Latest Updates
-
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು
ಪ್ರತಿ ಭಾರತೀಯ ಪುರುಷ ಬಯಸುವ 7 ವಿಷಯಗಳು!
ಪ್ರತಿಯೊಬ್ಬರಿಗೂ ತನ್ನದೇ ಆದ ಬಯಕೆಗಳಿರುತ್ತದೆ. ನಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನವನ್ನು ನಡೆಸುತ್ತಲೇ ಇರುತ್ತೇವೆ. ತುಂಬಾ ಒಳ್ಳೆಯ ಕೆಲಸಕ್ಕೆ ಸೇರಬೇಕೆಂದು ತುಂಬಾ ಓದುತ್ತೇವೆ. ಮನೆ ಕಟ್ಟಬೇಕು, ಗಾಡಿ ಕೊಳ್ಳಬೇಕೆಂದು ನಮ್ಮ ಹಣವನ್ನು ಮಿತವಾಗಿ ಖರ್ಚು ಮಾಡುತ್ತೇವೆ. ಎಲ್ಲರ ಬಯಕೆಗಳು ಒಂದೇ ರೀತಿಯಲ್ಲಿ ಇರುವುದಿಲ್ಲ. ಆದರೆ ಭಾರತೀಯರ ಪುರುಷರಲ್ಲಿ ಕೆಲವೊಂದು ಕಾಮನ್ ಬಯಕೆಗಳಿರುತ್ತವೆ.
ಭಾರತೀಯ ಪುರುಷರು ಕಳೆದ 20 ವರ್ಷಗಳಲ್ಲಿ ಸಾಕಷ್ಟು ದೂರ ಸಾಗಿ ಬಂದಿದ್ದಾರೆ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲೂ ಮುಂದುವರೆದಿದ್ದಾರೆ. ಭಾರತೀಯ ಪುರುಷರ ಅಂತಸ್ಸತ್ವದ ಬಗ್ಗೆ ನೀವು ಯೋಚಿಸುತ್ತಿದ್ದಲ್ಲಿ, ಇದೋ ನಾವಿಲ್ಲಿ ನಿಮಗಾಗಿ ಒಂದು ಪಟ್ಟಿ ತಯಾರು ಮಾಡಿದ್ದೇವೆ. ಇಲ್ಲಿವೆ ಪ್ರತಿ ಭಾರತೀಯ ಪುರುಷ ಬಯಸುವ 7 ವಿಷಯಗಳು:

1. ಹುದ್ದೆ
ಭಾರತೀಯ ಪುರುಷರು ಬಹಳ ಮಹತ್ವಾಕಾಂಕ್ಷಿಗಳಾಗಿದ್ದಾರೆ.ಆವರು ಮಾಮೂಲಿನ ತೆರೆಮರೆಯ ಕೆಲಸಗಳಲ್ಲಿ ಸಂತೃಪ್ತರಾಗುವ ಕಾಲ ಮುಗಿದು ಹೋಗಿದೆ.ಆವರು ಭಾರಿ ಕಾರ್ಯಕ್ಷಮತೆ ಹೊಂದಿದ್ದು, ತಮ್ಮ ಮೇಲಿನ ಹುದ್ದೆಯನ್ನು ಪಡೆವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಹುದ್ದೆಯ ಪದನಾಮ ಅವರಿಗೆ ಬಹಳ ಮುಖ್ಯವಾಗಿದೆ. ಇದು ಅವರ ಸಾಧನೆಯ ಅಳತೆಗೋಲಾಗಿದ್ದು, ಅವರಿಗೆ ಗೌರವ ತರುವ ವಿಷಯವಾಗಿದೆ.

2. ಹಣ
ಪರಿಶ್ರಮಕ್ಕೆ ತಕ್ಕಂತೆ ಹೆಚ್ಚು ಹಣ ಬಂದೇ ಬರುತ್ತದೆ.ಭಾರತೀಯ ಪುರುಷರು ಕೇವಲ ಖರ್ಚು ಮಾಡುವುದಷ್ಟೆ ಅಲ್ಲ, ಭಾರಿ ದುಂದು ವೆಚ್ಚ ಮಾಡುವವರು.ಹೋಟೆಲ್ ನ ಬಿಲ್ ಅನ್ನು ಕೊಡಲು ನಾ ಮುಂದು ತಾ ಮುಂದು ಎಂದು ಜಗಳವಾಡುತ್ತಾರೆ.ಉಡುಗೊರೆಗಳು ಮತ್ತು ದುಬಾರಿ ಬಟ್ಟೆಗಳನ್ನು ಖರೀದಿಸುವುದು ಭಾರತೀಯ ಪುರುಷರ ದಿನನಿತ್ಯದ ವಿಷಯವಾಗಿದೆ.

