Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಅಮೆರಿಕಾ ದಾಳಿ ಬಗ್ಗೆ ಕೇಳಿ ಬಂದ ವಾದ, ಪ್ರತಿವಾದ

ಒಸಮಾ ನಾಯಕತ್ವದಲ್ಲಿ ಭಯೋತ್ಪಾದಕರು ರಣಹದ್ದಿನಂತೆ ಎರಗಿ ನ್ಯೂಯಾರ್ಕಿನ ವಿಶ್ವ ವಾಣಿಜ್ಯ ಮಳಿಗೆಯನ್ನು 9/11ರದು ಧ್ವಂಸ ಮಾಡಿದರು. ಅನೇಕ ಜನರು ಪ್ರಾಣವನ್ನು ಕಳೆದುಕೊಂಡರು. ಆ ದಿನ ಅಮೇರಿಕಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಕರಾಳ ದಿನವಾಗಿತ್ತು.
ಆದರೆ ಘಟನೆ ನಡೆದು ಇಷ್ಟು ವರ್ಷ ಕಳೆದರೂ ಆ ಘಟನೆ ನಡೆದದ್ದು ಹೇಗೆ? ನಿಜವಾಗಿಯೂ ಅಲ್ಲಿ ನಡೆದದ್ದೇನು? ಕಟ್ಟಡ ಸ್ಪೋಟಿಸಿದ್ದು ಹೇಗೆ? ಒಳಗಿನ ಕುತಂತ್ರ ಸಹಕರಿಸಿರುವುದೇ? ಹೀಗೆ ಲೆಕ್ಕವಿಲ್ಲದಷ್ಟು ಪ್ರಶ್ನೆಗಳು ಇಂದಿಗೂ ಇವೆ.
ಈ ಘಟನೆಯ ಕುರಿತಾದ ಕೆಲವು ವಾದಗಳು ಮತ್ತು ಪ್ರತಿವಾದಗಳು ಈ ಕೆಳಗಿನಂತೆ ಇವೆ.
ಸ್ಪೋಟಕ್ಕೆ ಕಾರಣ ವಿಮಾನವಲ್ಲ, ಅಲ್ಲಿ ಬಾಂಬಿತ್ತು!
ಹೀಗಂತ ಒಂದು ವಾದವಿದೆ. ವಿಶ್ವ ವಾಣಿಜ್ಯ ಮಳಿಗೆಯಲ್ಲಿ ಬೆಂಕಿ ಜ್ವಾಲೆಯಲ್ಲಿ ಕುಸಿಯುತ್ತಿರುವ ಚಿತ್ರ ನೋಡಿ ಕೆಲವರು ಅಧ್ಯಯನ ಮಾಡಿ ಈ ರೀತಿ ವಾದಿಸುತ್ತಿದ್ದಾರೆ. ಆ ಘಟನೆ ವಿಡಿಯೋ ನೋಡಿದಾಗ ವಿಮಾನ ಡಿಕ್ಕಿ ಹೊಡೆದು ಈ ಕಟ್ಟಡ ಉರಿದ ಕುರಿತು ಸಂಶಯ ವ್ಯಕ್ತಪಡಿಸುತ್ತಾರೆ. ಏಕೆಂದರೆ ವಿಮಾನ ಬಂದು ಅಪ್ಪಳಿಸಿದ ಕೂಡಲೇ ಕಟ್ಟಡದ ಬೇರೆ-ಬೇರೆ ಭಾಗಗಳಲ್ಲಿ ಸ್ಟೋಟ ಕಂಡು ಬಂದಿತು. ಕಟ್ಟಡದಲ್ಲಿ ಬಾಂಬ್ ಇಟ್ಟು ನಂತರ ವಿಮಾನದಿಂದ ಅಪ್ಪಳಿಸಿದ್ದಾರೆ ಎಂಬ ಶಂಕೆ ಅನೇಕರಲ್ಲಿದೆ.
