Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ದೆಹಲಿಯಲ್ಲಿಯೂ ಇದೆ ಭೂತ ಸಂಚಾರದ 5 ಸ್ಥಳಗಳು!
ನಮ್ಮ ದೇಶದ ರಾಜಧಾನಿ ದೆಹಲಿ ಬಗ್ಗೆ ಹೇಳಬೇಕೆಂದರೆ ಅನೇಕ ಉತ್ತಮವಾದ ಹಾಗೂ ಅಚ್ಚರಿಯ ವಿಷಯಗಳಿವೆ. ದೇಶದಲ್ಲಿಯೇ ಅತ್ಯುತ್ತಮವಾದ ರಸ್ತೆ ದೆಹಲಿಯಲ್ಲಿದೆ. ಇದು ಆಹಾರ ಪ್ರಿಯರ ಸ್ವರ್ಗವಾಗಿದೆ. ಹೀಗೆ ಅನೇಕ ವಿಷಯಗಳಿವೆ. ಇಲ್ಲಿ ಸ್ವಲ್ಪ ಭಯಾನಕವಾದ ಅನೇಕ ಅಚ್ಚರಿಯ ವಿಷಯಗಳಿವೆ. ಈ ವಿಷಯಗಳು ತುಂಬಾ ಮಂದಿ ಡೆಲ್ಲಿ ನಿವಾಸಿಗಳಿಗೇ ಗೊತ್ತಿರುವುದಿಲ್ಲ!
ದೆಹಲಿ ಪುರಾತನ ನಗರವಾಗಿದೆ. ಮುಘಲ್ ರು, ಬ್ರಿಟಿಷರು ತಮ್ಮ ರಾಜಧಾನಿಯಾಗಿ ದೆಹಲಿಯನ್ನು ಮಾಡಿಕೊಂಡಿದ್ದರು. ದೆಹಲಿಯಲ್ಲಿರುವ ಪೌರಾಣಿಕ ಹೆರಿಟೇಜ್ (ಪಾರಂಪರಿಕ) ಕಟ್ಟಡವೇ ಒಂದು ಭಯಾನಕವಾದ ಸ್ಥಳ ಎಂದು ಹೇಳಲಾಗುತ್ತಿದೆ. ದೆಹಲಿಯ ಕೆಲವೊಂದು ಸ್ಥಳಗಳಲ್ಲಿ ಭೂತ ಇದೆ ಎಂಬ ವದಂತಿಗಳು ಕೂಡ ಕೇಳಿ ಬಂದಿದೆ. ದೆಹಲಿಯಲ್ಲಿ ಭೂತದ ಸಂಚಾರ ಇದೆ ಎಂದು ಜನರು ಅಲ್ಲಿಗೆ ಹೋಗಲು ಭಯಪಡುತ್ತಿರುವ ಆ ಸ್ಥಳಗಳಾವುವು ಎಂದು ನೋಡೋಣ ಬನ್ನಿ:

1. ಡೆಲ್ಲಿ ಕ್ಯಾಂಟ್
ಇದು ದೆಹಲಿಯಲ್ಲಿರುವ ತುಂಬಾ ಸುಂದರವಾದ ಸ್ಥಳವಾಗಿದೆ. ಈ ಸ್ಥಳ ಕುದುರೆ ಸವಾರಿಗೆ ತುಂಬಾ ಚೆನ್ನಾಗಿದೆ. ಅನೇಕ ಜನರು ಇಲ್ಲಿ ಬಿಳಿ ಡ್ರೆಸ್ ನಲ್ಲಿ ಒಂದು ಸ್ತ್ರೀ ದಾರಿ ಮೇಲೆ ನಿಂತು ಲಿಫ್ಟ್ ಕೇಳುತ್ತಾಳೆ. ನಾವು ಲಿಫ್ಟ್ ಕೊಟ್ಟರೆ ಅವಳು ಸ್ವಲ್ಪ ಸಮಯದಲ್ಲಿ ಮಾಯವಾಗುತ್ತಾಳೆ ಎಂದು ಹೇಳಿದ್ದಾರೆ. ಈ ಕತೆಯಿಂದಾಗಿ ಜನರು ಈ ಸ್ಥಳಕ್ಕೆ ಹೋಗಲು ಸ್ವಲ್ಪ ಭಯ ಪಡುತ್ತಾರೆ.

