Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವ್ಯಾಲೆಂಟೈನ್ಸ್ ಡೇಗೆ ಮಾಡಬಾರದ 6 ಕಾರ್ಯಗಳು
ಪ್ರೇಮಿಗಳು ಕಾತುರದಿಂದ ಎದುರು ನೋಡುತ್ತಿದ್ದ ಆ ದಿನ ಬಂದೇ ಬಿಡ್ತು. ಕೆಲವರು ವ್ಯಾಲಂಟೈನ್ಸ್ ಡೇಯನ್ನು ವಿಶೇಷ ದಿನವಾಗಿ ಪರಿಗಣಿಸಿದರೆ, ಮತ್ತೆ ಕೆಲವರಿಗೆ ಈ ದಿನ ಇತರ ದಿನಗಳಂತೆ ಸಾಮಾನ್ಯವಾದ ದಿನ. ಈ ದಿನ ಬಗ್ಗೆ ನಿಮ್ಮ ಅಭಿಪ್ರಾಯ ಏನೇ ಆಗಿರಲಿ ಈ ದಿನ ಕೇಳಿ ಬರುವ ಪ್ರೀತಿಯ ಝೇಂಕಾರವನ್ನು ಮಾತ್ರ ಅಲ್ಲಗಳೆಯಲು ಸಾಧ್ಯವಿಲ್ಲ.
ಈ ದಿನ ಆಚರಿಸುವವರು ತಮ್ಮ ಪ್ರೇಮಿಯ ಜೊತೆ ಪಾರ್ಕ್, ಬೀಚ್, ಸಿನಿಮಾ ಅಂತ ಸುತ್ತಾಡಬಹುದು. ಈ ದಿನವನ್ನು ಹೇಗೆ ಕಳೆಯಬೇಕೆಂದು ಬಯಸುವುದು ನಿಮ್ಮ ಅಭಿಪ್ರಾಯಕ್ಕೆ ಬಿಟ್ಟದ್ದು. ಇಲ್ಲಿ ನಾವು ವ್ಯಾಲೆಂಟೈನ್ಸ್ ಡೇಯಲ್ಲಿ ಏನನ್ನು ಮಾಡಬಾರದು ಎಂಬ ಸಲಹೆಯನ್ನು ನೀಡಿದ್ದೇವೆ ನೋಡಿ:

ಎರಡು ಡೇಟಿಂಗ್: ಡೇಟಿಂಗ್ ಈಗೀನ ಕಾಲದಲ್ಲಿ ತುಂಬಾ ಸಾಮಾನ್ಯ. ಹೆಚ್ಚಿನವರು ಈ ದಿನ ಯಾರ ಜೊತೆಯಾದರೂ ಡೇಟಿಂಗ್ ಮಾಡಬಯಸುವುದಾದರೆ ಒಬ್ಬರ ಜೊತೆ ಮಾತ್ರ ಮಾಡಬೇಕು. ಕೆಲವರು ಇಬ್ಬರ ಜೊತೆ ಡೇಟಿಂಗ್ ಮಾಡಿ ಅವರಲ್ಲಿ ಯಾರು ಓಕೆ ಅನಿಸುತ್ತಾರೋ ಅವರ ಜೊತೆ ಮಾತ್ರ ಮುಂದೆ ಡೇಟಿಂಗ್ ಮಾಡುವ ಅಂದುಕೊಂಡಿರುತ್ತಾರೆ. ಆ ರೀತಿ ಮಾಡುವುದು ತಪ್ಪು.
ಮಾಜಿಗೆ ಕರೆ ಮಾಡುವುದು: ಪ್ರೇಮಿಗಳ ದಿನ ಮಾಜಿ ಪ್ರೇಮಿಯ ಬಗ್ಗೆ ನೆನಪು ಬರುವುದು ಸಹಜ. ಹಾಗಂತ ಅವರಿಗೆ ಕಾಲ್ ಮಾಡಬಾರದು. ಪಾಸ್ಟ್ ಈಸ್ ಪಾಸ್ಟ್. ಈಗ ನಿಮಗೆ ಲೈಫ್ ಪಾರ್ಟನರ್ ಇದ್ದರೆ ಅವರೊಂದಿಗೆ ಆಚರಿಸಿ, ಇಲ್ಲದಿದ್ದರೆ ಈ ದಿನವನ್ನು ಹೇಗೆ ಕಳೆಯಬೇಕೆಂದು ಬಯಸುತ್ತಾರೋ ಹಾಗೇ ಮಾಡಿ. ಮಾಜಿಗೆ ಕರೆ ಮಾಡಬೇಡಿ.
ಪ್ರೇಮಿಗಳಿಗೆ ಡಿಸ್ಟರ್ಬ್ ಮಾಡಬೇಡಿ: ನಿಮ್ಮ ಫ್ರೆಂಡ್ ಗೆ ಲವ್ ಇದ್ದರೆ ಅವರಿಗೆ ಈ ದಿನ ಪದೇ ಪದೇ ಕಾಲ್ ಮಾಡುವುದು ಅಥವಾ ಅವರನ್ನು ಸಿನಿಮಾಕ್ಕೆ ಕರೆಯುವುದು ಮಾಡಬಾರದು.
ಒಂದೇ ಬಣ್ಣದ ಬಟ್ಟೆ ಧರಿಸುವುದು: ನೀವು ಮತ್ತು ನಿಮ್ಮ ಲವರ್ ಒಂದೇ ಬಣ್ಣದ ಬಟ್ಟೆ ಧರಿಸುವುದು ರೊಮ್ಯಾಂಟಿಕ್ ಐಡಿಯಾ ಏನೋ ನಿಜ. ಆದರೆ ನೀವಿಬ್ಬರು ಒಂದೇ ಬಣ್ಣದ ಡ್ರೆಸ್ ಹಾಕಿದರೆ ನೋಡುಗರ ಕಣ್ಣಿಗೆ ಜೋಕರ್ ಅಂತೆ ಕಾಣುವಿರಿ.
ಅವರನ್ನು ಅಂಟಿಕೊಂಡು ಇರುವುದು: ಪಬ್ಲಿಕ್ ಸ್ಥಳಗಳಲ್ಲಿ ನಿಮ್ಮ ಲವರ್ ಅನ್ನು ತಾಗಿಕೊಂಡು ನಡೆಯುವುದು, ಅಪ್ಪಿಕೊಂಡು ನಿಲ್ಲುವುದು, ಕಿಸ್ ಮಾಡುವುದು ಈ ರೀತಿಯೆಲ್ಲಾ ಮಾಡಬಾರದು. ನಿಮ್ಮ ಪ್ರೀತಿ ಇತರರಿಗೆ ಮುಜುಗರ ತರಬಾರದಲ್ಲವೇ?



Click it and Unblock the Notifications
