Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಬೋಲ್ಡ್ ಸ್ಕೈ ಎಂಬ ವೈವಿಧ್ಯಮಯ ಲೋಕ!
ನೆನ್ನೆ ಜೋಗಿಯವರ 'ರವಿ ಕಾಣದ್ದು' ಪುಸ್ತಕ ಓದುತ್ತಿದ್ದೆ. ಅದರಲ್ಲಿ ಅವರು 'ಬದುಕಿದಷ್ಟು ಕಾಲ ನಮ್ಮ ಮನಸ್ಸಿಗೆ ತೃಪ್ತಿ ಕೊಡುವಂತೆ ಬದುಕಬೇಕು. ಒಂದು ಮನುಷ್ಯನ ಆಯಸ್ಸು 75 ವರ್ಷ ಎಂದಿಟ್ಟುಕೊಳ್ಳಿ, ಸಿಗರೇಟ್ ಎಳೆದರೆ ಬೇಗನೆ ಕಾಯಿಲೆ ಬಂದು ಸತ್ತು ಹೋಗುತ್ತೇವೆ ಎಂಬ ಭಯದಿಂದ ಸಿಗರೇಟ್ ಎಳೆಯದೆ 75 ವರ್ಷ ಬದುಕಿ, ಕೊನೆಯ 5 ವರ್ಷವೇನು ಸುಖವಾಗಿ ಕಳೆಯುವುದಿಲ್ಲ, ಆ ಜೀವನ ನರಕ ಮಯವಾಗಿರುತ್ತದೆ, ಜೀವನದಲ್ಲಿ ಯಾವ ಖುಷಿನೂ ಅನುಭವಿಸಿಲ್ಲ ಎಂಬ ಪಶ್ಚಾತಾಪವಿರುತ್ತದೆ, ಅದಕ್ಕಿಂತ ಇರುವಷ್ಟು ದಿನವನ್ನು ನಮ್ಮ ಇಷ್ಟಬಂದಂತೆ ಬದುಕಿ, 5 ವರ್ಷ ಬೇಗ ಸತ್ತರೂ ಚಂತೆಯಿಲ್ಲ' ಎಂಬ ನಿಟ್ಟಿನಲ್ಲಿ ಬರೆಯುತ್ತಾ ಹೋಗುತ್ತಾರೆ.
ಅವರು ಹೇಳಿದ್ದು ಒಂದು ಕ್ಷಣಕ್ಕೆ ಸರಿ ಅನಿಸುತ್ತದೆ. ನಾವು ಯಾವಾಗ ಸಾಯುತ್ತೇವೆ ಅಂತ ಯಾರಿಗೂ ಹೇಳಲಿಕ್ಕೆ ಸಾಧ್ಯವಿಲ್ಲ!

ನನ್ನ ಫ್ರೆಂಡ್ ಅಪ್ಪನಿಗೆ ಯಾವುದೇ ಕೆಟ್ಟ ಅಭ್ಯಾಸಗಳಿರಲಿಲ್ಲ, ವಯಸ್ಸು 55 ಆಸುಪಾಸಿನಲ್ಲಿದ್ದರು, ಆದರೂ ಅವರನ್ನು ಶ್ವಾಸಕೋಶದ ಕ್ಯಾನ್ಸರ್ ಬಲಿ ತೆಗೆದುಕೊಂಡಿತು! ನನ್ನ ಮನೆಯ ಹತ್ತಿರ ಕೆಂಚ ಅಂತ ಒಬ್ಬ ಇದ್ದಾನೆ. ಬಹುಶಃ 60 ವರ್ಷಕ್ಕಿಂತ ಅಧಿಕ ಪ್ರಾಯವಿರಬಹುದು, ಮದುವೆಯಾಗಿಲ್ಲ, ಕುಡಿತ, ಧೂಮಪಾನವೇ ಅವರ ಸಂಗಾತಿ. ದುಡಿದ್ದೆಲ್ಲಾವನ್ನು ಆಹಾರಕ್ಕೆ, ಬಟ್ಟೆಗೆ ಸ್ವಲ್ಪವೂ ಖರ್ಚು ಮಾಡದೆ(ಬೇರೆಯವರು ಕೊಟ್ಟ ಹರಕಲು ಬಟ್ಟೆಯನ್ನು ಅದು ಹರಿದು ಚಿಂದಿಯಾಗುವವರೆಗೆ ಧರಿಸುತ್ತಾನೆ) ಕುಡಿತಕ್ಕೆ ಸುರಿಯುತ್ತಾನೆ! ಅವನು ಕಾಯಿಲೆ ಬಂದು ಒಂದು ವಾರಕ್ಕಿಂತ ಹೆಚ್ಚು ಮಲಗಿದ್ದನ್ನು ನಾನು ಇದುವರೆಗೆ ನೋಡಿಲ್ಲ. ವಯಸ್ಸಾಗಿರುವುದರಿಂದ ದೇಹದ ಶಕ್ತಿ ಸ್ವಲ್ಪ ಕುಂದಿದೆ ಹೊರತು, ಕಲ್ಲು ಗುಂಡುನಂತೆ ಈಗಲೂ ಇದ್ದಾನೆ.
