Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಜೀವನದಲ್ಲಿ ಗುರಿ ಸಾಧಿಸಲು ಈ 4 ಅಸ್ತ್ರಗಳು ಸಾಕು!

ಆದರೆ ಸಾಕಷ್ಟು ಬಾರಿ ನಾವು ನಮ್ಮ ಗುಣಗಳಿಂದಾಗಿ ಎಡುವುತ್ತೇವೆ, ಇದರಿಂದಾಗಿ ಗೆಲುವೆಂಬುದು ನಮ್ಮಿಂದ ಸ್ವಲ್ಪ ದೂರವಾಗಿ ಉಳಿಯುತ್ತದೆ. ಗೆಲುವು ಸಾಧಿಸಬೇಕೆಂದು ಬಯಸುವುದಾದರೆ ಈ ಸೂತ್ರಗಳನ್ನು ಪಾಲಿಸಿ, ಆಗ ಜೀವನದಲ್ಲಿ ನೀವು ಬಯಸಿದ ಘಟ್ಟವನ್ನು ತಲುಪಬಹುದು.
1. ಸ್ವ-ನಿರ್ಧಾರ: ಬೇರೆಯವರ ಹೇಳುವ ಮಾತಿಗಿಂತ ನಿಮ್ಮ ನಿರ್ಧಾರ ಗಟ್ಟಿಯಾಗಿರಬೇಕು. ಹೆಚ್ಚಿನವರ ಜೀವನ ಮತ್ತೊಬ್ಬರು ನಿರ್ಧರಿಸಿದಂತೆ ನಡೆಯುತ್ತಿರುತ್ತದೆ. ಅದು ಹೆತ್ತವರಾಗಿರಬಹುದು, ಮನೆಯವರು ಆಗಿರಬಹುದು, ಸ್ನೇಹಿತರಾಗಿರಬಹುದು. ಇತರರ ಅಭಿಪ್ರಾಯಕ್ಕೆ ಬೆಲೆ ಕೊಡಬೇಕು. ಆದರೆ ನಿಮ್ಮ ಗುರಿ ಮುಟ್ಟು ಏನು ಮಾಡಬೇಕು ಎಂದು ಅವರಿಗಿಂತ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ.
ಆದ್ದರಿಂದ ನಿಮ್ಮ ನಿರ್ಧಾರದಂತೆ ನಡೆಯುವ ಧೈರ್ಯ ತೋರಿಸಬೇಕು. ನೀವು ನಿಮ್ಮ ಅಭಿಪ್ರಾಯದಂತೆ ನಡೆದರೆ ಮೊದಲು ಟೀಕೆಗಳು ಕೇಳಿ ಬರಬಹುದು, ಆದರೆ ಅದಕ್ಕೆ ಕುಗ್ಗದೆ ಧೈರ್ಯದಿಂದ ಮುನ್ನುಗ್ಗಬೇಕು.
2. ನಿಮ್ಮ ಹೃದಯದ ಮಾತು ಕೇಳಬೇಕು: ಬೇರೆಯವರ ಮಾತು ನಮ್ಮನ್ನು ತುಂಬಾ ಪ್ರಭಾವಿಸುತ್ತದೆ. ಆದರೆ ಬೇರೆಯವರ ಮಾತುಗಳಿಗಿಂತ ನಿಮ್ಮ ಹೃದಯದ ಮಾತುಗಳನ್ನು ಕೇಳಿ. ಅದರಂತೆ ನಡೆದುಕೊಳ್ಳಿ.
3. ಸೋಲು ಒಳ್ಳೆಯದೇ: ಸೋಲಿನ ಕಹಿ ಗೊತ್ತಿರದಿದ್ದರೆ ಗೆಲುವಿನ ಸಿಹಿ ತಿಳಿಯುವುದಾದರೂ ಹೇಗೆ? ಜಯ ಗಳಿಸಬೇಕೆಂದರೆ ಸೋಲನ್ನು ಸವಾಲಾಗಿ ತೆಗೆದುಕೊಳ್ಳಬೇಕು. ಸೋಲು ನಮ್ಮನ್ನು ಅತಂತ್ರನಾಗಿ ಮಾಡಬಹುದು, ಆದರೆ ಮಾನಸಿಕ ಧೈರ್ಯ ತೆಗೆದುಕೊಳ್ಳಬೇಕು. ಸೋಲಿನಿಂದ ಪಾಠ ಕಲಿಯುವವ ಜೀವನದಲ್ಲಿ ಗೆಲುವಿನ ಮೆಟ್ಟುಲು ಏರಲು ಸಾಧ್ಯ.
4. ಸೋಮಾರಿತನ: ಬೇರೆಯೆಲ್ಲಾ ಶತ್ರುವಿಗಿಂತ ಸೋಮರಿತನ ದೊಡ್ಡ ಶತ್ರುವಾಗಿದೆ. ಮನಸ್ಸು ಸೋಮರಿತನವನ್ನು ಮೊದಲು ಬಿಡಬೇಕು. ಗುರಿ ಮುಟ್ಟುತ್ತೇನೆ ಎಂಬ ಛಲ ಇರಬೇಕು. ಈ ಗುಣಗಳನ್ನು ಮೈಕೂಡಿಸಿಕೊಂಡರೆ ಜಯ ನಿಮ್ಮದಾಗಿರುತ್ತದೆ.



Click it and Unblock the Notifications
