Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಭಾರತದ ಟಾಪ್ 10 ಶ್ರೀಮಂತ ವ್ಯಕ್ತಿಗಳು
ಭಾರತವನ್ನು ಅಭಿವೃದ್ಧಿ ಹೊಂದುತ್ತಿರುವ ದೇಶ ಎಂದು ಗುರುತಿಸಲಾಗಿದೆ. ಹೊರ ದೇಶದವರು ನಮ್ಮನ್ನು ನೋಡಿ ಬಡ ದೇಶದವರು ಎಂದು ಹೇಳಿದರೂ ನಮ್ಮ ದೇಶದಲ್ಲೂ ಶ್ರೀಮಂತಿಕೆಗೆ ಕೊರತೆಯಿಲ್ಲ! ಶ್ರೀಮಂತರು ಅಂದರೆ ಸಾಮಾನ್ಯವಾದ ಶ್ರೀಮಂತರಲ್ಲ , ಬಿಲಿಯನರ್ ಗಳು! ಅದರಲ್ಲಿ ಕೆಲವರಂತೂ ಪ್ರಪಂಚದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಸೇರುತ್ತಾರೆ. ಅಷ್ಟೊಂದು ಶ್ರೀಮಂತಿಕೆ ನಮ್ಮ ದೇಶದಲ್ಲಿದೆ, ಆದರೂ ಭಾರತದಲ್ಲಿ ಕಂಡು ಬರುವ ಬಡತನವನ್ನು ಮಾತ್ರ ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ, ವಿಪರಾರ್ಯಸವಲ್ಲವೇ?
ನಮ್ಮ ದೇಶದಲ್ಲಿ ಶ್ರೀಮಂತರಾದವರು ಸುಮ್ಮನೆ ಶ್ರೀಮಂತರಾಗಲಿಲ್ಲ, ಅವರ ದುಡಿಮೆ, ಬುದ್ಧಿವಂತಿಕೆ, ವ್ಯಾಪಾರ-ವ್ಯವಹಾರ, ಅದೃಷ್ಟ ಇವುಗಳಿಂದ ಅವರರೆಲ್ಲಾ ಆ ಮಟ್ಟಕ್ಕೆ ಬೆಳೆದಿದ್ದಾರೆ. ಕಾಲ ಬದಲಾದಂತೆ ಶ್ರೀಂತರ ಪಟ್ಟಿಯಲ್ಲೂ ಬದಲಾವಣೆ ಉಂಟಾಗುತ್ತದೆ. 2012ರ ಭಾರತ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಎಲ್ ಎನ್ ಮಿತ್ತಲ್,ಅಜೀಂ ಪ್ರೇಂಜಿ ಮುಂತಾದವರನ್ನು ಹಿಂದಿಕ್ಕಿ ಮುಖೇಶ್ ಅಂಬಾನಿ ಅಗ್ರಸ್ಥಾನಕ್ಕೇರಿದ್ದಾರೆ.
ಭಾರತದಲ್ಲಿರುವ ಶ್ರೀಮಂತರ ಬಗ್ಗೆ ಚೀನಾದ ಹುರನ್ ಅನ್ನುವ ಸಂಸ್ಥೆಯು ಸಮೀಕ್ಷೆಯನ್ನು ನಡೆಸಿತು. ಅದರ ಪ್ರಕಾರ ಭಾರತದ ಅತ್ಯಧಿಕ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಎಂದು ಗುರುತಿಸಲಾಗಿದೆ.
ಈ ಸಮೀಕ್ಷೆಯ ಪ್ರಕಾರ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ 5 ಜನ ಮಹಿಳೆಯರ ಹೆಸರು ಮಾತ್ರ ಕಂಡು ಬರುತ್ತದೆ. ಉಳಿದಂತೆ 36 ಜನ ಮುಂಬಾಯಿಯನವರು, ದೆಹಲಿಯಿಂದ 22 ಜನ, ಬೆಂಗಳೂರಿನಿಂದ 15 ಜನರು ಈ ಪಟ್ಟಿಯಲ್ಲಿ ಸೇರಿದ್ದಾರೆ. ಆ ಪಟ್ಟಿಯಲ್ಲಿ 10 ಟಾಪ್ ಶ್ರೀಮಂತರ ಪಟ್ಟಿ ಇಲ್ಲಿ ನೀಡಲಾಗಿದೆ ನೋಡಿ:

1. ಮುಖೇಶ್ ಅಂಬಾನಿ:
ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಒಟ್ಟು 19.3 ಬಿಲಿಯನ್ ಡಾಲರ್ ಸ್ವತ್ತು ಹೊಂದಿದ್ದಾರೆ ಎಂದು ಚೀನಾ ಮೂಲದ ಸಂಸ್ಥೆ ಹುರನ್ ವರದಿ ಮಾಡಿದೆ.

