Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ ವಿಷಯಗಳು ಪುರುಷರಿಗೆ ಅರ್ಥವಾಗುವುದು ಕಷ್ಟ!
ಸ್ತ್ರೀಯರ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವುದು ತುಂಬಾ ಕಷ್ಟ. ಅವಳು ಪುರುಷನಿಗಿಂತ ಹೆಚ್ಚು ಭಾವನಾತ್ಮಕ ಜೀವಿ ಆಗಿರುತ್ತಾಳೆ. ಆದ್ದರಿಂದಲೇ ಸಣ್ಣ ಪುಟ್ಟ ವಿಷಯವನ್ನು ಬೇಗನೆ ಮನಸ್ಸಿಗೆ ಹಚ್ಚಿಕೊಂಡು ಬಿಡುತ್ತಾಳೆ. ಈ ಕ್ಷಣ ಇದ್ದಂತೆ ಮತ್ತೊಂದು ಕ್ಷಣದಲ್ಲಿ ಇರುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ. ಅವಳು ತುಂಬಾ ಮಾನಸಿಕ ಒತ್ತಡ ಅನುಭವಿಸುತ್ತಿರುವಾಗ ಅವಳ ಬಗ್ಗೆ ಯಾರಾದರೂ ಕೇರ್ ತೆಗೆದುಕೊಳ್ಳಬೇಕೆಂದು ಎಂದು ಬಯಸುತ್ತಾಳೆ.
ಆದರೆ ಇವಳ ಆಪ್ತರಿಗೆ ಇವಳ ಮೂಡ್ ಬಗ್ಗೆ ಗಮನ ಕೊಡುವಷ್ಟು ಪುರುಸೊತ್ತು ಇರುವುದಿಲ್ಲ, ಅದಕ್ಕಾಗಿ ಹೆಣ್ಣು ತನ್ನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳು ತನ್ನದೇ ಆದ ದಾರಿಗಳನ್ನು ಕಂಡುಕೊಂಡಿರುತ್ತಾಳೆ. ಆದರೆ ಇವೆಲ್ಲಾ ಪುರುಷರಿಗೆ ಅರ್ಥವಾಗುವುದು ಕಷ್ಟ ಏಕೆಂದರೆ ಅವಳ ಮನಸ್ಸಿನಲ್ಲಿ ಏನಿದೆಯೆಂದು ಸಂಪೂರ್ಣ ತಿಳಿಯಲು ಸಾಧ್ಯವಾಗದ ಮೇಲೆ ಈ ಸ್ತ್ರೀಯರು ಏಕೆ ಹೀಗೆ ಮಾಡುತ್ತಾರೆ ಎಂದು ತಿಳಿದುಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸವಲ್ಲವೇ ? ಹೆಣ್ಣು ತನ್ನಲ್ಲಿರುವ ಒತ್ತಡ ಮತ್ತು ಖಿನ್ನತೆಯನ್ನು ಧನಾತ್ಮಕವಾಗಿ ಹೇಗೆ ಹೋಗಲಾಡಿಸುತ್ತಾಳೆ ಎಂದು ನೋಡೋಣ ಬನ್ನಿ.

ಶಾಪಿಂಗ್
ಶಾಪಿಂಗ್ ಅಂದರೆ ಸಾಕು ಹುಡುಗಿಯರಿಗೆ ತುಂಬಾ ಖುಷಿಯಾಗುತ್ತದೆ. ಗಂಟೆಗಟ್ಟಲೆ ಶಾಪಿಂಗ್ ಅತ ಕಳೆಯಲು ಒಂದಿಷ್ಟು ಬೇಜಾರಾಗುವುದಿಲ್ಲ ಎಂದು ಪುರುಷರು ಗೊಣಗಾಡುವುದು ಸಾಮಾನ್ಯ. ಆದರೆ ಸ್ತ್ರೀಯರು ಶಾಪಿಂಗ್ ಮಾಡುವಾಗ ಆ ಖುಷಿಯಲ್ಲಿ ಇರುತ್ತಾರೆ. ಬೇರೆ ಎಲ್ಲಾ ಚಿಂತೆಗಳನ್ನು ಸಂಪೂರ್ಣವಾಗಿ ಮರೆತು ಬಿಡುತ್ತಾರೆ. ಇದರಿಂದ ಅವರ ಮಾನಸಿಕ ಒತ್ತಡ ಕಡಿಮೆಯಾಗುವುದು. ಇನ್ನು ಮುಂದೆ ನಿಮ್ಮ ಮನೆಯ ಹೆಣ್ಣು ಮಗಳು ಶಾಪಿಂಗ್ ಮಾಡುವಾಗ ಎಷ್ಟೊಂದು ದುಡ್ಡು, ಸಮಯ ಹಾಳು ಮಾಡುತ್ತಿದ್ದಾಳೆ ಎಂದು ನೀವು ಗೊಣಗಾಡುವುದಿಲ್ಲ ತಾನೇ?

