Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
285 ವರ್ಷದ ಭಾರತದ ನಿಂಬೆ ₹1.5 ಲಕ್ಷಕ್ಕೆ ಹರಾಜು..!!
ನಾವು ನಿಂಬೆಹಣ್ಣನ್ನು ಪ್ರತಿ ದಿನ ಅಡುಗೆಯಲ್ಲೋ ಅಥವಾ ಪಾನಕ ಮಾಡಲು ಬಳಸುತ್ತೇವೆ. ಹೆಚ್ಚೆಂದರೆ ಮಾರುಕಟ್ಟೆಗೆ ಹೋಗಿ ನಾವೇ ಖರೀದಿಸಿ ತರುತ್ತೇವೆ, ಇಲ್ಲವೆ ಹಳ್ಳಿಯಲ್ಲಾದರೆ ಮನೆಯಲ್ಲೂ ನಿಂಬೆ ಹಣ್ಣು ಬೆಳೆದಿರಬಹುದು. ಹಾಗೆ ಒಂದು ನಿಂಬೆಹಣ್ಣಿನ ಬೆಲೆ 5 ಅಥವಾ 10 ರೂಪಾಯಿಯೂ ಇರಬಹುದು. ಆದ್ರೆ ಇಲ್ಲೊಂದು ನಿಂಬೆ ಹಣ್ಣಿನ ಬೆಲೆ ಕೇಳಿದರೆ ನಿಮಗೆ ನಿಜಕ್ಕೂ ಅಚ್ಚರಿ ಜೊತೆ ಆಶ್ಚರ್ಯವೂ ಆಗಲಿದೆ.
ಹೌದು ಒಂದು ನಿಂಬೆಹಣ್ಣು ಲಕ್ಷ ರೂಪಾಯಿಗೆ ಮಾರಾಟವಾಗುತ್ತೆ ಅಂದರೆ ನೀವು ನಂಬುತ್ತೀರಾ? ಅಚ್ಚರಿಯಾದರು ಇದು ಸತ್ಯ 285 ವರ್ಷಗಳ ಹಿಂದಿನ ನಿಂಬೆಹಣ್ಣು ಹರಾಜಿನಲ್ಲಿ ಲಕ್ಷ ಲಕ್ಷ ರೂಪಾಯಿಗೆ ಮಾರಾಟವಾಗಿದೆ.

ಏನಿದು ಲಕ್ಷ ಬೆಲೆಯ ನಿಂಬೆಹಣ್ಣಿನ ಕಥೆ
ಇತ್ತೀಚೆಗಷ್ಟೇ ಇಂಗ್ಲೆಂಡಿನಲ್ಲಿ ನಿಂಬೆಹಣ್ಣು $1,780ಕ್ಕೆ ಮಾರಾಟವಾಯಿತು. ಇಂಗ್ಲೆಂಡಿನಲ್ಲಿ ಹಳೆಯ ಡ್ರಾಯರ್ (ವಾರ್ಡ್ರೋಬ್) ಹಿಂದೆ 285 ವರ್ಷ ಹಳೆಯ ನಿಂಬೆ ಹಣ್ಣು ಪತ್ತೆಯಾಗಿದ್ದು, ಬರೋಬ್ಬರಿ 1.5 ಲಕ್ಷ ರೂಪಾಯಿಗೆ ಹರಾಜಿನಲ್ಲಿ ಅದನ್ನು ಖರೀದಿಸಲಾಗಿದೆ.
ಇದು ಯಾರಿಗೆ ಸೇರಿದ ನಿಂಬೆ
ಬ್ರೆಟ್ವೆಲ್ ಎಂಬಾತ ತನ್ನ ಮನೆ ನವೀಕರಣ ಮಾಡುವಾಗ ಆತನ ಚಿಕ್ಕಪ್ಪನ ವಾರ್ಡ್ರೋಬ್ ತೆರೆಯಲಾಗಿತ್ತು, ಅದನ್ನು ಎತ್ತಿ ಮನೆಯಿಂದ ಹೊರಗಿಡುವಾಗ ಅದರ ಹಿಂದೆ ಈ ನಿಂಬೆ ಹಣ್ಣು ಪತ್ತೆಯಾಗಿತ್ತು. ಇದು ಬರೋಬ್ಬರಿ 285 ವರ್ಷ ಹಿಂದಿನದು ಎಂದು ತಿಳಿದುಬಂದಿತು.
ಆ ನಿಂಬೆ ಹಣ್ಣಿನ ಮೇಲೆ 'ನವೆಂಬರ್ 4, 1739 ರಂದು ಮಿಸ್ಟರ್ ಪಿ ಲು ಫ್ರಾಂಚಿನಿ ಅವರು ಮಿಸ್ ಇ.ಬ್ಯಾಕ್ಸ್ಟರ್‌ಗೆ ಈ ನಿಂಬೆ ನೀಡಿದ್ದಾರೆ ಎಂದು ಬರೆಯಲಾಗಿತ್ತು.
