Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಜುಲೈ 2ಕ್ಕೆ ಯೋಗಿನಿ ಏಕಾದಶಿ: ಈ ಏಕಾದಶಿಯ ಮಹತ್ವವೇನು? ಪಾರಣ ಯಾವಾಗ?
ಜುಲೈ 2ರಂದು ಯೋಗಿನಿ ಏಕಾದಶಿ ಆಚರಿಸಲಾಗುವುದು, ಈ ಯೋಗಿನಿ ಏಕಾದಶಿ ತಿಥಿ ಜುಲೈ 1 ರಂದು ಬೆಳಿಗ್ಗೆ 10:26 ಕ್ಕೆ ಪ್ರಾರಂಭವಾಗಿದೆ, ಜುಲೈ 2 ರಂದು ಬೆಳಿಗ್ಗೆ 8:34 ಕ್ಕೆ ಕೊನೆಗೊಳ್ಳುವುದು. ಉದಯ ತಿಥಿಯ ಲೆಕ್ಕಚಾರದ ಪ್ರಕಾರ ಜುಲೈ 2ರ ಮಂಗಳವಾರ ಯೋಗಿನಿ ಏಕಾದಶಿ ಆಚರಿಸಲಾಗುವುದು. ಈ ಯೋಗಾದಶಿಯ ಮಹತ್ವವೇನು, ಪೂಜಾ ವಿಧಿಗಳೇನು? ಪಾರಣ ಸಮಯ ಯಾವಾಗ ಎಂದು ನೋಡೋಣ:

ಯೋಗಾದಶಿ ತಿಥಿ
ಏಕಾದಶಿ ತಿಥಿ ಜುಲೈ 1 ರಂದು ಬೆಳಗ್ಗೆ 10:26 ಕ್ಕೆ ಪ್ರಾರಂಭವಾಗಿದೆ
ತಿಥಿ ಮುಕ್ತಾಯ ಜುಲೈ 2 ರಂದು ಬೆಳಗ್ಗೆ 8:34 ಕ್ಕೆ ಕೊನೆಗೊಳ್ಳುವುದು
ಪಾರಣ ಸಮಯ: ಬೆಳಗ್ಗೆ 05:28ರಿಂದ 07:10ರವರೆಗೆ ಇದೆ.
ಯೋಗಿನಿ ಏಕಾದಶಿಯ ಮಹತ್ವವೇನು?
ಯೋಗಿನಿ ಏಕಾದಶಿ ಆಚರಣೆ ಮಾಡುವುದರಿಂದ ರೋಗ ರುಜಿನಗಳಿಂದ ಮುಕ್ತಿ ಸಿಗುವುದು ಎಂದು ಹೇಳಲಾಗುವುದು. ಈ ದಿನ ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡುತ್ತಾರೋ ಅವರಿಗೆ ಉತ್ತಮ ಆರೋಗ್ಯ ದೊರೆಯುವುದು, ಎಲ್ಲಾ ರೀತಿಯ ಅಪಖ್ಯಾತಿಗಳಿಂದ ಮುಕ್ತಿ ಸಿಗಲಿದೆ ಎಂದು ಹೇಳಲಾಗುವುದು. ಈ ಏಕಾದಶಿ ಆಚರಣೆ ಮಾಡುವುದರಿಂದ ಚರ್ಮರೋಗದಿಂದ ಮುಕ್ತರಾಗುತ್ತಾರೆ ಎಂದು ಹೇಳಲಾಗುವುದು.
ಯೋಗಿನಿ ಏಕಾದಶಿಯ ಪೂಜಾ ವಿಧಾನ
ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮಾಡಿ ಮಡಿ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ ನಂತರ ದೇವರ ಕೋಣೆಯನ್ನು ಶುದ್ಧ ಮಾಡಬೇಕು. ನಂತರ ದೇವರ ಮೂರ್ತಿಯನ್ನು ಹಳದಿ ಬಣ್ಣದ ಹೂವುಗಳಿಂದ ಅರ್ಪಿಸಿ. ಈ ದಿನ ಶ್ರೀ ವಿಷ್ಣುವಿಗೆ ತುಪ್ಪ ಹಚ್ಚಿ, ವಿಷ್ಣು ಮಂತ್ರಗಳನ್ನು ಪಠಿಸುತ್ತಾ ಆರಾಧಿಸಬೇಕು. ಓಂ ನಮೋ ಭಗವತೇ ವಾಸುದೇವಾಯ ಎಂಬ ಮಂತ್ರವನ್ನು ಪಠಿಸುತ್ತಲೇ ಇರಿ.
