Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಭಾರತದ ಅತ್ಯಂತ ಪ್ರಸಿದ್ಧ ಸಂಗೀತ ಕಲಾವಿದರು
ಭಾರತದಲ್ಲಿ ಅತ್ಯಂತ ಜನಪ್ರಿಯತೆಗೆ ಪಾತ್ರರಾಗಿರುವ ಪ್ರತಿಭಾವಂತರಲ್ಲಿ ಸಂಗೀತಗಾರರು ಅಗ್ರಗಣ್ಯರಾಗಿದ್ದಾರೆ. ಅವರ ಮಧುರ ಗಾನಗಳು, ರಾಗಗಳು, ಸ್ವರ ಸಂಯೋಜನೆ, ಸಾಹಿತ್ಯ ಮತ್ತು ಶಾರೀರವು ಕೇಳುಗರನ್ನು ಅನಾದಿಕಾಲದಿಂದಲು ಮೋಡಿ ಮಾಡುತ್ತಲೆ ಬಂದಿದೆ.
ಇವರು ಬಾಲಿವುಡ್‍ನಲ್ಲಿ ತಮ್ಮದೇ ಆದ ಸ್ಥಾನಮಾನವನ್ನು ಹೊಂದಿದ್ದಾರಲ್ಲದೆ, ಸಾರ್ವಜನಿಕ ವಲಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇಲ್ಲಿ ಉದ್ಯಮದಲ್ಲಿ ಹಲವಾರು ವರ್ಷಗಳಿಂದ ಹೆಸರು ಮಾಡಿರುವ ಹತ್ತು ಅತ್ಯುತ್ತಮ ಸಂಗೀತ ಕಲಾವಿದರ ಕುರಿತು ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಇಳಯರಾಜ
ಇಳಯರಾಜ ಎಂಬ ಹೆಸರು ತಮಿಳು ಸಿನಿಮಾರಂಗದಲ್ಲಿ ಅತ್ಯಂತ ಆಧರಕ್ಕೆ ಪಾತ್ರರಾಗಿರುವ ಹೆಸರಾಗಿದೆ. ಇವರು ಸಂಗೀತ ನಿರ್ದೇಶಕರಾಗಿ, ಗಾಯಕರಾಗಿ ಮತ್ತು ಸಾಹಿತ್ಯ ರಚನೆಕಾರರಾಗಿ ಅತ್ಯಂತ ಶ್ರೇಷ್ಠ ಮಟ್ಟದ ಸಾಧನೆಯನ್ನು ಮಾಡಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಇಳಯರಾಜರವರು ಸರಿ ಸುಮಾರು ಒಂದು ಸಾವಿರ ಚಲನಚಿತ್ರಗಳಿಗೆ ಸಂಗೀತವನ್ನು ಒದಗಿಸಿದ್ದಾರೆ. ಅವುಗಳಲ್ಲಿ ಸುಮಾರು 4500 ಹಾಡುಗಳಿಗೆ ಇವರ ಸಂಗೀತದ ಸ್ಪರ್ಶ ದೊರೆತಿದೆ. ಇವರು ಪಾಶ್ಚಿಮಾತ್ಯ ಮತ್ತು ಭಾರತೀಯ ಸಂಗೀತವನ್ನು ಹದವಾಗಿ ಬೆರೆಸಿ ನೀಡುವ ಸಂಗೀತವು ಹಲವು ತಲೆಮಾರಿನ ಅಭಿಮಾನಿಗಳನ್ನು ಇಂದಿಗೂ ಮೋಡಿ ಮಾಡುತ್ತಲೆ ಇದೆ.

ಸಾಹಿರ್ ಲುಧಿಯಾನ್ವಿ
1921ರಲ್ಲಿ ಲುಧಿಯಾನದಲ್ಲಿ ಅಬ್ದುಲ್ ಹಾಯಿ ಎಂಬ ಹೆಸರಿನಲ್ಲಿ ಜನಿಸಿದ ಈ ಪದ್ಮಶ್ರೀ ಪುರಸ್ಕೃತ ಸಾಹಿತಿಯು ಎಸ್ ಡಿ ಬರ್ಮನ್ ಮತ್ತು ಗುರುದತ್‍ರವರ ಜೊತೆಗೂಡಿ ಕೇಳುಗರು ತಲೆದೂಗುವಂತಹ ಮಧುರ ಸಾಹಿತ್ಯವನ್ನು ಹಿಂದಿ ಚಿತ್ರಗಳಿಗೆ ಒದಗಿಸಿದ್ದಾರೆ.

