Latest Updates
-
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ
ಮಿದುಳಿನ ಸಾಮರ್ಥ್ಯ ಹೆಚ್ಚಿಸುವ ಟ್ರಿಕ್ಸ್
ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು, ಉಳಿಸಿಕೊಳ್ಳುವುದು ಕೂಡ ಒಂದು ಕಲೆ. ಮಿದುಳು ಚುರುಕಾಗಿ ಕೆಲಸ ಮಾಡದಿದ್ದರೆ ತುಂಬಾ ನಷ್ಟವಾಗುವುದು. ಅಡುಗೆ ಮಾಡುವಾಗ ಮರೆತು ಸಕ್ಕರೆ ಹಾಕುವಲ್ಲಿ ಉಪ್ಪು ಹಾಕಿದರೆ ಹೇಗೆ? ಇತ್ತೀಚಿನ ದಿನಗಳಲ್ಲಿ ಮರೆವಿನ ಕಾಯಿಲೆ ನಮ್ಮಲ್ಲಿ ಹೆಚ್ಚಾಗುತ್ತಿದೆ. ಅದನ್ನು ಗಮನಿಸಿದ್ದೀರಾ ನೀವು?
ಏನೋ ವಸ್ತು ತೆಗೆಯಬೇಕೆಂದು ಹೋಗಿರುತ್ತೇವೆ, ಕೆಲವೊಮ್ಮೆ ಮರತ್ತೇ ಹೋಗುತ್ತದೆ. ನಮ್ಮ ಆಪ್ತರ ಹುಟ್ಟಿದ ದಿನ ಮರೆತು ಬಿಡುತ್ತೇವೆ. reminder ಬಡೆದುಕೊಂಡಾಗ ಅವರಿಗೆ ವಿಶ್ ಮಾಡುತ್ತೇವೆ. ಆದರೆ ನಮ್ಮ ಜ್ಞಾಪಕ ಶಕ್ತಿ ಏಕೆ ಹಾಳಾಗುತ್ತಿದೆ ಎಂದು ಯೋಚಿಸಿದ್ದೀರಾ? ಉತ್ತರ ವೆರಿ ಸಿಂಪಲ್, ನಾವು ಯೋಚಿಸದೇ ಇರುವುದು! ಹೌದು ತಲೆಗೆ ಕೆಲಸ ಕೊಡದಿದ್ದಾಅದರ ಸಾಮರ್ಥ್ಯ ಕೂಡ ಕಡಿಮೆಯಾಗುವುದು.
ಇಲ್ಲಿ ಕೆಲವು ಟಿಪ್ಸ್ ಇವೆ, ಇವುಗಳು ನೀವು ಜ್ಞಾಪಕಶಕ್ತಿ ಕಳೆದುಕೊಳ್ಳದಿರಲು ಸಹಾಯ ಮಾಡುವುದು:

ಕೆಲಸ ಮುಗಿದ ನಂತರ ಎಲ್ಲವೂ ಸರಿಯಾಗಿದೆಯೇ ಎಂದು ಪರೀಕ್ಷಿಸಿ
ನಮ್ಮ ಕೆಲಸ ಮುಗಿದ ನಂತರ ಎಲ್ಲಾ ಸರಿಯಾಗಿದೆಯೇ ಎಂದು ಪರೀಕ್ಷಿಸುವುದು ಒಳ್ಳೆಯದು. ಆಗ ಏನಾದರೂ ಮರೆತು ಬಿಟ್ಟಿದ್ದರೆ ನೆನಪಿಗೆ ಬರುವುದು. ಇಲ್ಲದಿದ್ದರೆ ಅಯ್ಯೋ ನನಗೆ ಮರುವಿನ ಕಾಯಿಲೆ ಬಂತು ಎಂದು ನೀವೇ ಕಾಯಿಲೆಯನ್ನು ಹುಟ್ಟು ಹಾಕಿ ಬಿಡುತ್ತೀರಿ.
ನಿಮ್ಮ ಮೆದುಳನ್ನು ಉಪಯೋಗಿಸಿ
ಎಲ್ಲದಕ್ಕೂ ಕಂಪ್ಯೂಟರ್, ಫೋನು ಅಂತ ಬಳಕೆ ಮಾಡದೆ ಸ್ವಲ್ಪ ಮೆದುಳಿಗೂ ಕೆಲಸ ಕೊಡಬೇಕು.
ಲೆಕ್ಕಾಚಾರ
ಲೆಕ್ಕಾಚಾರ ಮಾಡುವಾಗ ಕ್ಯಾಲ್ಕುಲೇಟರ್ ಬಳಸುವ ಮುನ್ನ ಬುದ್ಧಿಶಕ್ತಿ ಬಳಸಿ ಲೆಕ್ಕಚಾರ ಮಾಡಿ. ಮೊದಲು ಕಷ್ಟವಾಗಬಹುದು. ನಂತರ ನಿಮ್ಮ ಮಿದುಳು ತುಂಬಾ ವೇಗವಾಗಿ ಕೆಲಸ ಮಾಡುತ್ತದೆ.
ಹಾಡು ಹೇಳಿ
ಹಾಡಿನ ಸಾಲುಗಳನ್ನು ನೆನಪಿನಲ್ಲಿಟ್ಟು ಹಾಡುವುದು ಕೂಡ ಮೆದುಳನ್ನು ಚುರುಕುಗೊಳಿಸುವ ಕೆಲಸವೇ.
ಮುಖ್ಯವಾದ ವಿಷಯವನ್ನು ಆಗಾಗ ಜ್ಞಾಪಿಸಿಕೊಳ್ಳಿ.
ಈ ರೀತಿ ಮಾಡಿದರೆ ಮುಖ್ಯವಾದ ವಿಷಯವನ್ನು ಮರೆಯಲು ಸಾಧ್ಯವಿಲ್ಲ. ಕೆಲಸವನ್ನು ಮಾಡುವಾಗ ಏಕಾಗ್ರತೆಯಿಂದ ಮಾಡಬೇಕು. ಏಕಾಗ್ರತೆ ಮದುಳಿನ ಸಾಮರ್ಥ್ಯ ಹೆಚ್ಚಿಸುವ ಪ್ರಮುಖ ಅಸ್ತ್ರವಾಗಿದೆ.



Click it and Unblock the Notifications