ಈ ಮಂತ್ರಗಳ ಪಠಣೆ ಮಾಡಿ
ವಿಷ್ಣು ಗಾಯತ್ರಿ ಮಂತ್ರ:
ಓಂ ನಾರಾಯಣಯೇ ವಿದ್ಮಹೇ
ವಾಸುದೇವಾಯ ಧೀಮಹಿ
ತನ್ನೋ ವಿಷ್ಣು ಪ್ರಚೋದಯಾತ್
ಮುಕ್ತಿ ಮಂತ್ರ:
ಓಂ ಭಗವತೇ ವಾಸುದೇವಾಯ ನಮಃ
ವಿಷ್ಣು ಶಾಂತಾಕಾರಂ ಮಂತ್ರ:
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ
ವಿಶ್ವಧಾರಂ ಗಗನಸದ್ರಿಶಂ, ಮೇಘವರ್ಣಂ ಶುಭಾಂಗಂ
ಲಕ್ಷ್ಮಿಂಕಾತಂ ಕಮಲಾನಯನಂ, ಯೋಗಿಭಿರ್ಧ್ಯಾನಗಮ್ಯಂ
ವಂದೇ ವಿಷ್ಣುಂ ಭವಭಯಹರಂ, ಸರ್ವಲೋಕೈಕನಾಥಂ
ಶ್ರೀ ವಿಷ್ಣು ಮಂತ್ರ:
ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧುಶ್ ಚ ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮ ದೇವದೇವ
ವಿಷ್ಣು ಶ್ಲೋಕ:
ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್
ಕರೋಮಿ ಯದ್ಯತ್ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ
ವಿಷ್ಣು ಮಂಗಳಂ ಮಂತ್ರ:
ಮಂಗಳಂ ಭಗವಾನ್ ವಿಷ್ಣು, ಮಂಗಳಂ ಗರುಡಾಧ್ವಜಾ |
ಮಂಗಳಂ ಪುಂಡರೀಕಾಕ್ಷಾ, ಮಂಗಳಂ ತನ್ನೋಂ ಹರಿಹೀ ||
ಯೋಗಿನಿ ಏಕಾದಶಿಯ ಕಥೆ
ಧರ್ಮಗ್ರಂಥಗಳ ಪ್ರಕಾರ, ಸ್ವರ್ಗದಲ್ಲಿ ಕುಬೇರನೆಂಬ ರಾಜನು ವಾಸಿಸುತ್ತಿದ್ದನು. ರಾಜ ಕುಬೇರನು ಮಹಾದೇವನ ಕಟ್ಟಾ ಭಕ್ತನಾಗಿದ್ದನು. ನಿತ್ಯವೂ ಶಿವನನ್ನು ಭಕ್ತಿಯಿಂದ ಪೂಜಿಸುತ್ತಿದ್ದನು. ಒಂದು ದಿನ, ತೋಟಗಾರ ಹೆಣ್ಣಿನ ಮೇಲಿನ ಮೋಹದಿಂದ ಮೈ ಮರೆತು ಹೋದ ಕಾರಣ ರಾಜ ಕುಬೇರನಿಗೆ ಸಮಯಕ್ಕೆ ಹೂವುಗಳನ್ನು ನೀಡಲು ಸಾಧ್ಯವಾಗಲಿಲ್ಲ. ಇದನ್ನು ತಿಳಿದ ರಾಜ ಕುಬೇರನು ಕೋಪಗೊಂಡು ಹೇಳಿದನು - ನೀನು ದೇವರಲ್ಲಿ ಭಕ್ತಿಯ ಬದಲು ಕಾಮಕ್ಕೆ ಪ್ರಾಧಾನ್ಯ ನೀಡಿದ್ದೀಯ. ಹಾಗಾದರೆ ನಿನ್ನ ಹೆಂಡತಿಯಿಂದ ಬೇರ್ಪಡುವೆ ಎಂದು ಶಾಪ ನೀಡುತ್ತಾನೆ. ಅಲ್ಲದೆ ನಿನಗೆ ಕುಷ್ಠ ರೋಗ ಬರುತ್ತೆ ಎಂದು ಶಾಪ ನೀಡುತ್ತಾನೆ, ಅದರಂತೆ ಕುಷ್ಠ ರೋಗದಿಂದ ಬಳಲುತ್ತಾನೆ. ಆತ ಮಾರ್ಕಂಡೇಯ ಋಷಿಯನ್ನು ಕಂಡಾಗ ತನ್ನ ಪಾಪ ಮುಕ್ತನ್ನಾಗಿ ಮಾಡಿ ಮುಕ್ತಿ ನೀಡುವಂತೆ ಕೋರುತ್ತಾನೆ, ಆವಾಗ ಅವರು ಅವನಿಗೆ ಈ ಏಕಾದಶಿ ಕುರಿತು ಹೇಳುತ್ತಾರೆ, ಅದರಂತೆ ಆ ತೋಟಗಾರ ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡುತ್ತಾನೆ, ಆತ ರೋಗ ಮುಕ್ತನಾಗುತ್ತಾನೆ.



Click it and Unblock the Notifications
