Latest Updates
-
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ!
ಮೊದಲ ಈ ಅನುಭವಗಳು ಮರೆಯಲು ಸಾಧ್ಯವೇ?
ಜೀವನ ಎಂಬ ಜಟಕಾಬಂಡಿಯಲ್ಲಿ ಸಾಗುವಾಗ ಏರಿಳಿತ ಸಹಜ. ಕೆಲವೊಮ್ಮೆ ಜೀವನದ ಹಾದಿಯಲ್ಲಿ ಸಂಕಷ್ಟಗಳು ಎದುರಾದಾಗ ಅದನ್ನು ಸಾಗಿ ಮುನ್ನಡೆಯುವಾಗ ಸಿಗುವ ಸಂತೋಷವೇ ಬೇರೆ.
ಬಾಲ್ಯ, ಯೌವನ, ವೈವಾಹಿಕ ಬದುಕು ಮತ್ತು ಕೊನೆಗೆ ವೃದ್ದಾಪ್ಯ ಹೀಗೆ ಜೀವನದ ಪ್ರತಿಯೊಂದು ಘಟದಲ್ಲಿ ನಾವು ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಿರುತ್ತೇವೆ.
ಸಂತಸ ಅಥವಾ ಸಂಕಷ್ಟದ ಕೆಲವು ಘಟನೆಗಳು ನಮಗೆ ಜೀವನದಲ್ಲಿ ಪುನರುಜ್ಜೀವನ ನೀಡುತ್ತದೆ. ಜೀವನದ ಅವಿಸ್ಮರಣೀಯ ಹಾಗೂ ಅಮೂಲ್ಯ ಕ್ಷಣಗಳನ್ನು ನೆನಪಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

1. ಮೊದಲ ಸಲ ಸೈಕಲ್ ತುಳಿದಿರುವುದು
ಕಲಿಯುವಾಗ ಎದ್ದುಬಿದ್ದು ಕೊನೆಗೊಂದು ದಿನ ನೀವಾಗಿ ಸೈಕಲನ್ನು ಮೇಲೇರಿ ಹೋಗುವಾಗ ಮುಖಕ್ಕೆ ಮುತ್ತಿಕ್ಕಲು ಬರುತ್ತಿರುವ ತಣ್ಣನೆ ಗಾಳಿಯಲ್ಲಿ ಸೈಕಲ್ ತುಳಿಯುವಾಗ ಸಿಗುವಂತಹ ಆನಂದ ಬಣ್ಣಿಸಲು ಅಸಾಧ್ಯ.

2. ಪದವಿ
ಪದವಿ ಪಡೆದ ದಿನ ಪ್ರತಿಯೊಬ್ಬನ ಜೀವನದಲ್ಲಿ ಅತ್ಯಂತ ಅವಿಸ್ಮರಣೀಯ ದಿನವಾಗಿರುತ್ತದೆ. ಈ ದಿನ ಹೊಸ ಬದುಕು, ಹೊಸ ವೃತ್ತಿ ಮತ್ತು ಹಲವಾರು ಹೊಸತುಗಳಿಗೆ ಕಾರಣವಾಗುತ್ತದೆ.

3. ಮೊದಲ ಪ್ರೇಮ
ಮೊದಲ ಪ್ರೇಮವೆನ್ನುವುದು ಯಾವುದೇ ವ್ಯಕ್ತಿಯ ಜೀವನದಲ್ಲಿ ಬೆಲೆಕಟ್ಟಲಾಗದ ವಿಷಯ. ಕಪಟ, ಷರತ್ತುಗಳಿಲ್ಲದೆ ನೀವು ನೀಡಿದ ಅಥವಾ ಪಡೆದ ಪ್ರೀತಿಯನ್ನು ಮರೆಯಲು ಅಸಾಧ್ಯ.

4. ಪ್ರಥಮ ಚುಂಬನ
ಪ್ರಥಮ ಚುಂಬನದ ಅನುಭವ ಸಾಯುವ ತನಕವೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುತ್ತದೆ. ಆತ್ಮೀಯ ಜೀವದೊಂದಿಗಿನ ಪ್ರಥಮ ಚುಂಬನದ ಥ್ರಿಲ್ ಮತ್ತು ಉತ್ಸಾಹಕ್ಕೆ ಬೆಲೆಕಟ್ಟಲಾಗದು.

