Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಶ್ರೀದೇವಿಯ ನ್ಯೂ ಸ್ಟೈಲ್ ಸ್ಟೇಟ್ ಮೆಂಟ್
49ರ ಪ್ರಾಯದಲ್ಲೂ ಹರೆಯದ ಹೆಣ್ಣಿನ ಮೈಮಾಟ ಹೊಂದಿರುವ ಶ್ರೀದೇವಿ, ಡ್ರೆಸ್ಸಿಂಗ್ ನಲ್ಲೂ ನೋಡುಗರನ್ನು ಬೆರಗುಗೊಳಿಸುತ್ತಾರೆ. ಪ್ರಾಯವಾಗುತ್ತಿದ್ದಂತೆ ಗ್ಲಾಮರ್ ಕಡಿಮೆಯಾಗುತ್ತೆ, ಗ್ಲಾಮರಸ್ ಡ್ರೆಸ್ ಹಾಕುವುದಂತೂ ಕನಸ್ಸಿನ ಮಾತು ಅನ್ನುವವರಿಗೆ ತದ್ವಿರುದ್ಧ ಈ ಶ್ರೀದೇವಿ.
ಕಟ್ಟುನಿಟ್ಟಿನ ಆಹಾರಕ್ರಮ ಮತ್ತು ವ್ಯಾಯಾಮ ಶ್ರೀದೇವಿಯವರ ಚಿರಯೌವನದ ಗುಟ್ಟು. ಅದರಲ್ಲೂ ಆಗಸ್ಟ್ ತಿಂಗಳಿನ 'ವೋಗ್' ನಿಯತಕಾಲಿಕೆಯಲ್ಲಿ ತರುಣಿಯರು ನಾಚುವಂತೆ ಮಾಡರ್ನ್ ಉಡುಗೆಯಲ್ಲಿ ರೆಟ್ರೋ ಸ್ಡೈಲ್ ನಲ್ಲಿ ಕಾಣಿಸಿದ ಶ್ರೀದೇವಿ, ನೋಡುಗರನ್ನು ಮಂತ್ರಮುಗ್ಧರಾಗಿಸಿ, ತಮ್ಮ ಸ್ಟೈಲ್ ಸ್ಟೇಟ್ ಮೆಂಟ್ ನಿಂದ ಮತ್ತೊಮ್ಮೆ ಮಿಂಚಿದರು.
ಆ ನಿಯತಕಾಲಿಕದಲ್ಲಿ 'Sridevi's Stunning Return' ಎಂಬ ವಾಕ್ಯದೊಂದಿಗೆ ಅವರ ಫೋಟೊಗಳನ್ನು ಪ್ರಕಟಿಸಲಾಗಿದೆ.
ಅವರ ರೆಟ್ರೂ ಸ್ಟೈಲ್ ನತ್ತ ಕಣ್ಣಾಡಿಸೋಣವೇ:

'Sridevi's Stunning Return
ಆ ನಿಯತಕಾಲಿಕದಲ್ಲಿ 'Sridevi's Stunning Return' ಎಂಬ ವಾಕ್ಯದೊಂದಿಗೆ ಅವರ ಫೋಟೊಗಳನ್ನು ಪ್ರಕಟಿಸಲಾಗಿದೆ.
ಅವರ ರೆಟ್ರೂ ಸ್ಟೈಲ್ ನತ್ತ ಕಣ್ಣಾಡಿಸೋಣವೇ:

