭ್ಯಗಳಿಂದ ಹಿಡಿದು ಎಲ್ಲಾ ಮೂಲಕ ಸೌಲಭ್ಯ ನೀಡುವ ಕಾರ್ಯ ಮಾಡುತ್ತದೆ. ಈಗಾಗಲೇ ಡೂಮ್ ಸಿಟಿಯ ಫೋಟೋಗಳು ವೈರಲ್ ಆಗಿದ್ದು ಎಲ್ಲರನ್ನು ಅಚ್ಚರಿಗೆ ತಳ್ಳುತ್ತಿದೆ.

ಇಂತಹ ಅಚ್ಚರಿಗಳ ನಡುವೆ ಇಲ್ಲೊಬ್ಬರು ಸಾಧುಗಳ ಎಲ್ಲರ ಗಮನ ಸೆಳೆದಿದ್ದಾರೆ. ಕುಂಭ ಮೇಳಕ್ಕೆ ಬರುವ ಲಕ್ಷಾಂತರ ಮಂದಿ ಸಾಧುಗಳ ಪೈಕಿ ಈ ಒಬ್ಬರು ಎಲ್ಲರ ಗಮನ ತಮ್ಮತ್ತ ಸೆಳೆಯುವಂತೆ ಮಾಡಿದ್ದಾರೆ. ಮಧ್ಯಪ್ರದೇಶದ ವಿದಿಶಾದ 57 ವರ್ಷದ ಸಾಧು ಗಂಗಾಪುರಿ ಮಹಾರಾಜ್ ಈಗ ಅಚ್ಚರಿಯ ಕೇಂದ್ರಬಿಂದು ಆಗಿದ್ದಾರೆ.
ಏಕೆಂದರೆ ಅವರ ಎತ್ತರ ಕೇವಲ 3.8 ಅಡಿ ಆಗಿದೆ. ಹೀಗಾಗಿ ಅವರ ಎತ್ತರದ ಕಾರಣದಿಂದ ಛೋಟು ಬಾಬಾ ಎಂಬುದಾಗಿ ಅವರು ಫೇಮಸ್ ಆಗಿದ್ದಾರೆ. ಅವರೀಗ ಪ್ರಯಾಗ್‌ರಾಜ್‌ನಲ್ಲಿ ತಮ್ಮ ಟೆಂಟ್ ಸ್ಥಾಪಿಸಿಕೊಂಡಿದ್ದು, ಒಂದಿಷ್ಟು ಜನ ಅವರನ್ನು ನೋಡಲು ಬರುತ್ತಿದ್ದಾರೆ. ಇಡೀ ಸಾಧುಗಳ ಗುಂಪಿನಲ್ಲಿ ಅವರು ವಿಶೇಷವಾಗಿ ಕಾಣಿಸುತ್ತಿದ್ದು, ಎಲ್ಲರ ಗಮನ ತಮ್ಮತ್ತ ಸೆಳೆದಿದ್ದಾರೆ.
ಇದೇ ಮೊದಲ ಬಾರಿಗೆ ಅವರು ಈ ಮಹಾ ಕುಂಭಮೇಳದಲ್ಲಿ ಭಾಗಿಯಾಗುತ್ತಿದ್ದಾರಂತೆ, ಕಳೆದ 32 ವರ್ಷದಿಂದ ಕುಂಭ ಮೇಳದಲ್ಲಿ ಭಾಗಿಯಾಗುವ ಆಸೆ ಹೊಂದಿದ್ದರಂತೆ. ಹಾಗಾಗಿ 32 ವರ್ಷದಿಂದಲೂ ಸ್ನಾನವನ್ನೇ ಮಾಡಿಲ್ಲವಂತೆ. 32 ವರ್ಷದಿಂದ ಅವರ ಬಯಕೆಯೊಂದು ಈಡೇರದ ಕಾರಣ ಸ್ನಾನ ಮಾಡುವುದನ್ನೇ ನಿಲ್ಲಿಸಿದ್ದಾರಂತೆ. ಆ ಬಯಕೆ ಈಡೇರದ ಹೊರತು ಗಂಗಾ ನದಿಯಲ್ಲಿ ಮುಳುಗುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಅವರನ್ನು ಪ್ರಯಾಗ್‌ರಾಜ್‌ನಲ್ಲಿ ನೋಡಿದ ಮಂದಿ ಅವರ ಬಳಿ ಮಾತನಾಡಲು ಆಗಮಿಸುತ್ತಿದ್ದಾರಂತೆ. ಹೀಗಾಗಿ ಈ ವರ್ಷದ ಕುಂಭಮೇಳದಲ್ಲಿ ಇವರು ಪ್ರಮುಖ ಆಕರ್ಷಣೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕುಂಭಮೇಳಕ್ಕೆ ಬಂತು ಡೂಮ್ ಸಿಟಿ ರೂಪ!