ಹಾಗಂತ ಆರೋಗ್ಯದ ಬಗ್ಗೆ ನಮ್ಮಲ್ಲಿರುವ ಕಾಳಜಿ ತಪ್ಪು ಅಂತ ಹೇಳಲು ಸಾಧ್ಯವೇ. ಹುಟ್ಟಿದ ಮೇಲೆ ಒಂದೆಲ್ಲಾ ಒಂದು ದಿನ ಸಾಯುತ್ತೇವೆ ಎಂದು ಎಲ್ಲರಿಗೂ ಗೊತ್ತು. ಆದರೂ ಜೀವನ ಬಗ್ಗೆ ಎಷ್ಟೆಲ್ಲಾ ಕನಸ್ಸು ಕಟ್ಟಿಕೊಳ್ಳುತ್ತೇವೆ, ಎಷ್ಟೆಲ್ಲಾ ಕಷ್ಟಪಡುತ್ತೇವೆ. ಮಗುವಾಗಿ ಹುಟ್ಟಿದಾಗಿನಿಂದ ನಮ್ಮ ಆಯಸ್ಸಿನ ಕೊನೆಯ ದಿನದವರೆಗೆ ಪ್ರತಿಯೊಂದು ದಿನವೂ ಹೋರಾಟವಾಗಿರುತ್ತದೆ. ಒಳ್ಳೆಯ ಹುದ್ದೆ ಸಿಗಬೇಕೆಂದರೆ ಚೆನ್ನಾಗಿ ಮಾರ್ಕ್ಸ್ ಬೇಕೆಂದು ನಮ್ಮ ಎಷ್ಟೆಲ್ಲಾ ಸುಖ ನಿದ್ದೆಯನ್ನು ತ್ಯಾಗ ಮಾಡುತ್ತೇವೆ? ಹುದ್ದೆ ಸಿಕ್ಕಿದ ಮೇಲೆ ನಮ್ಮ ಆಸೆ ಅಲ್ಲಿಗೆ ಕೊನೆ ಆಗುತ್ತದೆಯೇ....? ಮದುವೆ, ಮನೆ, ಕಾರು ಹೀಗೆ ಹನುಮಂತನ ಬಾಲ ಬೆಳೆದಂತೆ ನಮ್ಮ ಆಸೆಯ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಮಗೆ ನಾವು ಬಯಸಿದ ಎಲ್ಲಾ ಐಷಾರಾಮಿ ಬದುಕು ಸಿಕ್ಕಿ, ಆರೋಗ್ಯ ಇಲ್ಲವೆಂದರೆ ಏನು ಪ್ರಯೋಜನ? ಸಾಕಷ್ಟು ಕಾಯಿಲೆಗಳಿಗೆ ನಮ್ಮ ಜೀವನ ಶೈಲಿ ಪ್ರಮುಖ ಕಾರಣವಾಗಿರುವಾಗ ಆ ಜೀವನಶೈಲಿ ಬದಲಾಯಿಸುವುದರಲ್ಲಿ ತಪ್ಪೇನು?
ಲೈಫ್ ನಲ್ಲಿ ಫನ್ ಇರಬೇಕು, ಫನ್ ಮಾತ್ರ ಲೈಫ್ ಆಗಬಾರದಷ್ಟೇ. ಇದೇ ಉದ್ದೇಶದಿಂದ ಕನ್ನಡ ಬೋಲ್ಡ್ ಸ್ಕೈ ಉತ್ತಮ ಲೈಫ್ ಸ್ಟೈಲ್ ಗೆ ಅಗತ್ಯವಾದ ಉಪಯುಕ್ತವಾದ ಮಾಹಿತಿಗಳನ್ನು ನೀಡುತ್ತಾ ಬಂದಿದೆ. ಅದರಲ್ಲಿ ಆರೋಗ್ಯ, ಸೌಂದರ್ಯ, ಅಡುಗೆ, ಸಂಬಂಧ, ಮನೆ-ಕೈ ತೋಟ, ತಾಯಿ-ಮಗು , ಸಮ್ಮಿಲನ ಹೀಗೆ ಹಲವು ಸೆಕ್ಷನ್ ಇದ್ದು ತನ್ನದೇ ಆದ ವೈಶಿಷ್ಟತೆಯಿಂದ ಓದುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಓದುಗರ ಸ್ಪಂದನೆಗೆ ಧನ್ಯವಾದಗಳು. ಆರೋಗ್ಯ, ಸೌಂದರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ಅನೇಕರು ಇಲ್ಲಿ ಕಂಡುಕೊಂಡಿದ್ದಾರೆ. ನೀವು ಹೊಸ ರುಚಿಯ ಅಡುಗೆ ತಯಾರಿಸಿ, ನಿಮ್ಮ ಪಾಕ ಪ್ರಾವೀಣ್ಯತೆಯನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆಂದು ಬಯಸುವವರಿಗೆ ತಮ್ಮನ್ನು ಗುರುತಿಸಿಕೊಳ್ಳಲು ಇದೊಂದು ಸೂಕ್ತ ತಾಣ. ನಮ್ಮ ಈ ವೈವಿಧ್ಯಮಯ ಲೋಕದಲ್ಲಿ ಪ್ರಯಾಣ ಮಾಡಲು ಇಷ್ಟ ಪಡುವುದಾರೆ visit - www.kannada.boldsky.com



Click it and Unblock the Notifications
