Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ಶತಮಾನದ ಕೆಲ ನಿಗೂಢ ರಹಸ್ಯಗಳು
ನಾವೆಲ್ಲಾ ಆಧುನಿಕ ಪ್ರಪಂಚದಲ್ಲಿ ಇದ್ದೇವೆ. ಪ್ರತಿಯೊಂದು ವಿಷಯವನ್ನು ವೈಜ್ಞಾನಿಕವಾಗಿ ತರ್ಕಿಸುವ ನಮ್ಮಲ್ಲಿ ಬೆಳೆಯುತ್ತಿದೆ. ಆದರೂ ಕೆಲವೊಂದು ರಹಸ್ಯಗಳು ರಹಸ್ಯವಾಗಿಯೇ ಉಳಿಯುತ್ತಿದೆ. ಕೆಲವರು ಅದನ್ನು ಪವಾಡವೆಂದರೆ, ಮತ್ತೆ ಕೆಲವರು ಮೂಢನಂಬಿಕೆ ಅಂತಾರೆ, ಉದಾಹರಣೆಗೆ ಬರ್ಮೋಡಾ ಟ್ರೈಯಾಂಗಲ್, ಅದರ ಮೇಲೆ ಹಾರಿದ ಯಾವುದೇ ವಿಮಾನಗಳಾಗಲಿ, ಆ ದಿಕ್ಕಿನಲ್ಲಿ ಸಾಗಿದ ಹಡಗುಗಳಾಗಿ ಮರಳಿ ಬಂದಿಲ್ಲ. Bruce Gernon ಎಂಬುವರು ಮಾತ್ರ ಬರ್ಮೋಡಾ ಟ್ರೈಯಾಂಗಲ್ ನಿಂದ ಮರಳಿ ಬಂದ ಅದೃಷ್ಟಶಾಲಿ. ಈ ರೀತಿಯ ಅನೇಕ ನಿಗೂಢತೆಗಳಿಗೆ ಯಾರೂ ವೈಜ್ಞಾನಿಕವಾದ ವಿಶ್ಲೇಷಣೆಯನ್ನು ಕೊಟ್ಟಿಲ್ಲ. ಅವುಗಳ ಬಗ್ಗೆ ಅನ್ವೇಷಣೆಗಳು ನಡೆಯುತ್ತಲೇ ಇವೆ.
ನಿಗೂಢವಾದ ಸ್ಥಳಗಳು, ಕೆಲ ಮನುಷ್ಯರ ನಿಗೂಢ ಕತೆಗಳು, ಪ್ರಸಿದ್ಧ ವ್ಯಕ್ತಿಗಳ ನಿಗೂಢ ಸಾವು ಹೀಗೆ ನಿಗೂಢವಾದ ಅನೇಕ ವಿಷಯಗಳು ನಮ್ಮಲ್ಲಿವೆ. ಆದರೆ ಈ ರಹಸ್ಯಗಳು ಇಡೀ ಜಗತ್ತನ್ನು ಕಾಡುವ ರಹಸ್ಯಗಳಾಗಿವೆ:

ಚಂದ್ರ ಲೋಕದಲ್ಲಿ ಮಾನವ
ಅಮೇರಿಕದ ನಾಸಾ, ಲೂಯಿಸ್ ಆರ್ಮ್ ಸ್ಟ್ರಾಂಗ್ ಚಂದ್ರ ಗ್ರಹಕ್ಕೆ ಕಳುಹಿಸಿ ಚಂದ್ರಲೋಕಕ್ಕೆ ಮಾನವನ ಕಳುಹಿಸಿದ ಪ್ರಥಮ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಆದರೆ ಅದರ ಬಗ್ಗೆ ಕೆಲವರು ಸಂಶಯ ವ್ಯಕ್ತ ಪಡಿಸುತ್ತಾರೆ. ಅಮೇರಿಕದ ಭಾವುಟ ಹಾರಾಡುತ್ತಿರುವ ಚಿತ್ರವಿದೆ. ಆದರೆ ಚಂದ್ರಗ್ರಹದಲ್ಲಿ ಗಾಳಿಯೇ ಇಲ್ಲ, ಹಾಗಾದರೆ ಬಾವುಟ ಹಾರಿಸಲು ಹೇಗೆ ಸಾಧ್ಯವಾಯಿತು ಅನ್ನುವುದೇ ಹೆಚ್ಚಿನವರನ್ನು ಕಾಡುವ ಪ್ರಶ್ನೆ. ಇದಕ್ಕೆ ಅಮೇರಿಕವೂ ಸೂಕ್ತ ಉತ್ತರ ಕೊಟ್ಟಿಲ್ಲ. ಆದ್ದರಿಂದ ಚಂದ್ರಗ್ರಹಕ್ಕೆ ಹೋಗಿದ್ದಾರೆ ಎಂದು ಅಮೇರಿಕ ಹೇಳುತ್ತಿರುವುದು ಸುಳ್ಳು ಅನ್ನುವುದು ಹೆಚ್ಚಿನ ವಿಜ್ಞಾನಿಗಳ ಸಂಶಯವಾಗಿದೆ.

