Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಶ್ರೀದೇವಿಯ ಕೆಲ ದಿ ಬೆಸ್ಟ್ ಡ್ರೆಸ್ಸಿಂಗ್
ಭಾರತೀಯ ಚಿತ್ರರಂಗದ ಚಿರಯೌವನೆ ತಾರೆ ಶ್ರೀದೇವಿಯವರಿಗೆ ಇಂದು 50ನೇ ಹುಟ್ಟು ಹಬ್ಬದ ಸಂಭ್ರಮ. ದಕ್ಷಿಣ ಭಾರತದ ಚಿತ್ರರಂಗದ ಮುಖಾಂತರ ಸಿನಿಮಾ ಜಗತ್ತಿಗೆ ಪಾದಾರ್ಪಣೆ ಮಾಡಿದ ಶ್ರೀದೇವಿ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಾತ್ರವಲ್ಲ, ಬಾಲಿವುಡ್ ನಲ್ಲೂ ತಮ್ಮ ಅಭಿನಯ ಹಾಗೂ ಅದ್ಭುತ ಸೌಂದರ್ಯದಿಂದ ಅನೇಕ ಅಭಿಮಾನಿಗಳನ್ನು ಪಡೆದುಕೊಂಡವರು.
ಶ್ರೀದೇವಿಯನ್ನು ನೋಡಿದಾಗ ಯಾವ ಹೆಣ್ಣಿಗಾದರೂ ಬೆರಗು ಮತ್ತು ಹೊಟ್ಟೆ ಕಿಚ್ಚು ಆಗದಿದ್ದರೆ ಆಶ್ಚರ್ಯ. 50ರ ಹರೆಯದಲ್ಲಿ 18ರ ತರುಣಿಯ ಸೌಂದರ್ಯವನ್ನು ಹೊಂದಿರುವ ಶ್ರೀದೇವಿಯನ್ನು ನೋಡುವಾಗ ಅವರ ಈ ಸೌಂದರ್ಯದ ರಹಸ್ಯವೇನು? ಎಂಬ ಕುತೂಹಲ ಎಲ್ಲರನ್ನೂ ಕಾಡುವುದು.
ಶ್ರೀದೇವಿ ಅಷ್ಟೊಂದು ಗ್ಲಾಮರಸ್ ಆಗಿ ಕಾಣಲು ಪ್ಲಾಸ್ಟಿಕ್ ಸರ್ಜರಿ ಕಾರಣವೆಂದು ಹೇಳುತ್ತಾರೆ. ಆದರೆ ಎಷ್ಟೊಂದು ಜನ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಲ್ಲ? ಕೆಲ ಸೆಲೆಬ್ರಿಟಿಗಳಂತೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ, ಇದ್ದ ಚೆಂದವನ್ನೂ ಕಳೆದುಕೊಂಡಿದ್ದಾರೆ.
ಶ್ರೀದೇವಿಯಲ್ಲಿ ಇಷ್ಟವಾಗುವ ಪ್ರಮುಖ ಅಂಶವೆಂದರೆ ಅವರು ಟ್ರೆಂಡ್ ಗೆ ಬೇಗನೆ ಅಪ್ ಡೇಟ್ ಆಗುತ್ತಾರೆ. 50 ಆದರೂ ಎಲ್ಲಿಯೂ ಬೊಜ್ಜು ತುಂಬಿಕೊಳ್ಳದೆ ತಳುಕು, ಬಳಕಿನ ಮೈ ಮಾಟ ಹೊಂದಿರುವ ಶ್ರೀದೇವಿಗೆ ಶಾರ್ಟ್ಸ್ ನಿಂದ ಸೀರೆಯವರೆಗೆ ಎಲ್ಲಾ ಡ್ರೆಸ್ ಗಳು ಆಕರ್ಷಕವಾಗಿಯೇ ಕಾಣುತ್ತದೆ. ಅದರಲ್ಲೂ ಆಗಸ್ಟ್ ನ ವೋಗ್ ನಿಯತಕಾಲಿಕದಲ್ಲಿ ಶಾರ್ಟ್ಸ್ ನಲ್ಲಿ ಶ್ರೀದೇವಿಯನ್ನು ನೋಡಿದವರೆಗೆ ನಿಜವಾಗಲೂ ಇವರಿಗೆ 50 ವರ್ಷ ಆಗಿದೆಯೇ ಅಂದುಕೊಳ್ಳದೆ ಇರುವುದಿಲ್ಲ.
ಶ್ರೀದೇವಿಯ ಡ್ರೆಸ್ಸಿಂಗ್ ಸೆನ್ಸ್ ಅದ್ಭುತವಾಗಿದ್ದು, ಇಲ್ಲಿ ನಾವು ಅವರ ಬರ್ತಡೇ ಸ್ಪೆಷಲ್ ಆಗಿ ಅವರು ಮಾಡಿದ ಡ್ರೆಸ್ಸಿಂಗ್ಸ್ ನಿಂದ ದಿ ಬೆಸ್ಟ್ ಆಗಿ ಕಾಣಿಸಿದ ಕೆಲ ಫೋಟೊಗಳನ್ನು ನೀಡಿದ್ದೇವೆ ನೋಡಿ:

