Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಲವ್ ಇಲ್ಲದವರಾ ನೀವು? ಚಿಂತೆ ಬಿಡಿ...
ವ್ಯಾಲೆಂಟೈನ್ಸ್ ಡೇ... ಪ್ರೇಮಿಗಳಿಗೆ ಸಂಭ್ರಮದ ದಿನ. ತನ್ನ ಪ್ರೇಮಿಗೆ ಗಿಫ್ಟ್ ಕೊಡುವುದು, ಔಟಿಂಗ್ ಹೋಗುವುದು ಹೀಗೆ ಸಂಭ್ರಮದಲ್ಲಿರುವುದನ್ನು ನೋಡಿದಾಗ, ಒಂಟಿಯಾಗುವವರೆಗೆ ಬೇರೆ ಯಾವ ದಿನ ಅನಿಸುತ್ತದೆಯೋ ಇಲ್ಲವೋ, ಈ ದಿನವಂತೂ ನನಗೊಬ್ಬ/ಳು ಪ್ರೇಮಿ ಇರಬೇಕೆಂದು ಅನಿಸುವುದು ಸಹಜ.
ಅದರಲ್ಲೂ ಮುರಿದು ಹೋದ ಸಂಬಂಧದ ಕಹಿ ಅನುಭವವಿರುವವರೆಗೆ ಈ ದಿನ ಬಂದರೆ ತುಂಬಾ ವೇದನೆ ಉಂಟಾಗುತ್ತದೆ. ಪ್ರಣಯ ಜೋಡಿಗಳನ್ನು ನೋಡುವಾಗ ಹೊಟ್ಟೆ ಕಿಚ್ಚಾಗುವುದು ಸಹಜ . ಇನ್ನು ಟಿವಿ, ಎಫ್ ಎಂ ಈ ರೀತಿಯ ಮನರಂಜನೆ ಕಾರ್ಯಗಳಿಂದ ಮನಸ್ಸನ್ನು ಸಮಾಧಾನ ಮಾಡಿಕೊಳ್ಳುವ ಎಂದರೆ ಅಲ್ಲಿಯೂ ಬರೀ ವ್ಯಾಲೆಂಟೈನ್ಸ್ ಸುದ್ದಿಗಳೇ ಇರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.
ನಿಮಗೊಬ್ಬರು ಜೊತೆಗಾರ/ಜೊತೆಗಾರ್ತಿ ಇಲ್ಲ ಎಂಬ ಚಿಂತೆ ಮಾಡಿ, ಈ ದಿನವನ್ನು ಸಂತೋಷದಿಂದ ಕಳೆಯಬೇಕೆ? ನನ್ನ ಪ್ರೀತಿಸುವ ವ್ಯಕ್ತಿಯಿಲ್ಲವಲ್ಲಾ ಎಂಬ ಕೊರಗನ್ನು ನಿಮ್ಮ ಮನಸ್ಸಿನಿಂದ ಹೋಗಲಾಡಿಸಬೇಕೆ? ಹಾಗಾದರೆ ಈ ರೀತಿ ಮಾಡಿ:

ನಿಮಗೋಸ್ಕರ ಶಾಪಿಂಗ್
ನೀವು ನಿಮಗೋಸ್ಕರ ಶಾಪಿಂಗ್ ಮಾಡಿ. ನಿಮಗೆ ಯಾರಿಗಾದರೂ ಏನಾದರೂ ಕೊಳ್ಳಬೇಕೆಂದು ಅನಿಸಿದರೆ ಅವರಿಗೆ ಗಿಫ್ಟ್ ಕೊಂಡುಕೊಳ್ಳಿ. ನಾವು ಹೊಸ ವಸ್ತುಗಳನ್ನು ಕೊಂಡು ಕೊಂಡಾಗ ಮನಸ್ಸಿಗೆ ಖುಷಿಯಾಗುತ್ತದೆ.

2 ಊಟಕ್ಕೆ ಆರ್ಡರ್ ಕೊಟ್ಟಿ ನೀವೇ ತಿನ್ನಿ
ನಿಮ್ಮ ಇಷ್ಟದ 2 ಊಟಕ್ಕೆ ಆರ್ಡರ್ ಕೊಟ್ಟು ನೀವೇ ತಿನ್ನಿ. ಇದು ಸ್ವಲ್ಪ ಫನ್ ಅನಿಸಿದರೂ ಈ ರೀತಿ ಮಾಡಿದರೆ ನಿಮಗೆ ಖಂಡಿತ ಖುಷಿ ಸಿಗುವುದು.

ಒಳ್ಳೆಯ ಬುಕ್ ಓದಿ
ನೀವು ಬುಕ್ ಪ್ರೇಮಿಯಾದರೆ ಒಂಟಿ ಎಂಬ ಭಾವನೆ ಕಾಡುವುದೇ ಇಲ್ಲ.