ಜಾಗತಿಕ ತಾಪಮಾನ
ಅಧಿಕ ವಿಷಪೂರಕ ಅನಿಲಗಳಿಂದಾಗಿ ಓಝೋನ್ ಪದರಗಳಲ್ಲಿ ರಂಧ್ರಗಳು ಬದ್ದಿವೆ. ನಮ್ಮ ಜೀವನ ಶೈಲಿ ಬದಲಾಯಿಸದಿದ್ದರೆ ಜಾಗತಿಕ ತಾಪಮಾನ ಹೆಚ್ಚಾಗಿ ಮನುಷ್ಯನ ಅಂತ್ಯವಾಗುವುದು ಅಂತಾರೆ. ಆದರೆ ಕೆಲ ಬುದ್ಧಿ ಜೀವಿಗಳು ಓಝೋನ್ ಪದರಗಳು ಹಾಳಾಗಿಲ್ಲ, ನಮ್ಮ ಜೀವನ ಶೈಲಿಯ ಮೇಲೆ ನಿಯಂತ್ರಣ ತರಲು ಸರ್ಕಾರದ ಉಪಾಯವಿದು ಅಂತಾರೆ.
ಏನೇ ಹಾಗಿರಲಿ ಪರಿಸರ ನಾಶವನ್ನು ತಡೆಯುವುದು ಭವಿಷ್ಯದ ದೃಷ್ಟಿಯಿಂದ ನಮಗೇ ಒಳ್ಳೆಯದಲ್ಲವೇ?

ಪ್ಲಾಸ್ಟಿಕ್ ಹಣ
ಈಗ ಏನಿದ್ದರೂ ಹಣದ ವ್ಯವಹಾರವನ್ನು ಆನ್ ಲೈನ್, ಎ ಟಿ ಎಂ ಮುಖಾಂತರವೇ ಹೆಚ್ಚಾಗಿ ಮಾಡುತ್ತೇವೆ. ಹಣಕ್ಕಾಗಿ ಬ್ಯಾಂಕ್ ನಲ್ಲಿ ಕ್ಯೂ ನಿಲ್ಲುವ ಅವಶ್ಯಕತೆಯಿಲ್ಲ ಎಂದು ತಂತ್ರಜ್ಞಾನವನ್ನು ಕೊಂಡಾಡುತ್ತೇವೆ. ಆದರೆ ಕೆಲವರು ಈ ವ್ಯವಸ್ಥೆ ಸರಿಯಿಲ್ಲ, ಹಣಕ್ಕಾಗಿ ATM ಅವಲಂಬಿಸಿ, ಒಂದು ದಿನ ಅವುಗಳನ್ನು ಮುಚ್ಚಿ ಜನರನ್ನು ಅತಂತ್ರ ಪರಿಸ್ಥಿತಿಗೆ ದೂಡುವ ದುರಾಲೋಚನೆ ಎಂದು ಹೇಳುತ್ತಾರೆ.
ಈ ವ್ಯವಸ್ಥೆ ಇದ್ದಷ್ಟು ಕಾಲ ಅದರ ಪ್ರಯೋಜನ ಪಡೆಯೋಣ, ಈ ವ್ಯವಸ್ಥೆ ಇಲ್ಲವಾದ ದಿನ ಹೊಸ ತಂತ್ರಜ್ಞಾನ ಬರಬಹುದು, ಈಗಲೇ ತಲೆಬಿಸಿ ಏಕೆ ಎಂದು ಯೋಚಿಸುತ್ತಿದ್ದೀರಾ?

