Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಸಖತ್ ಅಡುಗೆಗೆ ಹೆಸರುವಾಸಿಯಾದ 5 ದೇಶಗಳಿವು
ಪ್ರಪಂಚದಲ್ಲಿಯೇ ಬಹಳ ರುಚಿಕರವಾದ ಅಡುಗೆಯ ರುಚಿ ನೋಡಿದ್ದೀರಾ ಎಂದು ಯಾರಾದರೂ ನಮ್ಮಲ್ಲಿ ಕೇಳಿದರೆ ಇಲ್ಲ ಎಂಬ ಉತ್ತರ ತಕ್ಷಣ ಹೇಳಿಬಿಡುತ್ತೇವೆ. ಒಂದು ವೇಳೆ ವಿದೇಶಕ್ಕೆ ಹೋದವರು 'ನಾನು ಹೋದ ದೇಶಗಳಲ್ಲಿ ಯಾವ ದೇಶದ್ದು ಆಗಿರಬಹುದು' ಎಂದು ಯೋಚಿಸುತ್ತಾರೆ. ಆದರೆ ಪ್ರಪಂಚದಲ್ಲಿಯೇ ರುಚಿಕರವಾದ ಅಡುಗೆಯ ರುಚಿ ಮಾಡಬೇಕೆಂದು ಬಯಸುವುದಾದರೆ ನೀವು ವಿದೇಶಕ್ಕೆ ಹೋಗಬೇಕಾಗಿಲ್ಲ, ಇಲ್ಲಿಯೇ ಮಾಡಬಹುದು!
ಹೌದು ಭಾರತ ದೇಶದ ಅಡುಗೆಯು ಪ್ರಪಂಚದಲ್ಲಿಯೇ ರುಚಿಕರವಾದ ಅಡುಗೆಗಳಲ್ಲಿ ಒಂದಾಗಿದೆ. ಅಬ್ಬಾ! ಪ್ರಪಂಚದ ರುಚಿಕರವಾದ ಅಡುಗೆಯ ರುಚಿ ನಾವು ನೋಡಿದ ಹಾಗೆ ಆಯ್ತು ಎಂದು ಸಮಧಾನವಾಗಿರಬಹುದು ಅಲ್ಲವೇ? ಬನ್ನಿ ಪ್ರಪಂಚದಲ್ಲಿಯೇ ರುಚಿಕರವಾದ ಅಡುಗೆ ತಯಾರಿಸುವ ಪ್ರಮುಖ 5 ದೇಶಗಳು ಯಾವುದೆಂದು ತಿಳಿಯೋಣ ಬನ್ನಿ.

1. ಫ್ರೆಂಚ್ ಅಡುಗೆ: ಫ್ರೆಂಚ್ ರುಚಿಕರವಾದ ನಾನಾ ಬಗೆಯ ಅಡುಗೆಗಳನ್ನು ತಯಾರಿಸುತ್ತಾರೆ. ಒಂದು ಅಡುಗೆ ಮತ್ತೊಂದು ಅಡುಗೆಗಿಂತ ರುಚಿಕರವಾಗಿರುತ್ತದೆ. ಫ್ರೆಂಚ್ ನ ಪ್ರತಿಯೊಂದು ಚಿಕ್ಕ ಪಟ್ಟಣದಲ್ಲೂ ಅನೇಕ ಬಗೆಯ ರುಚಿಕರವಾದ ಚೀಸ್ ತಯಾರಿಸುತ್ತಾರೆ. ಅಲ್ಲದೆ ತುಂಬಾ ವಿಶಿಷ್ಟವಾದ ವೈನ್ ಕೂಡ ತಯಾರಿಸಲಾಗುವುದು. ಇಲ್ಲಿ ನೂರಕ್ಕೂ ಅಧಿಕ ಬಗೆಯ ಚೀಸ್ ತಯಾರಿಸಲಾಗುವುದು. ಇಲ್ಲಿ ತುಂಬಾ ಆರೋಗ್ಯಕರ ರೀತಿಯಲ್ಲಿ ಅಡುಗೆಯನ್ನು ತಯಾರಿಸಲಾಗುವುದು.