ಎ ಆರ್ ರೆಹಮಾನ್
ಈ ಹೆಸರು ಯಾರಿಗೆ ತಿಳಿದಿಲ್ಲ ಹೇಳಿ. ರೆಹಮಾನ್ ಕಳೆದ ದಶಕದಲ್ಲಿ ಭಾರತದಿಂದ ಹೊರಹೊಮ್ಮಿದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕರಾಗಿದ್ದಾರೆ. ಈ ಅವಧಿಯಲ್ಲಿ ಇವರು ಅಸಂಖ್ಯಾತವಾದ ಮರೆಯಲಾಗದ ಹಾಡುಗಳನ್ನು ಮತ್ತು ಸಂಗೀತವನ್ನು ಒದಗಿಸಿ ಅಭಿಮಾನಿಗಳ ಮನವನ್ನು ತಣಿಸಿದ್ದಾರೆ. ಇದೇ ಅವಧಿಯಲ್ಲಿ ಅವರು ಕೇವಲ ಭಾರತವಲ್ಲದೆ ವಿಶ್ವದ ಇನ್ನಿತರ ಪ್ರಮುಖ ಚಿತ್ರಗಳಿಗು ಸಂಗೀತ ನೀಡಿ ಎರಡು ಆಸ್ಕರ್ ಮತ್ತು ನಾಲ್ಕು ಬಾಫ್ಟ (BAFTA) ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಅವರು ತಮ್ಮ ಕಾರ್ಯಕ್ಷೇತ್ರವನ್ನು ಲಾಸ್ ಏಂಜಲೀಸ್ ಮತ್ತು ಭಾರತದ ನಡುವೆ ವಿಸ್ತರಿಸಿಕೊಂಡರು. " ಮದ್ರಾಸಿನ ಮೊಝಾರ್ಟ್" ಎಂದೆ ಕರೆಯಲ್ಪಡುವ ರೆಹಮಾನ್ 2009ರಲ್ಲಿ ಟೈಮ್ ಮ್ಯಾಗಜೀನ್‍ನಿಂದ ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.

ಲಕ್ಷೀಕಾಂತ್ - ಪ್ಯಾರೆಲಾಲ್
ಲಕ್ಷೀಕಾಂತ್ - ಪ್ಯಾರೆಲಾಲ್ ಅಥವಾ ಎಲ್ - ಪಿ ರವರು ಬಾಲಿವುಡ್ಡಿನ ಅತ್ಯಂತ ಕ್ರಿಯಾಶೀಲ ಮತ್ತು ಜನಪ್ರಿಯ ಸಂಗೀತ ನಿರ್ದೇಶಕರಾಗಿ ಪರಿಗಣಿಸಲ್ಪಟ್ಟಿದ್ದಾರೆ. ಈ ಜೋಡಿಯು ಭಾರತೀಯ ಶಾಸ್ತ್ರೀಯ ಸಂಗೀತ, ಪಾಶ್ಚಿಮಾತ್ಯ ಸಂಗೀತ, ಡಿಸ್ಕೋ, ರಾಕ್- ಎನ್ - ರೋಲ್ ಮುಂತಾದ ಶೈಲಿಗಳಲ್ಲಿ ತಮ್ಮದೇ ಆದ ಪ್ರಯೋಗಗಳನ್ನು ಮಾಡಿ ಯಶಸ್ವಿ ಸಹ ಆಗಿದೆ.