9/11 ದುರಂತ
ಅಮೇರಿಕದ ಅವಳಿ ಕಟ್ಟಳಗಳ ಮೇಲೆ ಬಾಂಬ್ ದಾಳಿ ನಡೆಸಿ ಇಡೀ ವಿಶ್ವವನ್ನು ನಡುಗಿಸಿದ 9/11ರ ದಾಳಿಯ ಬಗ್ಗೆ ಕೆಲವರು ಅದು ತಾಲಿಬಾನ್ ಅಮೇರಿಕದ ಮೇಲೆ ಮಾಡಿದ ಆಕ್ರಮಣ ಅನ್ನುವುದಕ್ಕಿಂತ ಒಳಗಿನವರೇ ಮಾಡಿಸಿದ್ದು ವಾದಿಸುತ್ತಾರೆ. ಹಾಗೇ ಹೇಳಲು ಅವರು ಕೊಡುವ ಕಾರಣ ವಿಮಾನ ಕಟ್ಟಡವನ್ನು ಅಪ್ಪಳಿಸುವುದಕ್ಕಿಂತ ಮುಂಚೆಯೇ ಕಟ್ಟಡದೊಳಗೆ ಬಾಂಬ್ ಸಿಡಿಯಿತು ಎಂದು ಅಲ್ಲಿ ಕೆಲಸ ಮಾಡುತ್ತಿದ್ದ ಕೆಲವರ ಹೇಳಿದ ಹೇಳಿಕೆಯ ಮೇರೆಗೆ ಈ ವಾದವನ್ನು ಮಂಡಿಸುತ್ತಾರೆ.

ಪ್ರಿನ್ಸಸ್ ಡಯಾನಳ ಸಾವು
ಪ್ರಿನ್ಸಸ್ ಡಯಾನಳ ಸಾವಿನ ಸುತ್ತ ಅನೇಕ ರಹಸ್ಯಗಳಿವೆ, ಭೀಕರ ಕಾರು ಅಪಘಾತದಲ್ಲಿ ಡಯಾನ ಸಾವನ್ನಪ್ಪಿದರು, ಆದರೆ ಆ ಕಾರನ್ನು ಓಡಿಸಿದ್ದ ಮಾಜಿ ಯೋಧ ಮಾತ್ರ ಬದುಕಿಳಿದಿದ್ದರು. ಆದ್ದರಿಂದ ಡಯಾನ ಕಾರು ಅಪಘಾತದಿಂದ ಸತ್ತಿಲ್ಲ, ಅವಳನ್ನು ಕೊಲ್ಲಿಸಿದ್ದು ಅನ್ನುವ ಸಂಶಯ ಕೂಡ ಜನರಲ್ಲಿ ಇದೆ. ಆದರೆ ಈ ರಹಸ್ಯ ನಿಗೂಢವಾಗಿಯೇ ಉಳಿದಿದೆ.

ಹೊಸ ಪ್ರಪಂಚ
ಮಧ್ಯಯುಗದ ಸಮಯದಲ್ಲಿ ಕೆಲ ಬುದ್ಧಿ ಜೀವಿಗಳು ತಮ್ಮದೇ ಆದ ಗುಂಪನ್ನು ರಚಿಸಿದರು. ಹೊಸ ರಾಷ್ಟ್ರವನ್ನು ಸ್ಥಾಪಿಸುವುದು ಅವರ ಉದ್ದೇಶವಾಗಿತ್ತು. ಅಮೇರಿಕವನ್ನು ಕೂಡ ಇವರೇ ಸ್ಥಾಪಿಸಿದರು ಎಂದು ಹೇಳಲಾಗುತ್ತದೆ, ಆದರೆ ಯಾವುದೇ ನಿಖರ ಪುರಾವೆಗಳಿಲ್ಲ.