2. ಲಕ್ಷ್ಮಿನಾರಾಯಣ ಮಿತ್ತಲ್:
ಎರಡನೆ ಸ್ಥಾನದಲ್ಲಿ ಉಕ್ಕು ಉದ್ಯಮದ ದೊರೆ ಲಕ್ಷ್ಮಿನಾರಾಯಣ ಮಿತ್ತಲ್16.9 ಬಿಲಿಯನ್ ಡಾಲರ್ ಹೊಂದಿದ್ದಾರೆ.

3. ಅಜೀಂ ಪ್ರೇಮ್ :
ಮೂರನೇ ಸ್ಥಾನದಲ್ಲಿ ವಿಪ್ರೋ ಸಂಸ್ಥೆ ಒಡೆಯ ಅಜೀಂ ಪ್ರೇಮ್ ಜಿ 12.3 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ.

4. ದಿಲೀಪ್ ಸಾಂಘ್ವಿ,:
ಸನ್ ಫಾರ್ಮಾಸ್ಯೂಟಿಕಲ್ಸ್ ಇಂಡಸ್ಟ್ರೀಸ್ ಅಧ್ಯಕ್ಷ 4 ದಶಕಗಳಿಂದ ದಿಲೀಪ್ ಸಾಂಘ್ವಿ ಆಡಳಿತ ನೋಡಿಕೊಳ್ಳುತ್ತಿದ್ದು ಇವರ ಗಳಿಕೆ 8.5 ಬಿಲಿಯನ್ ಡಾಲರ್ ಆಗಿದೆ.

5. ಪಲ್ಲೋನ್ ಜಿ ಮಿಸ್ತ್ರಿ :
ಪಲ್ಲೋಜಿ ಗ್ರೂಪ್ ಈ ಒಡೆಯನ ಆಸ್ತಿ 7.9 ಬಿಲಿಯನ್ ಡಾಲರ್ ಗಿದೆ. ಅಲ್ಲದೆ ಪಾರ್ಸಿ ಜನಾಂಗದಲ್ಲಿ ಅತ್ಯಧಿಕ ಶ್ರೀಮಂತ ವ್ಯಕ್ತಿ ಇವರಾಗಿದ್ದಾರೆ.

6. ಶಶಿ ರುಯ ಮತ್ತು ರವಿ ರುಯ:
ಎಸ್ಸಾರ್ ಎನರ್ಜಿ ಒಡೆಯರಾದ ಶಶಿ ರುಯ ಮತ್ತು ರವಿ ರುಯ ಸಹೋದರರ ಆಸ್ತಿ 7.2 ಬಿಲಿಯನ್ ಡಾಲರ್ ಆಗಿದೆ.

7. ಆದಿ ಗೋದ್ರೇಜ್:
ಗೋದ್ರೇಜ್ ಗ್ರೂಪ್ ಒಡೆಯನಾಗಿರುವ ಆದಿ ಗೋದ್ರೇಜ್ ರ ಆಸ್ತಿ 6.9 ಬಿಲಿಯನ್ ಡಾಲರ್ ಗಿದ್ದು ಇವರು ಪಾರ್ಸಿ ಜನಾಂಗ ಎರಡನೇ ದೊಡ್ಡ ಶ್ರೀಮಂತರಾಗಿದ್ದಾರೆ.

8. ಕುಶಾಲ್ ಪಾಲ್ ಸಿಂಗ್:
ಡಿಎಲ್ ಎಫ್ ನ ಸಿ ಇ ಓ ರಾಗಿರುವ ಇವರ ಆಸ್ತಿ 6.3 ಬಿಲಿಯನ್ ಡಾಲರ್. ಇವರದ್ದು ರಿಯಲ್ ಎಸ್ಟೇಟ್ ವ್ಯವಹಾರವಾಗಿದೆ.

ಕುಮಾರ್ ಮಂಗಳಂ ಬಿರ್ಲಾ:
ಬಿರ್ಲಾ ಗ್ರೂಪ್ ಈ ಒಡೆಯನ ಆಸ್ತಿ 5.8 ಬಿಲಿಯನ್ ಡಾಲರ್ ಆಗಿದೆ.

10. ಸುನಿಲ್ ಮಿತ್ತಲ್:
ಭಾರ್ತಿ ಏರ್ ಟೆಲ್ ನ ಅಧ್ಯಕ್ಷವಾಗಿರುವ ಈ ಒಡೆಯನ ಆಸ್ತಿ 5.7 ಬಿಲಿಯನ್ ಡಾಲರ್.



Click it and Unblock the Notifications