3. ಪ್ರಖ್ಯಾತಿ
ನನಗೆ ಮಾನ್ಯತೆ ಸಿಗಲಿ ಎಂಬ ಆಶಯ ಪ್ರತಿಯೊಬ್ಬರ ಮನದಾಳದಲ್ಲಿಯೂ ಇದ್ದೇ ಇರುತ್ತದೆ.ತಾನೋರ್ವ ಸಿನಿಮಾ ತಾರೆ ಆಗಿಲ್ಲದಿರಬಹುದು...ಆದರೂ, ಕಛೇರಿಯಲ್ಲಾಗಲಿ, ಸಾಮಾಜಿಕ ಕೂಟಗಳಲ್ಲಾಗಲಿ,ತಾನು ಬಂದಾಗ ಎಲ್ಲರೂ ತನ್ನತ್ತ ತಿರುಗಿ ನೋಡಬೇಕೆಂಬ ಬಯಕೆ ಪ್ರತಿ ಭಾರತೀಯ ಪುರುಷನದು.

4. ಮಹಿಳೆಯರು
ಮಹಿಳೆ ಮತ್ತು ಪತ್ನಿ ಎಂಬುದು ಭಾರತೀಯ ಪುರುಷರಿಗೆ ಎರಡು ಪ್ರತ್ಯೇಕ ವಿಷಯಗಳಾಗಲು ಕಾರಣವಿದೆ.ಈ ಪುರುಷರು ಮದುವೆಯಾಗಿ ಜೀವನದಲ್ಲಿ ನೆಲೆಯೂರುವ ಆತುರದಲ್ಲಿಲ್ಲ.ಅವರು, ಕೆಲ ಮಹಿಳೆಯರ ಸಂಬಂಧಗಳನ್ನು ಹೊಂದಿ, ಬದುಕನ್ನು ಆಸ್ವಾದಿಸಲು ಆರಂಭಿಸಿದ್ದಾರೆ.

5. ಪತ್ನಿ
ಭಾರತೀಯ ಪುರುಷರು ಭಾರತೀಯ ಪತ್ನಿ ಬೇಕೆನ್ನುತ್ತಾರೆ - ಸುಂದರಿ, ಬುದ್ಧಿವಂತೆ ಮತ್ತು ಕುಟುಂಬವನ್ನು ಸಲಹುವವಳು.

6.ಮಕ್ಕಳು
ಮಕ್ಕಳು - ಭಾರತೀಯ ಪುರುಷರ ಜೀವನದ ಅವಿಭಾಜ್ಯ ಅಂಗ.ತನ್ನ ಮಕ್ಕಳನ್ನು ತನ್ನ ಪ್ರೀತಿಯಿಂದ ಹಾಳುಗೆಡವಿ, ಅವರ ಬೆಳವಣಿಗೆಯನ್ನು ತನ್ನ ಕಣ್ಣುಗಳಿಂದ ನೋಡುತ್ತಾ,ಅವರ ಪ್ರತೀ ಅವಶ್ಯಕತೆಗಳನ್ನು ಪೊರೈಸದಿದ್ದರೆ,ಭಾರತೀಯ ಪುರುಷನ ಸಾಧನೆ ಮತ್ತು ಯಶಸ್ಸಿಗೇನು ಬೆಲೆ?

7. ಕಾರು
ಜೀವನದಲ್ಲಿ ಚಕ್ರಗಳು ಬಹಳ ಮುಖ್ಯ! ಚಿಕ್ಕದಾಗಲಿ, ಭಾರಿ ವಾಹನವಾಗಲಿ,ಭಾರತೀಯ ಪುರುಷರಿಗೆ ಕಾರ್ ಬೇಕೇ ಬೇಕು.ಅದು ಸಮಾಜದಲ್ಲಿ ಭಾರತೀಯ ಪುರುಷರ ಪ್ರತಿಷ್ಟೆ ಮತ್ತು ಯಶಸ್ಸಿನ ಪ್ರತೀಕ.



Click it and Unblock the Notifications