Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ನೀವು ಮಾಡುವ ಕೆಲಸದಲ್ಲಿ ಅತೃಪ್ತಿ ಕಾಡುತ್ತಿದೆಯೇ?

1. ಬೆಳಗ್ಗೆ ಏಳಲು ಮನಸ್ಸಾಗದಿರುವುದು: ಹೆಚ್ಚಿನವರಿಗೆ ಬೆಳಗ್ಗೆ ಏಳುವುದು ಅಂದರೆ ಇಷ್ಟವಾಗುವುದಿಲ್ಲ, ಹಾಗಂತ ಅವರಿಗೆ ಅವರು ಮಾಡುತ್ತಿರುವ ಕೆಲಸ ಇಷ್ಟವಿಲ್ಲವೆಂದು ಅರ್ಥ ಅಲ್ಲ. ಎದ್ದ ತಕ್ಷಣ ಕೆಲಸಕ್ಕೆ ಉತ್ಸಾಹದಿಂದ ಹೊರಡುತ್ತೇವೆ. ಆದರೆ ಕೆಲಸಇಷ್ಟವಿಲ್ಲದಿದ್ದರೆ ಬೆಳಗ್ಗೆ ಏಳಲು ತುಂಬಾ ಉದಾಸೀನವಾಗುತ್ತದೆ. ಕೆಲಸಕ್ಕೆ ಬರುವ ಮೂಡ್ ಇರುವುದಿಲ್ಲ. ಈ ರೀತಿ ಉಂಟಾದರೆ ಆ ಕೆಲಸಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಷ್ಟಪಡುವಂತಹ ಕೆಲಸವನ್ನು ಮಾಡುವುದು ಒಳ್ಳೆಯದು.
2. ಸಹೋದ್ಯೋಗಿಗಳ ಜೊತೆ ಬೆರೆಯಲು ಇಷ್ಟವಾಗುವುದಿಲ್ಲ: ಕೆಲಸ ಇಷ್ಟವಾಗದಿದ್ದರೆ ಆ ಪರಿಸರವೇ ಇಷ್ಟವಾಗುವುದಿಲ್ಲ, ಇದರಿಂದಾಗಿ ಸಹೋದ್ಯೋಗಿಗಳ ಜೊತೆ ಬೆರೆಯಲು ಅಷ್ಟಾಗಿ ಇಷ್ಟವಾಗುವುದಿಲ್ಲ.
3. ಹೊಸ ಜವಬ್ದಾರಿ ತೆಗೆದು ಕೊಳ್ಳುವುದಿಲ್ಲ: ಈಗ ಮಾಡುತ್ತಿರುವ ಕೆಲಸ ಬಿಡಬೇಕು ಎಂದು ಮನಸ್ಸಿಗೆ ಬಂದರೆ ಕೆಲಸದ ಜಾಗದಲ್ಲಿ ಯಾವುದೇ ಹೊಸ ಜವಬ್ದಾರಿ ತೆಗೆದುಕೊಳ್ಳಲು ಮನಸ್ಸಾಗುವುದಿಲ್ಲ. ಎಲ್ಲದಕ್ಕೂ ನಿರ್ಲಪ್ತತೆ ತೋರುತ್ತೇವೆ.
4. ಸರಿಯಾದ ಸಮಯಕ್ಕೆ ಹೇಳಿದ ಕೆಲಸ ಮುಗಿಸುವುದು: ಕೆಲಸದಲ್ಲಿ ಅಸಕ್ತಿ ಕಳೆದುಕೊಂಡರೆ ಆ ಕೆಲಸವನ್ನು ತುಂಬಾ ಆಸಕ್ತಿಯಿಂದ ಮಾಲು ಸಾಧ್ಯವಾಗುವುದಿಲ್ಲ, ಕೆಲಸ ವಿಳಂಬ ಮಾಡಿದಷ್ಟು ಕಂಪನಿಯವರಿಗೂ ನಮ್ಮ ಬಗ್ಗೆ ತಪ್ಪು ಕಲ್ಪನೆ ಬರುತ್ತದೆ. ಆದ್ದರಿಂದ ಇಷ್ಟವಿಲ್ಲದ ಕೆಲಸವನ್ನು ಮಾಡದಿರುವುದು ಒಳ್ಳೆಯದು.
5. ಕಂಪನಿ ಮತ್ತು ಕೆಲಸವನ್ನು ದೂರುವುದು: ಮಾಡುವ ಕೆಲಸ ಇಷ್ಟವಾಗದಿದ್ದರೆ ಬೇರೆಯವರ ಜೊತೆ ಮಾತನಾಡುವಾಗ ಕಂಪನಿ ಬಗ್ಗೆ ದೂರು ಹೇಳುತ್ತಲೇ ಇರುತ್ತೇವೆ ಮತ್ತು ತುಂಬಾ ಅಸಮಧಾನವಿರುತ್ತದೆ.
6. ಕೆಲಸದಿಂದ ತೆಗೆದು ಹಾಕುತ್ತಾರೆ ಎಂಬ ಭಯವಿರುವುದಿಲ್ಲ: ಕೆಲಸ ಮಾಡುವಾಗ ಒಂದು ವೇಳೆ ನಮ್ಮ ಕೈಯಿಂದ ತಪ್ಪು ಮಾಡಿದರೆ ಕಂಪನಿಯಿಂದ ತೆಗೆದು ಹಾಕುತ್ತಾರೆ ಎಂಬ ಭಯದಿಂದ ಚಿಕ್ಕ ತಪ್ಪಾದರೂ ಕೂಡ ತುಂಬಾ ಭಯಬೀಳುತ್ತೇವೆ. ಆದರೆ ಈ ಕೆಲಸ ಬಿಟ್ಟು ಹೋಗಬೇಕೆಂಬ ಭಾವನೆ ಮನಸ್ಸಿನಲ್ಲಿದ್ದರೆ ಜಾಗೃತಿಯಿಂದ ಕೆಲಸ ಮಾಡಲು ಮನಸ್ಸೂ ಇರುವುದಿಲ್ಲ, ಇವರು ತೆಗೆದು ಹಾಕುತ್ತಾರೆ ಎಂಬ ಭಯ ಕೂಡ ಇರುವುದಿಲ್ಲ.
ಇಷ್ಟವಿಲ್ಲದೇ ಯಾವುದೇ ಕೆಲಸ ಮಾಡಬೇಡಿ. ಯಾವುದೇ ಕೆಲಸವನ್ನು ಇಷ್ಟಪಟ್ಟು ಮಾಡಿದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾದ್ಯ,.



Click it and Unblock the Notifications