ವೇಷ ಭೂಷಣ
ಸ್ತ್ರೀಯರು ತಮಗೆ ಪ್ರಿಯವಾದಂತೆ ಅಲಂಕಾರ ಮಾಡಿ ಈ ರೀತಿಯ ಅಲಕಾರದಿಂದಾಗಿ ನಾನು ಸುಂದರವಾಗಿ ಕಾಣುತ್ತಿದ್ದೇನೆ ಅಂದುಕೊಂಡು ಅದೇ ಖುಷಿಯಲ್ಲಿರುತ್ತಾರೆ. ಇದರಿಂದ ಕೂಡ ಅವರ ಮಾನಸಿಕ ಒತ್ತಡ ಕೆಡಿಮೆಯಾಗುವುದು.

ಸ್ಟೋರಿ ಬುಕ್ ಓದುವುದು
ಸ್ತ್ರೀಯರಿಗೆ ತುಂಬಾ ಮಾನಸಿಕ ಒತ್ತಡವಾದರೆ ಫ್ಯಾಷನ್ ನಿಯತಕಾಲಿಗಳನ್ನು ನೋಡುವುದು, ಕತೆಗಳನ್ನು ಓದುವುದು ಮಾಡಿದರೆ ಮಾನಸಿಕ ಒತ್ತಡ ಕಡಿಮೆಯಾಗುವುದು. ಪುರುರು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಗ್ಯಾಡ್ಜೆಟ್ಸ್ ನಲ್ಲಿ ಸಮಯ ಕಳೆಯುತ್ತಾರೆ.

ಮೇಕಪ್
ಸ್ತ್ರೀಯರಿಗೆ ತಮ್ಮ ಮುಖವನ್ನು ಮೇಕಪ್ ಮಾಸ್ಕ್ ನಿಂದ ಮುಚ್ಚಿಕೊಳ್ಳುತ್ತಾರೆ. ಬಣ್ಣ ಹಚ್ಚಿದ ಕೆಂಪು ತುಟಿಗಳ ಹಿಂದ ಯಾವ ಭಾವನೆ ಇರುತ್ತದೆಯೋ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಮೇಕಪ್ ಮಾಡಿ, ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ನೋಡಿ ಸಂತೋಷ ಪಟ್ಟುಕೊಳ್ಳುತ್ತಾರೆ. ಈ ರೀತಿ ಅವರು ಸಂತೋಷ ಪಟ್ಟಾಗ ಅವರ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.

ಫೇಸ್ ಬುಕ್ ನಲ್ಲಿ ಫೋಟೊ ಅಪ್ ಲೋಡ್
ತಾವು ತುಂಬಾ ಚೆಂದವಾಗಿ ಬಂದಂತಹ ಫೋಟೊವನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡುವುದು, ನಂತರ ಅದಕ್ಕೆ ಬಂದಂತಹ ಕಮೆಂಟ್ ಗಳನ್ನು ನೋಡಿ ಸಂತೋಷ ಪಡುವುದು ಮಾಡರ್ನ್ ಹೆಣ್ಣು ಮಕ್ಕಳಿಗೆ ತುಂಬಾ ಪ್ರಿಯವಾದ ವಿಷಯವಾಗಿದೆ.

ಪ್ರಿಯವಾದ ಕಾರ್ಯಕ್ರಮದ ವೀಕ್ಷಣೆ
ತುಂಬಾ ಬೇಜಾರು ಅನಿಸಿದರೆ ತಿನ್ನಲು ಆರೋಗ್ಯಕರ ಸ್ನ್ಯಾಕ್ಸ್ ಹಿಡಿದು ಇಷ್ಟವಾದ ಪ್ರೋಗ್ರಾಂ ನೋಡಿದರೆ ಸಾಕು ಒತ್ತಡ ಕಡಿಮೆಯಾಗುವುದು.



Click it and Unblock the Notifications