ಆರ್ ಡಿ ಬರ್ಮನ್
ಆಪ್ತರ ವಲಯದಲ್ಲಿ ಪಂಚಮ್‍ದ ಎಂದೇ ಕರೆಯಲ್ಪಡುವ ಆರ್ ಡಿ ಬರ್ಮನ್ ಬಾಲಿವುಡ್‍ನ ಅತ್ಯಂತ ಪ್ರಭಾವಶಾಲಿ ಸಂಗೀತ ನಿರ್ದೇಶಕರಾಗಿ ಗುರುತಿಸಲ್ಪಟ್ಟಿದ್ದಾರೆ. ಇವರು ಉದ್ಯಮದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಹಲವಾರು ಡಿಸ್ಕೋ ಜಾಕಿಗಳು ಇಂದಿಗು ಇವರು ಸಂಯೋಜನೆ ಮಾಡಿರುವ ಜನಪ್ರಿಯ ಗೀತೆಗಳನ್ನು ರೀಮಿಕ್ಸ್ ಮಾಡುತ್ತಿರುತ್ತಾರೆ. ಅಲ್ಲದೆ ಹಲವಾರು ಸಂಗೀತ ಸಂಯೋಜಕರು ಇವರ ಪ್ಯೂಶನ್ ಸಂಗೀತವನ್ನು ಇಂದಿಗು ಅಭ್ಯಾಸ ಮಾಡುತ್ತಿರುತ್ತಾರೆ ಎಂದರೆ ನಿಮಗೆ ಇವರ ಮಹತ್ವ ಅರಿವಾಗಬಹುದು.

ಆಶಾ ಭೋಸ್ಲೆ
ಆಶಾ ಭೋಸ್ಲೆಯವರು 1943ರಿಂದ ಇಂದಿನವರೆಗು ಹಾಡುತ್ತಲೆ ಬಂದಿದ್ದಾರೆ. ಇವರು ಗಾಯನಕ್ಷೇತ್ರದಲ್ಲಿ ಅತಿ ಹೆಚ್ಚು ಮುದ್ರಿಸಿದ ಹಾಡುಗಳನ್ನು ಹಾಡಿದ ದಾಖಲೆಗಾಗಿ ಗಿನ್ನಿಸ್ ವಿಶ್ವ ದಾಖಲೆ ಪುಸ್ತಕದಲ್ಲಿ ಸಹ ತಮ್ಮ ಹೆಸರನ್ನು ನಮೂದಿಸಿದ್ದಾರೆ.

ಸೋನು ನಿಗಮ್
ಸೋನು ನಿಗಮ್‍ರವರನ್ನು ಹಿನ್ನಲೆ ಗಾಯನ ಕ್ಷೇತ್ರದ ಅಮೀರ್ ಖಾನ್ ಎಂದು ಗುರುತಿಸುತ್ತಾರೆ. ನೋಡಲು ಚಾಕಲೇಟ್ ಬಾಯ್ ತರಹ ಇರುವ ಇವರು ತಮ್ಮ ಮಧುರ ಕಂಠದಿಂದ ಮನೆಮಾತಾಗಿದ್ದಾರೆ. ಇವರು ಮೊದಲು ತಮ್ಮ ಪ್ರೇಮ ಗೀತೆಗಳ ಮೂಲಕ ಗಮನ ಸೆಳೆದರು. ನಂತರ ಇವರ ವೀಡಿಯೊ ಹಾಡುಗಳು ಮನೆ ಮಂದಿಗೆಲ್ಲ ಹುಚ್ಚು ಹಿಡಿಸುವಷ್ಟರ ಮಟ್ಟಿಗೆ ಜನಪ್ರಿಯತೆ ಪಡೆಯಿತು. ನಂತ ಇವರು ಹಿನ್ನಲೆ ಗಾಯನದಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಕಳೆದ ಕೆಲವು ವರ್ಷಗಳಿಂದ ಇವರು ತಮ್ಮ ಹಿನ್ನಲೆಗಾಯನದ ಮೂಲಕ ಹಲವು ಅಮರ ಪ್ರೇಮ ಗೀತೆಗಳನ್ನು ಅಭಿಮಾನಿಗಳಿಗೆ ನೀಡಿದ್ದಾರೆ.

