Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಐಶ್ವರ್ಯಮ್ಮನ ಚೆಲುವಿಗೆ ಸಾಥ್ ನೀಡಿದ ಉಡುಗೆ
ಕೇನ್ಸ್ ಚಿತ್ರೋತ್ಸವದಲ್ಲಿ ಹೆಚ್ಚಿನ ಜನರು ಕಾಯುತ್ತಿದ್ದ ಚೆಲುವೆ ಕೊನೆಗೂ ಬಂದೇ ಬಿಟ್ಟಳು. ಆಕೆ ಐಶ್ವರ್ಯ ರೈ. ಈ ಕಾರ್ಯಕ್ರಮದಲ್ಲಿ ಆಕೆ ಪಾಲ್ಗೊಳ್ಳುತ್ತಿರುವುದು 11ನೇ ವರ್ಷ. ಆದರೆ ಎಲ್ಲರೂ ನಿರೀಕ್ಷಿಸಿದಂತೆ ಆಕೆ ವಿಪರೀತವಾಗಿ ದಪ್ಪವಾಗಿರಲಿಲ್ಲ. ಹೆರಿಗೆಯ ನಂತರ ಐಶ್ವರ್ಯ ಸೌಂದರ್ಯ ಕಡಿಮೆಯಾಗಿದೆ ಎಂದು ಬೊಬ್ಬೆಯಿಡುತ್ತಿದ್ದ ಮಾಧ್ಯಮಗಳು ನಿಬ್ಬೆರಾಗುವಂತೆ ಸೌಂದರ್ಯದ ಖನಿಯಾಗಿ ಐಶ್ವರ್ಯ ಕಾಣಿಸಿಕೊಂಡರು. ಅವರ ಉಡುಗೆ ತೊಡುಗೆ ವಿವರಕ್ಕಾಗಿ ಮುಂದೆ ಓದಿ.

ಭಾರತೀಯ ಸ್ಟೈಲ್ ನಂತೆ ಕೇಶ ವಿನ್ಯಾಸ ಮಾಡಿಕೊಂಡು, ಅತೀ ಕಡಿಮೆ ಆಭರಣ ಧರಿಸಿ, ಕ್ರೀಮ್ ಬಣ್ಣದ ಸ್ಯಾರಿ ಮತ್ತು ಅಧಿಕ ಎಂಬ್ರಾಯ್ಡ್ ಇರುವ ಬ್ಲೌಸ್ ಧರಿಸಿದ್ದ ಐಶ್ವರ್ಯವನ್ನು ನೋಡುತ್ತಿದ್ದವರಿಗೆ ಯಾರು ಹೇಳಿದ್ದು ಇವಳ ಸೌಂದರ್ಯ ಕಮ್ಮಿಯಾಯಿತು ಮತ್ತಷ್ಟು ರೂಪವಂತೆಯಾಗಿದ್ದಾಳೆ ಅನ್ನುವಷ್ಟು ಸುಂದರಿಯಾಗಿ ಕಾಣಿಸುತ್ತಿದ್ದಳು.
ಕಾನ್ ನ ರೆಡ್ ಕಾರ್ಪೆಟ್ ನಲ್ಲಿ ನಡೆಯುವಾಗ ಐಶ್ವರ್ಯ ಸ್ವಲ್ಪ ಕಂದು ಬಣ್ಣದ ಆಂಗ್ಲೋ ಕಟ್‌ಪೀಸ್ ಗೌನ್, ಪಿಂಕ್ ಲಿಪ್ ಗ್ಲೋಸ್ ಮತ್ತು ಕಣ್ಣಿಗೆ ಸ್ವಲ್ಪ ಕಾಡಿಗೆ ಹಾಕಿ ಸ್ವಲ್ಪ ಸುರುಳಿಯಾಕಾರದ ಕೇಶ ವಿನ್ಯಾಸ ಮಾಡಿಕೊಂಡಿದ್ದರು. ಈ ಅಲಂಕಾರದಲ್ಲಿ ಅವರ ಸಪೂರ ಮೈಮಾಟ ನೋಡಿದ ಅವರ ಅಭಿಮಾನಿಗಳು ಸಕತ್ ಖುಷಿಯಾದರು.
ಆಕೆಯ ಕಣ್ಣಿನೊಳಗೆ ಅಭಿಮಾನಿಗಳಿಗೆ ಒಬ್ಬಳು ಅಮ್ಮ ಕಂಡಳು.



Click it and Unblock the Notifications