2.ಖೂನಿ ದರ್ವಾಜಾ
ಇದು ದೆಹಲಿಯಲ್ಲಿರುವ ಮೊಘಲ್ ಸ್ಮಾರಕವಾಗಿದೆ. ಬ್ರಿಟಿಷರು ಬಹದೂರ್ ಷಾ ಜಫರ್ ನ 3 ಗಂಡು ಮಕ್ಕಳನ್ನು ಕೊಂದರು. ಈ ಮಕ್ಕಳು ದೆವ್ವವಾಗಿ ಬ್ರಿಟಿಷರ ವಿರುದ್ಧ ಸೇಡು ತೀರಿಸಿಕೊಳ್ಳಲು ಬಾಗಿಲ ಬಳಿ ಕಾಯುತ್ತಿದೆ. ಇಲ್ಲಿಗೆ ಬ್ರಿಟಿಷರು ಹೋದಾರೆ ಏನಾದರೂ ಸಂಭವಿಸುತ್ತದೆ ಎಂಬ ಅಂತೆ-ಕಂತೆಗಳು ಈ ಸ್ಮಾರಕದ ಬಗ್ಗೆ ಕೇಳಿ ಬರುತ್ತದೆ.

3. ಜಮಾಲಿ-ಕಮಾಲಿ ಮಸ್ಜೀದ್
ಇದು ದೆವ್ವಗಳ ಹೆಸರಲ್ಲ. ಇಲ್ಲಿ ಹೆಸರಾಂತ ಇಬ್ಬರು ಸಂತರನ್ನು ಸಮಾಧಿ ಮಾಡಲಾಗಿದೆ. ಆದರೆ ಇಲ್ಲಿ ಭೂತದ ಓಡಾಟ ಇದೆ ಎಂದು ಹೇಳಲಾಗುತ್ತಿದೆ. ಈ ಸ್ಥಳಕ್ಕೆ ಭೇಟಿ ಕೊಟ್ಟರೆ ನಿಮ್ಮನ್ನು ಯಾರೋ ಹಿಡಿದು ಎಳೆದಂತೆ, ಕೆನ್ನೆಗೆ ಬಡೆದಂತೆ ಭಾಸವಾಗುವುದು ಎಂದು ಇಲ್ಲಿಗೆ ಹೋದವರು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ.

4. ಸಂಜಯ್ ವನ
ದೆಹಲಿಯಲ್ಲಿರುವ ಈ ಕಾಡು ಅರಳಿ ಮರಕ್ಕೆ ಪ್ರಸಿದ್ಧಿಯನ್ನು ಪಡೆದಿದೆ. ಈ ಕಾಡಿನಲ್ಲಿ ಬಿಳಿ ವಸ್ತ್ರ ಧರಿಸಿದ ಸ್ತ್ರೀ ಕಾಣ ಸಿಗುತ್ತಾಳೆ, ನೋಡುತ್ತಿದ್ದಂತೆಯೇ ತಕ್ಷಣ ಮಾಯವಾಗುತ್ತಾಳೆ ಎಂದು ಸಾಕಷ್ಟು ಜನರು ಹೇಳಿದ್ದಾರೆ. ಆದರೆ ಅದು ನಿಜವೇ? ಸುಳ್ಳೇ? ಅನ್ನುವುದನ್ನು ಸ್ವ ಅನುಭವದಿಂದ ತಿಳಿದುಬೇಕಷ್ಟೆ. ಯಾಕೆ ಎಲ್ಲಾ ಕಡೆ ಬರೀ ಹೆಣ್ಣು ದೆವ್ವವೇ ಕಾಣಸಿಗುತ್ತದೆ?

5. ಲೂದಿಯಾನ ಸಮಾಧಿ
ಇಲ್ಲಿ ಕ್ರಿಶ. 1700ರಲ್ಲಿ ಕ್ರೈಸ್ತ ಧರ್ಮ ಗುರುವನ್ನು ಸಮಾಧಿ ಮಾಡಲಾದ ಸ್ಥಳವಾಗಿದೆ. ಆದರೆ ಇಲ್ಲಿ ಮುಂಡವಿಲ್ಲದ ದೆವ್ವ ಓಡಾಡುತ್ತದೆ ಎಂದು ಹೇಳಾಗುತ್ತದೆ. ಈ ದೆವ್ವ ಹಿಂದೆ ಸೈನಿಕನಾಗಿದ್ದ, ತನ್ನ ಪ್ರೇಯಸಿಯಿಂದ ಮೋಸ ಹೋಗಿ ತನ್ನ ತಲೆಯನ್ನು ಕತ್ತರಿಸಿ ಸತ್ತ. ಅಮಾವಾಸ್ಯೆಯಲ್ಲಿ ಮುಂಡವಿಲ್ಲದ ರುಂಡವನ್ನು ಕಾಣಬಹುದು ಎಂಬ ಗಾಳಿ ಸುದ್ಧಿ ಇದೆ. ಇದು ಎಷ್ಟರ ಮಟ್ಟಿಗೆ ಸರಿ ಅನ್ನುವುದು ಆ ದೇವರಿಗೇ ಗೊತ್ತು?



Click it and Unblock the Notifications