ಶಾರ್ಟ್ಸ್
ಚೆಕ್ಸ್ ಇರುವ ಚಿಕ್ಕ ಟ್ರೌಸರ್ ಧರಿಸಿ, ಬ್ಲೂ ಕಲರ್ ಟೀ ಶರ್ಟ್, ಟ್ರೌಸರ್ ಬಣ್ಣದ್ದೇ ಬ್ಲೇಝರ್ ಧರಿಸಿ, ಕೂದಲನ್ನು ಹಿಂದಿನ ಕಾಲದಲ್ಲಿ ಸಿನಿಮಾದಲ್ಲಿ ಕಾಣುವಂತೆ ರೆಟ್ರೋ ಸ್ಟೈಲ್ ನಲ್ಲಿ ಕಟ್ಟಿ, ಕೆಂಪು ಬಣ್ಣದ ಬ್ಯಾಗ್ ಹಿಡಿದು ಪೋಸ್ ನೀಡಿದ ಶ್ರೀದೇವಿ ಹೊಸ ಸ್ಟೈಲ್ ಸ್ಟೇಟ್ ಮೆಂಟ್ ನಿಂದ ಮತ್ತಷ್ಟು ಗಮನ ಸೆಳೆದರು.

Funky ಕನ್ನಡಕ
ಆಗಸ್ಟ್ ನ ವೋಗ್ ನಿಯತಕಾಲಿಕದಲ್ಲಿ ಶ್ರೀದೇವಿಯವರಿಗೆ ಈ ಫಂಕಿ ಕನ್ನಡಕ ಮತ್ತಷ್ಟು ಚಿಕ್ ಲುಕ್ ನೀಡಿದೆ.

ಮೈಮಾಟ
ಸಾಮಾನ್ಯವಾಗಿ ಮಧ್ಯವಯಸ್ಸು ದಾಟಿದಂತೆ ತ್ವಚೆ ಸಡಿಲವಾಗುತ್ತದೆ, ದಪ್ಪಗಾಗುತ್ತಾರೆ ಎನ್ನುತ್ತಾರೆ, ಆದರೆ ಪ್ರಯತ್ನಿಸಿದರೆ ಯೌವನದ ಚೆಲುವು ಉಳಿಸಬಹುದು ಅನ್ನುವುದಕ್ಕೆ ಉದಾಹರಣೆ ಶ್ರೀದೇವಿ.

ರೆಡ್ ಹಾಟ್ ಡ್ರೆಸ್
ಈ ವೈನ್ ರೆಡ್ ಬಣ್ಣದ ಲೇಟಸ್ಟ್ ಡ್ರೆಸ್ ನಲ್ಲಿ ಹಾಟ್-ಹಾಟ್ ಆಗಿ ಕಾಣುತ್ತಿರುವ ಶ್ರೀದೇವಿ.

Moschino ಡ್ರೆಸ್
ಪೀಚ್ ಬಣ್ಣದ Moschino ಡ್ರೆಸ್ ನಲ್ಲೂ ಕೂಡ ಕೆಂಪು ಬಣ್ಣದ ಡ್ರೆಸ್ ನಲ್ಲಿ ಕಂಡಷ್ಟೇ ಹಾಟ್ ಆಗಿ ಕಂಡು ಬಂದ ಶ್ರೀದೇವಿ. ಈ ಎಲ್ಲಾ ಡ್ರೆಸ್ ಗಳು ರೆಟ್ರೋ ಸ್ಟೈಲ್ ಅನ್ನೇ ನೆನಪಿಗೆ ತರುತ್ತದೆ.

ಗುಸ್ಸಿ ಡ್ರೆಸ್ಸಿನಲ್ಲಿ ಶ್ರೀದೇವಿ
ಆಲೀವ್ ಗ್ರೀನ್ ಕಲರ್ ನ ಡ್ರೆಸ್ ಧರಿಸಿ ವೋಗ್ ಗೆ ಬೋಲ್ಡ್ ಪೋಸ್ ಕೊಟ್ಟ ಶ್ರೀದೇವಿ.

ರೆಟ್ರೋ ಸ್ಟೈಲ್
ಗೆರೆ ಇರುವ ಚಿಕ್ಕ ಶಾರ್ಟ್ ಧರಿಸಿ, ಔಐಟ್ ಟಾಪ್ ಧರಿಸಿ, ಕೂದಲನ್ನು ರೆಟ್ರೋ ಸ್ಟೈಲ್ ನಲ್ಲಿ ಬಾಚಿ ಪೋಸ್ ಕೊಟ್ಟ ಶ್ರೀದೇವಿ.



Click it and Unblock the Notifications