ಕುಂಭಮೇಳದಲ್ಲಿ ಭಾಗಿಯಾಗುವವರಿಗಾಗಿ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಅತ್ಯಂತ ಸೌಲಭ್ಯಯುಕ್ತ ಟೆಂಟ್‌ಗಳ ನಿರ್ಮಾಣಗೊಂಡಿದೆ. ಹಾಗೆ ಇಡೀ ಪಟ್ಟಣ ಈಗ ಸಿದ್ಧಗೊಂಡಿದೆ. ಯಾತ್ರಿಕರು ಉಳಿಯುವ ಉದ್ದೇಶದಿಂದ ಶಿಬಿರಗಳು ತಲೆ ಎತ್ತಿದೆ. ಪ್ರವಾಸೋದ್ಯಮ ಇಲಾಖೆ ನಿರ್ಮಿಸಿರುವ ಈ ಶಿಬಿರದಲ್ಲಿ ಸೈಟ್ ಸೂಪರ್ ಪ್ರೀಮಿಯಂ ಸೂಟ್‌ಗಳು, ಪ್ರೀಮಿಯಂ ಸೂಟ್‌ಗಳು, ಡೀಲಕ್ಸ್ ಸೂಟ್‌ಗಳು ಮತ್ತು ಸ್ಟ್ಯಾಂಡರ್ಡ್ ಕ್ಯಾಂಪ್‌ಗಳನ್ನು ಒಳಗೊಂಡಿರುತ್ತದೆ, ಪ್ರತಿಯೊಂದೂ ರೂಂಗಳನ್ನು ಶಾಂತಿಯುತ ಮತ್ತು ಆರಾಮದಾಯಕವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ.
ಈ ಆಧುನಿಕ ವಸತಿ ಸಂಕೀರ್ಣವು ಕುಂಭಮೇಳದ ಸೌಕರ್ಯ, ಭದ್ರತೆ ಮತ್ತು ವಿಹಂಗಮ ನೋಟಗಳನ್ನು ನೀಡುತ್ತದೆ. ಡೋಮ್ ಸಿಟಿಯು 44 ಅತ್ಯಾಧುನಿಕ ಗುಮ್ಮಟಗಳನ್ನು ಹೊಂದಿರುತ್ತದೆ, ಪ್ರತಿಯೊಂದೂ 32x32 ಅಡಿಗಳಷ್ಟು ವ್ಯಾಪಿಸಿರಲಿದೆ. 15ರಿಂದ 18 ಅಡಿ ಎತ್ತರವಾಗಿರಲಿದೆ. ಹಾಗೆ 360 ಡಿಗ್ರಿಯ ನೋಟವನ್ನು ಅದರ ಒಳಗಿಂದ ಸವಿಯಬಹುದು. ಇದು ಅತ್ಯಾಧುನಿಕತೆಗೆ ಹಿಡಿದ ಕೈಗನ್ನಡಿಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯ ಇರಲಿದೆ.



Click it and Unblock the Notifications