ಏಡ್ಸ್ ವೈರಸ್ ಅನ್ನು ಲ್ಯಾಬ್ ನಲ್ಲಿ ಉತ್ಪತ್ತಿ ಮಾಡಲಾಯಿತು
ಅಮೇರಿಕ ಮತ್ತು ರಷ್ಯಾದ ನಡುವೆ ಶೀತಲ ಯುದ್ಧ ನಡೆಯುತ್ತಿದ್ದ ಸಮಯದಲ್ಲಿ ಜೀವಶಾಸ್ತ್ರಕ್ಕೆ ಸಂಬಂಧಿಸಿದ ಯುದ್ಧಗಳನ್ನು ಕೂಡ ನಡೆಸಿದರು. ಆಗ ಶತ್ರುಗಳ ನಾಶಕ್ಕಾಗಿ ಏಡ್ಸ್ ವೈರಸ್ ಅನ್ನು ಉತ್ಪತ್ತಿ ಮಾಡಿ ರಾಜಕೀಯ ಗೊಂದಲ ಹೆಚ್ಚು ಮಾಡುವುದು ಉದ್ದೇಶವಾಗಿತ್ತು ಎಂಬ ಅಭಿಪ್ರಾಯಗಳು ಕೇಳಿ ಬರುತ್ತವೆ. ಆದರೆ ಇದರ ಬಗ್ಗೆ ಕೂಡ ಯಾವುದೇ ಸ್ಪಷ್ಟವಾದ ಮಾಹಿತಿಯಿಲ್ಲ.

ಎರಡನೇ ಮಹಾಯುದ್ಧ
ಎರಡನೇ ಮಹಾಯುದ್ಧದಲ್ಲಿ ಹೆಚ್ಚಿನ ಅಮೇರಿಕದ ಪ್ರಜೆಗಳು ಯುದ್ಧದಲ್ಲಿ ಪಾಲುಗೊಳ್ಳಲಿಲ್ಲ. ಅವರ ಪ್ರಕಾರ ಬ್ರಿಟನ್ ಉದ್ದೇಶಪೂರ್ವಕ್ಕಾಗಿಯೇ ದಾಳಿ ನಡೆಯುತ್ತಿದೆ ಎಂದು ಗೊತ್ತಿದ್ದೂ , ದಾಳಿಯಾಗಲು ಅವಕಾಶ ಕಲ್ಪಿಸಿ, ಅಮೇರಿಕವನ್ನು ಯುದ್ಧದಲ್ಲಿ ನೇರವಾಗಿ ಪಾಲುಗೊಳ್ಳುವಂತೆ ಮಾಡುವುದು ಬ್ರಿಟನ್ ನ ಉದ್ದೇಶವಾಗಿತ್ತು ಎನ್ನುವುದು ಅವರ ಅಭಿಪ್ರಾಯ. ಬ್ರಿಟನ್ ನ ಉದ್ದೇಶ ಅದೇ ಆಗಿತ್ತೇ, ಇಲ್ಲವೇ ಅನ್ನುವುದು ಮಾತ್ರ ತಿಳಿದುಬಂದಿಲ್ಲ.

ಮೊನಲಿಸಾಳ ನಗೆ
ಪ್ರಪಂಚದ ಅದ್ಭುತ ಚಿತ್ರವಾಗಿರುವ ಮೊನಲಿಸಾಳ ಬಗ್ಗೆ ಅನೇಕ ಸಂಶಯಗಳಿವೆ. ಕೆಲವರು ಮೊನಲಿಸಾ ಹೆಣ್ಣು ಎಂದು ಕೇಳಿದರೆ, ಮತ್ತೆ ಕೆಲವರು ಇಲ್ಲಾ ಮೊನಲಿಸಾ ಗಂಡು ಎಂದು ಹೇಳುತ್ತಾರೆ. ಆದರೆ ಈ ಚಿತ್ರದ ಬಗ್ಗೆ ರಹಸ್ಯ ಮಾತ್ರ ಮೊನಲಿಸಾಳ ನಗೆಯಂತೆ ರಹಸ್ಯವಾಗಿಯೇ ಉಳಿದಿದೆ.

