Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಭಾರತದಲ್ಲಿರುವ 10 ಪ್ರಸಿದ್ಧ ಶಿವನ ದೇವಾಲಯಗಳು
ಶಿವ ಭಕ್ತರು ಭಾರತದ ಎಲ್ಲಾ ಕಡೆ ಇದ್ದಾರೆ. ಉತ್ತರದಿಂದ ದಕ್ಷಿಣದವರೆಗೆ ಶಿವನ ಅನೇಕ ದೇವಾಲಯಗಳಿವೆ. ಪ್ರತೀ ಊರಿನಲ್ಲಿ ದೊಡ್ಡ ಶಿವಾಲಯ ಇರದಿದ್ದರೂ, ಒಂದು ಚಿಕ್ಕ ಶಿವನ ಗುಡಿಯಾದರೂ ಇದ್ದೇ ಇರುತ್ತದೆ.
ಶಿವನನ್ನು ಪೂಜಿಸಿದರೆ ಭಕ್ತರನ್ನೂ ಕಷ್ಟ ಕಾಲದಲ್ಲಿ ಕೈ ಬಿಡುವುದಿಲ್ಲ ಎಂಬ ನಂಬಿಕೆ ಶಿವ ಭಕ್ತರಲ್ಲಿದೆ. ಕೆಲವೊಂದು ಶಿವನ ದೇವಾಲಯಗಳು ತುಂಬಾ ಪ್ರಖ್ಯಾತಿಯನ್ನು ಪಡೆದಿದೆ. ಆ ಪ್ರಖ್ಯಾತಿ ದೇವಾಲಯಗಳಾವುವು ಎಂದು ಈ ಕೆಳಗೆ ಹೇಳಲಾಗಿದೆ ನೋಡಿ:

ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ
ವಾರಣಾಸಿಯ ಶಿವನ ದೇವಾಲಯವು ವಿಶ್ವ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳಿವೆ. ಈ ದೇವಾಲಯವು ಉತ್ತರಪ್ರದೇಶದಲ್ಲಿದೆ.

ಕೇದರನಾಥ ದೇವಾಲಯ (ಉತ್ತರ ಖಂಡ)
ಈ ದೇವಾಲಯ ಹಾಗೂ ಇಲ್ಲಿಯ ಪ್ರಕೃತ್ತಿ ಸೌಂದರ್ಯ ನೋಡುಗರ ಮನಸೂರೆಗೊಳ್ಳುವಂತಿದೆ. ಇದು ನದಿ ತೀರದಲ್ಲಿದ್ದು, ಇಲ್ಲಿ ಶಿವನ 12 ಜ್ಯೋತಿರ್ಲಿಂಗಗಳಿವೆ.

ಸೋಮನಾಥ ಜ್ಯೋತಿರ್ಲಿಂಗ ದೇವಾಲಯ
ಈ ದೇವಾಲಯವು ಗುಜರಾತಿನಲ್ಲಿದೆ. ಅರೇಬಿಯನ್ ಸಮುದ್ರದ ದಡದಲ್ಲಿದ್ದು, ತಲೆಯಲ್ಲಿ ಚಂದ್ರನನ್ನು ಮುಡಿದಿರುವ ಶಿವನ ಮೂರ್ತಿಯಿದೆ. ಶಿವನ ಮತ್ತೊಂದು ಹೆಸರಾದ ಸೋಮನಾಥ ಹೆಸರಿನಿಂದ ಈ ದೇವಾಲಯ ಪ್ರಸಿದ್ಧವಾಗಿದೆ.

ಅಮರನಾಥ ಗುಹೆ
ಈ ಗುಹಾ ದೇವಾಲಯವೂ ಶ್ರೀನಗರದಿಂದ 11 ಕಿ ಮೀ ದೂರದಲ್ಲಿದೆ. ಈ ದೇವಾಲಯದಲ್ಲಿರುವ ಲಿಂಗ ಬೆಳೆಯುತ್ತದೆ ಹಾಗೂ ಅರ್ಧಾಚಂದ್ರಾಕೃತಿಯಲ್ಲಿ ಮಾಯವಾಗುತ್ತದೆ ಎಂಬ ನಂಬಿಕೆಯಿದೆ.