ಲತಾ ಮಂಗೇಶ್ಕರ್
ಲತಾ ಮಂಗೇಶ್ಕರ್ ಭಾರತದ ಸಂಗೀತದ ಮತ್ತೊಂದು ಹೆಸರು ಎಂದರೆ ತಪ್ಪಾಗಲಾರದು. ನೀವು ಯಾವುದಾದರು ಕಪ್ಪು- ಬಿಳುಪಿನ ಹಿಂದಿ ಚಲನಚಿತ್ರದಲ್ಲಿ ಮನಸೂರೆಗೊಳ್ಳುವ ಒಂದು ಹಾಡನ್ನು ಕೇಳಿದಲ್ಲಿ ಅದು ಖಂಡಿತವಾಗಿ ಲತಾ ಮಂಗೇಶ್ಕರ್ ಹಾಡಿರುವ ಹಾಡಾಗಿರುತ್ತದೆ. ಇದು ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿರುವ ಚಲನಚಿತ್ರಗಳಿಗು ಸಹ ಅನ್ವಯಿಸುತ್ತದೆ.

ಡಾ. ಎಸ್.ಜಾನಕಿ
ಡಾ. ಎಸ್.ಜಾನಕಿ ದಕ್ಷಿಣ ಭಾರತದ ಪ್ರಸಿದ್ಧ ಗಾಯಕಿಯರಲ್ಲೊಬ್ಬರು. ಮೂಲತ: ಆಂಧ್ರ ಪ್ರದೇಶದವರಾದರೂ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಹಾಡಿದ್ದಾರೆ. ನಾಲ್ಕು ಬಾರಿ ರಾಷ್ಟೀಯ ಪುರಸ್ಕಾರ ಪಡೆದಿದ್ದಾರೆ

ಎಸ್.ಪಿ.ಬಾಲು
ಎಸ್ . ಪಿ. ಬಿ ಎಂದು ಪ್ರಸಿದ್ಧವಾಗಿರುವ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ ಕನ್ನಡ, ತಮಿಳು, ತೆಲುಗು, ಮಳಯಾಳಂ, ಹಿಂದಿ, ಒರಿಯಾ, ಅಸ್ಸಾಮಿ, ಪಂಜಾಬಿ, ಬೆಂಗಾಲಿ ಮತ್ತು ತುಳು ಹೀಗೆ ಹಲವಾರು ಭಾಷೆಗಳಲ್ಲಿ ಹಾಡಿರುವ ಇವರು ಸುಮಾರು 36,೦೦೦ ಕ್ಕೊ ಹೆಚ್ಚು ಹಾಡುಗಳನ್ನು ಹಾಡಿ ಜಗತ್ತಿನಲ್ಲೇ ಅತಿ ಹೆಚ್ಚು ಹಾಡುಗಳನ್ನು ಹಾಡಿರುವ ಗಿನ್ನಿಸ್ ದಾಖಲೆ ಮಾಡಿದ್ದಾರೆ.

ಸುನಿಧಿ ಚೌಹನ್
ಸುನಿಧಿ ಚೌಹನ್ ಪ್ರಸ್ತುತ ಭಾರತದ ಅತ್ಯಂತ ಜನಪ್ರಿಯ ಹಿನ್ನಲೆ ಗಾಯಕಿಯಾಗಿದ್ದಾರೆ. ಇವರು ಹಿಂದಿಯಲ್ಲದೆ ತಮಿಳು, ತೆಲುಗು, ಕನ್ನಡ, ಬೆಂಗಾಲಿ ಮತ್ತು ಗುಜಾರಾತಿಯಂತಹ ಇತರ ಭಾರತೀಯ ಭಾಷೆಗಳಲ್ಲಿಯು ಸಹ ಹಾಡುಗಳನ್ನು ಹಾಡಿದ್ದಾರೆ. ಬಿಡುಗಡೆಯಾಗುತ್ತಿರುವ ಸರಿ ಸುಮಾರು ಒಂದಲ್ಲ ಒಂದು ಹಿಂದಿ ಚಲನಚಿತ್ರದಲ್ಲಿ ಇವರ ಒಂದಾದರು ಹಾಡನ್ನು ನಾವು ಕೇಳಬಹುದಾಗಿದೆ.



Click it and Unblock the Notifications