The Free Masons
ಇದೊಂದು ರಹಸ್ಯ ಸಮಾಜ. ಪ್ರಭಾವಿಶಾಲಿ ವ್ಯಕ್ತಿಗಳು ಮಾತ್ರ ಇದರ ಸದಸ್ಯರು. ಪ್ರಪಂಚವನ್ನು ಗೆಲ್ಲುವುದು ಇವರ ಗುರಿ ಎಂದು ಹೇಳಲಾಗುತ್ತದೆ. ಈ ಸಮಾಜದ ಚಟುವಟಿಕೆಯಲ್ಲಿ ಭಾಗವಹಿಸಿದ ಕಾರಣ ಅನೇಕ ರಷ್ಯಾದ ಅಧ್ಯಕ್ಷರು ಜನರು ಟೀಕೆಗೆ ಗುರಿಯಾಗಿದ್ದಾರೆ.

ಶೇಕ್ಸ್ ಪಿಯರ್
ಶೇಕ್ಸ್ ಪಿಯರ್ ಬರೆದ ನಾಟಕಗಳು ಜಗತ್ತ್ ಪ್ರಸಿದ್ಧವಾಗಿದೆ. ಆದರೆ ಶೇಕ್ಸ್ ಪಿಯರ್ ನ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನ ವಿವರಗಳು ದೊರೆಯದ ಕಾರಣ ಶೇಕ್ಸ್ ಪಿಯರ್ ನಾಟಕಗಳನ್ನು ಯಾವುದೋ ಅಜ್ಞಾತ ವ್ಯಕ್ತಿ, ಶೇಕ್ಸ್ ಪಿಯರ್ ಹೆಸರಿನಲ್ಲಿ ಬರೆದಿರಬಹುದು ಎಂಬ ತರ್ಕಗಳು ಕೇಳಿ ಬರುತ್ತಿವೆ.

ಪಾಲ್ ಮ್ಯಾಕ್ಕರ್ಟ್ನಿ
ಬೀಟಲ್ಸ್ ಅನ್ನುವುದು ಯು. ಎಸ್ ನ ಒಂದು ಪ್ರಸಿದ್ಧವಾದ ಸಂಗೀತ ಟ್ರೂಪ್. ಇದರಲ್ಲಿ ಪ್ರಸಿದ್ಧ ಗಾಯಕನಾದ ಪಾಲ್ ಮ್ಯಾಕ್ಕರ್ಟ್ನಿ ಅನ್ನುವ ವ್ಯಕ್ತಿ ನಿಜವಾದ ಪಾಲ್ ಮ್ಯಾಕ್ಕರ್ಟ್ನಿ ಅಲ್ಲ. ನಿಜವಾದ ಪಾಲ್ ಮ್ಯಾಕ್ಕರ್ಟ್ನಿ 1967ರಲ್ಲಿ ಕಾರು ಅಪಘಾತದಲ್ಲಿ ತೀರಿ ಹೋದ ಬಳಿಕ, ಅವರ ಮುಖಚರ್ಯೆ ಇರುವ ವ್ಯಕ್ತಿಯನ್ನು ಪಾಲ್ ಮ್ಯಾಕ್ಕರ್ಟ್ನಿ ಎಂದು ಬಿಂಬಿಸಲಾಯಿತು ಎಂದು ಹೇಳುತ್ತಾರೆ. ಆದರೆ ಈ ರಹಸ್ಯದ ಬಗ್ಗೆ ಇದುವರೆಗೆ ಯಾರೂ ಬೆಳಕು ಚೆಲ್ಲಲಿಲ್ಲ.

