Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಲ್ಲಿಕಾ ಶೆರಾವತ್ ಬೆತ್ತಲೆ ಬೆನ್ನಿಗೆ ಕ್ಲೀನ್ ಬೌಲ್ಡ್
ಜಾಗತಿಕವಾಗಿ ಬಹುನಿರೀಕ್ಷೆ ಹುಟ್ಟುಹಾಕಿದ್ದ ಕೇನ್ಸ್ ಚಿತ್ರೋತ್ಸವ ಮುಗಿದಿದೆ. ಆದರೂ ಅದರ ನಶೆಯಿನ್ನೂ ಹೆಚ್ಚಿನವರಿಗೆ ಇಳಿದಂತೆ ಕಾಣುತ್ತಿಲ್ಲ. ಯಾಕೆಂದರೆ ಈ ಚಿತ್ರೋತ್ಸವದಲ್ಲಿ ಬಾಲಿವುಡ್ ನಟಿಯರ ಬೆಡಗು, ಬಿನ್ನಾಣ, ಸೌಂದರ್ಯ ಇನ್ನೋ ಹೆಚ್ಚಿನವರ ಕಣ್ಮುಂದೆ ಇರಬಹುದು. ಅದರಲ್ಲೂ ಮಲ್ಲಿಕಾ ಶೆರಾವತ್ ಮತ್ತು ಐಶ್ವರ್ಯ ರೈ ಸೌಂದರ್ಯ ಕಣ್ಣು ಕುಕ್ಕುವಂತಿತ್ತು.
ಕೇನ್ಸ್ ಚಿತ್ರೋತ್ಸವದಲ್ಲಿ ಹೆಚ್ಚು ಜನರ ಗಮನಸೆಳೆದ ಈ ನಟಿಯರಿಬ್ಬರ ಸೌಂದರ್ಯ ಹೆಚ್ಚಲು ಕಾರಣವಾದ ಉಡುಗೆ ತೊಡುಗೆಗಳ ವಿವರ ಇಲ್ಲಿದೆ. ರಸಿಕರ ಕಣ್ಮನ ಸೆಳೆಯುವಂತೆ ಮಲ್ಲಿಕಾ ಶೆರಾವತ್ ಬ್ಯಾಕ್ ಹ್ಯಾಮ್ ಡ್ರೆಸ್ ಧರಿಸಿದ್ದರು. ಮಂಡಿಯವರೆಗೆ ಇರುವ ಈ ಉಡುಗೆಯಲ್ಲಿ ಶೆರಾವತ್ ಸೂಪರ್ ಆಗಿ ಕಾಣುತ್ತಿದ್ದರೆಂದು ಅವರ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಪುಟಗಟ್ಟಲೆ ಬರೆದಿದ್ದಾರೆ.

ಕಾಲರ್ ಇರುವ ನೆಕ್ ಅದಕ್ಕೆ ತಕ್ಕಂತೆ ಅವರು ಧರಿಸಿದ್ದ ಚಿಕ್ಕ ಪೆಂಡಂಟ್ ಇರುವ ಸರ ಮಲ್ಲಿಕಾ ಅಂದಕ್ಕೆ ಮತ್ತಷ್ಟು ಮತ್ತಷ್ಟು ಮೆರಗು ನೀಡುತ್ತಿತ್ತು. ಕೈಗೆ ಚಿನ್ನದ ಬಣ್ಣದ ವಾಚ್, ಸ್ವಲ್ಪ ಎತ್ತಿ ಗಂಟು ರೀತಿ ಹಾಕಿದ ತಲೆಕೂದಲು ಮತ್ತು ಚಿಕ್ಕ ಓಲೆ ಧರಿಸಿದ್ದರು. ಈ ರೀತಿ ಡ್ರೆಸ್ಸಿಂಗ್ ನಿಂದ ಮಿಂಚುತ್ತಿದ್ದ ಈ ಚೆಲುವೆ ಕಾನ್ ಆವಾರಣದ ರೆಡ್ ಕಾರ್ಪೆಟ್ ಮೇಲೆ ನಡೆಯುವಾಗಂತೂ ತನ್ನ ಬೋಲ್ಡ್ ಲುಕ್ ನಿಂದ ಕಾಣಿಸಿಕೊಂಡು ತನ್ನ ವಿಭಿನ್ನತೆಯನ್ನು ಅಲ್ಲಿಯೂ ಪ್ರದರ್ಶಿಸಿದಳು.
ಬೋಲ್ಡ್ ಲುಕ್ ನಲ್ಲಿ ಕಾಣಿಸಲು ಮಲ್ಲಿಕಾ ಧರಿಸಿದ್ದು ಮೈಬಣ್ಣದ ಗೌನ್. ಈ ಗೌಟ್ ಪಡ್ಡೆಯುಡುಗರ ನಿದ್ದೆ ಕೆಡಿಸಿಬಿಟ್ಟಿದ್ದಂತೂ ನಿಜ. ಯಾಕೆಂದರೆ ಈ ಉಡುಗೆಯಲ್ಲಿ ಬೆನ್ನು ಸಂಪೂರ್ಣವಾಗಿ ಬೆತ್ತಲಾಗಿತ್ತು. ದೇಹದ ಮುಂಭಾಗವನ್ನು ಸಂಪೂರ್ಣವಾಗಿ ಕವರ್ ಮಾಡಿದ್ದ ಈ ಉಡುಗೆಯಲ್ಲಿ ಆಕೆಯ ಮೈಮಾಟ, ಚೆಲುವು, ಸೌಂದರ್ಯದ ರಾಶಿ ಎದ್ದು ಕಾಣುತಿತ್ತು.
ಮಲ್ಲಿಕಾ ಶೆರಾವತ್ ಕೇಶವಿನ್ಯಾವೂ ಸಖತ್ ಆಗಿತ್ತು. ಅಂದ್ರೆ 70ರ ದಶಕದಲ್ಲಿ ಜನಪ್ರಿಯವಾಗಿದ್ದ ಸ್ಟೈಲಿನಂತೆ ತಲೆಗೆ ತುರುಬು ಕಟ್ಟಿದ್ದರು. ಕಣ್ಣಿಗೆ ಐ ಲೈನರ್ ಹಾಕಿ ಕಿವಿಗಳಿಗೆ ವಜ್ರದ ಓಲೆ ಧರಿಸಿ, ಕೆಂಪು ಕಾರ್ಪೆಟ್ ಮೇಲೆ ನಡೆಯುತ್ತಿದ್ದರೆ ನೋಡುಗರು ಎವೆಯಿಕ್ಕದೆ ನಿಂತಿದ್ದರು.



Click it and Unblock the Notifications