ಲಿಂಗರಾಜ ದೇವಾಲಯ
ಈ ದೇವಾಲಯವೂ ಒರಿಸ್ಸಾದ ಭುವನೇಶ್ವರದಲ್ಲಿದೆ. ಇದು ಅತ್ಯಂತ ದೊಡ್ಡ ಹಿಂದೂ ದೇವಾಲಯವಾಗಿದ್ದು, ಪ್ರತಿನಿತ್ಯ ಸಹಸ್ರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾ ಇರುತ್ತಾರೆ.

ಮುರ್ಡೇಶ್ವರ ದೇವಾಲಯ
ಕರ್ನಾಟಕದ ಮುರ್ಡೇಶ್ವರ ಬೀಚ್ ಪಕ್ಕದಲ್ಲಿ ಶಿವನ ದೇವಾಲವಿದ್ದು ವಿಶ್ವದಲ್ಲಿರುವ ಅತ್ಯಂತ ಎತ್ತರದ ಶಿವನ ಮೂರ್ತಿಗಳಲ್ಲಿ ಇಲ್ಲಿಯ ಶಿವ ಮೂರ್ತಿ ಕೂಡ ಒಂದಾಗಿದೆ.

ಮಲ್ಲಿಕಾರ್ಜುನಾ ದೇವಾಲಯ
ಈ ದೇವಾಲಯವೂ ಆಂಧ್ರ ಪ್ರದೇಶದಲ್ಲಿದೆ. ಈ ದೇವಾಲಯದಲ್ಲಿ ಕಂಡು ಬರುವ ಕೆತ್ತನೆಗಳು ಅದ್ಭುತವಾಗಿದೆ. ಮಹಾಕವಿ ಆದಿ ಶಂಕರ ತಮ್ಮ ಮಹಾಕಾವ್ಯವಾದ ಶಿವಾನಂದ ಲಹರಿಯನ್ನು ಇಲ್ಲೇ ಕುಳಿತು ಬರದಿರಬಹುದೆಂದು ಹೇಳುತ್ತಾರೆ.

ಮಹಾಕಾಳಾ ದೇವಾಲಯ
ಇದು ಮಧ್ಯ ಪ್ರದೇಶದ ಪುರಾತನ ನಗರವಾದ ಉಜ್ವೈನ್ ನಲ್ಲಿದೆ. ಈ ದೇವಾಲಯವೂ ಕೃಷ್ಣ ನದಿಯ ಪಕ್ಕದಲ್ಲಿದೆ. ಇಲ್ಲಿ ಕುಂಬಮೇಳವನ್ನು ಬಹಳ ಅದ್ದೂರಿಯಿಂದ ಆಚರಿಸಲಾಗುತ್ತದೆ.

ಕೇದರನಾಥ ದೇವಾಲಯ
ಕೇದರನಾಥ ದೇವಾಲಯವೂ ಹಿಮಾಲಯದಲ್ಲಿದ್ದು ವರ್ಷದಲ್ಲಿ 6 ತಿಂಗಳು ಅಂದರೆ ಮೇ-ಅಕ್ಟೋಬರ್ ತಿಂಗಳವರೆಗೆ ಮಾತ್ರ ಈ ದೇವಾಲಯಕ್ಕೆ ಭೇಟಿ ಕೊಡಬಹುದು. ಉಳಿದ ಸಮಯದಲ್ಲಿ ಮಂಜಿನಿಂದ ಆವೃತವಾಗಿರುತ್ತದೆ.

ವಿಶ್ವನಾಥ ದೇವಾಲಯ
ವಿಶ್ವನಾಥ ದೇವಾಲಯ ಪವಿತ್ರ ಗಂಗಾ ನದಿಯ ತೀರದಲ್ಲಿದೆ. ಈ ದೇವಾಲಯವೂ ಭಾರತದ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಒಂದಾಗಿದ್ದು ಪ್ರತಿನಿತ್ಯ ಸಹಸ್ರಾರು ಭಕ್ತಾಧಿಗಳನ್ನು ಆಕರ್ಷಿಸುತ್ತಿದೆ.



Click it and Unblock the Notifications