ಪ್ರತಿವಾದ: ವಿಶ್ವ ವಾಣಿಜ್ಯ ಕಟ್ಟಡಕ್ಕೆ ಬಿಗಿಭದ್ರತೆಯಿದೆ. ಅದರೊಳಗೆ ಬಾಂಬ್ ಬಚ್ಚಿಡಲು ಸಾಧ್ಯವಿರಲಿಲ್ಲ. ಹೀಗಾಗಿ ಮೇಲಿನ ವಾದಕ್ಕೆ ಹುರುಳಿಲ್ಲವೆಂದು ಕೆಲವರು ಪ್ರತಿವಾದಿಸುತ್ತಾರೆ.
ಜುವಿಸ್ ಗಳಿಗೆ ದಾಳಿ ಬಗ್ಗೆ ತಿಳಿದಿತ್ತೆ?
ಮತೀಯ ಗಲಭೆ ಹೆಚ್ಚಿಸಲು ಈ ರೀತಿಯ ಸುದ್ದಿ ಹಬ್ಬಿಸಲಾಗಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಜುವಿಸ್ ಜನಾಂಗದವರಿಗೆ ದಾಳಿ ಬಗ್ಗೆ ತಿಳಿದಿತ್ತು ಅದಕ್ಕೆ ರಜೆ ತೆಗೆದುಕೊಂಡಿದ್ದರು ಎಂಬ ಗಾಳಿ ಸುದ್ದಿ ಹಬ್ಬಿತ್ತು.
ಪ್ರತಿವಾದ: 50,000 ಜನರು ಕೆಲಸ ಮಾಡುವ ಜಾಗದಲ್ಲಿ 400 ಜನರು ರಜೆ ತೆಗೆದುಕೊಳ್ಳುವುದು ದೊಡ್ಡ ವಿಷಯವಲ್ಲ, ದಾಳಿ ಬಗ್ಗೆ ಜುವಿಸ್ ಗಳಿಗೆ ತಿಳಿದಿತ್ತು ಅನ್ನುವುದು ಸತ್ಯಕ್ಕೆ ದೂರ ಎಂಬ ಪ್ರತಿವಾದವಿದೆ.
ಪೆಂಟಗಾನ್ ದಾಳಿ ಅವೈಜ್ಞಾನಿಕ
ವಿಮಾನ ದಾಳಿಯಿಂದ ಉಂಟಾದ ತೂತು ಸಾಧಾರಣ ವಿಮಾನದ ಗಾತ್ರಕ್ಕಿಂತ ಚಿಕ್ಕದಾಗಿದೆ. ವಿಮಾನ ಕಟ್ಟಡಕ್ಕೆ ಅಪ್ಪಳಿಸುವುದರಿಂದ ಅಷ್ಟು ದೊಡ್ಡ ಕಟ್ಟಡ ದ್ವಂಸವಾಗುತ್ತದೆ ಎನ್ನುವುದು ನಂಬಲು ಕಷ್ಟ. ಇದು ಅವೈಜ್ಞಾನಿಕವೆಂದು ಕೆಲವರು ಅಭಿಪ್ರಾಯಪಡುತ್ತಾರೆ.
ದಾಳಿಗೆ ಕಾರಣ ಆಂತರಿಕ ಕುತಂತ್ರವೇ?
ವೈಟ್ ಹೌಸಿಗೂ ಈ ದಾಳಿಗೂ ಸಂಬಂಧವಿದೆ ಎಂದರ್ಥವಲ್ಲ. ಆದರೆ ಇದಕ್ಕೆ ಆಂತರಿಕ ರಾಜಕಾರಣವೂ ಕಾರಣವಿರಬಹುದು ಎಂಬ ಗುಮಾನಿಯಿದೆ. ಈ ಕುರಿತು ಭದ್ರತಾ ಪಡೆಯವರೂ ಬಾಯಿಬಿಟ್ಟಿಲ್ಲ. ಜನಪ್ರಿಯ ಪತ್ರಿಕೆಗಳೂ ಈ ಕುರಿತು ತುಟಿ ಪಿಟಕ್ ಎಂದಿಲ್ಲ.
ಗುಮಾನಿ ಏನೇ ಇರಲಿ. ಘಟನೆಗೆ ಕಾರಣನಾದ ಲಾಡೆನ್ ಹತ್ಯೆಯಾಗಿರುವುದು ಘಟನೆಯಿಂದ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ತುಸು ನೆಮ್ಮದಿ ತಂದಿರಬಹುದು.



Click it and Unblock the Notifications