ಜಾನ್ ಎಫ್ ಕೆನಡಿಯ ಸಾವು
ಯು. ಎಸ್ ಅಧ್ಯಕ್ಷರಾಗಿದ್ದು ಜಾನ್ ಎಫ್ ಕೆನಡಿ ಲೀ ಹಾರ್ವೆ ಆಸ್ವಾಲ್ಡ್ ಗುಂಡಿಕ್ಕಿ ಕೊಂಡರು ಎಂದು ಇತಿಹಾಸದಲ್ಲಿ ಹೇಳಲಾಗಿದೆ. ಆದರೆ ಜಾನ್ ಎಫ್ ಕೆನಡಿ ಸಾಯುತ್ತಿರುವ ವೀಡಿಯೋ ಕ್ಲಿಪ್ ನೋಡಿದರೆ ನಾಲ್ಕು ದಿಕ್ಕುಗಳಿಂದ ಗುಂಡು ಹಾರಿ ಬಂದದ್ದನ್ನು ಕಾಣಬಹುದು. ಆದ್ದರಿಂದಜಾನ್ ಎಫ್ ಕೆನಡಿಯ ಕೆನಡಿಯ ಸಾವು ನಿಗೂಢವಾಗಿಯೇ ಇತಿಹಾಸದ ಪುಟವನ್ನು ಸೇರಿತು.

ಬರ್ಮೋಡಾ ಟ್ರೈಯಾಂಗಲ್
ಇದೊಂದು ರಹಸ್ಯ ಸ್ಥಳವಾಗಿದೆ. ಇಲ್ಲಿಗೆ ಹೋದ ಹಡಗುಗಳಾಗಲಿ, ವಿಮಾನಗಳಾಗಲಿ ಯಾವುದು ಹಿಂತಿರುಗಿ ಬಂದಿಲ್ಲ. ಅತಿಮಾನುಷ ಶಕ್ತಿ ಈ ಸ್ಥಳವನ್ನು ನಿಯಂತ್ರಿಸುತ್ತಿದೆ ಎಂದು ಹೇಳಲಾಗುತ್ತಿದ್ದು, ಈ ಸ್ಥಳಕ್ಕೆ ಹೋದ ವಸ್ತುಗಳು ಏಕೆ ಹಿಂತಿರುಗಿ ಬರುವುದಿಲ್ಲ, ಅಲ್ಲಿರುವ ರಹಸ್ಯವೇನು ಅನ್ನುವುದು ತಿಳಿದು ಬಂದಿಲ್ಲ.
ಬದುಕಿ ಬಂದಿರುವ ಏಕೈಕ ವ್ಯಕ್ತಿಯಾಗಿರುವ Bruce Gernon ಆ ಪ್ರದೇಶವು ವಿದ್ಯುತ್ತ್ ಕಾಂತೀಯ ಮಂಜಿನಿಂದ ಆವೃತ್ತವಾಗಿದ್ದು, ಅದರೊಳಗೆ ಸಿಕ್ಕಿದ ವಸ್ತುಗಳನ್ನು ತನ್ನತ್ತ ಸೆಳೆಯುತ್ತದೆ, ಅಲ್ಲಿ ತುಂಬಾ ವಿಮಾನಗಳು ಮತ್ತು ಹಡಗುಗಳು ಬಿದ್ದಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಸುನಾಮಿ ಬಂದದ್ದು ನ್ಯೂಕ್ಲಿಯರ್ ನ ಪ್ರಯೋಗದಿಂದ
ಇಸ್ರೇಲ್ ನವರು ನಡೆಸಿದ ನ್ಯೂಕ್ಲಿಯರ್ ಬಾಂಬ್ ನ ಪ್ರಯೋಗದಿಂದಾಗಿ ಭಾರತದಲ್ಲಿ ಸುನಾಮಿ ಬಂತು ಎನ್ನುತ್ತಾರೆ. ಈ ನಂಬಿಕೆ ಈಜಿಪ್ಟ್, ಗಲ್ಫ್ ರಾಷ್ಟ್ರಗಳಲ್ಲಿ ಬಲವಾಗಿದೆ.

2012 ಜಗತ್ತು ಅಂತ್ಯವಾಗುತ್ತೆ
2012ರಲ್ಲಿ ಜಗತ್ತು ಅಂತ್ಯವಾಗುತ್ತೆ ಎಂದು ಜನರು ಭಯದಿಂದಲೇ ಆ ವರ್ಷ ಕಳೆದರು. ಆದರೆ ನಾವು ಈಗ 2013ರಲ್ಲಿ ಆರಾಮವಾಗಿಯೇ ಇದ್ದೇವೆ.



Click it and Unblock the Notifications