ಗೌನ್
KaufmanFranco ಗೌನ್ ಧರಿಸಿ 2013ರ IIFA ಶ್ರೀದೇವಿ ತನ್ನ ಮಗಳೊಂದಿಗೆ ಕಾಣಿಸಿದ್ದು ಹೀಗೆ.

ಆರ್ಬರ್ಟ್ ಫೆರ್ರಿಟ್ಟಿ
ಆರೆಂಜ್ ಬಣ್ಣದ ಆರ್ಬರ್ಟ್ ಫೆರ್ರಿಟ್ಟಿ ನಲ್ಲಿ ಶ್ರೀದೇವಿ. ಶ್ರೀದೇವಿ ಧರಿಸಿರುವ ದಿ ಬೆಸ್ಟ್ ಡ್ರೆಸ್ ಗಳಲ್ಲಿ ಇದೂ ಒಂದು.

ಸಬ್ಯಸಾಚಿ ಮುಖರ್ಜಿ
ಫೇಮಸ್ ಡಿಸೈನರ್ ಸಬ್ಯಸಾಚಿ ವಿನ್ಯಾಸ ಗೊಳಿಸಿದ ಅನಾರ್ಕಲಿ ಡ್ರೆಸ್ ನಲ್ಲಿ ಕಾಣಿಸಿದ ಶ್ರೀದೇವಿ.

ಕಾಂಜೀವರಂ
ಅಪ್ಪಟ ಭಾರತೀಯ ವೇಷ ಭೂಷಣದಲ್ಲಿ ಅತ್ಯಾಕರ್ಷಕವಾಗಿ ಕಾಣುತ್ತಿರುವ ಶ್ರೀದೇವಿ.

ಹೂವಿನ ಸೀರೆ
ಮನೀಷಾ ಮಲ್ಹೋತ್ರ ಬ್ರ್ಯಾಂಡ್ ನ ಸೀರೆ ಧರಿಸಿ ಸಿಂಪಲ್ ಅಂಡ್ ಬ್ಯೂಟಿಫುಲ್ ಆಗಿ ಕಂಡು ಬಂದರು.

ಸ್ಟೈಲ್ ಸ್ಟೀಟ್ ಮೆಂಟ್
ಪ್ಯಾಂಟ್ ಮತ್ತು ಶರ್ಟ್ ಧರಿಸಿ, ಸ್ಟೈಲಾಗಿ ಹ್ಯಾಂಡ್ ಬ್ಯಾಗ್ ಸಿಕ್ಕಿಸಿ ಟ್ರೆಂಡ್ ಗೆ ತಕ್ಕಂತೆ ಅಪ್ ಡೇಟ್ ಕಂಡು ಬರುತ್ತಿರುವ ಶ್ರೀದೇವಿ.