5. ಇಷ್ಟಪಟ್ಟ ವ್ಯಕ್ತಿ ಜೊತೆ ಟ್ರಿಪ್ ಹೋದ ನೆನಪು
ಇದು ಯಾವುದೇ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮಹತ್ವದ ದಿನ. ಯಾಕೆಂದರೆ ನೀವು ಪ್ರೀತಿಸುವ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಜತೆ ಕಳೆದ ಆ ಕ್ಷಣ ಮರೆಯಲು ಅಸಾಧ್ಯ.

6. ಮದುವೆ ದಿನ
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುತ್ತಾರೆ. ಇದು ನಿಜ. ಮದುವೆ ತಯಾರಿ, ಶಾಪಿಂಗ್, ಪಾರ್ಟಿ ಮತ್ತು ಸಂಬಂಧಿಕರ ಆಗಮನವೆಲ್ಲಾ ಮದುವೆ ದಿನವನ್ನು ಪ್ರತಿಯೊಬ್ಬರ ಜೀವನದಲ್ಲಿ ವಿಶೇಷ ಹಾಗೂ ಸ್ಮರಣೀಯವಾಗಿಸುತ್ತದೆ.

7. ಮೊದಲ ಸಂಬಳ
ನಿಮ್ಮ ಸಾಮರ್ಥ್ಯ ಹಾಗೂ ಪ್ರತಿಭೆಯ ಬಗ್ಗೆ ತಿಳಿಯುವುದು ಸಂಪಾದಿಸಲು ಆರಂಭಿಸಿದಾಗ. ಸಂಬಳ ಎಷ್ಟೇ ಆಗಿರಲಿ, ಮೊದಲ ಸಲ ಅದು ಕೈಗೆ ಸಿಗುವಾಗ ಆಗುವ ಆನಂದ ಹೇಳತೀರದು. ಈ ದಿನ ವ್ಯಕ್ತಿಯೊಬ್ಬನ ನೆನಪಿನ ಲೈಬ್ರರಿಯಲ್ಲಿ ಯಾವತ್ತೂ ಉಳಿಯುತ್ತದೆ.

8. ನಿಮ್ಮ ಮಗುವಿನ ಮೊದಲ ಸ್ಪರ್ಶ
ನಿಮ್ಮ ಮಗುವನ್ನು ಮೊದಲ ಸಲ ಹಿಡಿಯುವಾಗಿನ ಅನುಭವ ವರ್ಣನಾತೀತ. ಖುಷಿ ಹಾಗೂ ಭಯ ಎರಡೂ ಒಂದೇ ಸಲ ಆವರಿಸುತ್ತದೆ. ಆ ಸಣ್ಣ ಜೀವ ಮತ್ತು ಅದರ ಭವಿಷ್ಯ ನಿಮ್ಮನ್ನು ಅವಲಂಭಿಸಿರುತ್ತದೆ. ಅದೊಂದು ಅದ್ಭುತ ಕ್ಷಣ.

9. ಮಗುವಿನ ಮೊದಲ ತೊದಲು ನುಡಿ...
ಮೊದಲ ಸಲ ನಿಮ್ಮ ಮಗು ಅಮ್ಮ ಅಥವಾ ಅಪ್ಪನೆಂದು ಕರೆಯುವುದು, ಮೊದಲ ಸಲ ನಿಮ್ಮನ್ನು ನೋಡಿ ನಕ್ಕಿರುವುದು, ಮಗು ಅಂಬೆಗಾಲಿಟ್ಟಾಗ, ನಿಮ್ಮ ಮಗುವಿನ ಮೊದಲ ಹುಟ್ಟುಹಬ್ಬ ಹೀಗೆ ಹಲವು ಪ್ರಥಮಗಳು ಹೆತ್ತವರ ಜೀವನದ ಅತ್ಯಮೂಲ್ಯ ಕ್ಷಣಗಳು.



Click it and Unblock the Notifications