2. ಭಾರತದ ಅಡುಗೆ: ಭಾರತದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅನೇಕ ಬಗೆಯಲ್ಲಿ ಅಡುಗೆಯನ್ನು ತಯಾರಿಸಲಾಗುವುದು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಡುಗೆಯ ಶೈಲಿಯಲ್ಲಿ ಮತ್ತು ರುಚಿಯಲ್ಲಿ ಭಿನ್ನವಾಗಿರುತ್ತದೆ ಅಲ್ಲದೆ ರುಚಿಯಲ್ಲಿ ಅದ್ಭುತವಾಗಿರುತ್ತದೆ. ಭಾರತದಲ್ಲಿ ಸಸ್ಯಹಾರ ಮತ್ತು ಮಾಂಸಾಹಾರ ಎರಡನ್ನೂ ಬಹಳ ರುಚಿಟ್ಟಾಗಿ, ಆರೋಗ್ಯಕರ ರೀತಿಯಲ್ಲಿ ತಯಾರಿಸಲಾಗುವುದು. ಅದರಲ್ಲೂ ಉತ್ತರ ಭಾರತದ ಆಹಾರಪದ್ಧತಿಗೂ ಮತ್ತು ದಕ್ಷಿಣ ಭಾರತದ ಆಹಾರ ಪದ್ಧತಿಗೂ ಸಾಕಷ್ಟು ವ್ಯತ್ಯಾಸ ಕಾಣಬಹುದು.
ವಿಪರ್ಯಾಸವೆಂದರೆ ನಮ್ಮಲ್ಲಿಯೇ ಅನೇಕ ಬಗೆಯ ರುಚಿಕರವಾದ ಅಡುಗೆ ಇರುವಾಗ ಪಿಜ್ಜಾ , ಬರ್ಗರ್ ಅಂತ ಆರೋಗ್ಯಕರವಲ್ಲದ ಆಹಾರದ ಕಡೆಗೆ ಹೆಚ್ಚಿನ ಒಲುವು ತೋರಿಸುತ್ತಿದ್ದೇವೆ.
3. ಚೀನಾದ ಅಡುಗೆ: ಚೀನಾ ಫುಡ್ ಅಂತೂ ಭಾರತದಲ್ಲೂ ಪ್ರಸಿದ್ಧಿಯನ್ನು ಪಡೆದಿದೆ. ಚೀನೀಯರು ಮಾಂಸಾಹಾರದ ಅಡುಗೆಯನ್ನು ಹೆಚ್ಚಾಗಿ ಸೇವಿಸುತ್ತಾರೆ. ಅದರಲ್ಲೂ ಹಾವು, ಜಿರಳೆ, ಎರೆ ಹುಳ ಇವುಗಳೆಲ್ಲಾ ಅವರ ಮೆಚ್ಚಿನ ಆಹಾರಗಳಿವೆ. ಆದರೆ ಇವರು ತಯಾರಿಸುವ ನೂಡಲ್ಸ್, ಸಾಸ್ ಇತರ ಖಾದ್ಯಗಳು ಭಾರತೀಯರ ಮೆಚ್ಚುಹಗೆಯನ್ನು ಪಡೆದಿದೆ.
4. ಇಟಲಿಯ ಅಡುಗೆ: ಇಟಲಿಯ ಅಡುಗೆ ಕೂಡ ಪ್ರಪಂಚದಲ್ಲಿಯೇ ರುಚಿಕರವಾದ ಅಡುಗೆಗಳಲ್ಲಿ ಒಂದಾಗಿದೆ. ಅದರಲ್ಲೂ ಅನೇಕ ಬಗೆಯ ಸಾಸ್ ಗಳನ್ನು ಮತ್ತು ಆಲೀವ್ ಎಣ್ನೆಯನ್ನು ತಮ್ಮ ಅಡುಗೆಯಲ್ಲಿ ಯಥೇಚ್ಚವಾಗಿ ಬಳಸುತ್ತಾರೆ. ಪಿಜ್ಜಾ ಇಟಲಿಯ ಮೂಲದ ಅಡುಗೆಯಾಗಿದ್ದು ಇದನ್ನು ಆರೋಗ್ಯಕರ ಅಡುಗೆ ಎಂದು ಪರಿಗಣಿಸಲಾಗದಿದ್ದರೂ ಇತರ ಆರೋಗ್ಯಕರ ಮತ್ತು ರುಚಿಕರವಾದ ಅಡುಗೆಗಳು ಇಟಲಿಯಲ್ಲಿ ದೊರೆಯುತ್ತವೆ.
5. ಮೆಕ್ಸಿಕಾನ್ ಅಡುಗೆ: ಇವರು ಅಡುಗೆಯಲ್ಲಿ ಟೊಮೆಟೊ ಮತ್ತು ಆಲೂಗೆಡ್ಡೆಯನ್ನು ಧಾರಳವಾಗಿ ಬಳಸುತ್ತಾರೆ. ಇಲ್ಲಿಯ ಅಡುಗೆಯ ರುಚಿ ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುವುದು ಸಹಜ.



Click it and Unblock the Notifications