ಇದಾದ ನಂತರ ಈ ನಿಂಬೆ ಹಣ್ಣನ್ನೂ ಮಾರಾಟ ಮಾಡಲು ಹರಾಜು ಸಂಸ್ಥೆ ನಿರ್ಧರಿಸಿತು. ಈ ನಿಂಬೆಯ ವಿಶೇಷತೆಯನ್ನು ತಿಳಿದುಕೊಂಡು, ಜನರು ಅದನ್ನು ಹೆಚ್ಚು ಬಿಡ್ ಮಾಡಿದ್ದಾರೆ, ನಂತರ ಈ ನಿಂಬೆಗೆ ಹೆಚ್ಚಿನ ಬೆಲೆ $ 1,780 ಗೆ ನಿಗದಿಪಡಿಸಲಾಯಿತು. ಹರಾಜು ನಡೆಸುತ್ತಿದ್ದ ಅಧಿಕಾರಿಗಳಿಗಂತೂ ಈ ನಿಂಬೆ ಹಣ್ಣಿಗೆ ಇಷ್ಟೊಂದು ಬಿಡ್ ಬರಬಹುದೆಂಬ ಕಲ್ಪನೆಯೇ ಇರಲಿಲ್ಲ. ಆದ್ದರಿಂದ, ಈ ನಿಂಬೆಗೆ ಇಷ್ಟು ದುಬಾರಿ ಬೆಲೆ ಕೇಳಿ ಅವರೂ ಬೆಚ್ಚಿಬಿದ್ದರು. ಈ ನಿಂಬೆಹಣ್ಣಿನ ಬೀಡ್‌ನ ಆರಂಭಿಕ ಬೆಲೆಯಾಗಿ ಕೇವಲ 40 ಡಾಲರ್ ನಿಗದಿ ಮಾಡಲಾಗಿತ್ತು.
ನಿಂಬೆ ಖರೀದಿಸಿದ್ದು ಯಾರು?
ಹರಾಜಿನಲ್ಲಿ 40 ಡಾಲರ್‌ನಿಂದಲೇ ನಿಂಬೆ ಹಣ್ಣು ಕೊಂಡುಕೊಳ್ಳಲು ಭಾರೀ ಪೈಪೋಟಿ ಉಂಟಾಗಿತ್ತು. ಆದರೆ ಅಂತಿಮವಾಗಿ 1.5 ಲಕ್ಷ ರೂಪಾಯಿಗೆ ಉದ್ಯಮಿಯೊಬ್ಬರು ಖರೀದಿಸಿದರು.
ಈ ನಿಂಬೆ ಹಾಳಾಗದೆ ಉಳಿದಿದ್ದು ಹೇಗೆ?
ಯಾವುದೇ ವಸ್ತು ಒಂದೆರಡು ದಿನದಲ್ಲೇ ಹಾಳಾಗುತ್ತವೆ. ಆದರಲ್ಲೂ ನಿಂಬೆಹಣ್ಣು ಒಂದು ವಾರದಲ್ಲಿ ಕೊಳೆಯುತ್ತದೆ. ಆದರೆ ಈ ನಿಂಬೆಹಣ್ಣು ಕೊಳೆತಿದ್ದರೂ ತನ್ನ ಮೂಲಕ ಸ್ವರೂಪದಲ್ಲೇ ಇತ್ತು. ಇದು ಹೇಗೆ ಎಂಬ ಆಶ್ಚರ್ಯ ಎಲ್ಲಿರಿಗೂ ಕಾಡಿತ್ತು. ಬಹಶಃ ಅಲ್ಲಿನ ಹವಾಮಾನದಿಂದಾಗಿ ಅದು ಹಾಳಾಗದೆ ಹಾಗೆ ಉಳಿದಿತ್ತು ಎಂದು ಅಂದಾಜಿಸಲಾಗಿದೆ.
ಭಾರತದಿಂದ ಬಂದಿರುವ ಶಂಕೆ
ಈ ನಿಂಬೆಹಣ್ಣು ಭಾರತದಿಂದ ಬಂದಿರುವ ಶಂಕೆ ಸಹ ಇದೆ. ಹಣ್ಣು ಆಳವಾದ ಕಂದು ಬಣ್ಣದ್ದಾಗಿದೆ, ಆದರೆ ಗಮನಾರ್ಹವಾಗಿ ಹಾಗೇ ಇದೆ. ಉಡುಗೊರೆಯಾಗಿ ಈ ಹಣ್ಣನ್ನು ಭಾರತದಿಂದ ಇಂಗ್ಲೆಂಡ್‌ಗೆ ಬಂದಿರಬಹುದು ಎಂದು ಸನ್ ವರದಿಮಾಡಿದೆ.



Click it and Unblock the Notifications