ಲೇಸ್
ಟ್ರಾನ್ಸ್ ಫರಂಟ್ ಲೇಸ್ಟ ಟಾಪ್ ಅದಕ್ಕೆ ಬಿಳಿ ಬಣ್ಣದ ಪ್ಯಾಂಟ್ ಧರಿಸಿ ಮಾಡರ್ನ್ ಲುಕ್ ನಲ್ಲಿ ಕಾಣಿಸಿದ ಶ್ರೀದೇವಿ.

ರೆಡ್ ಅಂಡ್ ವೈಟ್
ರೆಡ್ ಕಲರ್ ಡೆನಿಮ್ ಅದಕ್ಕೆ ಮ್ಯಾಚಿಂಗ್ ಆಗಿ ವೈಟ್ ಟಾಪ್ ಧರಿಸಿರುವ ಶ್ರೀದೇವಿಯನ್ನು ನೋಡುವಾಗ ವಯಸ್ಸನ್ನು ಮರೆಮಾಚುವ ಅದ್ಭುತ ಡ್ರೆಸ್ಸಿಂಗ್ ಇವರನ್ನು ನೋಡಿ ಕಲಿಯಬೇಕು ಎಂದು ಅನಿಸದಿರುವುದಿಲ್ಲ.

ಗೌನ್
ತೋಳಿಲ್ಲದ ಹೂವಿನ ವಿನ್ಯಾಸವಿರುವ ಗೌನ್ ನಲ್ಲಿ ಆಕರ್ಷಕವಾಗಿ ಕಾಣುತ್ತಿರುವ ಶ್ರೀದೇವಿ.

ಸೀರೆ
ಬ್ರೈಟ್ ಕಲರ್ ಮನೀಷಾ ಮಲ್ಹೋತ್ರಾ ಸೀರೆ ಧರಿಸಿ, ಅದಕ್ಕೊಪ್ಪುವ ಅಲಂಕಾರದಲ್ಲಿ ಲಕ್ಷಣವಾಗಿ ಕಾಣುತ್ತಿರುವ ಶ್ರೀದೇವಿ.

ಬಾಡಿ ಫಿಟ್ ಗೌನ್
ಬ್ಲೂ ಕಲರ್ ನ ಬಾಡಿ ಫಿಟ್ ಗೌನ್ ನಲ್ಲಿ ಮಾಡರ್ನ್ ಲುಕ್ ನಲ್ಲಿ ಮಿಂಚುತ್ತಿರುವ ಶ್ರೀದೇವಿ.

ಟ್ರಾನ್ಸ್ ಫರಂಟ್
ಬಿಳಿ ಬಣ್ಣದ ಪಾರದರ್ಶಕ ಸೀರೆಯಲ್ಲಿ ಆಧುನಿಕ ಲುಕ್ ನಲ್ಲಿ ಮುಂಚುತ್ತಿರುವ ಶ್ರೀದೇವಿ.

ವೈಟ್ ವಿಥ್ ಬ್ಲ್ಯಾಕ್ ಕಲರ್ ಸ್ಯಾರಿ
ಈ ವೈಟ್ ವಿಥ್ ಬ್ಲ್ಯಾಕ್ ಸೆಮಿ ಟ್ರಾನ್ಸ್ ಫರಂಟ್ ಸೀರೆಯಲ್ಲಂತೂ ಬರ್ತಡೇ ಗರ್ಲ್ ಮತ್ತಷ್ಟು ಆಕರ್ಷಕವಾಗಿ ಕಾಣುತ್ತಾಳೆ.

ಶ್ರೀದೇವಿ
ವೋಗ್ ನಿಯತಕಾಲಿಕದಲ್ಲಿ ಮಿನಿ ಶಾರ್ಟ್ಸ್, ಮಿಡಿಯಲ್ಲಿ ಮಿಂಚಿದ ಶ್ರೀದೇವಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.



Click it and Unblock the Notifications