ಫ್ರೆಂಡ್ಸ್ ಜೊತೆ ಔಟಿಂಗ್
ನಿಮ್ಮಂತೆ ಒಂಟಿಯಾಗಿರುವ ಫ್ರೆಂಡ್ಸ್ ಇದ್ದರೆ ನೀವೆಲ್ಲಾ ಸೇರಿ, ಪಾರ್ಟಿಗ್ ಹೋಗುವುದು, ಸಿನಿಮಾಕ್ಕೆ ಹೋಗುವು ದು ಮಾಡಿದರೆ ಖುಷಿಯಾಗುವುದು. ಒಂದು ಗುಟ್ಟು ಹೇಳುತ್ತೇನೆ ಕೇಳಿ. ಪ್ರೇಮಿಯನ್ನು ಕರೆದುಕೊಂಡು ಹೋದರೆ ಸಾಕಷ್ಟು restriction, ಅಲ್ಲದೆ ಏನೋ ವಿಷಯಕ್ಕೆ ಮುನಿಸು ಬಂದರೆ ವ್ಯಾಲೆಂಟೈನ್ಸ್ ಡೇ ಸಡಗರವೆಲ್ಲಾ ಟುಸ್. ಆದರೆ ನಿಮಗೆ ಆ ನಿರ್ಬಂಧನೆಗಳಿರುವುದಿಲ್ಲ, ಎಂಜಾಯ್ ಮಾಡಿ.

ಸ್ಪಾಗಳಿಗೆ ಭೇಟಿ
ನಮ್ಮನ್ನು ಇನ್ನೊಬ್ಬರು ಪ್ರೀತಿಸುತ್ತಾರೋ ಇಲ್ಲವೋ ನಾವು ನಮ್ಮನ್ನು ಪ್ರೀತಿಸಬೇಕು. ನಿಮ್ಮ ಫ್ರೆಂಡ್ಸ್ ಅವರ ಬಾಯ್ ಫ್ರೆಂಡ್ ಜೊತೆ ಹೊರಗೆ ಹೋಗುತ್ತಿದ್ದಾರಾ? ಹೋಗಲಿ ಬಿಡಿ. ನೀವು ಸ್ಪಾ ಅಥವಾ ಬ್ಯೂಟಿ ಪಾರ್ಲರ್ ಗೆ ಭೇಟಿ ನೀಡಿ. ಅವರು ಅವರ ಬಾಯ್ ಫ್ರೆಂಡ್ ಗಾಗಿ ಅಲಂಕರಿಸಿಕೊಂಡು ಹೋಗಿದ್ದರೆ ನೀವು ನಿಮಗೋಸ್ಕರ ನಿಮ್ಮ ಸೌಂದರ್ಯದ ಆರೈಕೆ ಮಾಡಿ. ಸ್ಪಾಕ್ಕೆ ಹೋದರೆ ಮನಸ್ಸು ಕೂಡ ನಿರಾಳವಾಗುತ್ತದೆ.

ಟ್ರಿಪ್
ನಿಮ್ಮಂತೆ ಸಿಂಗಲ್ ಇರುವ ಫ್ರೆಂಡ್ಸ್ ಗಳ ಜೊತೆ ಲಾಂಗ್ ಟ್ರಿಪ್ ಹೋಗಿ. ಆದರೆ ನಿಮ್ಮ ಫ್ರೆಂಡ್ ಗೆ ಲವ್ ಇದ್ದರೆ ಅವರನ್ನು ಜೊತೆಗೆ ಕರೆದುಕೊಂಡು ಹೋಗಬೇಡಿ .

ಆಫೀಸ್ ನಿಂದ ಲೇಟ್ ಹೋಗಿ
ಈ ದಿನ ಆಫೀಸ್ ನಲ್ಲಿ ಜಾಸ್ತಿ ಹೊತ್ತು ಕೆಲಸ ಮಾಡಿ. ಈ ದಿನದ ಬಗ್ಗೆ ಯೋಚಿಸಲು ಸಾಧ್ಯವಾಗದಷ್ಟು ನಿಮ್ಮನ್ನು ನೀವು ಬ್ಯೂಸಿ ಮಾಡಿಕೊಳ್ಳಿ.

ಮನೆಯವರನ್ನು ಭೇಟಿ ಮಾಡಿ
ಒಬ್ಬ ಹುಡುಗ-ಹುಡುಗಿಯ ನಡುವೆ ಪ್ರೀತಿ ಇದ್ದರೆ ಮಾತ್ರ ವ್ಯಾಲೆಂಟೈನ್ಸ್ ಟೇ ಆಚರಿಸಬೇಕೆಂದಿಲ್ಲ. ನಿಮ್ಮ ಮನೆಯವರನ್ನು ಭೇಟಿ ಮಾಡಿ. ಇದರಿಂದ ಮನಸ್ಸಿಗೆ ಖುಷಿಯಾಗುತ್ತದೆ.

ಫ್ರೆಂಡ್ಸ್ ಜೊತೆ ಪಾರ್ಟಿ
ಈ ಡೇ ನಿಮಗೂ ಸೆಲೆಬ್ರೇಟ್ ಮಾಡಬೇಕೆಂದು ಬಯಸುವುದಾದರೆ ಫ್ರೆಂಡ್ಸ್ ಜೊತೆ ಪಾರ್ಟಿ ಮಾಡಿ.
ಸಿಂಗಲ್ ಎಂಬ ಚಿಂತೆ ಬಿಡಿ. ಲ್ ನಲ್ಲಿ ಇದ್ದವರು ಈ ದಿನಾ ಮಾತ್ರ ಖುಷಿಯಾಗಿರುತ್ತಾರೆ. ನೀವು ವರ್ಷ ಪೂರ್ತಿ ನಿರ್ಬಂಧನೆಗಳಿಲ್ಲದ ಆರಾಮವಾಗಿರಬಹುದು. ಏನಂತಿರಿ?



Click it and Unblock the Notifications
